AgricultureNews

ಈ ದಿನದಿಂದ ರಾಜ್ಯದಲ್ಲಿ ಮಾನ್ಸೂನ್ ಆರ್ಭಟ ಮುಂಗಾರು ಮಳೆ ಆರಂಭ | ಹವಾಮಾನ ಇಲಾಖೆ ಮುನ್ಸೂಚನೆ 2024 Monsoon rains start from this day

WhatsApp Group Join Now
Telegram Group Join Now

2024 Monsoon rains start from this day : ಈ ಬಾರಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚು ಸುರಿಯಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ. ಕಳೆದ ವರ್ಷ 2023ರಲ್ಲಿ ಜೂನ್ 8ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶ ಮಾಡಿದ್ದವು. ಅಂದರೆ ಸಾಮಾನ್ಯ ಪ್ರವೇಶದ ದಿನಕ್ಕಿಂತ ಏಳು ದಿನ ವಿಳಂಬವಾಗಿ ಆಗಮನವಾಗಿತ್ತು.

ಆಗ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ‘ಬಿಪಜೋರ್ಯ್’ ಚಂಡಮಾರುತ ಮುಂಗಾರು ಮಾರುತಗಳು ಒಂದು ವಾರ ತಡವಾಗಿ ರಾಜ್ಯಕ್ಕೆ ಆಗಮಿಸಲು ಕಾರಣವಾಗಿತ್ತು. ಇದರಿಂದಾಗಿ ಮುಂಗಾರಿನ ಮೇಲೆ ಪರಿಣಾಮ ಬೀರಿ, ರಾಜ್ಯದಲ್ಲಿ ಬರಗಾಲ ಘೋಷಣೆಯಾಗುವಂತಾಗಿದೆ.

New Ration Card Application Process : ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ | ಈ ದಿನದಿಂದ 2,95,986 ಅರ್ಜಿಗಳು ವಿಲೇವಾರಿ

ಮಾನ್ಸೂನ್​ ಆಗಮನದ ವಿವರ

ಭಾರತಕ್ಕೆ ನೈಋತ್ಯ ಮಾನ್ಸೂನ್ ಮಾರುತಗಳು ಜೀವಾಳವಿದ್ದಂತೆ. ಈ ಮಾರುತಗಳೇ ದೇಶದಲ್ಲಿ ಸುರಿಯಬಹುದಾದ ವಾರ್ಷಿಕ ಮಳೆಯ ಬಹುಪಾಲನ್ನು ಒದಗಿಸುತ್ತವೆ. ಹೀಗಾಗಿ ಮಾನ್ಸೂನ್ ಮಾರುತಗಳ ಆಗಮನ ಆ ವರ್ಷ ಬೀಳುವ ಮಳೆ ಪ್ರಮಾಣಕ್ಕೆ ದಿಕ್ಸೂಚಿಯಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಮಾನ್ಸೂನ್ ಮಾರುತಗಳ ಪ್ರವೇಶದ ದಿನಾಂಕ ಗಮನಿಸುವುದಾದರೆ 2018ರಲ್ಲಿ ಮೇ 29ಕ್ಕೆ ಮಾನ್ಸೂನ್ ಮಾರುತಗಳು ಕರ್ನಾಟಕಕ್ಕೆ ಆಗಮಿಸಿತ್ತು. ಅದೇ ರೀತಿ 2019 ಜೂನ್ 8, 2020 ಜೂನ್ 1, 2021 ಜೂನ್ 3, 2022 ಮೇ 29, 2023 ಜೂನ್ 8ರಂದು ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶಿದ್ದವು.

Omron Healthcare Scholarship 2024 : 9 ರಿಂದ 12ನೇ ತರಗತಿ ವಿದ್ಯಾರ್ಥಿನಿಯರಿಗೆ 20,000 ರೂಪಾಯಿ ಸಹಾಯಧನ | ಈಗಲೇ ಅರ್ಜಿ ಸಲ್ಲಿಸಿ…

ಈ ವರ್ಷ ಮುಂಗಾರು ಪ್ರವೇಶ ಯಾವಾಗ?

ಸಾಮಾನ್ಯವಾಗಿ ಜೂನ್‌ನಲ್ಲಿ ಮಾನ್ಸೂನ್ ಆರಂಭವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ಜೂನ್ 1ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸುವ ವಾಡಿಕೆ ಹೊಂದಿದ್ದು, ರಾಜ್ಯಕ್ಕೆ ಒಂದೆಡರು ದಿನಗಳಲ್ಲಿ ಮುಂಗಾರು ಮಾರುತಗಳು ಪ್ರವೇಶಿಸುತ್ತವೆ. ಹೆಚ್ಚೂಕಮ್ಮಿ ಅದೇ ಸಮಯವೇ ಈ ವರ್ಷವೂ ಪಾಲನೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಭಾರತಕ್ಕೆ ಜೂನ್ ಮತ್ತು ಜುಲೈ ತಿಂಗಳ ಅವಧಿಯ ನೈಋತ್ಯ ಮಾನ್ಸೂನ್ ಅತಿ ಮಹತ್ವದ್ದು ಎಂದೇ ಹೇಳಲಾಗುತ್ತದೆ. ಈ ವರ್ಷ ಮುಂಗಾರು ಮಾರುತಗಳು ಮೇ 31ರ ವೇಳೆಗೆ ದೇಶದ ದಕ್ಷಿಣದ ತುತ್ತತುದಿ ರಾಜ್ಯವಾದ ಕೇರಳದ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ. ಈ ದಿನಾಂಕದಲ್ಲಿ ನಾಲ್ಕು ದಿನ ವ್ಯತ್ಯಾಸವಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Bara Parihara Status Check : ರೈತರೇ ನಿಮ್ಮ ಮೊಬೈಲ್ ನಂಬರ್ ಮೂಲಕ ಬರ ಪರಿಹಾರ ಹಣ ಜಮಾ ಚೆಕ್ ಮಾಡಿ

ಪ್ರತೀ ವರ್ಷದ ವಾಡಿಕೆಯಂತೆ ಈ ವರ್ಷ ಕೂಡ ಮೇ 19ಕ್ಕೆ ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಿಂದ ಮುಂಗಾರು ಮಾರುತಗಳು ಆರಂಭವಾಗುತ್ತವೆ. ಅಲ್ಲಿ ಪ್ರಬಲವಾಗಿ ಮಾರುತಗಳು ಆರಂಭವಾದರೆ ಮೇ ಕೊನೆಗೆ ಕೇರಳಕ್ಕೆ ಪ್ರವೇಶಿಸುತ್ತವೆ. ಬಳಿಕ ಕೇರಳದಲ್ಲಿ ಮಾನ್ಸೂನ್ ಮಾರುತಗಳು ಪ್ರಬಲವಾದರೆ ಅದೇ ದಿನ ಕರ್ನಾಟಕಕ್ಕೆ ಆಗಮಿಸಲಿವೆ. ಇಲ್ಲವಾದರೆ ಒಂದೆರೆಡು ದಿನ ವಿಳಂಬವಾಗಬಹುದು ಎನ್ನುತ್ತಾರೆ ಹವಾಮಾನ ತಜ್ಞರು.

WhatsApp Group Join Now
Telegram Group Join Now

Related Posts

error: Content is protected !!