KKRTC Driver and Technical Assistant Recruitment 2024 : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕ ಮತ್ತು ತಾಂತ್ರಿಕ ಸಹಾಯಕ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ಹೊರಗುತ್ತಿಗೆ (Outsourcing) ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು; ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. SSLC ಪಾಸಾದ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೊದ್ದೇಶ ಸಹಕಾರ ಸಂಘ ನಿಯಮಿತ, ಜಿಲ್ಲಾಧಿಕಾರಿಗಳ ಕಛೇರಿ, ಬೀದರ ಅವರ ಮೂಲಕ ಹೊರಗುತ್ತಿಗೆಯ ಮೇಲೆ ನಿಯೋಜಿಸಿಕೊಳ್ಳಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (Kalyan Karnataka Road Transport Corporation -KKRTC) ಬೀದರ ವಿಭಾಗದ ವ್ಯಾಪ್ತಿಯ ಬೀದರ-1 ಬೀದರ-2, ಭಾಲ್ಕಿ, ಔರಾದ, ಬಸವಕಲ್ಯಾಣ ಹಾಗೂ ಹುಮನಾಬಾದ ಘಟಕಗಳ ಬಸ್ ಚಾಲನೆಗೆ ಚಾಲಕರು ಮತ್ತು ತಾಂತ್ರಿಕ ಸಹಾಯಕರ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು 100 ಜನ ಬಸ್ ಚಾಲಕರು ಹಾಗೂ ವಾಹನಗಳ ನಿರ್ವಹಣೆಗೆ 50 ಜನ ತಾಂತ್ರಿಕ ಸಹಾಯಕರು ಬೇಕಿರುವುದರಿಂದ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ Walk in Interview ಅನ್ನು ಎರ್ಪಡಿಸಲಾಗಿದೆ.
ದಿನಾಂಕ 02-12-2024 ರಿಂದ 04-12-2024ರ ವರೆಗೆ ಚಾಲಕರ ಹುದ್ದೆಗೆ ಹಾಗೂ 06-12-2024 ರಿಂದ 07-12-2024ರ ವರೆಗೆ ತಾಂತ್ರಿಕ ಸಹಾಯಕ ಹುದ್ದೆಗೆ ಕಕರಸಾ ನಿಗಮದ ಹಳೆ ಬಸ್ ನಿಲ್ದಾಣದ ಬೀದರ ವಿಭಾಗೀಯ ಕಛೇರಿಯ ಕಛೇರಿ ಸಮಯದಲ್ಲಿ ನೇರ ಸಂದರ್ಶನ ನಡೆಸಲಾಗುತ್ತದೆ.
ಬಸ್ ಚಾಲಕರು ಹಾಗೂ ತಾಂತ್ರಿಕ ಸಹಾಯಕರು ಹುದ್ದೆಗಳಿಗೆ ಅಭ್ಯರ್ಥಿಗಳು ಹಾಜರುಪಡಿಸಬೇಕಾದ ದಾಖಲಾತಿಗಳು ಮತ್ತು ಅನುಸರಿಸಬೇಕಾದ ಷರತ್ತು ನಿಬಂಧನೆಗಳ ಕುರಿತ ವಿವರಗಳಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
- ಅಧಿಸೂಚನೆಯನ್ನು ಇಲ್ಲಿ ಡೌನ್ಲೋಡ್ ಮಾಡಿ…
- ಅಧಿಕೃತ ವೆಬ್ಸೈಟ್ : www.bidar.nic.in
ಇದನ್ನೂ ಓದಿ: ಮನೆಮನೆಗೂ ಸೋಲಾರ್ ವಿದ್ಯುತ್ | ಬೆಸ್ಕಾಂ ಸೂಪರ್ ಸ್ಕೀಮ್ | ಕೂತಲ್ಲೇ ಗಳಿಸಿ ಭರ್ಜರಿ ಆದಾಯ Bescom Solar Rooftop Scheme