NewsSchemes

ಮಹಿಳೆಯರಿಗೆ ಉಜ್ವಲ ಉಚಿತ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ… Pradhan Mantri Ujjwala Yojana

WhatsApp Group Join Now
Telegram Group Join Now

Pradhan Mantri Ujjwala Yojana : ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ (LPG free gas) ಸಂಪರ್ಕ ಪಡೆಯದೇ ಅವಕಾಶ ವಂಚಿತರಾಗಿರುವ ಮಹಿಳೆಯರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕೇಂದ್ರ ಸರ್ಕಾರ 2016ರಲ್ಲಿ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯನ್ನು ಜಾರಿಗೆಗೊಳಿಸಿದ್ದು; ಈ ಯೋಜನೆಯ ಅಡಿಯಲ್ಲಿ ಭಾರತದಾದ್ಯಂತ ಈಗಾಗಲೇ ಕೋಟ್ಯಾಂತರ ಫಲಾನುಭವಿಗಳು ಅಡುಗೆ ಅನಿಲ ಸಂಪರ್ಕ ಪಡೆದಿದ್ದಾರೆ.

Pradhan Mantri Ujjwala Yojana 2.0 ಯೋಜನೆ ಅಡಿಯಲ್ಲಿ ಅರ್ಹ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕದ ಜೊತೆಗೆ ಉಚಿತ ರಿಫೆಲ್, ಉಚಿತ ಸ್ಟೌ ಒದಗಿಸಲಾಗುತ್ತದೆ. ಹೀಗಾಗಿ ಬಡ ಕುಟುಂಬಗಳಿಗೆ ಈ ಯೋಜನೆ ಬಹಳ ಉಪಯುತ್ತವಾಗಿದ್ದು; ಅರ್ಹ ಮಹಿಳೆಯರು ತಕ್ಷಣ ಆನ್‌ಲೈನ್ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಇದನ್ನೂ ಓದಿ: ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ | 80% ಸಬ್ಸಿಡಿ | ಯಾರೆಲ್ಲ ಅರ್ಜಿ ಸಲ್ಲಿಸಬಹುದು? Solar Agricultural Pumpset Scheme 2024

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

18 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಅಂತಹ ಮಹಿಳೆಯರ ಕುಟುಂಬಲ್ಲಿ ಬೇರೆ ಯಾರೊಬ್ಬರ ಹೆಸರಿನಲ್ಲಿಯೂ ಗ್ಯಾಸ್ ಸಂಪರ್ಕ ಇರಬಾರದು. ಈ ಅರ್ಹತೆಯುಳ್ಳ ಎಲ್ಲಾ ಮಹಿಳೆಯರು ಈ ಕೆಳಗಿನ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

  • ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್
  • ಬಿಪಿಎಲ್ ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪಾಸ್ ಪೋರ್ಟ್ ಸೈಜ್ ಫೋಟೋ
  • ಜಾತಿ ಪ್ರಮಾಣ ಪತ್ರ
  • ವಿಳಾಸ ಪ್ರಮಾಣ ಪತ್ರ

ಇದನ್ನೂ ಓದಿ: ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ Kisan Vikas Patra-KVP

ಅರ್ಜಿ ಸಲ್ಲಿಕೆ ಹೇಗೆ?

‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯಡಿ ಉಚಿತ ಉಜ್ವಲ ಸಿಲಿಂಡರ್ ಪಡೆಯಲು ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿ. ಒಂದು ಹತ್ತಿರದ ಗ್ಯಾಸ್ ಏಜನ್ಸಿಗೆ ಹೋಗಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲೊಸಲು ಅವಕಾಶವಿದೆ.

ಇನ್ನೊಂದು ವಿಧಾನ, ಹತ್ತಿರವಿರುವ ಗ್ರಾಮ ಒನ್ ಕಂಪ್ಯೂಟರ್ ಕೇಂದ್ರ, ಇತರೆ ಕಂಪ್ಯೂಟರ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಭ್ಯರ್ಥಿಯ ಹೆಸರು, ವಿಳಾಸ, ಆಧಾರ್ ನಂಬರ್, ರೇಷನ್ ಕಾರ್ಡ್ ನಂಬರ್ ಭರ್ತಿ ಮಾಡಿ ನೇರವಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ₹7 ಲಕ್ಷದ ವರೆಗೂ ಎಸ್‌ಬಿಐ ಆಶಾ ಸ್ಕಾಲರ್‌ಶಿಪ್ ಆರ್ಥಿಕ ನೆರವು | ಅರ್ಜಿ ಆಹ್ವಾನ SBI Asha Scholarship Program 2024

ಅರ್ಜಿ ಸಲ್ಲಿಸುವಾಗ ಎರಡು ರೀತಿಯ ಸಿಲಿಂಡರ್ ಪಡೆಯಲು ಅವಕಾಶವಿರುತ್ತದೆ. ಮೊದಲನೆಯದಾಗಿ 14.2 ಕೆಜಿಯ ಒಂದು ಸಿಲಿಂಡರ್ ಅಥವಾ 5 ಕೆಜಿಯ ಎರಡು ಸಿಲಿಂಡರ್ ಪಡೆಯಲು ಆಯ್ಕೆ ಮಾಡಿಕೊಳ್ಳಬಹುದು.

ಇನ್ನೂ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಸಂಬ೦ಧಿಸಿದ ಯಾವುದೇ ಹೆಚ್ಚಿನ ಮಾಹಿತಿ ಬೇಕಾದರೆ ತಮ್ಮ ವ್ಯಾಪ್ತಿಯಲ್ಲಿ ಬರುವ ಹತ್ತಿರದ ಗ್ಯಾಸ್ ಏಜೆನ್ಸಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಅರ್ಜಿ ಸಲ್ಲಿಕೆ ಲಿಂಕ್ : https://pmuy.gov.in/kn/

ಇದನ್ನೂ ಓದಿ: ಮನೆಮನೆಗೂ ಸೋಲಾರ್ ವಿದ್ಯುತ್ | ಬೆಸ್ಕಾಂ ಸೂಪರ್ ಸ್ಕೀಮ್ | ಕೂತಲ್ಲೇ ಗಳಿಸಿ ಭರ್ಜರಿ ಆದಾಯ Bescom Solar Rooftop Scheme

WhatsApp Group Join Now
Telegram Group Join Now

Related Posts