JobsNews

ವಿಜಯಪುರ ಸೈನಿಕ್ ಶಾಲೆ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಪದವೀಧರರಿಗೆ ಅವಕಾಶ Sainik School Vijayapur Staff Recruitment 2025

WhatsApp Group Join Now
Telegram Group Join Now

Sainik School Vijayapur Staff Recruitment 2025 : ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ ವಿಜಯಪುರದ ಸೈನಿಕ್ ಶಾಲೆಯಲ್ಲಿ (Sainik School Vijayapur) ಖಾಲಿ ಇರುವ ವಿವಿಧ ಸಿಬ್ಬಂದಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಪ್ಪಂದದ ಆಧಾರದ (Contractual basis) ಮೇಲೆ ನೇಮಕಾತಿ ನಡೆಯಲಿದ್ದು; ಎಸ್‌ಎಸ್‌ಎಲ್‌ಸಿ, ಪದವಿ ಅಭ್ಯರ್ಥಿಗಳು ಸ್ಪೀಡ್ ಪೋಸ್ಟ್ ಮೂಲಕ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

  • ವಾರ್ಡ್ ಬಾಯ್ಸ್ : 04
  • PEM/PTI ಕಮ್ ಮಾಟ್ರಾನ್ (ಮಹಿಳೆ ಮಾತ್ರ) : 01
  • ನರ್ಸ್ : 01
  • ಸಲಹೆಗಾರ : 01
  • PGT (ರಸಾಯನಶಾಸ್ತ್ರ) : 01
  • TGT (ಇಂಗ್ಲಿಷ್) : 02
  • TGT (ಜೀವಶಾಸ್ತ್ರ) : 01
  • TGT (ಗಣಿತ) : 01
  • TGT (ಕನ್ನಡ) : 01
  • TGT (ಭೌತಶಾಸ್ತ್ರ) : 01
  • TGT (ಸಮಾಜ ವಿಜ್ಞಾನ) : 01
  • ಸಂಗೀತ ಶಿಕ್ಷಕ : 01
  • ಒಟ್ಟು ಹುದ್ದೆಗಳು : 16

ಮೇಲ್ಕಾಣಿಸಿದ ಎಲ್ಲಾ ಹುದ್ದೆಗಳಿಗೆ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಏಕೀಕೃತ ವೇತನವನ್ನು ಪಾವತಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳ ಡೇಟ್ ಫಿಕ್ಸ್ | ಯಾವ್ಯಾವ ದಿನ, ಯಾವ್ಯಾವ ಪರೀಕ್ಷೆ ನಡೆಯಲಿದೆ? ಇಲ್ಲಿದೆ ಮಾಹಿತಿ… KPSC Recruitment Exam Time Table 2025

ವಿದ್ಯಾರ್ಹತೆ ವಿವರ

ಮಾನ್ಯತೆ ಪಡೆದ ಮಂಡಳಿಯಿ೦ದ ಕನಿಷ್ಠ 10ನೇ ತರಗತಿ ತೇರ್ಗಡೆ, ನರ್ಸಿಂಗ್‌ನಲ್ಲಿ ಡಿಪ್ಲೊಮಾ ಹಾಗೂ ಸಂಬ೦ಧಿಸಿದ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಆಯಾ ಹುದ್ದೆಗಳಿಗೆ ಸಂಬ೦ಧಿಸಿದ ವಿದ್ಯಾರ್ಹತೆ, ಅನುಭವ ಮತ್ತು ಇತರೆ ಅರ್ಹತೆ ಕುರಿತ ವಿವರವನ್ನು ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು ಸಂಪೂರ್ಣವಾಗಿ ಓದಿ.

ವಯೋಮಿತಿ ವಿವರ

ವಾರ್ಡ್ ಬಾಯ್ಸ್, PEM/PTI ಕಮ್ ಮಾಟ್ರಾನ್ ಹಾಗೂ ನರ್ಸ್ ಹುದ್ದೆಗಳಿಗೆ ಏಪ್ರಿಲ್ 1, 2025ಕ್ಕೆ ಅನ್ವಯವಾಗುವಂತೆ ಕನಿಷ್ಟ 18 ಮತ್ತು ಗರಿಷ್ಟ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಇನ್ನುಳಿದ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 21 ಮತ್ತು ಗರಿಷ್ಟ 35 ವರ್ಷ ವಯೋಮಿತಿ ಹೊಂದಿರಬೇಕು.

ಇದನ್ನೂ ಓದಿ : ಆಳ್ವಾಸ್ ಸಂಸ್ಥೆಯಿಂದ ಉಚಿತ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನ | ವಸತಿ, ಊಟೋಪಚಾರ ಸಂಪೂರ್ಣ ಉಚಿತ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ Alvas free education scheme admission application 2025

ಅರ್ಜಿ ಶುಲ್ಕವೆಷ್ಟು?

ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ಪ್ರಾಂಶುಪಾಲರ ಪರವಾಗಿ, ಸೈನಿಕ ಶಾಲೆ ಬಿಜಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೈನಿಕ್ ಸ್ಕೂಲ್ ಕ್ಯಾಂಪಸ್ ಬಿಜಾಪುರ ಶಾಖೆ (ಕೋಡ್ 3163) ಹೆಸರಿಗೆ 500 ರೂ. Demand Draft (DD) ಅನ್ನು ಅರ್ಜಿಯೊಂದಿಗೆ ಕಳಿಸಿಕೊಡಬೇಕು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ಇತರೆ ದಾಖಲಾತಿಗಳು

ವಿಜಯಪುರದ ಸೈನಿಕ್ ಶಾಲೆಯಲ್ಲಿ ಖಾಲಿ ಇರುವ ವಿವಿಧ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು:

  • 500 ರೂ. ಡಿಮ್ಯಾಂಡ್ ಡ್ರಾಫ್ಟ್ (ಡಿಡಿ)
  • ಅರ್ಜಿ ನಮೂನೆಯಲ್ಲಿ ಒದಗಿಸಿದ ಜಾಗದಲ್ಲಿ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • 42 ರೂ. ಮೌಲ್ಯದ ಅಂಚೆ ಚೀಟಿಗಳೊಂದಿಗೆ ಸ್ವಯಂ ವಿಳಾಸದ ಲಕೋಟೆ
  • ಶೈಕ್ಷಣಿಕ ಮತ್ತು ಅನುಭವ ಪ್ರಮಾಣ ಪತ್ರಗಳ ಪ್ರತಿಗಳು
  • ಅರ್ಜಿದಾರರು SC/ST/OBC ವರ್ಗವಾಗಿದ್ದರೆ ಜಾತಿ ಪ್ರಮಾಣ ಪತ್ರದ ಪ್ರತಿ

ಇದನ್ನೂ ಓದಿ : SSLC ಪಾಸಾದ ಮಹಿಳೆಯರಿಗೆ LIC ಬಿಮಾ ಸಖಿ ನೇಮಕಾತಿಗೆ ಅರ್ಜಿ ಆಹ್ವಾನ | ಕೇಂದ್ರ ಸರ್ಕಾರದ ಹೊಸ ಯೋಜನೆ LIC BIMA SAKHI Scheme

ಅರ್ಜಿ ಸಲ್ಲಿಕೆ ಹೇಗೆ?

ಸೈನಿಕ ಶಾಲೆ ವಿಜಯಪುರ ವೆಬ್‌ಸೈಟ್ https://ssbj.in/ ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ. ಭರ್ತಿ ಮಾಡಿದ ಅರ್ಜಿಯೊಂದಿಗೆ ದೃಢೀಕರಿಸಿದ ದಾಖಲೆಗಳ ಪ್ರತಿಗಳು ಹಾಗೂ 42 ರೂಪಾಯಿ ಅಂಚೆ ಚೀಟಿ ಅಂಟಿಸಿದ ಸ್ವಯಂ ವಿಳಾಸದ ಲಕೋಟೆ ಇರಿಸಿ ಸ್ಪೀಡ್ ಪೋಸ್ಟ್ ಮೂಲಕ ಜನವರಿ 4, 2025ರ ಒಳಗಾಗಿ ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಬೇಕು.

ಅರ್ಜಿ ಸಲ್ಲಿಸುವ ಅಂಚೆ ವಿಳಾಸ

Principal
Sainik School Bijapur
Athani Road
Vijayapura – 586 108
Karnataka
Ph: 08352 – 270638

ಅಧಿಸೂಚನೆ : Download
ವೆಬ್‌ಸೈಟ್ : https://ssbj.in/

ಆಳ್ವಾಸ್ ಸಂಸ್ಥೆಯಿಂದ ಉಚಿತ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನ | ವಸತಿ, ಊಟೋಪಚಾರ ಸಂಪೂರ್ಣ ಉಚಿತ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ Alvas free education scheme admission application 2025

WhatsApp Group Join Now
Telegram Group Join Now

Related Posts