AgricultureSchemes

ರೈತರು ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿಸಲು 3 ಲಕ್ಷ ರೂಪಾಯಿ ಸಹಾಯಧನ | ಹೀಗೆ ಅರ್ಜಿ ಸಲ್ಲಿಸಿ… Agricultural Mechanization Scheme

WhatsApp Group Join Now
Telegram Group Join Now

Agricultural Mechanization Scheme : ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತಿದೆ. ಯಾವ ರೈತರಿಗೆ ಎಷ್ಟು ಸಹಾಯಧನ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಯಾವ್ಯಾವ ಉಪಕರಣಗಳಿಗೆ ಎಷ್ಟು ಸಬ್ಸಿಡಿ? ಸಂಪೂರ್ಣ ಮಾಹಿತಿ ಇಲ್ಲಿದೆ…

ಇಂದು ಜಾನುವಾರು ಆಧಾರಿತ ಕೃಷಿ ಕಾರ್ಯಗಳು ಕಡಿಮೆಯಾಗಿದ್ದು; ಬಹುತೇಕ ಕೃಷಿ ಚಟುವಟಿಕೆಗಳು ಯಂತ್ರೋಪಕರಣಗಳ ಮೇಲೆಯೇ ಅವಲಂಬಿತವಾಗುತ್ತಿವೆ. ಇದಕ್ಕೆ ಪೂರಕವಾಗಿ ಸರಕಾರ ಕೂಡ ಕೃಷಿ ಯಂತ್ರಧಾರೆ, ಕೃಷಿ ಯಾಂತ್ರೀಕಣ ಯೋಜನೆಯಂತಹ (Agricultural Mechanization Scheme) ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಮಾತ್ರವಲ್ಲ ಇದೇ ಜನವರಿ 31ರಿಂದ ರೈತರು ಬಳಸುವ ಕೃಷಿ ಯಂತ್ರಗಳಿಗೆ ಉಚಿತ ಡಿಸೇಲ್ ನೀಡುವ ‘ರೈತಶಕ್ತಿ’ ಯೋಜನೆಯನ್ನು ಕೂಡ ಅನುಷ್ಠಾನಗೊಳಿಸಲಾಗುತ್ತಿದೆ.

ಶೇ.90ರಷ್ಟು ಸಹಾಯಧನ

ಬಹುಮುಖ್ಯವಾಗಿ ರೈತರ ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಸುಲಭಗೊಳಿಸುವ ಹಾಗೂ ಖರ್ಚು-ಸಮಯವನ್ನು ಕಡಿಮೆ ಮಾಡುವ ಸದುದ್ದೇಶದಿಂದ ಅನುಷ್ಠಾನಗೊಳಿಸಿರುವ ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ವತಿಯಿಂದ ಭೂಮಿ ಸಿದ್ದತೆಯಿಂದ ಹಿಡಿದು ಕೊಯ್ಲು ವರೆಗೂ ವಿವಿಧ ಕೃಷಿ ಯಂತ್ರೋಪಕರಣಗಳ ಖರೀದಿಗೆ ಈ ಸಹಾಯಧನ ನೀಡಲಾಗುತ್ತಿದೆ.

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಲಭ್ಯತೆ ಆಧಾರದ ಮೇಲೆ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ, ರೋಟೋವೇಟರ್, ಡಿಸ್ಕ್ ಫ್ಲೋ, ಡಿಸ್ಕ್ ಹ್ಯಾರೋ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಸಿಗಲಿದೆ.

ಈ ರೈತರಿಗೆ ಬರ ಪರಿಹಾರ ಸಿಗಲ್ಲ | ಬಿತ್ತನೆ ಮಾಡದ ರೈತರಿಗೆ ಸಂಕಷ್ಟ These farmers will not get drought relief

ಯಾವುದಕ್ಕೆ ಎಷ್ಟು ಸಹಾಯಧನ?

ಮಿನಿ ಟ್ರ್ಯಾಕ್ಟರ್: ಟ್ರ್ಯಾಕ್ಟರ್ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಠ 3 ಲಕ್ಷ ರೂಪಾಯಿ ವರೆಗೆ ಸಹಾಯಧನ ಸಿಗಲಿದೆ. ಸಾಮಾನ್ಯ ವರ್ಗದವರಿಗೆ 75 ಸಾವಿರ ರೂಪಾಯಿ ವರೆಗೆ ಸಹಾಯಧನ ಸಿಗಲಿದೆ.

ಪವರ್ ಟಿಲ್ಲರ್ : ಖರೀದಿಗೆ ಸಾಮಾನ್ಯ ವರ್ಗದವರಿಗೆ ಶೇ.50ರಷ್ಟು ಸಹಾಯಧನ ಗರಿಷ್ಠ 72,500 ರೂಪಾಯಿ ವರೆಗೆ ಸಹಾಯಧನ ಸಿಗಲಿದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.90ರಷ್ಟು ಸಹಾಯಧನ, ಗರಿಷ್ಠ 1 ಲಕ್ಷ ರೂಪಾಯಿ ವರೆಗೆ ಸಹಾಯಧನ ಸಿಗಲಿದೆ.

ಟ್ರ್ಯಾಕ್ಟರ್ ಚಾಲಿತ ಎಂ.ಬಿ. ಫ್ಲೋ ಫಿಕ್ಸ್ಡ್: ಸಾಮಾನ್ಯ ವರ್ಗದವರಿಗೆ 14,100 ರೂಪಾಯಿ ರಿವರ್ಸಿಬಲ್ ಎಂ.ಬಿ. ಫ್ಲೋಗೆ 25,800 ರೂಪಾಯಿ ಸಹಾಯಧನ ಸಿಗಲಿದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಂ.ಬಿ. ಫ್ಲೋ 25,830 ರೂಪಾಯಿ, ರಿವರ್ಸಿಬಲ್ ಎಂ.ಬಿ. ಫ್ಲೋಗೆ 51,300 ರೂಪಾಯಿ ಸಹಾಯಧನ ಸಿಗಲಿದೆ.

ಟ್ರಾ÷್ಯಕ್ಟರ್ ಚಾಲಿತ ಡಿಸ್ಕ್ ಫ್ಲೋ: ಖರೀದಿಗೆ ಸಾಮಾನ್ಯ ವರ್ಗದವರಿಗೆ 29,000ದಿಂದ 36,500 ರೂಪಾಯಿಯವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52,200 ರೂಪಾಯಿಯಿಂದ 65,700 ರೂಪಾಯಿ ವರೆಗೆ ಸಹಾಯಧನ ಸಿಗಲಿದೆ.

ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋ: ಸಾಮಾನ್ಯ ವರ್ಗದವರಿಗೆ 29,000-35000 ರೂಪಾಯಿ ವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52,200 ದಿಂದ 63,000 ರೂಪಾಯಿವರೆಗೆ ಸಹಾಯಧನ ಸಿಗಲಿದೆ.

ಸರಕಾರಿ ನೌಕರರ ಸಂಬಳ ಹೆಚ್ಚಳಕ್ಕೆ ಸಿದ್ಧತೆ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಸರಕಾರದ ಗ್ರೀನ್ ಸಿಗ್ನಲ್ Increase in salary of government employees

ಈ ಸೌಲಭ್ಯ ಪಡೆಯಲು ಬೇಕಾಗುವ ದಾಖಲೆಗಳೇನು?

ರೈತರ ಜಮೀನಿನ ಪಹಣಿ (RTC), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು. ಪಹಣಿ ಜಂಟಿಯಾಗಿದ್ದರೆ ಒಪ್ಪಿಗೆ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು. ಜೊತೆಗೆ ರೈತರು ಫ್ರೂಟ್ಸ್ ಐಡಿ ಹೊಂದಿರಬೇಕು. ಎಸ್‌ಸಿ/ಎಸ್‌ಟಿ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವಿರಬೇಕು. ರೈತರು ಯಾವ ಕೃಷಿ ಯಂತ್ರೋಪಕರಣಕ್ಕೆ ಅರ್ಜಿ ಸಲ್ಲಿಸುತ್ತಾರೋ ಆ ಅರ್ಜಿ ನಮೂನೆ ಹೊಂದಿರಬೇಕು.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಪ್ರತಿ ವರ್ಷ ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಉಪಕರಣ ಖರೀದಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಜಿಲ್ಲಾವಾರು ಅರ್ಜಿ ಆಹ್ವಾನಿಸಲಾಗುತ್ತದೆ. ಆ ಸಂದರ್ಭದಲ್ಲಿ ಆಸಕ್ತ ರೈತರು ತಮ್ಮ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆಯಬಹುದು. ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು (Agricultural Machinery) ಲಭ್ಯತೆ ಆಧಾರದ ಮೇರೆಗೆ ನೀಡಲಾಗುವುದು.

ಅನುದಾನ ಲಭ್ಯತೆ ಹಾಗೂ ಹಿರಿತನ ಅಂದರೆ ಆಯಾಯ ಜಿಲ್ಲೆಯಲ್ಲಿರುವ ಅನುದಾನ ಲಭ್ಯತೆ ಹಾಗೂ ಮೊದಲು ಬಂದ ಅರ್ಜಿ ಆಧಾರದ ಮೇಲೆ ಕೃಷಿ ಯಾಂತ್ರೀಕರಣ ಯೋಜನೆ ಸೌಲಭ್ಯ ನೀಡಲಾಗುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬಹುದು.

Bara Parihara Status Check : ರೈತರೇ ನಿಮ್ಮ ಮೊಬೈಲ್ ನಂಬರ್ ಮೂಲಕ ಬರ ಪರಿಹಾರ ಹಣ ಜಮಾ ಚೆಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!