ರೈತರ ಕೃಷಿ ಪಂಪ್‌ಸೆಟ್ ಹೆಸರು ಬದಲಾವಣೆಗೆ ಇಂಧನ ಇಲಾಖೆ ಸೂಚನೆ Agricultural Pumpset Farmer Name Change

Spread the love

Agricultural Pumpset Farmer Name Change : ಕೃಷಿ ನೀರಾವರಿ ಪಂಪ್‌ಸೆಟ್’ಗಳ ಮೂಲ ಗ್ರಾಹಕರು ಕೃಷಿ ಭೂಮಿಯನ್ನು ಖರೀದಿಸಿದ್ದಲ್ಲಿ ಅಥವಾ ಮೂಲ ಗ್ರಾಹಕರು ಮರಣ ಹೊಂದಿದ್ದಲ್ಲಿ ನೀರಾವರಿ ಪಂಪ್‌ಸೆಟ್ ಹೆಸರನ್ನು ಕಡ್ಡಾಯವಾಗಿ ಬದಲಿಸುವಂತೆ ವಿದ್ಯುತ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now

ಈ ಸಂಬ೦ಧ ರಾಜ್ಯದ ವಿವಿಧ ಎಸ್ಕಾಂಗಳಾದ ಬೆಂಗಳೂರು ವಿಭಾಗದ Bescom, ಮಂಗಳೂರು ವಿಭಾಗದ Mescom, ಕಲಬುರಗಿ ವಿಭಾಗದ Gescom ಹಾಗೂ ಹುಬ್ಬಳ್ಳಿ ವಿಭಾಗದ Hescomಗಳು ತಮ್ಮ ವ್ಯಾಪ್ತಿಯ ಕೃಷಿ ಪಂಪ್‌ಸೆಟ್ ಹೊಂದಿರುವ ರೈತರಿಗೆ ಸೂಚನೆ ನೀಡಿವೆ.

ಇದನ್ನೂ ಓದು: ಮಹಿಳೆಯರಿಗೆ ₹3 ಲಕ್ಷ ಬಡ್ಡಿ ಇಲ್ಲದ ಸಾಲಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ kswdc karnataka Schemes 2024 

ಆರ್‌ಆರ್ ನಂಬರ್ ರದ್ದು

ಪಂಪ್‌ಸೆಟ್ ಹೊಂದಿರುವ ರಾಜ್ಯದ ಎಲ್ಲ ರೈತರು ತಮ್ಮ ಸ್ಥಳೀಯ ಎಸ್ಕಾಂ (KEB) ಕಚೇರಿಗೆ ಅಥವಾ ತಮ್ಮ ಗ್ರಾಮದ ಲೈನ್‌ಮನ್’ಗಳನ್ನು ಸಂಪರ್ಕಿಸಿ ಅಗತ್ಯವಾದ ದಾಖಲಾತಿಗಳನ್ನು ನೀಡಿ ಹೆಸರು ಬಲಾವಣೆ ಮಾಡಿಕೊಳ್ಳಲು ಕೋರಲಾಗಿದೆ.

ಇದು ಕೃಷಿ ಭೂಮಿ ಖರೀದಿಸಿದ ಮೂಲ ಗ್ರಾಹಕರು (ರೈತರು) ಅಥವಾ ಮರಣ ಹೊಂದಿದ ಗ್ರಾಹಕರಿಕೆ ಮಾತ್ರ ಅನ್ವಯವಾಗಿದ್ದು; ನಿಗದಿತ ಅವಧಿಯೊಳಗೆ ಹೆಸರು ಬದಲಾವಣೆ ಮಾಡಿಕೊಳ್ಳದೇ ಉದಾಸೀನ ತೋರಿದರೆ ರೈತರ ನೀರಾವರಿ ಪಂಪ್‌ಸೆಟ್’ನ ಆರ್‌ಆರ್ ನಂಬರ್ ರದ್ದಾಗುವ ಸಂಭವವಿದೆ.

Agricultural Pumpset Farmer Name Change

 

ಇದನ್ನೂ ಓದು: ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ: 2024-25ನೇ ಸಾಲಿನ ವಿವಿಧ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ DBCDC Shemes Karnatakagov

ಅಕ್ರಮ ಪಂಪ್‌ಸೆಟ್ ಪತ್ತೆ

ರಾಜ್ಯದಲ್ಲಿ ಹಲವು ಅಕ್ರಮ ಪಂಪ್‌ಸೆಟ್’ಗಳು ಸಕ್ರೀಯವಾಗಿದ್ದು; ರೈತರಿಗಾಗಿ ಮೀಸಲಾಗಿರುವ ವಿದ್ಯುತ್ ನೆರವು ದುರ್ಬಳಕೆಯಾಗುತ್ತಿದೆ. ಇಂಧನ ಇಲಾಖೆಯಿಂದ ಸರಬರಾಜು ಆಗುವ ವಿದ್ಯುತ್ ನೆರವು ನಿಜವಾದ ಫಲಾನುಭವಿ ರೈತರಿಗೆ ಮಾತ್ರ ಸಲ್ಲಬೇಕು. ಹೀಗಾಗಿ 2024-25ನೇ ಸಾಲಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ದರ ಪರಿಷ್ಕರಣೆ ಆದೇಶದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿದೆ.

ಹಾಲಿ ಇರುವ ಕೃಷಿ ಪಂಪ್‌ಸೆಟ್ ವಾರಸುದಾರರು ಮರಣ ಹೊಂದಿದ್ದಲ್ಲಿ ಪ್ರಸ್ತುತ ಪಹಣಿಯಲ್ಲಿರುವ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಹಿಂದಿನ ವಾರಸುದಾರರ ಮರಣ ಪ್ರಮಾಣ ಪತ್ರ, ಛಾಪಾ ಕಾಗದ ಹಾಗೂ ಪಹಣಿಯಲ್ಲಿ ಜಂಟಿ ಖಾತೆಯಾಗಿದ್ದರೆ ಉಳಿದವರ ಒಪ್ಪಿಗೆ ಪತ್ರ, ಕ್ರಯಪತ್ರದ ದಾಖಲೆಯನ್ನು ಸಮೀಪದ ಕೆಇಬಿ ಕಚೇರಿ ಅಥವಾ ಸಂಬAಧಿಸಿದ ಲೈನ್‌ಮ್ಯಾನ್’ಗಳಿಗೆ ಸಲ್ಲಿಸಿ ಹಾಲಿ ಆರ್.ಆರ್.ಸಂಖ್ಯೆಯಲ್ಲಿರುವ ಹೆಸರನ್ನು ಬದಲಾವಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದು: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ Home loan complete information


Spread the love
WhatsApp Group Join Now
Telegram Group Join Now

1 thought on “ರೈತರ ಕೃಷಿ ಪಂಪ್‌ಸೆಟ್ ಹೆಸರು ಬದಲಾವಣೆಗೆ ಇಂಧನ ಇಲಾಖೆ ಸೂಚನೆ Agricultural Pumpset Farmer Name Change”

Leave a Comment

error: Content is protected !!