Air Pressure Drop Rain Forecast : ಬಂಗಾಳಕೊಲ್ಲಿಯಲ್ಲಿ (Bay of Bengal) ಮತ್ತೆರಡು ವಾಯುವ ಭಾರ ಕುಸಿತ (air pressure drop) ಸಂಭವಿಸಲಿದ್ದು; ಡಿಸೆಂಬರ್ 18ರ ವರೆಗೂ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Rain Forecast) ನೀಡಿದೆ. ಮುಂದಿನ ಹತ್ತು ದಿನಗಳಲ್ಲಿ ನಡೆಯಲಿರುವ ಈ ಎರಡೂ ವಾಯುಭಾರ ಕುಸಿತಗಳ ಪ್ರಭಾವದಿಂದ ರಾಜ್ಯದಲ್ಲೂ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಈಚೆಗಷ್ಟೇ ಸಂಭವಿಸಿದ್ದ ‘ಫೆಂಗಲ್’ (Cyclone Fengal) ಚಂಡಮಾರುತದ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪಾರ ಹಾನಿಯನ್ನುಂಟು ಮಾಡಿತ್ತು. ಈ ನಷ್ಟದಿಂದ ಸುಧಾರಿಸಿಕೊಳ್ಳುವ ಮೊದಲೇ ಪುನಃ ಮತ್ತೆರಡು ವಾಯುಭಾರ ಕುಸಿತ ಸೃಷ್ಟಿಯಾಗುವ ಲಕ್ಷಣ ಬಂಗಾಳಕೊಲ್ಲಿ ಕಂಡು ಬರುತ್ತಿದೆ.
ಮೊದಲನೇ ವಾಯುಭಾರ ಕುಸಿತ ಒಂದೆರಡು ದಿನದಲ್ಲಿ ತೀವ್ರ ಸ್ವರೂಪ ಪಡೆದು ಕಾಣಿಸಿಕೊಳ್ಳಲಿದ್ದು, ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 14-15ಕ್ಕೆ ಮಳೆಯಾಗಲಿದೆ.
ಎರಡನೇ ವಾಯುಭಾರ ಕುಸಿತ ಡಿಸೆಂಬರ್ 16ರ ಬಳಿಕ ರೂಪುಗೊಳ್ಳಲಿದ್ದು, ಇದರಿಂದ ಡಿಸೆಂಬರ್ 17-18ಕ್ಕೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಬಹುತೇಕ ಬೆಳೆಗಳು ಕಟಾವಿಗೆ ಬಂದಿದ್ದು, ರೈತರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಹವಾಮಾನ ತಜ್ಞಶ್ರೀನಿವಾಸ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಹಿಳೆಯರಿಗೆ ಉಜ್ವಲ ಉಚಿತ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ… Pradhan Mantri Ujjwala Yojana