ಕೋ-ಅಪ್ ಸೊಸೈಟಿಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಕೋ-ಅಪ್ ಸೊಸಾಯಿಟಿ ಲಿ., ಖಾಲಿ ಹುದ್ದೆಗಳ ಭರ್ತಿಗೆ ಸೊಸೈಟಿ ಅಧ್ಯಕ್ಷರು ನೇಮಕಾತಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಹುದ್ದೆಗಳ ವಿವರ: ಶ್ರೀ ಜಗದ್ಗುರು ರೇಣುಕಾಚಾರ್ಯ ಕೋ-ಅಪ್ ಸೊಸೈಟಿ ಸಿಇಓ 01, ಹಿರಿಯ ಸಹಾಯಕ 02, ಕಿರಿಯ ಸಹಾಯಕ 04, ಸಿಪಾಯಿ/ಸಹಾಯಕ 03 ಹುದ್ದೆ ಸೇರಿ ಒಟ್ಟು 10 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯುವ ಮುನ್ನ ಈ ಮಹತ್ವದ ಮಾಹಿತಿ ತಿಳಿದಿರಿ...
ವಿದ್ಯಾರ್ಹತೆ: ಸಿಇಓ, ಹಿರಿಯ ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳಿಗೆ ಅಭ್ಯರ್ಥಿಗಳು ಅಂಗಿಕೃತ ವಿಶ್ವವಿದ್ಯಾಲಯದಿಂದ ಎಮ್.ಬಿ.ಎ / ಎಂ.ಕಾಮ್ ಪದವಿ ಪಡೆದಿರಬೇಕು. ಇನ್ನು ಸಿಪಾಯಿ/ಸಹಾಯಕ ಹುದ್ದೆಗಳಿಗೆ 10ನೇ ತರಗತಿ ಪಾಸ್ ಅಥವಾ ಫೇಲಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.
ಮಾಸಿಕ ವೇತನ: ಸಿಇಓ ಹುದ್ದೆಗೆ ₹23,500 ರಿಂದ ₹47,650, ಹಿರಿಯ ಸಹಾಯಕ ಹುದ್ದೆಗೆ ₹19,950 ರಿಂದ ₹37,900, ಕಿರಿಯ ಸಹಾಯಕ ₹18,600 ರಿಂದ ₹32,600 ಹಾಗೂ ಸಿಪಾಯಿ/ಸಹಾಯಕ ಹುದ್ದೆಗಳಿಗೆ ₹17,000 ರಿಂದ ₹28,950 ವೇತನ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಸೋಲಾರ್ ಕರೆಂಟ್ ಕೃಷಿ | ಬೆಸ್ಕಾಂ ಸೋಲಾರ್ ಸ್ಕೀಮ್ | ನಿಮ್ಮ ಮನೆ ಮೇಲೆಯೇ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡಿ...
ಸೇವಾ ಅನುಭವ ಮತ್ತು ವಯೋಮಿತಿ: ಶ್ರೀ ಜಗದ್ಗುರು ರೇಣುಕಾಚಾರ್ಯ ಕೋ-ಅಪ್ ಸೊಸೈಟಿ ಖಾಲಿ ಹುದ್ದೆಗಳ ಭರ್ತಿಗೆ ಅನುಭವಕ್ಕೆ ಆದ್ಯತೆ ನೀಡಲಾಗುತ್ತಿದೆ. ವಯೋಮಿತಿ ನೋಡುವುದಾದರೆ ಸಿಇಓ ಹುದ್ದೆಗೆ 28 ವರ್ಷದ ಮೇಲೆ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹಿರಿಯ ಸಹಾಯಕರು ಹುದ್ದೆಗೆ 23-25 ವರ್ಷ, ಕಿರಿಯ ಸಹಾಯಕರು ಹುದ್ದೆಗೆ 22-25 ಹಾಗೂ ಸಿಪಾಯಿ/ಸಹಾಯಕ ಹುದ್ದೆಗೆ 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ ಹೇಗೆ?: ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ತರಬೇತಿ ಅವಧಿ 2 ವರ್ಷವಾಗಿದ್ದು; 1 ವರ್ಷದ ಕಂಪ್ಯೂಟರ ಟೀಚರ್ ಟ್ರೈನಿಂಗ್ ಕೋರ್ಸ ಮುಗಿಸಿರಬೇಕು. ಕಂಪ್ಯೂಟರ್ ಹಾರ್ಡ್’ವೇರ್ ನೆಟ್‌ವರ್ಕಿಂಗ್ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ಇದೆ.
ಅರ್ಜಿ ಸಲ್ಲಿಕೆ: ಇಚ್ಚೆಯುಳ್ಳ ಅಭ್ಯರ್ಥಿಗಳು ತಮ್ಮ ಸ್ವ-ವಿವರ ಮಾಹಿತಿಯೊಂದಿಗೆ ಇತ್ತೀಚಿನ ಭಾವಚಿತ್ರ, ವಿದ್ಯಾಭ್ಯಾಸದ ಪ್ರಮಾಣ ಪತ್ರಗಳ ನಕಲು ಪ್ರತಿಗಳು, ಬ್ಯಾಂಕಿ೦ಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವದ ಪ್ರಮಾಣ ಪತ್ರ, ಆಧಾರ ಕಾರ್ಡ್ ಮತ್ತು ಪಾನ್ ಕಾರ್ಡ್ ಪ್ರತಿಗಳನ್ನು ಅಂಚೆ ಮುಖಾಂತರವಾಗಲಿ ಅಥವಾ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ
ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯ ಜೊತೆ ರೂ.1,000/- ಡಿಡಿ ಲಗತ್ತಿಸಬೇಕು. ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಬಂದ ಅರ್ಜಿಯನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆ ವಿಳಾಸ: ಪ್ರಧಾನ ಕಛೇರಿ ವಿಳಾಸ: ಶ್ರೀ ಚನ್ನಪ್ಪ ಕುನ್ನೂರ ಕಾಲೇಜು ರಸ್ತೆ, ಶಿಗ್ಗಾಂವ-581205, ಜಿ| ಹಾವೇರಿ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08378-255534 / 9113569889.
ಅರ್ಜಿ ಸಲ್ಲಿಕೆ ಕೊನೇ ದಿನಾಂಕ : 31-03-2025
ಇದನ್ನೂ ಓದಿ: ನಿಮ್ಮ ಮನೆಗೆ ಸೋಲಾರ್ ಕರೆಂಟ್ ಪಡೆಯಲು ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...