Jobs

Agniveer Recruitment- ಅಗ್ನಿವೀರರ ನೇಮಕಾತಿ | 8th, 10th, 12th ಪಾಸಾದವರಿಂದ ಅರ್ಜಿ ಆಹ್ವಾನ

Agniveer Recruitment- ಅಗ್ನಿವೀರರ ನೇಮಕಾತಿ | 8th, 10th, 12th ಪಾಸಾದವರಿಂದ ಅರ್ಜಿ ಆಹ್ವಾನ

ಭಾರತೀಯ ಸೇನೆಯು (Indian Army) 2025ನೇ ಸಾಲಿಗೆ ‘ಅಗ್ನಿಪಥ’ ಯೋಜನೆಯಡಿಯಲ್ಲಿ (Agnipath Scheme - Indian Army) ಭೂಸೇನೆಯಲ್ಲಿ ‘ಅಗ್ನಿವೀರರ’ ನೇಮಕಾತಿಗೆ (Agniveer Recruitment 2025) ಅಧಿಸೂಚನೆ ಪ್ರಕಟಿಸಲಾಗಿದ್ದು; 8, 10 ಹಾಗೂ 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಮಾರ್ಚ್ 12ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಏಪ್ರಿಲ್ 10ರ ವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.


ದೇಶದಾದ್ಯಂತ ವಿವಿಧ ಸೇನಾ ವಲಯ ನೇಮಕಾತಿ ಕಚೇರಿಗಳಲ್ಲಿ ಏಕಕಾಲದಲ್ಲಿ ಅಂದರೆ ಜೂನ್ ತಿಂಗಳಿನಿ೦ದ ಸೇನಾ ನೇಮಕ ಪ್ರಕ್ರಿಯೆಗಳು ಆರಂಭವಾಗಲಿವೆ. ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹಾಗೂ ಟ್ರೇಡ್ಸ್ ಮನ್ ವಿಭಾಗದಲ್ಲಿ ಅಗ್ನಿವೀರರ ನೇಮಕಾತಿ ನಡೆಯಲಿದೆ. 


ಇದನ್ನೂ ಓದಿ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ


ರಾಜ್ಯದಲ್ಲಿಯೂ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ನೇಮಕ ರ್ಯಾಲಿಗಳು ನಡೆಯಲಿದ್ದು, ಅವುಗಳ ಬಗ್ಗೆ ಪ್ರತ್ಯೇಕ ಅಧಿಸೂಚನೆಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು ಮತ್ತು ಬೆಳಗಾವಿ ಸೇನಾ ವಲಯ ಕಚೇರಿಗಳು ನೇಮಕಾತಿಯ ಉಸ್ತುವಾರಿ ವಹಿಸಲಿವೆ. 


ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆಯನ್ನು ನಿಗದಿಪಡಿಸಿಲ್ಲ. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧರಿತ ಆನ್‌ಲೈನ್ ಪರೀಕ್ಷೆ ನಡೆಸಿ ನಂತರ ನೇಮಕ ರ್ಯಾಲಿ ಕೈಗೊಳ್ಳಲಾಗುತ್ತದೆ ಎಂದು ಭಾರತೀಯ ಸೇನೆಯು ಅಧಿಸೂಚನೆಯಲ್ಲಿ ತಿಳಿಸಿದೆ. 


ಇದನ್ನೂ ಓದಿ: ಸೂರ್ಯಘರ್ ಯೋಜನೆಯಡಿ 10 ಲಕ್ಷ ಮನೆಗಳಿಗೆ ಸೋಲಾರ್ ಕರೆಂಟ್  | ನಿಮ್ಮ ಮನೆಗೆ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ...


ಅರ್ಹತೆಗಳೇನು?: ಜನರಲ್ ಡ್ಯೂಟಿ ವಿಭಾಗದ ಅಗ್ನಿವೀರರ ಹುದ್ದೆಗಳಿಗೆ ಹೆಸರು ನೋಂದಾಯಿಸುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ ಶೇಕಡಾ 45 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು. ಲಘು ಮೋಟಾರ್ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.


ಟೆಕ್ನಿಕಲ್ ವಿಭಾಗದ ಅಗ್ನಿವೀರರ ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳು ವಿಜ್ಞಾನದಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದರೆ ಮಾತ್ರ ಅವಕಾಶ.


ಇನ್ನು ಕ್ಲರ್ಕ್, ಸ್ಟೋರ್ ಕೀಪರ್, ಟೆಕ್ನಿಕಲ್ ವಿಭಾಗದ ಅಗ್ನಿವೀರರ ಹುದ್ದೆಗೂ ದ್ವಿತೀಯ ಪಿಯುಸಿ (ಕಲೆ, ವಾಣಿಜ್ಯ ಅಥವಾ ವಿಜ್ಞಾನ) ವಿದ್ಯಾರ್ಹತೆ ಇರುವವರು ಹೆಸರು ನೋಂದಾಯಿಸಬಹುದು. ಅಭ್ಯರ್ಥಿಗಳು ಕನಿಷ್ಠ ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.


ಅದೇ ರೀತಿ ಟ್ರೇಡ್ಸ್ಮನ್ ವಿಭಾಗದಲ್ಲಿನ ಅಗ್ನಿವೀರರ ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳು 8ನೇ ತರಗತಿ ತೇರ್ಗಡೆ ಅಥವಾ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು. ಆದರೆ, ಪ್ರತಿ ವಿಷಯದಲ್ಲಿಯೂ ಕನಿಷ್ಠ ಶೇ.33 ಅಂಕಗಳೊ೦ದಿಗೆ ಉತ್ತೀರ್ಣರಾಗಿರಬೇಕು.


ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ


ವಯೋಮಿತಿ ಎಷ್ಟಿರಬೇಕು?: ಅಭ್ಯರ್ಥಿಗಳ ಕನಿಷ್ಠ ವಯಸ್ಸು 17 ವರ್ಷ, 6 ತಿಂಗಳು ನಿಗದಿಪಡಿಸಲಾಗಿದೆ. ಗರಿಷ್ಠ ವಯೋಮಿತಿಯನ್ನು 21 ವರ್ಷ ಹೊಂದಿರಬೇಕು. ಅಂದರೆ ಅಭ್ಯರ್ಥಿಗಳು 2004ರ ಅಕ್ಟೋಬರ್ 1 ಮತ್ತು 2008ರ ಏಪ್ರಿಲ್ 1ರ ನಡುವೆ ಜನಿಸಿರಬೇಕು.


ದೈಹಿಕ ಆರ್ಹತೆ: ಜನರಲ್ ಡ್ಯೂಟಿ ಮತ್ತು ಟ್ರೇಡ್‌ಮನ್ ವಿಭಾಗದಲ್ಲಿನ ಹುದ್ದೆಗಳಿಗೆ ನೋಂದಾಯಿಸುವ ಅಭ್ಯರ್ಥಿಗಳು 166 ಸೆಂ. ಮೀ. ಎತ್ತರ, ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು 165 ಸೆಂ.ಮೀ ಹಾಗೂ ಕ್ಲರ್ಕ್/ಸ್ಟೋರ್ ಕೀಪರ್/ ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು 162 ಸೆಂ. ಮೀ. ಎತ್ತರ ಹೊಂದಿರಬೇಕು. ಈ ಹುದ್ದೆಗಳಿಗೆ ಅಭ್ಯರ್ಥಿಗಳ ಎದೆಯ ಸುತ್ತಳತೆ 77 ಸೆಂ.ಮೀ. ಇರಬೇಕು.


ಅರ್ಜಿ ಶುಲ್ಕವೆಷ್ಟು?: ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೂ ಅಭ್ಯರ್ಥಿಗಳು 250 ರೂ. ಶುಲ್ಕ ಪಾವತಿಸಬೇಕು. ಸೇನೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವಾಗಲೇ ಶುಲ್ಕವನ್ನು ಎಚ್‌ಡಿಎಫ್‌ಸಿ ಪೋರ್ಟಲ್ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ.


ಇದನ್ನೂ ಓದಿ: ನಿಮ್ಮ ಮನೆಗೆ ಸೋಲಾರ್ ಕರೆಂಟ್ ಪಡೆಯಲು ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...


ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಪ್ರವೇಶ ಪರೀಕ್ಷೆ ಮತ್ತು ನೇಮಕ ರ್ಯಾಲಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ರಾಜ್ಯ, ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳನ್ನು ಪ್ರತಿನಿಧಿಸಿದ್ದರೆ, ಎನ್‌ಸಿಸಿ ಪ್ರಮಾಣ ಪತ್ರಗಳನ್ನು ಹೊಂದಿದ್ದರೆ ಅದನ್ನೂ ಆಯ್ಕೆ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ. ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರರಿಗೆ ಜಾರಿಗೊಳಿಸಿದ ಎಲ್ಲಾ ನಿಯಮಾವಳಿಗಳು ಇಲ್ಲಿ ಅನ್ವಯವಾಗುತ್ತವೆ.


ವೇತನ ಮಾಹಿತಿ: ಭೂಸೇನೆ ಅಗ್ನಿವೀರರಿಗೆ 1ನೇ ವರ್ಷ 30,000 ರೂ., 2ನೇ ವರ್ಷ 33,000 ರೂ., 3ನೇ ವರ್ಷ 36,500 ರೂ, ಹಾಗೂ 4ನೇ ವರ್ಷ 40,000 ರೂ. ಮಾಸಿಕ ವೇತನದ ಜತೆಗೆ ಇತರೆ ಭತ್ಯೆಗಳು ಅನ್ವಯವಾಗಲಿವೆ.


ಅಧಿಸೂಚನೆ: Click Here

ಅರ್ಜಿ ಲಿಂಕ್: Click Here


ಇದನ್ನೂ ಓದಿ: ರಾಜ್ಯದ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸೊಸೈಟಿ ಸಾಲ