News

Bird flu-ಕೋಳಿ ಮಾಂಸ ತಿಂದರೆ ಹಕ್ಕಿ ಜ್ವರ ಬರುತ್ತಾ? ಆರೋಗ್ಯ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ...

Bird flu-ಕೋಳಿ ಮಾಂಸ ತಿಂದರೆ ಹಕ್ಕಿ ಜ್ವರ ಬರುತ್ತಾ? ಆರೋಗ್ಯ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ...

ಮತ್ತೆ ಹಕ್ಕಿ ಜ್ವರದ (Bird flu) ಆತಂಕ ಶುರುವಾಗಿದೆ. ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ (H5N1) ಪ್ರಕರಣಗಳು ಹೆಚ್ಚಾಗಿದ್ದು, ಸಾವಿರಾರು ಹಕ್ಕಿಗಳು ಹಾಗೂ ಕೋಳಿಗಳ ಸಾವು ಸಂಭವಿಸಿದೆ. ಕರ್ನಾಟಕದಲ್ಲೂ ಹಕ್ಕಿಜ್ವರದ ಆತಂಕ ಶುರುವಾಗಿದ್ದು; ಗಡಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಬಗ್ಗೆ ಅಲರ್ಟ್ ಘೋಷಿಸಲಾಗಿದೆ.


ರಾಜ್ಯದ ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ವಿವಿಧ ತಾಲೂಕುಗಳ ಗಡಿಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದ್ದು, ನೆರೆ ರಾಜ್ಯದಿಂದ ಕೋಳಿ, ಮೊಟ್ಟೆ, ಮಾಂಸ ಹಾಗೂ ಕೋಳಿ ಗೊಬ್ಬರ ಸಾಗಣೆಯನ್ನು ನಿಷೇಧಿಸಲಾಗಿದೆ. ಜೊತೆಗೆ ರಾಜ್ಯ ಆರೋಗ್ಯ ಇಲಾಖೆಯೂ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹಕ್ಕಿ ಜ್ವರ ಕಾಣಿಸಿಕೊಂಡರೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಸೂಚನೆ ನೀಡಿದೆ.


ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ಜಮಾ | ಮಹಿಳಾ ಸಚಿವರು ಹೇಳಿದ್ದೇನು?


ಏನಿದು ಹಕ್ಕಿ ಜ್ವರ?: ಇನ್‌ಫ್‌ಲ್ಯುಯೆಂಜಾ ಮಾದರಿಯ ಟೈಪ್-ಎ ವರ್ಗದ ವೈರಸ್‌ನಿಂದ (H5N1) ಹರಡುವ ಸೋಂಕು. ಅತೀ ವೇಗವಾಗಿ ಹರಡುವ ಈ ಸೋಂಕು ಉಂಟಾದರೆ ಜ್ವರ, ಕೆಮ್ಮು, ತಲೆನೋವು, ಗಂಟಲು ನೋವು, ಬೇಧಿ, ಉಸಿರಾಟ ತೊಂದರೆ, ಮೈಕೈ ನೋವು ಉಂಟಾಗಬಹುದು. 


ಎಚ್5ಎನ್1 ಸೋಂಕು ಉಂಟಾದ ಎರಡು ದಿನದಲ್ಲಿ ಜ್ವರದ ಸಹಿತ ಇತರ ಲಕ್ಷಣಗಳು ಗೋಚರಿಸುತ್ತವೆ. ಜ್ವರ 2-3 ದಿನವಾದರೂ ಕಡಿಮೆ ಆಗದಿದ್ದರೆ ಹಕ್ಕಿಜ್ವರದ ಲಕ್ಷಣ ಎಂದು ಭಾವಿಸಿ ಚಿಕಿತ್ಸೆ ಪಡೆಯಬೇಕು. ಸಾಮಾನ್ಯ ಚಿಕಿತ್ಸೆಯಿಂದಲೇ ವಾಸಿಯಾಗುತ್ತದೆಯಾದರೂ ಕೆಲವರಿಗೆ ನ್ಯುಮೋನಿಯಾದಂತಹ ಗಂಭೀರ ಸಮಸ್ಯೆಯೂ ಉಂಟಾಗಬಹುದು ಎಂದು ವೈದ್ಯರು ಹೇಳುತ್ತಾರೆ.


ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ 


ಹಕ್ಕಿ ಜ್ವರ ಹೇಗೆ ಹರಡುತ್ತದೆ?: ಹಕ್ಕಿ ಜ್ವರವು ಹಕ್ಕಿಯ ರೆಕ್ಕೆ, ಹಿಕ್ಕೆ ಇತ್ಯಾದಿ ತ್ಯಾಜ್ಯದಲ್ಲಿನ ವೈರಾಣುವಿನಿಂದ ಹರಡಬಹುದು. ಸೋಂಕು ಪೀಡಿತ ಹಕ್ಕಿಯ ಮೂಗಿನ ಸ್ರಾವ, ಬಾಯಿ ಅಥವಾ ಕಣ್ಣಿಂದ ದ್ರವಿಸುವ ದ್ರವದ ಮೂಲಕವೂ ಬರಬಹುದು. ಇದು ಹೆಚ್ಚಾಗಿ ಹಕ್ಕಿಯಿಂದ ಹಕ್ಕಿಗೆ ಹರಡುತ್ತದೆ. 


ಕೋಳಿ ಫಾರಂನಲ್ಲಿ ಕೆಲಸ ಮಾಡುವವರಿಗೆ, ಹಕ್ಕಿಗಳು ಈಜಾಡುವ ಕೆರೆ, ನದಿ, ಈಜುಕೊಳಗಳಿಂದಲೂ ಈ ಸೋಂಕು ಮನುಷ್ಯರಿಗೆ ಬರಬಹುದು. ಹಕ್ಕಿಯ ಹಿಕ್ಕೆ ಮತ್ತು ಮಣ್ಣಿನಲ್ಲಿ ಈ ವೈರಸ್ ಸಕ್ರಿಯವಾಗಿರುತ್ತದೆ. ಹೀಗಾಗಿ ಹಿಕ್ಕೆ ವಿಲೇವಾರಿ ಮಾಡುವಾಗ ಎಚ್ಚರಿಕೆ ಅಗತ್ಯ.


ಕೋಳಿ ಮಾಂಸ ತಿಂದರೆ ಹಕ್ಕಿಜ್ವರ ಬರುತ್ತಾ?: ವಿಶೇಷವೆಂದರೆ ಹಕ್ಕಿ ಜ್ವರದ ಬಗ್ಗೆ ಊಹಾಪೋಹಗಳು ಭುಗಿಲೆದ್ದಾಗಲೆಲ್ಲ ಕೋಳಿ ಮಾಂಸದ ತಿನ್ನದಂತೆ ಜನ ನಿರ್ಬಂಧ ಹಾಕಿಕೊಳ್ಳುತ್ತಾರೆ. ಅಸಲಿಗೆ ಕೋಳಿ ಮಾಂಸವನ್ನು ಬೇಯಿಸಿ ತಿಂದರೆ ಹಕ್ಕಿಜ್ವರ ಬರುವುದಿಲ್ಲ. ಕೋಳಿ ಮಾಂಸ ಅಥವಾ ಮೊಟ್ಟೆ ತಿಂದರೆ ಹಕ್ಕಿಜ್ವರ ಬರುತ್ತದೆ ಎಂಬುದು ಜನರ ತಪ್ಪು ಕಲ್ಪನೆ. 


ಕೋಳಿ ಮಾಂಸವನ್ನು ಬೇಯಿಸುವಾಗ ತಾಪಮಾನದಲ್ಲಿ ರೋಗಾಣು ಬದುಕಿರಲು ಸಾಧ್ಯವಿಲ್ಲ. ಮಾಂಸ, ಮೊಟ್ಟೆಯನ್ನು ಬೇಯಿಸಿ ತಿನ್ನಬೇಕು ಎಂದು ಆರೋಗ್ಯ ಇಲಾಖೆಯ ಸಂಯೋಜಿತ ಕಾಯಿಲೆಗಳ ನಿಗಾ ಕಾರ್ಯಕ್ರಮದ ಯೋಜನಾ ನಿರ್ದೇಶಕರು ಡಾ| ಅನ್ಸರ್ ಅಹಮದ್ ಹೇಳಿದ್ದಾರೆ.


ಇದನ್ನೂ ಓದಿ: ಧಾರವಾಡದ ಕೇಂದ್ರೀಯ ವಿದ್ಯಾಲಯ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ