News

Heat Wave-ರಾಜ್ಯಾದ್ಯಂತ ಹೆಚ್ಚಿದ ಬಿಸಿಲಬ್ಬರ | ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಕಟ್ಟೆಚ್ಚರ

Heat Wave-ರಾಜ್ಯಾದ್ಯಂತ ಹೆಚ್ಚಿದ ಬಿಸಿಲಬ್ಬರ | ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಕಟ್ಟೆಚ್ಚರ

ಕರ್ನಾಟಕದಾದ್ಯಂತ ಬಿಸಿಲಬ್ಬರ ತೀವ್ರವಾಗುತ್ತಿದೆ. ದಾಖಲೆ ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು; ರಾಜ್ಯದ ಕರಾವಳಿ ಭಾಗದಲ್ಲಿ ಬೆಂಕಿ ಮಳೆ ಸುರಿದಂತಾಗುತ್ತಿದೆ. ಇಲ್ಲಿ ಬಿಸಿಲಬ್ಬರ ಸಾರ್ವಕಾಲಿಕ ದಾಖಲೆ (Record Temperature) ಬರೆದಿದ್ದು ಮಧ್ಯಾಹ್ನದ ವೇಳೆಯಲ್ಲಿ ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ.


ಪ್ರತಿ ವರ್ಷ ಉತ್ತರ ಕರ್ನಾಟಕ ಭಾಗದ ಕಲಬುರಗಿ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಿಸಿ ಗಾಳಿಯ ವಾತಾವರಣ (Heat Wave) ಕಾಣಿಸಿಕೊಳ್ಳುತ್ತದೆ. ದುರಂತವೆAದರೆ, ಈ ಬಾರಿ ಕರಾವಳಿ ಭಾಗದಲ್ಲಿ ಫೆಬ್ರವರಿ ಅಂತ್ಯದಲ್ಲೇ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಕಳೆದ ಒಂದು ವಾರದಲ್ಲಿ ಈ ಭಾಗದಲ್ಲಿ ಗರಿಷ್ಠ ಉಷ್ಣಾಂಶ 5 ಡಿಗ್ರಿಯಷ್ಟು ಏರಿಕೆಯಾಗಿದೆ.


ಇದನ್ನೂ ಓದಿ: ಇನ್ಮುಂದೆ ಗೂಗಲ್ ಪೇ ಪಾವತಿಗೆ ಶುಲ್ಕ | ಯಾವುದಕ್ಕೆ ಎಷ್ಟು ಶುಲ್ಕ? ಇಲ್ಲಿದೆ ಮಾಹಿತಿ


ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಕಟ್ಟೆಚ್ಚರಕರಾವಳಿ ಭಾಗದ ಜನರಿಗೆ ಮಾರ್ಚ್ 2ರ ವರೆಗೆ ಎಚ್ಚರದಿಂದ ಇರುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಬಿಸಿಲ ಬೇಗೆ ಹೆಚ್ಚಳವಾಗುತ್ತಿದ್ದು ಮಾರ್ಚ್ 2ನೇ ವಾರದಲ್ಲಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಕೂಡ ಬಿಸಿಲು ಹೆಚ್ಚಿರಲಿದೆ.


ಇತ್ತ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರದಲ್ಲಿ ಕೂಡ ತಾಪಮಾನದಲ್ಲಿ ಸ್ವಲ್ಪ ಏರಿಕೆ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 


ಇದನ್ನೂ ಓದಿ: ಪೋಸ್ಟ್ ಆಫೀಸ್’ನಲ್ಲಿ ಕೇವಲ 399 ರೂ. ಕಟ್ಟಿದರೆ ಸಿಗಲಿದೆ 10 ಲಕ್ಷ ರೂ. ಆರ್ಥಿಕ ಸಹಾಯ | ಸಂಪೂರ್ಣ ಮಾಹಿತಿ ಇಲ್ಲಿದೆ...


ಬಿಸಿಲಬ್ಬರಕ್ಕೆ ಕಾರಣವೇನು?: ಬಂಗಾಳ ಕೊಲ್ಲಿಯಲ್ಲಿ ಅಲ್ಪ ಪ್ರಮಾಣದ ವಾಯುಭಾರ ಕುಸಿತವಾಗಿದ್ದು, ಇದು ಅರಬ್ಬಿ ಸಮುದ್ರದ ಕಡೆ ಸಾಗುತ್ತಿದೆ. ಇದರಿಂದಾಗಿ ದಕ್ಷಿಣ ಭಾರತÀದಲ್ಲಿ ತಾಪಮಾನ ಹೆಚ್ಚಳವಾಗಲು ಕಾರಣವಾಗಿದೆ. ತತ್ಪರಿಣಾಮ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಭಾಗಗಳಲ್ಲಿ ಒಮ್ಮೆಲೆ 2ರಿಂದ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವಾಗುವ ಸಾಧ್ಯತೆಗಳಿದೆ.


ಮಧ್ಯಾಹ್ನದ ವೇಳೆ ಜನ ಮನೆಯಿಂದ ಹೊರಬರದೇ ಇರುವುದು ಸೂಕ್ತ. ಅದರಲ್ಲೂ ಮಕ್ಕಳು ಮತ್ತು ವೃದ್ಧರು ಬಿಸಲಿಗೆ ಇಳಿದಿದ್ದರೆ ಕ್ಷೇಮಕರ. ಇನ್ನು ಮೂರು ದಿನಗಳ ನಂತರ ತಾಪಮಾನದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ. ನಂತರ ಮಾರ್ಚ್ 2ನೇ ವಾರದಿಂದ ಒಳನಾಡಿನಲ್ಲಿ ಮತ್ತೆ ತಾಪಮಾನ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 


ಬೆಂಗಳೂರು ಕೊಂಚ ಸಮಾಧಾನ: ವಿಶೇಷವೆಂದರೆ ಕಳೆದ ವಾರ ಭಯಂಕರ ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರು ಈಗ ಕೊಂಚ ಸಮಾಧಾನವಾಗಿದೆ. ಎರಡ್ಮೂರು ದಿನಗಳಿಂದ ಗಾಳಿ ಬೀಸುತ್ತಿದ್ದು; ಬಿಸಿಲಿನ ಅನುಭವವಾಗುತ್ತಿಲ್ಲ. ಜೊತೆಗೆ ಒಮ್ಮೆಲೆ ಎರಡು ಡಿಗ್ರಿಯಷ್ಟು ತಾಪಮಾನ ಇಳಿಕೆಯಾಗಿದ್ದು, ಮಧ್ಯಾಹ್ನದ ಸಮಯದಲ್ಲೂ ಕೊಂಚ ಸಮಾಧಕರ ವಾತಾವರಣ ಇದೆ.


ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ