Schemes

Pahani RTC Land Records - ಜಮೀನು ಪಹಣಿ (ಉತಾರ) ಪತ್ರಿಕೆಯನ್ನು ನಿಮ್ಮ ಮೊಬೈಲ್‌ನಲ್ಲೇ ಪಡೆಯಿರಿ...

Pahani RTC Land Records - ಜಮೀನು ಪಹಣಿ (ಉತಾರ) ಪತ್ರಿಕೆಯನ್ನು ನಿಮ್ಮ ಮೊಬೈಲ್‌ನಲ್ಲೇ ಪಡೆಯಿರಿ...

ಪಹಣಿ ಅಥವಾ ಉತಾರ (RTC) ಪತ್ರಿಕೆಯು ಜಮೀನು ಯಾರ ಹೆಸರಿನಲ್ಲಿದೆ? ಜಮೀನಿನಲ್ಲಿ ಯಾವ ಬೆಳೆ ಬೆಳೆಯಲಾಗಿದೆ? ವರ್ಗಾವಣೆ ಹೇಗೆ ಆಗಿದೆ? ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ? ಎಂಬುವುದನ್ನು ತಿಳಿಸುವ ದಾಖಲೆ ಪತ್ರವಾಗಿದೆ.




ಪಹಣಿಯಲ್ಲಿ 16 ಕಾಲಂಗಳಿದ್ದು; ಕಾಲಂ 3ರಲ್ಲಿ ಜಮೀನು ಒಟ್ಟು ವಿಸ್ತೀರ್ಣ, ಕಾಲಂ 9ರಲ್ಲಿ ಖರಾಬು ಕಳೆದ ಮೇಲೆ ಉಳಿದ ಜಮೀನು ವಿಸ್ತೀರ್ಣ, ಹಿಸ್ಸಾ, ಊರು, ತಾಲೂಕು, ಜಿಲ್ಲೆಯ ಹೆಸರು ಇರುತ್ತದೆ. ರೈತರಿಗೆ ಸದರಿ ಪಹಣಿ ಪತ್ರಿಕೆ ಸರಕಾರ ಯೋಜನೆಗಳ ಪ್ರಯೋಜನ ಪಡೆಯಲು ಸೇರಿದಂತೆ ವಿವಿಧ ಕಾರಣಕ್ಕೆ ಬೇಕು. 




ಮೊದಲು ಪಹಣಿ (RTC) ಪಡೆಯಬೇಕಾದರೆ ನಾಡ ಕಚೇರಿ, ತಾಲ್ಲೂಕು ಕಚೇರಿಗೆ ಹೋಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪಡೆಯಬೇಕಾಗಿತ್ತು. ಬಳಿಕ ನೆಮ್ಮದಿ ಕೇಂದ್ರ ಹಾಗೂ ಗ್ರಾಮ ಪಂಚಾಯತಿಗಳಲ್ಲೂ ಪಹಣಿ ಪತ್ರಿಕೆ ಪಡೆಯುವ ಸೌಲಭ್ಯ ನೀಡಲಾಯಿತು. ತದನಂತರ ಪಹಣಿಯನ್ನು CSC ಆನ್‌ಲೈನ್ ಸೆಂಟರ್‌ಗಳಲ್ಲಿ ಕೂಡ ಪಡೆಯುವ ವ್ಯವಸ್ಥೆ ಇದೆ.




ಆದರೆ ಈಗ ನೀವು ಎಲ್ಲಿಗೂ ಹೋಗದೇ, ಯಾರನ್ನೂ ಕೇಳದೇ, ನಿಮ್ಮದೇ ಮೊಬೈಲ್‌ನಲ್ಲಿ ತಕ್ಷಣವೇ ಪಹಣಿ ಪತ್ರಿಕೆ ವೀಕ್ಷಿಸಬಹುದು. ಮೊಬೈಲ್‌ನಲ್ಲಿ ಸೇವ್ ಕೂಡ ಮಾಡಿಟ್ಟುಕೊಳ್ಳಬಹುದು. ಮಾತ್ರವಲ್ಲ ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಬಹುದು. ಇದಕ್ಕೆಂದೇ ರಾಜ್ಯ ಸರಕಾರ ಭೂಮಿ ಆನ್‌ಲೈನ್ ಸೇವೆ ಆರಂಭಿಸಿದೆ.




ಇದನ್ನೂ ಓದಿ: ಬಂಗಾರದ ಬೆಲೆ ವರ್ಷದಲ್ಲಿ ₹20,180 ಹೆಚ್ಚಳ | ₹82,900ಗೆ 10 ಗ್ರಾಂ ಚಿನ್ನ




ಭೂಮಿ ಆನ್‌ಲೈನ್ ಸೇವೆ : ಕರ್ನಾಟಕ ಭೂ ದಾಖಲೆಗಳ ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಭೂಮಿ ಪೋರ್ಟಲ್ (ಭೂಮಿ ಆನ್‌ಲೈನ್) ನಾಗರಿಕರಿಗೆ ಹಲವು ಸೇವೆಗಳನ್ನು ಒದಗಿಸುತ್ತಿದೆ. ಇದರ ಸಹಾಯದಿಂದ ಮೊಬೈಲ್‌ನಲ್ಲಿಯೇ ಭೂಮಿ ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳ ಐ-ದಾಖಲೆಯನ್ನು ಪರಿಶೀಲಿಸಬಹುದು.




ಮ್ಯುಟೇಶನ್ ರಿಜಿಸ್ಟರ್, ಟಿಪ್ಪಣಿ, ಆದಾಯ ನಕ್ಷೆ, RTCಯ XML ಪರಿಶೀಲನೆ, ಭೂಪರಿವರ್ತನೆ, ಭೂಪರಿವರ್ತನೆ ಅರ್ಜಿ ಸ್ಥಿತಿಗತಿ ವೀಕ್ಷಣೆ, ವಿವಾದಿತ ಪ್ರಕರಣಗಳ ನೋಂದಣಿ, ಹೊಸ ತಾಲೂಕುಗಳ ಪಟ್ಟಿ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದಾಗಿದೆ. ಕರ್ನಾಟಕ ಭೂ ದಾಖಲೆಗಳಿಗಾಗಿ ಭೂಮಿ ಕರ್ನಾಟಕ ತಂತ್ರಾ೦ಶ ಡಿಜಿಟಲ್ ಭೂ ದಾಖಲೆಗಳ ನಿರ್ವಹಣೆಗೆ ಅತ್ಯುತ್ತಮ ಸಾಧನವಾಗಿದೆ.




ಮೊಬೈಲ್‌ನಲ್ಲೇ ಪಹಣಿ : ಸದರಿ ಭೂಮಿ ಆನ್‌ಲೈನ್ ತಂತ್ರಾ೦ಶದ ಮೂಲಕ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಮೂಲ ಪಹಣಿ ಆರ್‌ಟಿಸಿಯನ್ನು ಪಡೆಯಬಹುದಾಗಿದೆ. ಸಾರ್ವಜನಿಕರು 10 ರೂಪಾಯಿಯನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಎಲ್ಲಿಂದಲಾದರೂ ಆರ್‌ಟಿಸಿಯನ್ನು ಪಡೆಯಬಹುದು. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ಸರ್ಕಾರವು ಈ ವಿಶಿಷ್ಟ ವ್ಯವಸ್ಥೆಯನ್ನು ಆರಂಭಿಸಿದೆ.




ಅಷ್ಟೇ ಅಲ್ಲದೇ, ಯಾವುದೇ ಸ್ಥಳೀಯ ವಾಣಿಜ್ಯೋದ್ಯಮಿಯು ಕಂದಾಯ ಇಲಾಖೆಯೊಂದಿಗೆ ಆನ್‌ಲೈನ್ ಖಾತೆಯನ್ನು ತೆರೆಯಲು ಮತ್ತು ಆರ್‌ಟಿಸಿ ವ್ಯಾಲೆಟ್‌ನಲ್ಲಿ 1000 ರೂಪಾಯಿ ಠೇವಣಿ ಇರಿಸಿ ಅಥವಾ ಠೇವಣಿ ಹಣ ಬಳಸಿ ಒಂದು ಆರ್‌ಟಿಸಿಗೆ 10 ರೂಪಾಯಿಯಂತೆ ಆರ್‌ಟಿಸಿಯನ್ನು ಮುದ್ರಿಸಿ ವಿತರಿಸಲು ಆರ್‌ಟಿಸಿ ವಾಲೆಟ್ ವ್ಯವಸ್ಥೆಯ ಕೂಡ ಇದೆ. ಸ್ಥಳೀಯ ಉದ್ಯಮಿಗಳು 1000 ರೂಪಾಯಿ ವರೆಗೆ ಹಣವನ್ನು ಠೇವಣಿ ನವೀಕರಿಸಿ ಆರ್‌ಟಿಸಿಗಳನ್ನು ವಿತರಿಸಬಹುದು.




ಇದನ್ನೂ ಓದಿ: ನಿಮ್ಮ ಮನೆಗೆ ಸೋಲಾರ್ ಕರೆಂಟ್ ಪಡೆಯಲು ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...




ಮೊಬೈಲ್‌ನಲ್ಲಿ ಪಹಣಿ ಪಡೆಯಲು ಹೀಗೆ ಮಾಡಿ : ನಿಮ್ಮ ಪಹಣಿಯನ್ನು (ಆರ್‌ಟಿಸಿ) ಸ್ವತಃ ನೀವೇ ನಿಮ್ಮ ಮೊಬೈಲ್‌ನಲ್ಲಿ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಭೂಮಿ ಆನ್‌ಲೈನ್ ಪೋರ್ಟ್’ಲ್’ಗೆ ಭೇಟಿ ನೀಡಬೇಕು. ಇಲ್ಲಿ ಕ್ಲಿಕ್ ಮಾಡಿದರೆ ಭೂಮಿ ಆನ್‌ಲೈನ್ ಪೋರ್ಟ್’ಲ್ ಪುಟ ತೆರೆದುಕೊಳ್ಳುತ್ತದೆ.




ನಂತರ ಬಲ ತುದಿಯಲ್ಲಿ ಕನ್ನಡ / ಇಂಗ್ಲಿಷ್ ಆಯ್ಕೆಗಳಲ್ಲಿ ಕನ್ನಡ ಆಯ್ಕೆ ಮಾಡಿಕೊಳ್ಳಿ. ಬಳಕ ಎಡಭಾಗದಲ್ಲಿ ಮೊದಲಿಗೆ ಕಾಣುವ ‘ಸದರಿ ವರ್ಷದ ಪಹಣಿ’ ಮತ್ತು ಹಳೆ ವರ್ಷದ ಪಹಣಿ ಆಯ್ಕೆಗಳಲ್ಲಿ ನಿಮಗೆ ಬೇಕಾದ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ. ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ ಸರ್ವೆ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ.




ತದನಂತರ ಸರ್ ನಾಕ್, ಹಿಸ್ಸಾ ನಂಬರ್, ಅವಧಿ ಮತ್ತು ವರ್ಷ ಆಯ್ಕೆ ಮಾಡಿ, `ವಿವರಗಳ’ ಮೇಲೆ ಒತ್ತಿದರೆ ನಿಮ್ಮ ಪಹಣಿ ಅಥವಾ ಉತಾರವು ವಿಕ್ಷಣೆಗೆ ಲಭ್ಯವಾಗುತ್ತದೆ. ಅದನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದು. ಸೇವ್ ಕೂಡ ಮಾಡಿಟ್ಟುಕೊಳ್ಳಬಹುದು. ಮಾತ್ರವಲ್ಲ ಡೌನ್‌ಲೋಡ್ ಮಾಡಿ ಪ್ರಿಂಟ್‌ಔಟ್ ಸಹ ತೆಗೆದುಕೊಳ್ಳಬಹುದು.




ಭೂಮಿ ಆನ್‌ಲೈನ್ ಪೋರ್ಟ್’ಲ್‌ಗೆ ಭೇಟಿ ನೀಡಿ ಪಹಣಿ (ಉತಾರ) ಪಡೆಯಲು ಇಲ್ಲಿ ಕ್ಲಿಕ್ ಮಾಡಿ




ಇದನ್ನೂ ಓದಿ: ಸಣ್ಣ ಉದ್ಯಮ ಆರಂಭಿಸಲು ಸಿಗುತ್ತೆ ₹20 ಲಕ್ಷ ಮುದ್ರಾ ತರುಣ್ ಲೋನ್ | ಈಗಲೇ ಅರ್ಜಿ ಸಲ್ಲಿಸಿ...