ಹಣಕಾಸಿನ ಅಗತ್ಯತೆಗಳನ್ನು ಸುಗಮವಾಗಿ ಪೂರೈಸಿಕೊಳ್ಳಲು ಬ್ಯಾಂಕುಗಳಲ್ಲಿ ವಿವಿಧ ವಿಶೇಷ ಸಾಲ ಯೋಜನೆಗಳಿದ್ದು; ಅಂತಹ ಕೆಲವು ವಿಶೇಷ ವೈಯಕ್ತಿಕ ಸಾಲ ಯೋಜನೆಗಳ ಕುರಿತ ಮಾಹಿತಿ ಇಲ್ಲಿದೆ..
ಆರ್ಥಿಕ ಸಮಸ್ಯೆಯಿಂದ ಹಲವಾರು ಹಣಕಾಸಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಮಧ್ಯಮ ವರ್ಗಕ್ಕೆ (Middle class family) ವೈಯಕ್ತಿಕ ಸಾಲ ಯೋಜನೆಗಳು ಸಹಾಯ ಮಾಡುತ್ತವೆ. ಸಾಲ ಪಡೆಯುವವರ ಅರ್ಹತೆಯನ್ನು ಆಧರಿಸಿ, ಲಕ್ಷಾಂತರ ರೂಪಾಯಿ ತನಕ ಅವಶ್ಯಕತೆಗೆ ತಕ್ಕಂತೆ ಹಲವಾರು ರೀತಿಯ ವೈಯಕ್ತಿಕ ಸಾಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ | ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ನೆರವು PMAY Scheme Awas Yojane
ಹಣಕಾಸು ಮಾರುಕಟ್ಟೆಯಲ್ಲಿ (Finance) ನಿಮಗೆ ಗೊತ್ತಿರದೆ ಇರುವ ನಾನಾ ರೀತಿಯ ವಯಕ್ತಿಕ ಸಾಲ ಸೌಲಭ್ಯಗಳು ಲಭ್ಯವಿದೆ. ಈ ವೈಯಕ್ತಿಕ ಸಾಲವನ್ನು (Personal loan) ಪಡೆದರೆ, ಮರುಪಾವತಿಗೆ ಒಂದು ವರ್ಷದಿಂದ ಗರಿಷ್ಠ ಐದು ವರ್ಷಗಳ ವರೆಗೆ ಅವಕಶವಿರುತ್ತದೆ.
ಒಂದು ವೇಳೆ ದೀರ್ಘಾವಧಿಯ ಸಾಲ (Long term loan) ಬೇಕೆಂದರೆ, ಈ ಆಯ್ಕೆಗೂ ಕೂಡ ಹಲವಾರು ರೀತಿಯ ಯೋಜನೆಗಳು ಲಭ್ಯವಿವೆ. ತುರ್ತು ಸಮಯದಲ್ಲಿ ಸಹಾಯವಾಗುವಂತಹ 5 ವಿವಿಧ ವೈಯಕ್ತಿಕ ಸಾಲಗಳ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳು | ಪುರುಷರು, ಮಹಿಳೆಯರಿಗೆ ಭರ್ಜರಿ ಅವಕಾಶ
ನೀವು ತಿಳಿದುಕೊಳ್ಳಲೇಬೇಕಾದ ಕೆಲವು ವೈಯಕ್ತಿಕ ಸಾಲಗಳ ವಿಧಗಳು
1. ವಿವಾಹ ಸಾಲ
2. ಪ್ರವಾಸ ಸಾಲ
3. ಮನೆ ನವೀಕರಣ ಸಾಲ
4. ಗ್ರಾಹಕ ಬಾಳಿಕೆ ಉತ್ಪನ್ನಗಳ ಖರೀದಿ ಸಾಲ
5. ಪಿಂಚಣಿ ಸಾಲ
1. ವಿವಾಹ ಸಾಲ (Marriage loan)
ಮದುವೆ ಮಾಡಿ ನೋಡು ಎಂಬ ಮಾತಿದೆ. ಹಣಕಾಸು ಸಮಸ್ಯೆಯಿಂದಾಗಿ ಅನೇಕರಿಗೆ ಮದುವೆ ನಿಗದಿತ ಸಮಯಕ್ಕೆ ಆಗಲಾಗದೇ ಅನೇಕ ರೀತಿಯ ವ್ಯ ಅನುಭವಿಸುತ್ತಿರುತ್ತಾರೆ. ಇಂಥವರಿಗೆ ‘ವಿವಾಹ ಲೋನ್’ ಚಿನ್ನಾಭರಣ ಕೊಳ್ಳಲು, ಮದುವೆ ಮಂಟಪ, ಉಟೋಪಚಾರ ಖರ್ಚಿಗಾಗಿ, ಉಡುಪು ಉಡುಗೊರೆ ಖರೀದಿಗಾಗಿ ಅತ್ಯಂತ ಉಪಕಾರಿಯಾಗಲಿದೆ.
ಗಮನಾರ್ಹ ವಿಷಯವೆನೆಂದರೆ ಮದುವೆ ಋತುವಿನಲ್ಲಿ ವಿವಾಹ ಸಾಲ ಯೋಜನೆಗಳ ಬಡ್ಡಿದರ ಕೊಂಚ ಹೆಚ್ಚಿರುತ್ತದೆ. ಈ ಒಂದು ಸಾಲಕ್ಕೆ ಬ್ಯಾಂಕುಗಳು ಸಾಮಾನ್ಯವಾಗಿ ವಾರ್ಷಿಕ 10.65% ರಷ್ಟು ಬಡ್ಡಿ ದರವನ್ನು ವಿಧಿಸುತ್ತವೆ. ವಿವಾಹ ವೈಯಕ್ತಿಕ ಸಾಲವು ನಿಮ್ಮ ಮದುವೆ ಖರ್ಚುಗಳು ಸೇರಿದಂತೆ ಇತರೆ ವೈಯಕ್ತಿಕ ಖರ್ಚುಗಳನ್ನು ಆರ್ಥಿಕ ಸಂಕಷ್ಟದ ಸಮಯದಲ್ಲಿ ಪೂರೈಸಿಕೊಳ್ಳಲು ಒಂದು ಉತ್ತಮ ಸಾಧನವಾಗಿದೆ.
ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ
2. ಪ್ರವಾಸ ಸಾಲ (Travel loan)
ಆಶ್ಚರ್ಯದ ವಿಷಯವೆಂದರೆ ಹಲವಾರು ಬ್ಯಾಂಕುಗಳು ಪ್ರವಾಸ ಮಾಡಲು ಕೂಡ ವೈಯಕ್ತಿಕ ಸಾಲದ ರೂಪದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತವೆ. ದೂರ ಪ್ರವಾಸ ಕೈಗೊಳ್ಳಲು ನಿಮ್ಮ ಉಳಿತಾಯದ ಹಣವನ್ನು ಅಥವಾ ಹೂಡಿಕೆಯನ್ನು ಖರ್ಚು ಮಾಡಲು ಸಾಧ್ಯವಾಗದ ಸಮಯದಲ್ಲಿ ಬ್ಯಾಂಕುಗಳಿ೦ದ ಪ್ರವಾಸ ಲೋನ್ ಕೂಡ ಪಡೆಯಬಹುದಾಗಿದೆ.
ಸದರಿ ಪ್ರವಾಸ ಲೋನ್ ಕೂಡ ಒಂದು ವೈಯಕ್ತಿಕ ಸಾಲದ ರೂಪವಾಗಿದ್ದು ಸಾಮಾನ್ಯವಾಗಿ ಬ್ಯಾಂಕುಗಳು ಈ ಸಾಲಕ್ಕೆ ವಾರ್ಷಿಕ 10.50% To 20.40% ವರೆಗೂ ಬಡ್ಡಿ ದರವನ್ನು ವಿಧಿಸುತ್ತವೆ.
ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ
3. ಮನೆ ನವೀಕರಣ ಸಾಲ (Home renovation loan)
ಈ ದುಬಾರಿ ದುನಿಯಾದಲ್ಲಿ ಹಳೆ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಿಸಲು ಹೋದರೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಮನೆ ನವೀಕರಣ ಕಾರ್ಯಕ್ಕೂ ಕೂಡ ಬ್ಯಾಂಕುಗಳಿAದ ಮನೆ ನವೀಕರಣ ಸಾಲವನ್ನು ಪಡೆಯಬಹುದಾಗಿದ್ದು ಇದು ಕೂಡ ವೈಯಕ್ತಿಕ ಸಾಲದ ವರ್ಗದಲ್ಲಿ ಬರುತ್ತದೆ.
ಮನೆ ನವೀಕರಣ ಸಾಲದ ಅವಧಿಯು ಆರು ವರ್ಷಗಳ ವರೆಗೆ ಇರುತ್ತವೆ. ಈ ಸಾಲಕ್ಕೆ ಬ್ಯಾಂಕುಗಳು ವಾರ್ಷಿಕ 10.9% ರಷ್ಟು ದರವನ್ನು ವಿಧಿಸುತ್ತಿದ್ದು, ಬಡ್ಡಿ ದರವು ಬ್ಯಾಂಕುಗಳಿ೦ದ ಬ್ಯಾಂಕಿಗೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.
4. ಗ್ರಾಹಕ ಬಳಿಕೆ ಉತ್ಪನ್ನಗಳ ಖರೀದಿ ಸಾಲ (Loan for purchase of consumer durables)
ಗ್ರಾಹಕ ಬಾಳಿಕೆ ಉತ್ಪನ್ನಗಳ ಖರೀದಿ ಮಾಡಲು ಸಾಮಾನ್ಯವಾಗಿ ಎಲ್ಲ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ಸೌಲಭ್ಯವನ್ನು ಒದಗಿಸುತ್ತವೆ. ಗ್ರಾಹಕ ಬಳಕೆ ಉತ್ಪನ್ನಗಳ ವರ್ಗದಲ್ಲಿ ಮೊಬೈಲ್ ಫೋನ್, ರೆಪ್ರಿಜರೇಟರ್, ಪೀಟೋಪಕರಣಗಳು, ವಾಷಿಂಗ್ ಮಷೀನ್, ಲ್ಯಾಪ್‌ಟಾಪ್ ಸೇರಿದಂತೆ ಹಲವಾರ ಗ್ರಾಹಕ ಬಳಿಕೆ ಉತ್ಪನ್ನಗಳು ಇದರ ಅಡಿಯಲ್ಲಿ ಬರುತ್ತವೆ.
ಈಚೆಗೆ ಇಂತಹ ವಸ್ತುಗಳ ಖರೀದಿ ಸಾಲ ಅತ್ಯಂತ ಸುಲಭವಗಿ ದೊರೆಯುತ್ತಿದ್ದು; ಉಪಕರಣ ಕೊಳ್ಳುವ ಮಳಿಗೆಯಲ್ಲೇ ಸಾಲ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕಂತುಗಳ (EMI) ರೂಪದಲ್ಲಿ ಈ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಕೆಲವು ಉತ್ಪನ್ನಗಳಿಗೆ ಸಾಲ ಪಡೆಯಲು ಠೇವಣಿ ಮತ್ತು ಸಂಸ್ಕಾರಣ ಶುಲ್ಕವನ್ನು ವಿಧಿಸಬೇಕಾಗುತ್ತದೆ.
ಇದನ್ನೂ ಓದಿ: 10 ಮತ್ತು 12ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗ | 113 ಹುದ್ದೆಗಳಿಗೆ ಅರ್ಜಿ ಆಹ್ವಾನ
5. ಪಿಂಚಣಿ ಸಾಲ (Pension loan)
ಪೆನ್ಶನ್ ಪಡೆಯುವ ಉದ್ಯೋಗಿಗಳು ತಾವು ಪಡೆಯುವ ಪೆನ್ಶನ್ ಮೊತ್ತದ 7 ರಿಂದ 10 ಪಟ್ಟು ಸಾಲವನ್ನು ಬ್ಯಾಂಕುಗಳಿ೦ದ ಪಡೆಯಬಹುದಾಗಿದೆ. ಈ ಸಾಲ ಸೌಲಭ್ಯವನ್ನು ನೀವು ಆರೋಗ್ಯ ಸಮಸ್ಯೆ, ಹೊಸ ಉದ್ಯೋಗ ಆರಂಭಿಸಲು, ಮನೆ ಕಟ್ಟಲು ಸೇರಿದಂತೆ ಹಲವಾರು ಕಾರಣಗಳಿಗೆ ಈ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ.
ಗಮನಾರ್ಹ ವಿಷಯವೇನೆಂದರೆ ಪಿಂಚಣಿ ಸಾಲ ಸೌಲಭ್ಯವನ್ನು ನೀವು ಪಿಂಚಣಿ ಪಡೆಯುವ ಬ್ಯಾಂಕ್’ನಲ್ಲಿ ಮಾತ್ರ ಪಡೆಯಬಹುದಾಗಿದೆ. ಪಿಂಚಣಿ ಸಾಲ ಸೌಲಭ್ಯವು ಕೂಡ ವೈಯಕ್ತಿಕ ಸಾಲದ ವರ್ಗದಲ್ಲಿ ಬರುತ್ತದೆ.
ಹೀಗೆ ಬಹಳಷ್ಟು ಅಗತ್ಯಗಳಿಗೆ ವಿವಿಧ ವಿಶೇಷ ಸಾಲ ಯೋಜನೆಗಳಿದ್ದು; ಪ್ರತಿಯೊಂದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಇಂತಹ ಸಾಲಗಳನ್ನು ಅರ್ಹತೆಯ ಆಧಾರದ ಮೇಲೆ ಒದಗಿಸುತ್ತವೆ. ಆಸಕ್ತರು ಸ್ಥಳೀಯ ಬ್ಯಾಂಕುಗಳಲ್ಲಿ ವಿಚಾರಿಸಿ ಈ ಸಾಲ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ.