ಸತತ ಐದು ವರ್ಷಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India-RBI) ರೆಪೊ ದರದಲ್ಲಿ ಶೇ.0.25ರಷ್ಟು ಬೇಸಿಸ್ ಪಾಯಿಂಟ್ ಅನ್ನು ಕಡಿತಗೊಳಿಸಿದೆ. ಹಣಕಾಸು ನೀತಿ ಸಮಿತಿಯು (Monetary Policy Committee-MPC) ಈ ನಿರ್ಧಾರವನ್ನು ಕೈಗೊಂಡಿದ್ದು, ಆರ್‌ಬಿಐ ಗವರ್ನರ್ ಸಂಜಯ್ ಮಲ್ಲೋತ್ರಾ ಅವರು ಫೆಬ್ರವರಿ 7ರಂದು ಈ ನಿರ್ಧಾರ ಪ್ರಕಟಿಸಿದ್ದಾರೆ.
ರೆಪೊ ದರವು (Repo Rate) ಶೇ.6.50 ರಿಂದ ಶೇ.6.25ಕ್ಕೆ ಇಳಿಕೆಯಾಗಲಿದೆ. ಈಗಾಗಲೇ ಬ್ಯಾಂಕುಗಳಿ೦ದ ಗೃಹ ಸಾಲ, ವಾಹನ ಸಾಲ ಸೇರಿದಂತೆ ಇತರೆ ಸಾಲಗಳನ್ನು ಪಡೆದು ಇಎಂಐ ಪಾವತಿಸುತ್ತಿರುವವರಿಗೆ ಹಾಗೂ ಹೊಸದಾಗಿ ಸಾಲ ಪಡೆಯುವವರಿಗೆ ಶೇ.0.25ರಷ್ಟು ಬಡ್ಡಿ ಹೊರೆ ಇಳಿಕೆಯಾಗಲಿದೆ.
ಇದನ್ನೂ ಓದಿ: ವಾಹನ ಸವಾರರಿಗೆ ಗುಡ್ ನ್ಯೂಸ್ | ಇನ್ಮುಂದೆ ₹30 ಸಾವಿರಕ್ಕೆ ಸಿಗುತ್ತೆ ಲೈಫ್ ಟೈಮ್ ಟೋಲ್ ಪಾಸ್ Life Time Toll Pass
ಸಾಲದ ಮೇಲಿನ ಬಡ್ಡಿದರ ಇಳಿಕೆ : 2020ರ ನಂತರದಲ್ಲಿ ಇದೇ ಮೊದಲ ಬಾರಿಗೆ ಆರ್‌ಬಿಐ, ರೆಪೊ ದರ ಕಡಿಮೆ ಮಾಡಿದೆ. ಈ ಬೆಳವಣಿಗೆಯು ಆರ್‌ಬಿಐ, ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಲಿದೆ. ಇದರಿಂದ ಗ್ರಾಹಕರಿಗೆ ವಿವಿಧ ಬ್ಯಾಂಕ್‌ಗಳು ನೀಡುವ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.
ಸಾಲವನ್ನು ಅಗ್ಗವಾಗಿಸುವ ಮೂಲಕ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವ ಪ್ರಯತ್ನವಾಗಿ ಆರ್‌ಬಿಐನ ಎಂಪಿಸಿ ಸರ್ವಾನುಮತದಿಂದ ಈ ನಿರ್ಧಾರವನ್ನು ಕೈಗೊಂಡಿದೆ. ಇದರಿಂದಾಗಿ ಖರ್ಚು ಮತ್ತು ಹೂಡಿಕೆ ಪ್ರಮಾಣ ಹೆಚ್ಚಾಗಲಿದೆ.
ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ...
ಮನವಿ ಸಲ್ಲಿಸಿದರೆ ಮಾತ್ರ ಬಡ್ಡಿ ದರ ಇಳಿಕೆ : ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರವೇ ರೆಪೊ ದರ. ಬಹುತೇಕ ಸಂದರ್ಭಗಳಲ್ಲಿ ರೆಪೊ ದರ ಏರಿದಾಗ ತಕ್ಷಣವೇ ಸಾಲದ ಬಡ್ಡಿ ದರಗಳನ್ನು ಏರಿಸುವ ಬ್ಯಾಂಕುಗಳು, ರೆಪೊ ದರ ಇಳಿದಾಗ ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಮೀನಮೇಷ ಎಣಿಸುತ್ತವೆ.
ಗ್ರಾಹಕರು ಬ್ಯಾಂಕ್‌ಗೆ ಲಿಖಿತ ಮನವಿ ಸಲ್ಲಿಸಿ, ಬಡ್ಡಿದರ ಇಳಿಸಲು ಕೋರಿದರೆ ಮಾತ್ರವೇ ಸಾಲದ ಕಂತು ಕಡಿಮೆಯಾಗುತ್ತದೆ. ಫ್ಲೋಟಿಂಗ್ ದರ ಆಯ್ಕೆ ಮಾಡಿಕೊಂಡಿದ್ದರೂ, ಬ್ಯಾಂಕ್‌ಗಳು ಬಡ್ಡಿ ದರ ಇಳಿಸಿದರೂ, ಗ್ರಾಹಕರು ಮನವಿ ಸಲ್ಲಿಸದಿದ್ದರೆ ಬಡ್ಡಿ ದರ ಇಳಿಕೆಯ ಪ್ರಯೋಜನವನ್ನು ಅವರು ಪಡೆಯುವುದು ಅಸಾಧ್ಯ.
ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ