ಮನೆಗೆ ಸೋಲಾರ್ ವಿದ್ಯುತ್ (Solar Power) ಘಟಕ ಅಳವಡಿಸಿಕೊಳ್ಳ ಬಯಸುವ ಗ್ರಾಹಕರಿಗೆ ಸರ್ಕಾರ ಭರ್ಜರಿ ಅವಕಾಶ ಕಲ್ಪಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಮನೆಗಳು, ವಸತಿ ಸಮುಚ್ಛಯಗಳು, ಅಪಾರ್ಟ್ಮೆಂಟ್‌ಗಳಿಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಸಿಕೊಳ್ಳಲು ಅವಕಾಶವಿದೆ.
2014ರ ಜನವರಿ 22ರಂದು ಕೇಂದ್ರ ಸರ್ಕಾರ ಘೋಷಿಸಿದ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ (PM Surya Ghar - Muft Bijli Yojana) ಅಡಿಯಲ್ಲಿ ದೇಶದ ಜನರ ಮನೆಗಳ ಮೇಲ್ಛಾವಣಿಯಲ್ಲಿ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಆಕರ್ಷಕ ಸಬ್ಸಿಡಿ ಮೊತ್ತದ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕ ಅಂಚೆ ವೃತ್ತ ನೇಮಕಾತಿ 2025: 10ನೇ ತರಗತಿ ಪಾಸಾದವರಿಗೆ ಪೋಸ್ಟಾಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
20 ವರ್ಷ ಉಚಿತ ಸೋಲಾರ್ ವಿದ್ಯುತ್ : ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ ಲಭ್ಯವಿರುವ ಸಬ್ಸಿಡಿ ಸೌಲಭ್ಯವನ್ನು ಬಳಸಿಕೊಂಡು ಸೋಲಾರ್ ವಿದ್ಯುತ್ ಘಟಕ ಅಳವಡಿಸಿಕೊಂಡರೆ ಬರೋಬ್ಬರಿ ಮುಂದಿನ 20 ವರ್ಷಗಳ ಕಾಲ ಉಚಿತ ವಿದ್ಯುತ್ ಪಡೆಯಬಹುದಾಗಿದೆ. 5 ವರ್ಷಗಳ ಮರುಪಾವತಿ ಅವಧಿ ಕೂಡ ಸಿಗಲಿದೆ.
25 ವರ್ಷಗಳ ಸುದೀರ್ಘ ಬಾಳಿಕೆ ಬರುವ ಈ ಸೋಲಾರ್ ಘಟಕಗಳಿಗೆ 5 ವರ್ಷಗಳ ಕಾಲ ಉಚಿತ ನಿರ್ವಹಣೆ ಕೂಡ ಸಿಗಲಿದೆ. 10X10 ಅಳತೆಯಲ್ಲಿ 1 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಸಿಕೊಂಡರೆ ತಿಂಗಳಿಗೆ 100 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು.
ಏನೆಲ್ಲ ಪ್ರಯೋಜನಗಳು ಸಿಗಲಿವೆ? : ವಿದ್ಯುತ್ ಬಿಲ್‌ನಲ್ಲಿ ಉಳಿತಾಯವಾಗಲಿದೆ. ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡುವ ಮೂಲಕ ಆದಾಯ ಕೂಡ ಗಳಿಸಬಹುದಾಗಿದೆ. ಇದು ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥೆಯಾಗಿದ್ದು; ನಿಸರ್ಗಕ್ಕೆ ಕೊಡುಗೆ ನೀಡದಂತೆಯೂ ಆಗುತ್ತದೆ.
ಇದನ್ನೂ ಓದಿ: ಬೆಸ್ಕಾಂನಲ್ಲಿ ಪದವೀಧರರು, ಡಿಪ್ಲೊಮಾ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ
ಘಟಕದ ವೆಚ್ಚ, ಸಬ್ಸಿಡಿ ಮತ್ತು ಉಳಿತಾಯದ ವಿವರ : ಈ ಯೋಜನೆಯಡಿ 1 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದಿಂದ ಮಾಸಿಕ 100 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಘಟಕ ಅಳವಡಿಕೆಗೆ 60,000 ದಿಂದ 80,000 ರೂ. ವೆಚ್ಚವಾಗುತ್ತದೆ. ಇದಕ್ಕೆ 30,000 ರೂ. ಸಬ್ಸಿಡಿ ಸಿಗಲಿದ್ದು, ವರ್ಷಕ್ಕೆ 9,600 ರೂ. ಉಳಿತಾಯವಾಗಲಿದೆ.
2 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದಿಂದ ಮಾಸಿಕ 101ರಿಂದ 200 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಘಟಕ ಅಳವಡಿಕೆಗೆ 1,20,000 ದಿಂದ 1,60,000 ರೂ. ವೆಚ್ಚವಾಗುತ್ತದೆ. ಇದಕ್ಕೆ 60,000 ರೂ. ಸಬ್ಸಿಡಿ ಸಿಗಲಿದ್ದು, ವರ್ಷಕ್ಕೆ 21,600 ರೂ. ಉಳಿತಾಯವಾಗಲಿದೆ.
ಇನ್ನು 3 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದಿಂದ ಮಾಸಿಕ 201ರಿಂದ 300 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಘಟಕ ಅಳವಡಿಕೆಗೆ 1,80,000 ದಿಂದ 2,40,000 ರೂ. ವೆಚ್ಚವಾಗುತ್ತದೆ. ಇದಕ್ಕೆ 60,000 ರೂ. ಸಬ್ಸಿಡಿ ಸಿಗಲಿದ್ದು, ವರ್ಷಕ್ಕೆ 35,000 ರೂ. ಉಳಿತಾಯವಾಗಲಿದೆ.
ಸಾಮಾನ್ಯ ವಾಸದ ಮನೆಗಳಿಗೆ 1ರಿಂದ 3 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಕೆಗೆ ಅವಕಾಶವಿದ್ದರೆ, ವಸತಿ ಸಮುಚ್ಛಯಗಳು, ಅಪಾರ್ಟ್ಮೆಂಟ್‌ಗಳಿಗೆ 500 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಸಿಕೊಳ್ಳಲು ಅವಕಾಶವಿದೆ.
ಇದನ್ನೂ ಓದಿ: ಹುಬ್ಬಳ್ಳಿಯ ನೈಋತ್ಯ ರೈಲ್ವೆಯಲ್ಲಿ 503 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ ಪಾಸಾಗಿದ್ರೆ ಅರ್ಜಿ ಹಾಕಿ...
ಅರ್ಜಿ ಸಲ್ಲಿಕೆ ಹೇಗೆ?: ಸೋಲರ್ ವಿದ್ಯುತ್ ವ್ಯವಸ್ಥೆ ಪಡೆಯಲು ಇತ್ತೀಚಿನ ವಿದ್ಯುತ್ ಬಿಲ್ ಹಾಗೂ ಆಧಾರ್ ಕಾರ್ಡ್ ಮಾತ್ರ ಸಾಕು. ಈ ಎರಡು ದಾಖಲೆಗಳೊಂದಿಗೆ ಈ ಕೆಳಗಿನ ಲಿಂಕ್ ಬಳಸಿಕೊಂಡು ನೋಂದಣಿ ಮಾಡಿಕೊಳ್ಳುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಲಿಂಕ್ : Apply ಮಾಡಿ