ಅರ್ಬನ್ ಕೋ ಆಪರೇಟಿವ್ ಬ್ಯಾಂಕ್’ನಲ್ಲಿ ಖಾಲಿ ಇರುವ ಕ್ಲರ್ಕ್ ಹಾಗೂ ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ನೇಮಕಾತಿ ಕುರಿತ ಸಂಕ್ಷಿಪ್ತ ವಿವರ
* ನೇಮಕಾತಿ ಸಂಸ್ಥೆ : ಕುಮಟಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ (The Kumta Urban Cooperative Bank)
* ಹುದ್ದೆಗಳ ಹೆಸರು : ಕ್ಲರ್ಕ್, ಅಟೆಂಡರ್
* ಒಟ್ಟು ಖಾಲಿ ಹುದ್ದೆಗಳು : 10 ಹುದ್ದೆಗಳು
* ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ
* ಉದ್ಯೋಗ ಸ್ಥಳ : ಉತ್ತರ ಕನ್ನಡ ಜಿಲ್ಲೆ ಕುಮಟಾ
ಇದನ್ನೂ ಓದಿ: ಮುರಾರ್ಜಿ ಸೇರಿ ವಿವಿಧ ಉಚಿತ ವಸತಿ ಶಾಲೆಗಳಿಗೆ ಅರ್ಜಿ ಆಹ್ವಾನ | 2025-26ನೇ ಸಾಲಿನ ಅಡ್ಮಿಷನ್ ಪ್ರಾರಂಭ
ಹುದ್ದೆಗಳ ವಿವರ
* ಕ್ಲರ್ಕ್ ಹುದ್ದೆಗಳು : 08
* ಅಟೆಂಡರ್ ಹುದ್ದೆಗಳು : 02
* ಒಟ್ಟು ಹುದ್ದೆಗಳು : 10
ವಿದ್ಯಾರ್ಹತೆ ವಿವರ
ಕುಮಟಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ಲರ್ಕ್ ಹುದ್ದೆಗಳಿಗೆ ಪಿಯುಸಿ ಅಥವಾ 12ನೇ ತರಗತಿ ಹಾಗೂ ಅಟೆಂಡರ್ ಹುದ್ದೆಗಳಿಗೆ ಎಸ್ಸೆಎಸ್ಸೆಎಲ್ಸಿ ಅಥವಾ 10ನೇ ತರಗತಿ ತೇರ್ಗಡೆ ಹೊಂದಿರಬೇಕು.
ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ
ವಯೋಮಿತಿ ವಿವರ
ಕುಮಟಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಟ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ನಿಯಮಾನುಸಾರ ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಎಸ್‌ಸಿ/ಎಸ್‌ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ 05 ವರ್ಷಗಳು ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಶುಲ್ಕವೆಷ್ಟು?
ಕುಮಟಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಸ್‌ಸಿ/ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ. 590/- ಹಾಗೂ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ. 1180/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಮತ್ತು ವೇತನ
ಕುಮಟಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಕ್ಲಕ್ ಮತ್ತು ಅಟೆಂಡರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಇನ್ನು ಮೇಲ್ಕಾಣಿಸಿದ ಕ್ಲಕ್ ಮತ್ತು ಅಟೆಂಡರ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಕ್ಲಕ್ ಹುದ್ದೆಗಳಿಗೆ ರೂ.14550 ರಿಂದ ರೂ.26700/- ಹಾಗೂ ಅಟೆಂಡರ್ ಹುದ್ದೆಗಳಿಗೆ ರೂ.11000 ರಿಂದ 19,000/- ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಗ್ರಾಮ ಪಂಚಾಯತಿ ಸಮಸ್ಯೆಗಳಿಗೆ ವಾಟ್ಸಾಪ್’ನಲ್ಲೇ ಪರಿಹಾರ ಪಡೆಯಿರಿ | ಈ ವಾಟ್ಸಾಪ್ ನಂಬರ್‌ಗೆ ಮೆಸೇಜ್ ಮಾಡಿದರೆ ಪರಿಹಾರ ಗ್ಯಾರಂಟಿ
ಅರ್ಜಿ ಸಲ್ಲಿಕೆ ಹೇಗೆ?
ಬ್ಯಾಂಕ್‌ನಿ೦ದ ಪಡೆದ ಅರ್ಜಿ ನಮೂನೆಯನ್ನು ಭಾವಚಿತ್ರ ಸಹಿತ ಭರ್ತಿ ಮಾಡಬೇಕು. ನಂತರ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿದ ವಿದ್ಯಾರ್ಹತೆ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಅನುಭವ ಇತ್ಯಾದಿ ದಾಖಲಾತಿಗಳ ಜೆರಾಕ್ಸ್ ಪ್ರತಿ ಲಗತ್ತಿಸಿ ಬ್ಯಾಂಕ್‌ಗೆ ವೈಯಕ್ತಿಕವಾಗಿ ಅಥವಾ ಇಂಡಿಯಾ ಪೋಸ್ಟ್ ಮೂಲಕ ಕಳಿಸಿ ಕೊಡಬೇಕು.
ಅರ್ಜಿ ಕಳಿಸುವ ವಿಳಾಸ : ಕುಮಟಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಪ್ರಧಾನ ಕಛೇರಿ, ಸುಭಾಷ್ ರಸ್ತೆ, ಕುಮಟಾ-581343, ಉತ್ತರ ಕನ್ನಡ ಜಿಲ್ಲೆ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 18-01-2025
ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 01-02-2025
ಅಧಿಕೃತ ಅಧಿಸೂಚನೆ: Download
ಇದನ್ನೂ ಓದಿ: ಕೋಳಿ ಸಾಕಣೆಗೆ 25 ಲಕ್ಷ, ಕುರಿ-ಮೇಕೆ ತಳಿ ಸಂವರ್ಧನೆಗೆ 50 ಲಕ್ಷ ಆರ್ಥಿಕ ನೆರವು