Schemes

ಯಶಸ್ವಿಯಾಗದ ಯಶಸ್ವಿನಿ ಉಚಿತ ಆರೋಗ್ಯ ವಿಮೆ ಯೋಜನೆ | ಯೋಜನೆಗೆ ನೋಂದಣಿ ನೀರಸ Yeshasvini Health Insurance Scheme

ಯಶಸ್ವಿಯಾಗದ ಯಶಸ್ವಿನಿ ಉಚಿತ ಆರೋಗ್ಯ ವಿಮೆ ಯೋಜನೆ | ಯೋಜನೆಗೆ ನೋಂದಣಿ ನೀರಸ Yeshasvini Health Insurance Scheme

ರಾಜ್ಯದಲ್ಲಿ ‘ಯಶಸ್ವಿನಿ’ ಆರೋಗ್ಯ ವಿಮೆ ಯೋಜನೆ (Yeshasvini Health Insurance Scheme) ನೋಂದಣಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. 2024ರ ಡಿಸೆಂಬರ್ 1ರಿಂದ 2025ರ ಜನವರಿ 31ರ ವರೆಗೆ ನೋಂದಣಿಗೆ ಕಾಲಾವಧಿ ನಿಗದಿ ಮಾಡಲಾಗಿತ್ತು. ಈ ಗುರಿ ಸಾಧನೆ ಸಾಧ್ಯವಾಗದ ಹಿನ್ನೆಲ್ಲೆಯಲ್ಲಿ ಮಾರ್ಚ್ 31ರ ವರೆಗೆ ನೋಂದಣಿ ಅವಧಿ ವಿಸ್ತರಣೆ ಮಾಡಲಾಗಿದೆ. 


ಈ ಎರಡು ತಿಂಗಳಲ್ಲಿ ಶೇ.40.29ರಷ್ಟು ಮಾತ್ರ ನೋಂದಣಿಯಾಗಿದೆ. ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಶೇ.68.11ರಷ್ಟು ನೋಂದಣಿ ಮಾಡಿಸಿ ಮೊದಲ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಶೇ. 14.9ರಷ್ಟು ನೋಂದಣಿಯಾಗುವ ಮೂಲಕ ಕೊನೆಯ ಸ್ಥಾನದಲ್ಲಿದೆ.


ಇದನ್ನೂ ಓದಿ: ಹುಬ್ಬಳ್ಳಿಯ ನೈಋತ್ಯ ರೈಲ್ವೆಯಲ್ಲಿ 503 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ ಪಾಸಾಗಿದ್ರೆ ಅರ್ಜಿ ಹಾಕಿ


ನೋಂದಣಿ ಗುರಿ ತಲುಪುತ್ತಿಲ್ಲ : ಈ ಹಿಂದೆ ಯಶಸ್ವಿನಿ ಯೋಜನೆ ಸಹಕಾರ ಸಂಘಗಳ ಸದಸ್ಯರಿಗೆ ಅನುಕೂಲವಾಗಿತ್ತು. 2018ರಿಂದ ಕೆಲ ವರ್ಷ ಈ ಯೋಜನೆ ಸ್ಥಗಿತಗೊಳಿಸಿ ಕಳೆದ ವರ್ಷ ಪುನರ್ ಆರಂಭಿಸಲಾಗಿದೆ. ಆದರೆ, ಯಶಸ್ವಿನಿ ಯೋಜನೆ ಬಗ್ಗೆ ಜನ ನಿರಾಸಕ್ತಿ ತೋರುತ್ತಿದ್ದಾರೆ. 2025-26ನೇ ಸಾಲಿನ ನೋಂದಣಿ ಗುರಿ ತಲುಪುತ್ತಿಲ್ಲ.


ರಾಜ್ಯದಲ್ಲಿ 50 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಇಲ್ಲಿಯ ವರೆಗೆ ಕೇವಲ 20,14,000 ಜನರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಶೇ.40ರಷ್ಟು ಗುರಿ ಸಾಧನೆಯಾಗಿದೆ.


ನಿರಾಸಕ್ತಿ ಕಾರಣವೇನು? : ಪ್ರಮುಖ ಆಸ್ಪತ್ರೆಗಳು ಯೋಜನೆ ವ್ಯಾಪ್ತಿಗೆ ಸೇರಿಲ್ಲ. ಯಶಸ್ವಿನಿ ಯೋಜನೆಯಡಿ ಶಸ್ತ್ರಚಿಕಿತ್ಸೆ ದರ ಕಡಿಮೆ ಇದೆ ಎಂದು ಖಾಸಗಿ ಆಸ್ಪತ್ರೆಗಳು ಈ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ. ಸರಕಾರ ಆಗಸ್ಟ್’ನಲ್ಲಿ ಯಶಸ್ವಿನಿ ಯೋಜನೆಯಡಿ ಬರುವ 200ಕ್ಕೂ ಹೆಚ್ಚು ಚಿಕಿತ್ಸಾ ದರ ಪರಿಷ್ಕರಣೆ ಮಾಡಿದ್ದರೂ ಅದು ಅನುಷ್ಠಾನಕ್ಕೆ ಬಂದಿಲ್ಲ.


ಇದರ ಜೊತೆಗೆ ಸಹಕಾರ ಸಂಘಗಳಲ್ಲಿ ಚುನಾವಣೆ ಭರಾಟೆ, ಖಾಸಗಿ ಆಸ್ಪತ್ರೆಗಳ ನಿರಾಸಕ್ತಿ, ಯೋಜನೆಯ ಗೊಂದಲ ಸೇರಿ ನಾನಾ ಕಾರಣಗಳಿಂದ ‘ಯಶಸ್ವಿನಿ’ ಆರೋಗ್ಯ ವಿಮೆ ಯೋಜನೆಗೆ ನೋಂದಣಿ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗುತ್ತಿದೆ.


ಈ ನಡುವೆ ರಾಜ್ಯದ ಬಹುತೇಕ ಸಹಕಾರ ಸಂಘಗಳ ಹಾಗೂ ಇತರ ಸಹಕಾರ ಸಂಘಗಳ ಆಡಳಿತ ಮಂಡಳಿಗಳ ಚುನಾವಣೆ ಕಾವು ಜೋರಾಗಿದೆ. ಇದರಿಂದ ಕ್ಷೇತ್ರ ಸಿಬ್ಬಂದಿ, ಅಧಿಕಾರಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿದ್ದು, ಪ್ರಚಾರ ಹಾಗೂ ನೋಂದಣೆ ಕಾರ್ಯಕ್ಕೆ ತೊಡಕಾಗಿದೆ.


ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ HDFC Bank Dairy Farming Loan


ನೋಂದಣಿ ಶುಲ್ಕವೆಷ್ಟು? : ಗ್ರಾಮೀಣ ಸಹಕಾರ ಸಂಘಗಳ ಸದಸ್ಯರಾಗಿದ್ದು, ಗರಿಷ್ಠ ನಾಲ್ವರು ಸದಸ್ಯರ ಕುಟುಂಬದವರು ಯಶಸ್ವಿನಿ ಆರೋಗ್ಯ ವಿಮೆ ಮೊತ್ತವಾಗಿ ವಾರ್ಷಿಕ 500 ರೂ. ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರಿದ್ದರೆ ಹೆಚ್ಚುವರಿ ಸದಸ್ಯರಿಗೆ ತಲಾ 100 ರೂ. ಪಾವತಿಸಬೇಕು.


ನಗರ ವ್ಯಾಪ್ತಿಯ ಸಹಕಾರ ಸಂಘಗಳ ಗರಿಷ್ಠ ನಾಲ್ವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ 1,000 ರೂ., ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ. ಶುಲ್ಕ ಪಾವತಿಸಬೇಕು. ಆದರೆ, ನಗರ ಸಹಕಾರ ಸಂಘಗಳ ಸದಸ್ಯರು ನೋಂದಣಿಗೆ ತೋರುತ್ತಿಲ್ಲ.


ಇದನ್ನೂ ಓದಿ: ಪೋಸ್ಟ್ ಆಫೀಸ್’ನಲ್ಲಿ ಕೇವಲ 399 ರೂ. ಕಟ್ಟಿದರೆ ಸಿಗಲಿದೆ 10 ಲಕ್ಷ ರೂ. ಆರ್ಥಿಕ ಸಹಾಯ | ಸಂಪೂರ್ಣ ಮಾಹಿತಿ ಇಲ್ಲಿದೆ...