ಕೆನರಾ ಬ್ಯಾಂಕ್ 3000 ಹುದ್ದೆಗಳಿಗೆ ಅರ್ಜಿ | ಪದವೀಧರರಿಗೆ ಭರ್ಜರಿ ಅವಕಾಶ Canara Bank 3000 Apprenticeship Recruitment 2024

WhatsApp
Telegram
Facebook
Twitter
LinkedIn

Canara Bank 3000 Apprenticeship Recruitment 2024 : ಸಾರ್ವಜನಿಕ ವಲಯದ ಪ್ರತಿಷ್ಠಿತ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ (Canara Bank) ಪದವೀಧರರಿಗೆ ಗೌರವಧನ ಸಹಿತ ಶಿಶಿಕ್ಷು ಉದ್ಯೋಗ ತರಬೇತಿ (Apprenticeship Training) ನೀಡಲು ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ 3,000 ಜನರಿಗೆ ಉದ್ಯೋಗ ತರಬೇತಿಗೆ ಅವಕಾಶವಿದ್ದು, ರಾಜ್ಯದಲ್ಲಿ 600 ಜನರನ್ನು ಆಯ್ಕೆ ಮಾಡಲಾಗುತ್ತದೆ.

ಯಾವುದೇ ವಿಷಯದಲ್ಲಿ ಪದವಿ ಪಡೆದವರು ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಇದಕ್ಕೂ ಮುನ್ನು ರಾಷ್ಟ್ರೀಯ ಅಫ್ರೆಂಟೀಸ್‌ಶಿಪ್ ಪೋರ್ಟಲ್‌ನಲ್ಲಿ (National Apprenticeship Portal) ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 4 ಕೊನೆಯ ದಿನವಾಗಿದೆ. ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ಅಪ್ರೆಂಟೀಸ್ ಪಡೆಯಬಹುದಾಗಿದ್ದು, ಅಭ್ಯರ್ಥಿಗಳು ಸ್ಥಳೀಯ ಭಾಷಾ ಜ್ಞಾನವನ್ನು ಹೊಂದಿರಬೇಕು.

ವಿದ್ಯಾರ್ಹತೆ ವಿವರ

ಮೊದಲೇ ಹೇಳಿದಂತೆ ಕೆನರಾ ಬ್ಯಾಂಕ್ ಶಿಶಿಕ್ಷು ಉದ್ಯೋಗ ತರಬೇತಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆ ಕುರಿತ ವಿವರವಾದ ಮಾಹಿತಿಯನ್ನು ಅಧಿಸೂಚನೆಯಲ್ಲಿ ಗಮನಿಸಿ.

ವಯೋಮಿತಿ ವಿವರ

01-09-2024ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯು ಕನಿಷ್ಠ 20 ಹಾಗೂ ಗರಿಷ್ಠ 28 ವರ್ಷ ವಯಸ್ಸಿನೊಳಗಿರಬೇಕು. ಅಂದರೆ 01-09-1996 ಹಾಗೂ 01-09-2004ರ ನಡುವೆ ಜನಿಸಿರಬೇಕು. ಆಯಾ ವರ್ಗದ ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆಯೂ ಇರಲಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳನ್ನು ಪಿಯು ಅಥವಾ 12ನೇ ತರಗತಿ ಅಥವಾ ಡಿಪ್ಲೊಮಾದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಆಯ್ಕೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ನಂತರ ಸ್ಥಳೀಯ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಹಂತದಲ್ಲಿ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿದವರಿಗೆ ವಿನಾಯ್ತಿ ಇರಲಿದೆ. ನಂತರದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತರಬೇತಿಗೆ ಪರಿಗಣಿಸಲಾಗುತ್ತದೆ.

ಅರ್ಜಿ ಶುಲ್ಕದ ವಿವರ

ಎಸ್‌ಸಿ, ಎಸ್‌ಟಿ ಹಾಗೂ ಅಂಗವಿಕಲರಿಗೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ. ಈ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಶವಿದೆ. ಇನ್ನು ಉಳಿದವರು 500 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.

ತರಬೇತಿ ಅವಧಿ

ಈ ಉದ್ಯೋಗ ತರಬೇತಿಯು ಒಂದು ವರ್ಷದ ಅವಧಿಯದ್ದಾಗಿದ್ದು, ಬ್ಯಾಂಕ್‌ನ ಆಯ್ದ ಶಾಖೆಗಳಲ್ಲಿ ಪಠ್ಯಕ್ರಮದ ಅನುಗುಣವಾಗಿ ನಡೆಸಲಾಗುತ್ತದೆ. ಬ್ಯಾಂಕಿನ ಗುಮಾಸ್ತ ಸಿಬ್ಬಂದಿಗೆ ಅನ್ವಯವಾಗುವ ಕೆಲಸದ ಅವಧಿಯೇ ಇವರಿಗೂ ಅನ್ವಯವಾಗಲಿದೆ.

ಗೌರವಧನ (Stipend) ಎಷ್ಟು?

ಕೆನರಾ ಬ್ಯಾಂಕ್ ಶಿಶಿಕ್ಷು ಉದ್ಯೋಗ ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 15 ಸಾವಿರ ರೂ. Stipend ನೀಡಲಾಗುತ್ತದೆ. ಇದರಲ್ಲಿ ಬ್ಯಾಂಕ್ 10,500 ರೂ. ಭರಿಸಿದರೆ, ಕೇಂದ್ರ ಸರ್ಕಾರವು 4,500 ರೂ.ಗಳನ್ನು ನೇರವಾಗಿ ಅಭ್ಯರ್ಥಿಗಳ ಖಾತೆಗೆ ವರ್ಗಾವಣೆ ಮಾಡಲಿದೆ.

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
04-10-2024

ಅಧಿಸೂಚನೆ : Download

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon