ಪಿಯುಸಿ ಪಾಸಾದವರಿಗೆ 1,130 ಸಿಐಎಸ್‌ಎಫ್ ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 69,100 ವರೆಗೆ ಮಾಸಿಕ ಸಂಬಳ CISF Constable Fireman Recruitment 2024

Spread the love

CISF Constable Fireman Recruitment 2024 : ಕೇಂದ್ರ ಕೈಗಾರಿಕಾ ಭದ್ರಾತಾ ಪಡೆಯು (Central Industrial Security Force -ISIF) ಕಾನ್ಸ್​ಟೇಬಲ್ (Constable Fireman Recruitment) ನೇಮಕಾತಿಯ ಅಧಿಸೂಚನೆಯನ್ನು ಪ್ರಕಟಿಸಿದೆ. ಇದೇ ಆಗಸ್ಟ್ 31ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು; ಸೆಪ್ಟೆಂಬರ್ 30ರ ತನಕ ಅರ್ಜಿ ಸಲ್ಲಿಕೆಗೆ ಕಾಲಾವಕಾಶವಿದೆ.

WhatsApp Group Join Now
Telegram Group Join Now

ದೇಶಾದ್ಯಂತ ಒಟ್ಟು 1,130 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು; ಕರ್ನಾಟಕ ರಾಜ್ಯಕ್ಕೆ ಒಟ್ಟು 33 ಹುದ್ದೆಗಳನ್ನು ಮೀಸಲಿಡಲಾಗಿದೆ. ಪಿಯುಸಿ ಪಾಸಾದ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಿತದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರಿಗೂ ಅವಕಾಶ KSSFCL Recruitment 2024

ವಿದ್ಯಾರ್ಹತೆಗಳೇನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ನಿಗದಿತ ವಿದ್ಯಾರ್ಹತೆಯಲ್ಲಿ ಒಂದು ವಿಷಯವಾಗಿ ವಿಜ್ಞಾನವನ್ನು ಅಧ್ಯಯನ ಮಾಡಿರಬೇಕು. ಅಭ್ಯರ್ಥಿಗಳ ಎತ್ತರ 170 ಸೆಂ.ಮೀ ಎತ್ತರ, ಎದೆಯ ಸುತ್ತಳತೆ 80-85 ಸೆಂ.ಮೀ ಇದ್ದರೆ ಮಾತ್ರ ನೇಮಕ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ.

ವಯೋಮಿತಿ ವಿವರ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು 18ರಿಂದ 23 ವರ್ಷದೊಳಗಿರಬೇಕು. ಅಂದರೆ ಅಭ್ಯರ್ಥಿಗಳು 2001ರ ಅಕ್ಟೋಬರ್ 1 ಮತ್ತು 2006ರ ಸೆಪ್ಟೆಂಬರ್ 30ರ ನಡುವೆ ಜನಿಸಿರಬೇಕು. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: 1ನೇ ತರಗತಿಯಿಂದ PUC, ಪದವಿ ವಿದ್ಯಾರ್ಥಿಗಳ ವರೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | 75,000 ವರೆಗೂ ಆರ್ಥಿಕ ನೆರವು HDFC Bank Parivartan ECSS Scholarship 2024

CISF Constable Fireman Recruitment 2024
ಅರ್ಜಿ ಶುಲ್ಕ ಮತ್ತು ವೇತನದ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂಪಾಯಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ. ಈ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಇನ್ನು ಕೇಂದ್ರ ಕೈಗಾರಿಕಾ ಭದ್ರಾತಾ ಪಡೆಯ ಕಾನ್ಸ್​ಟೇಬಲ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ 21,700 ರಿಂದ 69,100 ವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಸರ್ಕಾರದ ಎಲ್ಲ ಸವಲತ್ತುಗಳು ಅನ್ವಯವಾಗಲಿವೆ.

ಇದನ್ನೂ ಓದಿ: ಅಂಗನವಾಡಿ 1,112 ಹುದ್ದೆಗಳಿಗೆ ಮಹಿಳೆಯರಿಂದ ಅರ್ಜಿ ಆಹ್ವಾನ | SSLC, PUC ಪಾಸಾಗಿದ್ದರೆ ಅರ್ಜಿ ಹಾಕಿ Karnataka Anganwadi Recruitment 2024

ಆಯ್ಕೆ ವಿಧಾನ ಹೇಗೆ?

ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಿದ ನಂತರ ಅದರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆಯಬೇಕಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಜನರಲ್ ನಾಲೇಜ್ ಮತ್ತು ಅವೇರ್‌ನೆಸ್, ಎಲಿಮೆಂಟ್ರಿ ಮ್ಯಾಥಮೆಟಿಕ್ಸ್, ಇಂಗ್ಲಿಷ್/ಹಿAದಿಗೆ ಸಂಬAಧಿಸಿದAತೆ ತಲಾ 25 ಅಂಕಗಳ 25 ಪ್ರಶ್ನೆಗಳಿರಲಿವೆ.

ಒಟ್ಟು 100 ಅಂಕಗಳ 100 ಪ್ರಶ್ನೆಗಳನ್ನು ನೀಡಲಾಗುತ್ತದೆ. ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ನೀಡಲಾಗುತ್ತದೆ. ಹಿಂದಿ ಮತ್ತು ಇಂಗ್ಲಿಷ್’ನಲ್ಲಿ ಪ್ರಶ್ನೆಗಳನ್ನು ನೀಡಲಾಗುತ್ತಿದ್ದು, ಅದೇ ಭಾಷೆಗಳಲ್ಲಿ ಬರೆಯಲು ಅವಕಾಶವಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 14,298 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಗೆ ಭರ್ಜರಿ ಅವಕಾಶ Indian Railways Technician Recruitment 2024

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ:
    31-09-2024
  • ಅರ್ಜಿ ಸಲ್ಲಿಕೆ ಕೊನೆ ದಿನಾಂಕ:
    30-09-2024

ಅಧಿಸೂಚನೆ : Download
ಅಧಿಕೃತ ವೆಬ್‌ಸೈಟ್ : Click Here

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಗೆ ಬೆಂಗಳೂರಿನ ಎಚ್‌ಎಎಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ ₹46,764 HAL Non Executive Cadre Recruitment 2024


Spread the love
WhatsApp Group Join Now
Telegram Group Join Now

1 thought on “ಪಿಯುಸಿ ಪಾಸಾದವರಿಗೆ 1,130 ಸಿಐಎಸ್‌ಎಫ್ ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 69,100 ವರೆಗೆ ಮಾಸಿಕ ಸಂಬಳ CISF Constable Fireman Recruitment 2024”

Leave a Comment

error: Content is protected !!