Google Pay loan upto 8 lakh : ಆನ್‌ಲೈನ್ ಪೇಮೆಂಟ್‌ಗೆ (Online payment) ವಿಶ್ವಾಸಾರ್ಹ ಕಂಪನಿಯಾದ ‘ಗೂಗಲ್ ಪೇ’ ಯಾವುದೇ ಪೇಪರ್ ವರ್ಕ್ ಇಲ್ಲದೆ ಕೇವಲ ಎರಡು ನಿಮಿಷದಲ್ಲಿ 10,000 ದಿಂದ 8 ಲಕ್ಷದ ವರೆಗೆ ಸಾಲ ಸೌಲಭ್ಯವನ್ನು (Loan facility) ಒದಗಿಸುತ್ತಿದೆ. ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಆನ್‌ಲೈನ್ ಹಣ ವರ್ಗಾವಣೆ (Online money transfer) ಇಂದು ಸರ್ವೇ ಸಾಮಾನ್ಯವಾಗಿದೆ. ಕೇವಲ ಹಣ ವರ್ಗಾವಣೆಗೆ ಮಾತ್ರವಲ್ಲದೆ ಇದೀಗ ಸಾಲ ಸೌಲಭ್ಯವನ್ನು ಕೂಡ ಆನ್‌ಲೈನ್ ಮುಖಾಂತರ ಕೇವಲ ಎರಡು ನಿಮಿಷದಲ್ಲಿ ಪಡೆಯಬಹುದಾಗಿದೆ. ಡಿಜಿಟಲ್ ಪೇಮೆಂಟ್’ಗೆ ಹೆಸರುವಾಸಿಯಾದ ‘ಗೂಗಲ್ ಪೇ’ (Google Pay) ಅರ್ಹ ಗ್ರಾಹಕರಿಗೆ 10,000 ದಿಂದ 8 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಗೂಗಲ್ ಪೇ ಮುಖಾಂತರ ಈ ಸಾಲವನ್ನು ಪಡೆಯಲು ಬೇಕಾಗಿರುವ ಅರ್ಹತೆ, ಸಾಲ ಸೌಲಭ್ಯದ ಇತರ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.
ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯುವ ಮುನ್ನ ಈ ಮಹತ್ವದ ಮಾಹಿತಿ ತಿಳಿದಿರಿ… Personal Loan Important Information
ಸಾಲದ ವಿವರ
ಗೂಗಲ್ ಪೇ ಈ ಸಾಲ ಸೌಲಭ್ಯವನ್ನು DMI FINANCE ಕಂಪನಿಯವರ ಸಹಭಾಗಿತ್ವದಲ್ಲಿ, ಅರ್ಹ ಗ್ರಾಹಕರಿಗೆ 10,000 ದಿಂದ 8 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯವನ್ನು ಕಲ್ಪಿಸುತ್ತಿದ್ದಾರೆ. ಯಾವುದೇ ರೀತಿಯ ಪೇಪರ್ ವರ್ಕ್ ಇಲ್ಲದೆ ಕೇವಲ ಎರಡು ನಿಮಿಷದಲ್ಲಿ ಈ ಸಾಲಕ್ಕೆ (Loan) ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯು ಸಂಪೂರ್ಣ ಡಿಜಿಟಲ್. ಅಂದರೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಬಹುದಾದ ವ್ಯವಸ್ಥೆಯಾಗಿದೆ.
ಅರ್ಜಿ ಯಾರು ಸಲ್ಲಿಸಬಹುದು?
ಗೂಗಲ್ ಪೇ ಸಾಲ ಸೌಲಭ್ಯ ಪಡೆಯಲು, ಆನ್‌ಲೈನ್ ನಗದು ವರ್ಗಾವಣೆಗಾಗಿ (Online transaction) ಗೂಗಲ್ ಪೇ ಅಪ್ಲಿಕೇಶನ್ ಉಪಯೋಗಿಸುತ್ತಿರುವ ಎಲ್ಲಾ ಗ್ರಾಹಕರ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಸಾಲದ ಅವಧಿ ಮತ್ತು ಸಾಲ ಮರುಪಾವತಿ ವಿವರ (Loan period and repayment details)
ಗೂಗಲ್ ಪೇ ಸಾಲ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಕಂಪನಿಯವರು ನಿಮ್ಮ ಅರ್ಹತೆಗಳನ್ನು ಪರಿಶೀಲಿಸಿ ಅರ್ಹತೆಗಳಿಗೆ ಅನುಗುಣವಾಗಿ ಸಾಲವನ್ನು ನೀಡುತ್ತಾರೆ. ಸಾಲದ ಅವಧಿಯು 6 ತಿಂಗಳಿನಿ೦ದ ನಾಲ್ಕು ವರ್ಷದ ವರೆಗೆ ಇರುತ್ತದೆ. ಅಂದರೆ ನೀವು ಸಾಲ ಪಡೆದ ನಂತರ, ನೀವು ಪಡೆದ ಸಾಲದ ಮೊತ್ತ ಮತ್ತು ಬಡ್ಡಿ ಹಣವನ್ನು ಸೇರಿ ಒಟ್ಟು ಮೊತ್ತವನ್ನು ಆರು ತಿಂಗಳಿನಿ೦ದ ನಾಲ್ಕು ವರ್ಷಗಳ ವರೆಗೆ ಮರುಪಾವತಿ ಮಾಡಬಹುದಾಗಿದೆ. ಮರುಪಾವತಿ ಹಣವು ತಿಂಗಳಿಗೆ 1,000 ರೂಪಾಯಿಯಿಂದ ಆರಂಭವಾಗುತ್ತದೆ. Monthly EMI ಮೊತ್ತವು ನೀವು ಪಡೆದುಕೊಂಡ ಸಾಲ ಮತ್ತು ಸಾಲದ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ.
ಸಾಲದ ಮೇಲಿನ ಬಡ್ಡಿ ಎಷ್ಟು? (Interests rate on loan)
ಗೂಗಲ್ ಪೇಯಿಂದ ನೀವು ಪಡೆಯುವ ಸಾಲಕ್ಕೆ ಬಡ್ಡಿದರವು ವಾರ್ಷಿಕ 13.99% ನಿಂದ ಆರಂಭವಾಗುತ್ತದೆ. ಇದರ ಅರ್ಥ ನೀವು 1 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಂಡರೆ, ವರ್ಷಕ್ಕೆ 13,900 ರೂಪಾಯಿ ಬಡ್ಡಿ ಆಗುತ್ತದೆ. ಈ ಬಡ್ಡಿ ದರವನ್ನು ಗ್ರಾಹಕರ ಸಿಬಿಲ್ ಸ್ಕೋರ್ (CIBIL SCORE or CREDIT SCORE) ಮೇಲೆ ನಿರ್ಧರಿಸಲಾಗುತ್ತದೆ. ಸಿಬಿಲ್ ಸ್ಕೋರ್ ಕುರಿತ ಮಾಹಿತಿ ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಶ್ರೇಣಿ ತಿಳಿಯಲು ಇಲ್ಲಿ ಒತ್ತಿ
ಅರ್ಜಿ ಸಲ್ಲಿಸುವುದು ಹೇಗೆ?
ಗೂಗಲ್ ಪೇ ಸಾಲ ಪಡೆಯಲು ಮುಖ್ಯವಾಗಿ ನೀವು ಗೂಗಲ್ ಪೇ ಬಳಕೆದಾರರಾಗಿರಬೇಕು. ಒಂದು ವೇಳೆ ನೀವು ಗೂಗಲ್ ಪೇ ಉಪಯೋಗಿಸದೆ ಇದ್ದರೆ ಈಗಲೇ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೊಸ ಖಾತೆಯನ್ನು ತೆರೆಯಿರಿ. ನಂತರ ನಿಮ್ಮ ಮೊಬೈಲ್’ನಲ್ಲಿರುವ ಗೂಗಲ್ ಪೇ ಅಪ್ಲಿಕೇಶನ್’ಗೆ ಭೇಟಿ ನೀಡಿ. ಹೋಂ ಪೇಜ್’ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿದರೆ ಅಲ್ಲಿ ಕಾಣುವ ‘Manage your money’ ಎಂಬ ವಿಭಾಗದಲ್ಲಿ ಎರಡನೇ ಆಯ್ಕೆಯಾದ LOANS ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
ಬಳಿಕ APPLY NOW ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ತೋರಿಸುತ್ತದೆ. ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಸರಿಯಾಗಿದ್ದರೆ CONTINUE ಎಂಬ ಆಯ್ಕೆಯ ಮೇಲೆ ಒತ್ತಿ ಮುಂದುವರೆಯಿರಿ. ನಂತರದಲ್ಲಿ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಿಖರವಾದ ಮಾಹಿತಿಯನ್ನು ಭರ್ತಿ ಮಾಡಿ ಸಾಲ ಸೌಲಭ್ಯ ಪಡೆಯಿರಿ. ಅರ್ಜಿ ಸಲ್ಲಿಸಿದ ನಂತರ ನೀವು ಅರ್ಹರಿದ್ದರೆ ನೀವು ಅರ್ಜಿ ಸಲ್ಲಿಸಿದ ಸಾಲದ ಮೊತ್ತವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.
ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ? Personal Loans Schemes
5 thoughts on “8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ… Google Pay loan upto 8 lakh”