JobsNews

ಸರ್ಕಾರಿ ಶಾಲೆಗಳಲ್ಲಿ 45,000 ಅತಿಥಿ ಶಿಕ್ಷಕರ ನೇಮಕಾತಿ : ಜಿಲ್ಲಾ, ತಾಲ್ಲೂಕುವಾರು ಖಾಲಿ ಹುದ್ದೆಗಳ ಲಿಸ್ಟ್ | ಸಂಪೂರ್ಣ ಮಾಹಿತಿ ಇಲ್ಲಿದೆ… Guest Teacher Recruitment 2024 Karnataka

WhatsApp Group Join Now
Telegram Group Join Now

Guest Teacher Recruitment 2024 Karnataka : ರಾಜ್ಯದ ಎಲ್ಲಾ ಜಿಲ್ಲೆಗಳ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಖಾಲಿ ಹುದ್ದೆಗಳಿಗೆ ಬರೋಬ್ಬರಿ 45,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಜಿಲ್ಲಾವಾರು ಹುದ್ದೆಗಳ ವಿವರ, ಸಂಬಳ, ಸವಲತ್ತು, ನೇಮಕ ಪ್ರಕ್ರಿಯೆ ಸಮಗ್ರ ವಿವರ ಇಲ್ಲಿದೆ…

ನೂತನ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಶಿಕ್ಷಕರಾಗುವ ಅರ್ಹತೆಯುಳ್ಳ ಅಭ್ಯರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಶುಭ ಸುದ್ದಿ ನೀಡಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ.

ಕಳೆದ ಜೂನ್ 03, 2024ರಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಬಿ ಬಿ ಕಾವೇರಿ ಅವರು ಖಾಲಿ ಇರುವ ಬೋಧಕ ವರ್ಗದ ಹುದ್ದೆಗಳಿಗೆ ಆದ್ಯತೆ ಮೇರೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಜ್ಞಾಪಕ ಪತ್ರ ಹೊರಡಿಸಿದ್ದಾರೆ. ಶಿಕ್ಷಕರಾಗುವ ಅರ್ಹತೆಯುಳ್ಳ ಉದ್ಯೋಗಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

Guest Teacher Recruitment 2024

ಇದನ್ನೂ ಓದಿ: ಅಂಚೆ ಕಚೇರಿಯಲ್ಲಿ ಕೇವಲ 399ಕ್ಕೆ ಈ ಕಟ್ಟಿದರೆ ಸಿಗಲಿದೆ 10 ಲಕ್ಷ ಆರ್ಥಿಕ ನೆರವು Post Office Accident Insurance Scheme

ನೇಮಕಾತಿ ಸಂಕ್ಷಿಪ್ತ ವಿವರ

  • ನೇಮಕಾತಿ ಸಂಸ್ಥೆ : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ
  • ಹುದ್ದೆಗಳ ಹೆಸರು : ಅತಿಥಿ ಶಿಕ್ಷಕರು
  • ಒಟ್ಟು ಹುದ್ದೆಗಳು : 45,000

ಹುದ್ದೆಗಳ ವಿವರ

  • ಸರಕಾರಿ ಪ್ರಾಥಮಿಕ ಶಾಲೆ : 35,000
  • ಸರಕಾರಿ ಪ್ರೌಢ ಶಾಲೆಯಲ್ಲಿ : 10,000
  • ಒಟ್ಟು ಹುದ್ದೆಗಳು : 45,000

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ (RTC) ಮೊಬೈಲ್‌ನಲ್ಲೇ ಆಧಾರ್ ಲಿಂಕ್ ಮಾಡಿ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

ಖಾಲಿ ಇರುವ ಹುದ್ದೆಗಳೆಷ್ಟು?

ರಾಜ್ಯದಲ್ಲಿ ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ವೃಂದದ ಸಹ ಶಿಕ್ಷಕರ ಹುದ್ದೆಗಳು ಖಾಲಿ ವಿವರ ಈ ಕೆಳಗಿನಂತಿದೆ:

  • ಪ್ರಾಥಮಿಕ ಶಾಲೆ : 33,863
  • ಪ್ರೌಢ ಶಾಲೆ : 8,954
  • ಒಟ್ಟು ಖಾಲಿ ಹುದ್ದೆಗಳು : 42,817

ಮಾಸಿಕ ಗೌರವಧನ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಬೋಧಕ ವರ್ಗದ ಹುದ್ದೆಗಳಿಗೆ ನೇಮಕವಾಗುವ ಅತಿಥಿ ಶಿಕ್ಷಕರಿಗೆ ಮಾಸಿಕ ಗೌರವಧನದ ವಿವರ ಈ ಕೆಳಗಿನಂತಿದೆ:

  • ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರು : 10,000 ರೂಪಾಯಿ
  • ಪ್ರೌಢಶಾಲಾ ಅತಿಥಿ ಶಿಕ್ಷಕರು : 10,500 ರೂಪಾಯಿ
Guest Teacher Recruitment 2024

ಇದನ್ನೂ ಓದಿ: 2024ನೇ ಸಾಲಿನ ಮುಂಗಾರು ಬೆಳೆವಿಮೆ ಅರ್ಜಿ | ಜಿಲ್ಲೆ, ಬೆಳೆವಾರು ಕೊನೆಯ ದಿನಾಂಕಗಳ ಪಟ್ಟಿ ಇಲ್ಲಿದೆ… Kharif Crop Insurance 2024-25 PMFBY Scheme

ನೇಮಕ ಹೇಗೆ?

ಪ್ರಾಥಮಿಕ ಶಾಲೆ ಹಾಗೂ ಮತ್ತು ಪ್ರೌಢಶಾಲೆಗಳ ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿಯನ್ನು ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ನೀಡಲಾಗುತ್ತದೆ.
ಮೊದಲ ಆದ್ಯತೆಯಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಖಾಲಿ ಹುದ್ದೆಗಳಿಗೆ ಹಾಗೂ ಶಿಕ್ಷಕರು ಇರದ ಶಾಲೆಗಳಿಗೆ ಮತ್ತು ಹೆಚ್ಚು ವಿದ್ಯಾರ್ಥಿಗಳು ಇರುವ ಖಾಲಿ ಹುದ್ದೆಗಳನ್ನು ಪರಿಗಣಿಸಬೇಕು
ಅತಿಥಿ ಶಿಕ್ಷಕರನ್ನು ಆಯಾ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರ ಜಿಲ್ಲಾವಾರು ಹುದ್ದೆಗಳ ವಿವರ

ಬೆಳಗಾವಿ 1457, ಬೆಳಗಾವಿ ಚಿಕ್ಕೋಡಿ 2231, ಬಾಗಲಕೋಟೆ 1088, ಬೆಂಗಳೂರು ಗ್ರಾಮಾಂತರ 527, ಬೆಂಗಳೂರು ಉತ್ತರ 635, ಬೆಂಗಳೂರು ದಕ್ಷಿಣ 1092, ಚಾಮರಾಜ ನಗರ 584, ಚಿಕ್ಕಬಳ್ಳಾಪುರ 542, ಚಿಕ್ಕಮಗಳೂರು 468, ಚಿತ್ರದುರ್ಗ 577, ದಕ್ಷಿಣ ಕನ್ನಡ 1033, ದಾವಣಗೆರೆ 395, ಧಾರವಾಡ 766, ಗದಗ 643, ಹಾಸನ 804, ಹಾವೇರಿ 964, ಕೊಡಗು 265,

ಕೋಲಾರ 565, ಮಂಡ್ಯ 778, ಮೈಸೂರು 1001, ರಾಮನಗರ 900, ಶಿವಮೊಗ್ಗ 780, ತುಮಕೂರು 603, ತುಮಕೂರು ಮಧುಗಿರಿ 590, ಉಡುಪಿ 364, ಉತ್ತರ ಕನ್ನಡ 373, ಉತ್ತರ ಕನ್ನಡ ಸಿರಸಿ 697, ವಿಜಯಪುರ 1336, ಯಾದಗಿರಿ 2259, ಬಳ್ಳಾರಿ 455, ವಿಜಯನಗರ 655, ರಾಯಚೂರು 3205, ಕೊಪ್ಪಳ 1758, ಕಲಬುರಗಿ 1832, ಬೀದರ್ 632 ಹುದ್ದೆಗಳಿಗೆ ನೇಮಕಾತಿಗೆ ಒಪ್ಪಿಗೆ ನೀಡಲಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ನೇಮಕಾತಿ ಆದೇಶ ಪ್ರತಿ ಹಾಗೂ ತಾಲ್ಲೂಕುವಾರು ಖಾಲಿ ಹುದ್ದೆಗಳ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Drought relief technical issues : ನಿಮಗಿನ್ನೂ ಬರ ಪರಿಹಾರ ಬಂದಿಲ್ಲವೇ? ಹಣ ಪಡೆಯಲು ಈಗಲೇ ಈ ಕೆಲಸ ಮಾಡಿ | ಸರಕಾರದ ಸೂಚನೆ

WhatsApp Group Join Now
Telegram Group Join Now

Related Posts

error: Content is protected !!