NewsTechnology

ನಿಮ್ಮ ಹೆಸರಿನಲ್ಲಿ ಯಾರಾದರೂ ನಕಲಿ ಸಿಮ್ ಖರೀದಿಸಿದ್ದಾರಾ? ಮೋಸ ಹೋಗುವ ಮೊದಲು ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ… How to detect fake sim card?

WhatsApp Group Join Now
Telegram Group Join Now

How to detect fake sim card? : ನಿಮ್ಮ ದಾಖಲೆಗಳನ್ನು ಬಳಸಿಕೊಂಡು ನಕಲಿ ಮೊಬೈಲ್ ಸಿಮ್ ಕಾರ್ಡ್ ಪಡೆದು ಯಾರಾದರೂ ಅಪರಾಧ ಕೃತ್ಯಕ್ಕೆ ಬಳಸುತ್ತಿದ್ದರೆ ಅದನ್ನು ಗುರುತಿಸುವುದು ಹೇಗೆ? ಮೊಬೈಲ್‌ನಲ್ಲಿಯೇ ನಕಲಿ ಸಿಮ್ ಪತ್ತೆ ಹಚ್ಚುವುದು ಹೇಗೆ? ಅದನ್ನು ಬ್ಲಾಕ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಆಧಾರ್, ವೋಟರ್ ಐಡಿ, ಪಾನ್ ಕಾರ್ಡ್ ಸೇರಿದಂತೆ ಇತರೆ ವೈಯಕ್ತಿಕ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ, ಬ್ಯಾಂಕ್ ಖಾತೆಗಳಿಂದ ಹಣ ದೋಚಲು ಹಾಗೂ ಇತರೆ ಅಪರಾಧ ಕೃತ್ಯಗಳಿಗೆ ದುರ್ಬಳಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವಂಚನಾ ಜಾಲಕ್ಕೆ ಎರಡೂ ಬದಿಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಇಂತಹ ಕಳ್ಳ ದಂಧೆೆಯನ್ನು ತಡೆಯಲು ಸರ್ಕಾರವು ಮುಂದಾಗಿದೆ.

ಇದನ್ನೂ ಓದಿ: ಮೀನುಗಾರಿಕೆ ವಿವಿ ಕ್ಲರ್ಕ್ ಹುದ್ದೆಗಳು | ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾಗಿದ್ರೆ ಈಗಲೇ ಅರ್ಜಿ ಸಲ್ಲಿಸಿ… Fisheries University Clerk Recruitment 2024

ನಕಲಿ ಸಿಮ್ ಹೇಗೆ ದುರ್ಬಳಕೆಯಾಗುತ್ತದೆ?

ಯಾರದೋ ಹೆಸರಿನಲ್ಲಿ ಮತ್ತ್ಯಾರದೋ ದಾಖಲೆಗಳನ್ನು ಕೊಟ್ಟು ನಕಲಿ ಸಿಮ್ ಕಾರ್ಡ್’ಗಳನ್ನು ಖರೀದಿಸಿ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವ ಖದೀಮರ ಸಂಖ್ಯೆ ಹೆಚ್ಚಾಗಿದೆ. ಇದು ಸಾರ್ವಜನಿಕರಲ್ಲಿ ಭಯ ಭೀತಿ ಉಂಟುಮಾಡಿದೆ. ನಕಲಿ ಸಿಮ್ ಕಾರ್ಡ್ ಅನ್ನು ಕಡಿವಾಣ ಹಾಕಲು 2023ರ ದೂರ ಸಂಪರ್ಕ ಕಾಯ್ದೆಯು ಇದೆ ಜನವರಿ 1ರಿಂದ ಅನುಷ್ಠಾನಕ್ಕೆ ಬಂದಿದೆ.

ಸೈಬರ್ ಕ್ರೈಂ, ಆರ್ಥಿಕ ವಂಚನೆ, ಬ್ಯಾಂಕ್ ಖಾತೆಯಿಂದ ಹಣ ದೋಚಲು, ಕಳ್ಳತನ ಮಾಡಲು, ಭ್ರಷ್ಟಾಚಾರ ಮಾಡಲು ಹಾಗೂ ಭಯೋತ್ಪಾದನಾ ಕೆಲಸಗಳಿಗೆ ಅಮಾಯಕರ ಹೆಸರಿನಲ್ಲಿರುವ ನಕಲಿ ಸಿಮ್ ಕಾರ್ಡುಗಳು ಬಳಕೆಯಾಗುತ್ತಿವೆ. ಇಂತಹ ಅನೇಕ ಪ್ರಕರಣಗಳು ಪೊಲೀಸ್ ತನಿಖಾ ವರದಿಯಲ್ಲಿ ದೃಢಪಟ್ಟಿದ್ದು, ಕೇಂದ್ರ ದೂರ ಸಂಪರ್ಕ ಇಲಾಖೆಯ ಮಾಹಿತಿ ಪ್ರಕಾರ ಬರೋಬ್ಬರಿ 55.52 ಲಕ್ಷ ನಕಲಿ ಸಿಮ್ ಕಾರ್ಡ್ಗಳ ಸಂಪರ್ಕ ಕಡಿತಗೊಳಿಸಲಾಗಿದೆ.

ಇದನ್ನೂ ಓದಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಪದವೀಧರರಿಂದ ಪಶುಪಾಲನಾ ನಿಗಮದ 5,250 ಹುದ್ದೆಗಳಿಗೆ ಅರ್ಜಿ ಆಹ್ವಾನ BPNL Recruitment 2024 bharatiyapashupalan

ಬೀಳಲಿದೆ ಭಾರೀ ದಂಡ

ನಕಲಿಗಳಿಗೆ ಕಡಿವಾಣ ಹಾಕುವ ಹಿನ್ನಲೆಯಲ್ಲಿ 2024 ಜನವರಿ 1 ರಿಂದ ದೂರಸಂಪರ್ಕ ಕಾಯ್ದೆ ಜಾರಿಯಾಗಿದ್ದು, ಸಿಮ್ ಕಾರ್ಡ್ ಖರೀದಿಸಲು ಹಲವು ಕಠಿಣ ನಿಯಮಗಳನ್ನು ಬಿಗಿ ಮಾಡಲಾಗಿದೆ. ಸಿಮ್ ಕಾರ್ಡ್ ಡೀಲರ್‌ಗಳು ಮತ್ತು ಸಿಮ್ ಕಾರ್ಡ್’ಗಳನ್ನು ಮಾರುವವರು ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ಸ್ ಗೆ ಒಳಗಾಗುವುದು ಕಡ್ಡಾಯವಾಗಿದೆ.

ನೋಂದಣಿ ಮಾಡಿಸದೇ ಇರುವವರು ಸಿಮ್ ಕಾರ್ಡ್ ಮಾರಾಟ ಮಾಡಲು ಅರ್ಹರಿರುವುದಿಲ್ಲ ಮತ್ತು ಸಿಮ್ ಕಾರ್ಡ್ ಮಾರಲು ಅನುಮತಿ ಇಲ್ಲ. ಆಕಸ್ಮಾತ್ ಇಂತಹ ನಕಲಿ ಸಿಮ್ ಮಾರಾಟದಲ್ಲಿ ಸಿಕ್ಕಿ ಬಿದ್ದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಿ 10 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶವಿದೆ.

ಇದನ್ನೂ ಓದಿ: 2024ನೇ ಸಾಲಿನ ಮುಂಗಾರು ಬೆಳೆವಿಮೆ ಅರ್ಜಿ | ಜಿಲ್ಲೆ, ಬೆಳೆವಾರು ಕೊನೆಯ ದಿನಾಂಕಗಳ ಪಟ್ಟಿ ಇಲ್ಲಿದೆ… Kharif Crop Insurance 2024-25 PMFBY Scheme

ನಕಲಿ ಸಿಮ್ ಪರಿಶೀಲನೆ ಹೇಗೆ?

ಈಗಾಗಲೇ ಒಂದು ವೇಳೆ ನಿಮ್ಮ ಹೆಸರಿನಲ್ಲಿ ಬೇರೆಯವರು ವಂಚನೆ ಮಾಡಲು ನಕಲಿ ದಾಖಲೆಗಳನ್ನು ಸಲ್ಲಿಸಿ ಸಿಮ್ ಖರೀದಿಸಿದ್ದರೆ ಅಂತಹ ಸಿಮ್ ಕಾರ್ಡ್’ಗಳನ್ನು ಕೆಲವೇ ನಿಮಿಷದಲ್ಲಿ ನಿಮ್ಮ ಮೊಬೈಲ್’ನಲ್ಲಿಯೇ ಬ್ಲಾಕ್ ಮಾಡಬಹುದಾಗಿದೆ. ಈ ವಿಧಾನ ಅನುಸರಿಸಿ ಎಲ್ಲರೂ ತಮ್ಮ ಸುರಕ್ಷತೆ ಕಾಪಾಡಿಕೊಳ್ಳಿ ಎಂದು ಪೊಲೀಸರು ಸೂಚಿಸಿದ್ದಾರೆ.

ನೀವು ಆ ಮಾಹಿತಿಯನ್ನು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಅಂಡ್ ಕನ್‌ಪ್ಯೂಮರ್ ಪ್ರೊಟೆಕ್ಷನ್ (Telecom Analytics for Fraud Management and Consumer Protection -TAFCOP) ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಕೆಳಗಿನಂತೆ ಪರಿಶೀಲಿಸಿ ಬ್ಲಾಕ್ ಮಾಡಬಹುದಾಗಿದೆ.

Fake Sim Card Fraud

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ (RTC) ಮೊಬೈಲ್‌ನಲ್ಲೇ ಆಧಾರ್ ಲಿಂಕ್ ಮಾಡಿ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

ನಕಲಿ ಸಿಮ್ ಚೆಕ್ ಮಾಡುವ ವಿಧಾನ

ನಾವು ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಅಂಡ್ ಕನ್‌ಪ್ಯೂಮರ್ ಪ್ರೊಟೆಕ್ಷನ್ ವೆಬ್‌ಸೈಟ್‌ಗೆ ಭೇಟಿ ನೀಡಿ.

ನಿಮ್ಮ ಮೊಬೈಲ್ ನಂಬರ್ ಮತ್ತು ಅಲ್ಲಿರುವ ಕ್ಯಾಪ್ಚಾ ಕೋಡ್ ನಮೂದಿಸಿ, Validate captcha ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ.

ಒಟಿಪಿಯನ್ನು ನಮೂದಿಸಿದ ನಂತರದಲ್ಲಿ ಲಾಗಿನ್ ಆಗಿ, ನಿಮ್ಮ ಹೆಸರಿನ ದಾಖಲೆಯಲ್ಲಿ ಒಟ್ಟಾರೆ ಎಷ್ಟು ಸಿಮ್ ಖರೀದಿಸಲಾಗಿದೆ ಎಂಬ ಮಾಹಿತಿಯ ಜೊತೆಗೆ, ಮೊಬೈಲ್ ನಂಬರ್’ಗಳನ್ನು ಕೂಡ ಅಲ್ಲಿ ಕಾಣಿಸುತ್ತವೆ.

ಅಲ್ಲಿ ತೋರಿಸಲಾಗುವ ಮೊಬೈಲ್ ಸಂಖ್ಯೆಗಳ ಎದುರಿಗೆ ನಾಟ್ ಮೈ ನಂಬರ್ (Not My Number), ನಾಟ್ ರೆಕ್ವೈರ್ಡ್ (Not required) ಮತ್ತು ರೆಕ್ವೈರ್ಡ್ (Required) ಎಂಬ ಮೂರು ಆಯ್ಕೆಗಳು ಇರುತ್ತವೆ.

ನಿಮ್ಮ ಬಳಿ ಇರದೇ ಇರುವ ಅಥವಾ ನೀವು ಖರೀದಿಸದೆ ಇರುವ ನಂಬರ್ ಅಲ್ಲಿ ಕಂಡರೆ ತಕ್ಷಣ ನಾಟ್ ಮೈ ನಂಬರ್ ಅಥವಾ ನಾಟ್ ರೆಕ್ವೈರ್ಡ್ ಎಂಬ ಆಯ್ಕೆ ಮಾಡಿ ರಿಪೋರ್ಟ್ ಮಾಡಿ ವಂಚನೆ ಮತ್ತು ಮೋಸಗಳಿಂದ ತಪ್ಪಿಸಿಕೊಳ್ಳಿ.

ನಕಲಿ ಸಿಮ್ ಪರಿಶೀಲಿಸಲು ಡೈರೆಕ್ಟ್ ಲಿಂಕ್ : Check Here

ಇದನ್ನೂ ಓದಿ: ನಿಮ್ಮ ಜಮೀನು ಒತ್ತುವರಿಯಾದರೆ ತಗಾದೆ ಇಲ್ಲದೇ ಹದ್ದುಬಸ್ತು ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ತಜ್ಞರ ಸರಳ ಸಲಹೆ… Haddubastu land survey

WhatsApp Group Join Now
Telegram Group Join Now

Related Posts

error: Content is protected !!