ಹೋಮ್ ಲೋನ್ ಪಡೆಯುವ ಮೊದಲು ಈ ನಿಯಮಗಳನ್ನು ತಿಳಿದಿರಿ | ಸುರಕ್ಷಿತ ಗೃಹ ಸಾಲ ಪಡೆಯುವ ವಿಧಾನ ಇಲ್ಲಿದೆ… How to get Secured Home Loan

WhatsApp
Telegram
Facebook
Twitter
LinkedIn

How to get Secured Home Loan : ಇಂದಿನ ಆಧುನಿಕ ಯುಗದಲ್ಲಿ ಸಾಲವಿಲ್ಲದೇ ಮನೆ ಕಟ್ಟುವುದು ಅಥವಾ ಮನೆ ಖರೀದಿಸುವುದು ಕಷ್ಟಸಾಧ್ಯ. ಬಹುತೇಕರು ಸಾಲವನ್ನು (Home Loan) ನೆಚ್ಚಿಯೇ ಮನೆ ಕಟ್ಟುವ ದೊಡ್ಡ ಯೋಜನೆ ಹಾಕಿಕೊಳ್ಳುತ್ತಾರೆ. ಆದರೆ ಎಲ್ಲಿಂದ ಸಾಲ ಪಡೆಯಬೇಕು? ಬಡ್ಡಿ (Interest rate) ಎಷ್ಟಿರಬೇಕು? ಸಾಲಕ್ಕೆ ವಿಮೆ (Insurance) ಬೇಕಾ? ಗೃಹಸಾಲವನ್ನು ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕಿಗೆ ವರ್ಗಾವಣೆ ಮಾಡುವುದರಿಂದ ಪ್ರಯೋಜನವೇನು? ಎಂಬ ಬಗ್ಗೆ ತಿಳಿದುಕೊಳ್ಳುವುದು ಕ್ಷೇಮಕರ.

ಹೌದು, ಸಾಲ ನೀಡಲೆಂದೇ ಅನೇಕ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳಿವೆ. ನಿಮ್ಮ ಕ್ರೆಡಿಟ್ ಸ್ಕೋರ್ (Credit score) ಉತ್ತಮವಾಗಿದ್ದು; ಸಾಲ ಮರುಪಾವತಿ ಸಾಮರ್ಥ್ಯವಿದ್ದರೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಧಾರಾಳವಾಗಿ ಸಾಲ ನೀಡುತ್ತವೆ. ಆದರೆ ಇಲ್ಲಿ ಸಾಲ ಪಡೆಯಲು ಬ್ಯಾಂಕುಗಳು ಉತ್ತಮವಾ? ಅಥವಾ ಹಣಕಾಸು ಸಂಸ್ಥೆಗಳು ಉತ್ತಮವಾ? ಎಂಬುವುದನ್ನು ನೋಡುವುದು ಉತ್ತಮ.

ಜೀವ ಹಿಂಡುವ ಷರತ್ತುಗಳು

ಸಾಲ ಮಾಡಿ ಮನೆ ಕಟ್ಟುವುದೇ ಒಂದು ರೀತಿ ರಿಸ್ಕು. ಅದರಲ್ಲೂ ಅವಸರಕ್ಕೆ ಸಿಕ್ಕಲ್ಲಿ ಸಾಲ ಪಡೆಯುವುದು ಇನ್ನೂ ಡೇಂರ‍್ರು. ಏಕೆಂದರೆ ನಿಮಗೆ ಸಾಲ ನೀಡುವ ಬ್ಯಾಂಕುಗಳಾಗಲಿ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಾಗಲಿ (Non Banking Finance Companies – NBFC) ನಿಮ್ಮ ಅನುಕೂಲಕ್ಕೆ ಪೂರಕವಾಗಿ ಸಾಲ ನೀಡುವುದಿಲ್ಲ ಎಂಬುವುದನ್ನು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕು.

ಸಾಲ ಪಡೆಯುವ ಎಲ್ಲರೂ ಬಡ್ಡಿದರದ (Home Loan Interest rate) ಮೇಲಷ್ಟೇ ಗಮನ ಕೇಂದ್ರೀಕರಿಸುತ್ತಾರೆ. ಆದರೆ, ಸಣ್ಣಕ್ಷರದಲ್ಲಿ ನಮೂದಿಸುವ ಷರತ್ತುಗಳು (Conditions), ಒಳಶುಲ್ಕಗಳನ್ನು (Home Loan internal charges) ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಗೃಹಸಾಲ ದೀರ್ಘಾವಧಿ ಸಾಲವಾದ್ದರಿಂದ ಸಾಲ ಪಡೆಯುವ ಮೊದಲೇ ಗಂಭೀರವಾಗಿ ಗಮನಿಸದಿದ್ದರೆ ಷರತ್ತುಗಳು, ಒಳಶುಲ್ಕಗಳು ಜೀವ ಹಿಂಡುವುದು ನಿಶ್ಚಿತ.

ಎಲ್ಲಿ ಗೃಹ ಸಾಲ ಪಡೆದರೆ ಉತ್ತಮ?

ಗೃಹ ಸಾಲ ಪಡೆಯಲು ಬ್ಯಾಂಕೇತರ ಸಂಸ್ಥೆಗಳಿಗಿಂತ ಬ್ಯಾಂಕುಗಳು ಉತ್ತಮ ಆಯ್ಕೆ ಎನ್ನಬಹುದು. ಏಕೆಂದರೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗಿಂತ ಬ್ಯಾಂಕುಗಳು ವಿಧಿಸುವ ಬಡ್ಡಿದರ ಕಡಿಮೆ. ಜೊತೆಗೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗಿಂತ ಬ್ಯಾಂಕುಗಳು ಹೆಚ್ಚು ಪಾರದರ್ಶಕವಾಗಿರುತ್ತವೆ.

ರೆಪೊ ದರವನ್ನು (Repo rate) ಮಾನದಂಡವನ್ನಾಗಿ ಮಾಡಿಕೊಂಡು ಬಹುತೇಕ ಬ್ಯಾಂಕುಗಳು ಬಡ್ಡಿದರವನ್ನು ನಿಗದಿಪಡಿಸುತ್ತವೆ. ಆದರೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪ್ರೈಮ್ ಲೆಂಡಿಂಗ್ ರೇಟ್ (Prime lending rate) ಆಧಾರದ ಮೇಲೆ ಬಡ್ಡಿದರ ನಿಗದಿಪಡಿಸುತ್ತವೆ. ಹೀಗಾಗಿ ಸಾಲ ಪಡೆಯಲು ಯಾವುದು ಉತ್ತಮ ಎಂಬುವುದನ್ನು ನೀವೇ ನಿರ್ಧರಿಸಬೇಕು.

How to get Secured Home Loan
ಗೃಹ ಸಾಲಕ್ಕೆ ಇನ್ಸುರೆನ್ಸ್ ಬೇಕಾ?

ಹೌದು, ವಿಮೆ ಎಂಬುವುದು ನಿಜಕ್ಕೂ ಆಪತ್ಭಾಂಧವ. ಗೃಹ ಸಾಲ ಪಡೆಯುವಾಗ ಗೃಹ (Home Loan Insurance) ಮತ್ತು ಜೀವ ವಿಮೆ (Life Insurance) ತುಂಬಾ ಮುಖ್ಯ. ಗೃಹ ವಿಮೆ ನೈಸರ್ಗಿಕ ವಿಕೋಪಗಳಿಂದ ಹಣಕಾಸಿನ ಭದ್ರತೆ ಒದಗಿಸಿದರೆ, ಜೀವವಿಮೆ ಪಡೆದ ಸಾಲದ ಮೊತ್ತಕ್ಕೆ ಗ್ಯಾರಂಟಿ ಒದಗಿಸುತ್ತದೆ. ಸಾಲ ಪಡೆದ ವ್ಯಕ್ತಿ ದುರಂತಕ್ಕೀಡಾದರೆ ಜೀವ ವಿಮೆಯಿಂದ ಬ್ಯಾಂಕ್ ತನ್ನ ಸಾಲದ ನಷ್ಟ ಭರಿಸಿಕೊಳ್ಳುತ್ತದೆ.

ಗಮನಿಸುವ ಅಂಶವೇನೆಂದರೆ, ನೀವು ಗೃಹ ಸಾಲ ಪಡೆದ ಸಂಸ್ಥೆಯಿಂದಲೇ Home Loan Protection Plan ಪಡೆಯಬೇಕು ಎಂಬ ಯಾವುದೇ ನಿಯಮವಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಆಗಲಿ ಅಥವಾ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (Insurance Regulatory and Development Authority of India – IRDAI) ಕೂಡ ಇಂತಹ ಯಾವುದೇ ನಿಯಮ ಮಾಡಿಲ್ಲ. ಎಲ್ಲಿಯಾದರೂ ಗೃಹ ಮತ್ತು ಜೀವ ವಿಮೆ ಪಡೆಯಬಹುದು.

ಗೃಹ ಸಾಲದ ವರ್ಗಾವಣೆ ಹೇಗೆ?

ಪಡೆದ ಗೃಹ ಸಾಲವನ್ನು ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕಿಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿದ್ದು; ಈ ಪ್ರಕ್ರಿಯೆಯನ್ನು ಹೋಮ್ ಲೋನ್ ಸ್ವಿಚ್ (Home Loan Switch) ಎನ್ನಲಾಗುತ್ತದೆ. ಈಗ ನೀವು ತೆರುತ್ತಿರುವ ಬಡ್ಡಿಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಬೇರೊಂದು ಬ್ಯಾಂಕ್ ಪ್ರತಿನಿಧಿಗಳು ಹೇಳಿದಾಗ ಈ ಬಗ್ಗೆ ಲೆಕ್ಕಾಚಾರ ಮಾಡಿ ಮುಂದುವರೆಯುವುದು ಉತ್ತಮ.

ಮೇಲುನೋಟಕ್ಕೆ ಗೃಹ ಸಾಲ ವರ್ಗಾವಣೆ ಉತ್ತಮವೇ ಹೌದಾದರೂ, ಎಲ್ಲ ಸಂದರ್ಭದಲ್ಲೂ ಇದು ಅನುಕೂಲಕರ ಆಗಿರುವುದಿಲ್ಲ. 10ರಿಂದ 15 ವರ್ಷಗಳ ಸಾಲದ ಅವಧಿ ಹೊಂದಿರುವವರು ಸಾಲದ ಬಡ್ಡಿದರವು ಶೇ 0.50ರಷ್ಟು ಕಡಿಮೆಯಾದಷ್ಟೇ ಹೋಮ್ ಲೋನ್ ಸ್ವಿಚ್ ಅನುಕೂಲಕರ. ಜೊತೆಗೆ ಹೋಮ್ ಲೋನ್ ಸ್ವಿಚ್ ಪ್ರಕ್ರಿಯೆಗೆ ಶುಲ್ಕಗಳೇನಿವೆ? ಸಾಲ ವರ್ಗಾವಣೆ ಬಳಿಕ ಹೊಸ ಬ್ಯಾಂಕ್ ಎಷ್ಟು ಅವಧಿಗೆ ಕಡಿಮೆ ಬಡ್ಡಿ ವಿಧಿಸಬಹುದು ಎಂಬುವುದನ್ನು ಗಣನೆಗೆ ತೆಗೆದುಕೊಳ್ಳಬೇಕು.

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon