Jeevajala Free Borewell scheme 2024 : ಸಣ್ಣ ಮತ್ತು ಅತಿ ಸಣ್ಣ ರೈತರ ನೀರಾವರಿ ವ್ಯವಸ್ಥೆಗಾಗಿ ‘ಜೀವಜಲ’ ಯೋಜನೆಯಲ್ಲಿ (Jeevajala scheme 2024) ಕೊಳವೆಬಾವಿ (Borewell) ಸಹಾಯಧನ ಹಾಗೂ ಸಾಲಸೌಲಭ್ಯ ಲಭ್ಯವಿದೆ. ಏನಿದು ‘ಜೀವಜಲ’ ಯೋಜನೆ? ಇದಕ್ಕೆ ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಸಣ್ಣ ಮತ್ತು ಅತಿ ಸಣ್ಣ ರೈತರ ನೀರಾವರಿ ವ್ಯವಸ್ಥೆಗಾಗಿ ‘ಜೀವಜಲ’ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು; ಈ ಯೋಜನೆಯ ವಿಶೇಷವೆಂದರೆ ಕೊಳವೆಬಾವಿ ಮತ್ತು ತೆರದ ಬಾವಿ ಎರಡಕ್ಕೂ ಇಲ್ಲಿ ಸಹಾಯಧನ ಹಾಗೂ ಸಾಲಸೌಲಭ್ಯ ಲಭ್ಯವಿದೆ. ಅಷ್ಟೇ ಅಲ್ಲ ಸಾಮೂಹಿಕ ನೀರಾವರಿ ಕೊಳವೆಬಾವಿ ಯೋಜನೆಗೂ ಇಲ್ಲಿ ಸಂಪೂರ್ಣ ಅನುದಾನ ಸಿಗಲಿದೆ.
2024ನೇ ಸಾಲಿನ ‘ಜೀವಜಲ’ ನೀರಾವರಿ ಯೋಜನೆಗೆ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಸಣ್ಣ ಮತ್ತು ಅತೀ ಸಣ್ಣ ರೈತರು ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಏನಿದು ಜೀವಜನ ಯೋಜನೆ?
‘ಗಂಗಾಕಲ್ಯಾಣ ಯೋಜನೆ’ಯಂತೆ ರಾಜ್ಯ ಸರಕಾರ ಇತರ ಜಾತಿ, ಸಮುದಾಯದ ರೈತರ ಹಿತಕ್ಕೆ ಪೂರವಾಗಿ ಆಯಾಯ ಜಾತಿ ಸಮುದಾಯದ ನಿಮಗಳದ ಮೂಲಕ ವಿವಿಧ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇವುಗಳಲ್ಲಿ ‘ಜೀವಜಲ’ ನೀರಾವರಿ ಯೋಜನೆಯೂ ಒಂದು.
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು; ಪ್ರವರ್ಗ 3ಬಿ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರ ಇದರ ಪ್ರಯೋಜನ ಪಡೆಯಬಹುದು.
ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?
ಈ ಯೋಜನೆಯ ಫಲಾನುಭವಿಗಳು ವೀರಶೈವ-ಲಿಂಗಾಯತ (ಪ್ರವರ್ಗ-3ಬಿ) ಸೇರಿದವರಾಗಿರಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಜತೆಗೆ ಆಧಾರ್ ಕಾರ್ಡ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
ಈ ಯೋಜನೆಯ ಪ್ರಯೋಜನ ಪಡೆಯಲು ಕುಟುಂಬದ ವಾರ್ಷಿಕ ಆದಾಯವು ಗ್ರಾಮಾಂತರ ಪ್ರದೇಶದವರಿಗೆ ರೂ. 98,000/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1,20,000/- ಗಳ ಮಿತಿಯೊಳಗಿರಬೇಕು.
ಸಹಾಯಧನ ಎಷ್ಟು ಸಿಗುತ್ತದೆ?
ಜೀವಜಲ ಯೋಜನೆಯಡಿ ಕೊಳವೆಬಾವಿ ಸೌಲಭ್ಯ ಪಡೆಯಲು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ರಾಜ್ಯದ ಇನ್ನುಳಿದ ಜಿಲ್ಲೆಯ ರೈತರಿಗೆ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆಬಾವಿ ಯೋಜನೆಗೆ ಘಟಕವೆಚ್ಚ 4.75 ಲಕ್ಷ ರೂಪಾಯಿಗಳಲ್ಲಿ 4.25 ಲಕ್ಷ ರೂಪಾಯಿ ಸಹಾಯಧನ (ಸಬ್ಸಿಡಿ) ಸಿಗುತ್ತದೆ.
ಉಳಿದ ಜಿಲ್ಲೆಗಳಿಗೆ ಘಟಕವೆಚ್ಚ 3.75 ಲಕ್ಷ ರೂಪಾಯಿಗಳಲ್ಲಿ 3.25 ಲಕ್ಷ ರೂಪಾಯಿ ಸಹಾಯಧನ (ಸಬ್ಸಿಡಿ) ಸಿಗುತ್ತದೆ. ಈ ಮೊತ್ತದಲ್ಲಿ ಬೋರ್‌ವೆಲ್ ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ 50,000 ರೂಪಾಯಿ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುತ್ತದೆ.
ಅರ್ಹ ಫಲಾನುಭವಿಗಳು ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ಕಚೇರಿಗಳ ವಿಳಾಸ ಹಾಗೂ ಸಂಪರ್ಕ ಸಂಖ್ಯೆಗೆ ಇಲ್ಲಿ ಒತ್ತಿ…
ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ? Personal Loans Schemes