NewsSchemes

17.09 ಲಕ್ಷ ರೈತರಿಗೆ ತಲಾ 3,000 ರೂಪಾಯಿ ಜೀವನೋಪಾಯ ನಷ್ಟ ಪರಿಹಾರ | ಈ ದಿನ ಹಣ ಜಮಾ Jeevanopaya Nasta Parihara

WhatsApp Group Join Now
Telegram Group Join Now

Jeevanopaya Nasta Parihara : ರಾಜ್ಯದ 240 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಅವುಗಳಲ್ಲಿ 196 ತೀವ್ರ ಬರ ಪೀಡಿತ ಎಂದು ವರ್ಗೀಕರಿಸಲಾಗಿದೆ. ದೌರ್ಭಾಗ್ಯವೆಂದರೆ ನಷ್ಟಕ್ಕೊಳಗಾದ ರೈತರ ಪೈಕಿ ಸಣ್ಣ ಮತ್ತು ಅತೀ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ಸರಕಾರವು ಈ ರೈತ ಜೀವನೋಪಾಯ ನಿರ್ವಹಣೆಗೆಂದು ತಲಾ 3,000 ರೂಪಾಯಿಯಂತೆ ಹೆಚ್ಚುವರಿ ಬೆಳೆ ನಷ್ಟ ಪರಹಾರ ನೀಡಲು ನಿರ್ಧರಿಸಿದೆ.

ವಾರದೊಳಗೇ ಹಣ ಜಮಾ

ಕೇಂದ್ರ ಸರಕಾರದಿಂದ ಎನ್‌ಡಿಆರ್‌ಎಫ್ ಪರಿಹಾರವಾಗಿ 3,454 ಕೋಟಿ ರೂಪಾಯಿ ರಾಜ್ಯಕ್ಕೆ ಬಂದಿತ್ತು. ಅದರಂತೆ 27.50 ಲಕ್ಷ ರೈತರಿಗೆ 2,451 ಕೋಟಿ ರೂಪಾಯಿ ಪರಿಹಾರವನ್ನು ಮೇ ತಿಂಗಳ ಮೊದಲ ವಾರದಲ್ಲೇ ವಿತರಿಸಲಾಗಿದೆ. ಎನ್‌ಡಿಆರ್‌ಎಫ್‌ನ ಉಳಿದ ಹಣ ಮತ್ತು ರಾಜ್ಯ ಸರಕಾರದಿಂದ 272 ಕೋಟಿ ರೂಪಾಯಿ ಸೇರಿಸಿ ಸಣ್ಣ, ಅತಿ ಸಣ್ಣ ರೈತರಿಗೆ ಜೀವನೋಪಾಯಕ್ಕೆ ನಷ್ಟ ಪರಿಹಾರ ನೀಡಲು ಉದ್ದೇಶಿಸಲಾಗಿದೆ.

ವಾರದೊಳಗೆ ಪರಿಹಾರ ಪಾವತಿಸಲು ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ ಸಚಿವರು ಕೃಷಿ ವಿಮೆ ಮೂಲಕವೂ ರೈತರಿಗೆ ಈ ಬಾರಿ ಅತಿ ಹೆಚ್ಚು ಅಂದರೆ 1,654 ಕೋಟಿ ರೂಪಾಯಿ ಪರಿಹಾರ ಸಿಕ್ಕಿದೆ. ಇನ್ನೂ 136 ಕೋಟಿ ರೂಪಾಯಿ ಬಾಕಿ ಇದೆ ಎಂದರು.

Livelihood loss compensation for farmers

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ 45,000 ಅತಿಥಿ ಶಿಕ್ಷಕರ ನೇಮಕಾತಿ : ಜಿಲ್ಲಾ, ತಾಲ್ಲೂಕುವಾರು ಖಾಲಿ ಹುದ್ದೆಗಳ ಲಿಸ್ಟ್ | ಸಂಪೂರ್ಣ ಮಾಹಿತಿ ಇಲ್ಲಿದೆ… Guest Teacher Recruitment 2024 Karnataka

17.09 ಲಕ್ಷ ಸಣ್ಣ ರೈತರಿಗೆ ಸಿಗಲಿದೆ ಪರಿಹಾರ

ರಾಜ್ಯಾದ್ಯಂತ ಒಟ್ಟು 17.09 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳಿಗೆ ಜೀವನೋಪಾಯ ನಷ್ಟ ಪರಿಹಾರವಾಗಿ ತಲಾ 3,000 ರೂಪಾಯಿ ನೀಡಲು ತೀರ್ಮಾನಿಸಲಾಗಿದೆ. ಬರಗಾರದ ಕಾರಣಕ್ಕೆ ನಷ್ಟಕ್ಕೆ ಸಿಲುಕಿರುವ ಮಳೆಯಾಶ್ರಿತ ರೈತರು ಹಾಗೂ ನಾಲೆಗಳ ಕೊನೆಯ ಭಾಗದಲ್ಲಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲಾಗುವುದು. ಇದರಿಂದ ಸುಮಾರು 7 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕಳೆದ ಮುಂಗಾರು ಮತ್ತು ಹಿಂಗಾರು ಎರಡೂ ಹಂಗಾಮಿನಲ್ಲಿ ಮಳೆ ಕೊರತೆಯಾದ್ದರಿಂದ ಈ ರೈತರ ಸ್ಥಿತಿ ಚಿಂತಾಜನವಾಗಿದೆ. ಇಂತಹ ರೈತ ಕುಟುಂಬಗಳಿಗೆ ಕೂಡಲೇ ತಲಾ 3 ಸಾವಿರ ರೂಪಾಯಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಎರಡರಿಂದಲೂ ರೈತರಿಗೆ ಹಣ ಪಾವತಿಸಲಾಗುವುದು ಮತ್ತು ರಾಜ್ಯ ಸರ್ಕಾರದ ಹಣವನ್ನು ಸಹ ಪಾವತಿಸಲಾಗುವುದು ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಸಾರಿಗೆ ಇಲಾಖೆ ಮೋಟಾರು ವೆಹಿಕಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : SSLC, ಡಿಪ್ಲೋಮಾ ಅಭ್ಯರ್ಥಿಗಳಿಗೆ ಅವಕಾಶ Karnataka Motor Vehicle Inspector Recruitment 2024

WhatsApp Group Join Now
Telegram Group Join Now

Related Posts

error: Content is protected !!