1200 ಸರ್ಕಾರಿ ನರ್ಸ್ ಹುದ್ದೆಗಳ ನೇಮಕಾತಿ | ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಭರ್ಜರಿ ನೇಮಕಾತಿ Karnataka Govt Nurse Recruitment 2024

Spread the love

Karnataka Govt Nurse Recruitment 2024 : ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 14,00 ಹುದ್ದೆಗಳ ಭರ್ತಿ ಪ್ರಕ್ರಿಯೆಯ ನಡುವೆ ಇದೀಗ ವೈದ್ಯಕೀಯ ಶಿಕ್ಷಣ ಇಲಾಖೆಯಡಿ (Karnataka Medical Education Department) ನರ್ಸ್ ಹಾಗೂ ವೈದ್ಯಕೀಯ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕರ ಮುಂದಾಗಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now

ವೈದ್ಯಕೀಯ ಪಿಜಿ, ಯುಜಿ, ನರ್ಸಿಂಗ್ ಪದವಿ ಪಾಸಾದವರಿಗೆ ಇದೊಂದು ಸುವರ್ಣಾವಕಾಶವಾಗಿದ್ದು; ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ನರ್ಸ್ ಹುದ್ದೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಗ್ರೂಪ್ ಎ ಹುದ್ದೆಗಳ ನೇಮಕಾತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority KEA) ಮೂಲಕ ನಡೆಸಲು ತಯಾರಿ ನಡೆದಿದೆ. ಇಷ್ಟರಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳು ಸಾಧ್ಯತೆ ಇದೆ.

ಇದನ್ನು ಓದಿ: ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ 14,000 ಹುದ್ದೆಗಳ ನೇಮಕಾತಿ : SSLC, PUC ಪಾಸಾದವರಿಗೂ ಅವಕಾಶ Health Department Recruitment 2024

ಯಾವ್ಯಾವ ಹುದ್ದೆಗಳು ಎಷ್ಟೆಷ್ಟು?
  • ಸಹಾಯಕ ಪ್ರಾಧ್ಯಾಪಕರು : 650 ಹುದ್ದೆಗಳು
  • ನರ್ಸ್ (ಶುಶ್ರೂಷಕರು) : 1,200 ಹುದ್ದೆಗಳು
  • ಒಟ್ಟು ಹುದ್ದೆಗಳು : 1,850
ನೇಮಕಾತಿ ಹೇಗೆ?

ಈ ಮೊದಲು ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಹುದ್ದೆಗಳನ್ನು ವೈದ್ಯಕೀಯ ಕಾಲೇಜು, ಸಂಸ್ಥೆಗಳ ಮುಖ್ಯಸ್ಥರ ಮೂಲಕ ನೇಮಕಾತಿ ನಡೆಸಲಾಗುತ್ತಿತ್ತು. ಈ ನೇಮಕಾತಿ ಸಂದರ್ಭದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವ್ಯಾಪಕ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೆಇಎ ಮೂಲಕ ನೇಮಕಾತಿಗೆ ಸಿದ್ಧತೆ ನಡೆದಿದೆ.

ಈ ಸಂಬ೦ಧ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆಗೆ ವಿಕಾಸಸೌಧದಲ್ಲಿ ಮಹತ್ವದ ಸಭೆ ನಡೆಸಿದ ಸಚಿವರು ಮುಂಬರುವ ಗ್ರೂಪ್ ‘ಎ’ ಹಾಗೂ ನರ್ಸ್’ಗಳ ನೇಮಕಾತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ನಡೆಸಬೇಕೆಂದು ಸೂಚನೆ ನೀಡಿದರು.

ಇದನ್ನು ಓದಿ: ರಾಷ್ಟ್ರೀಕೃತ ಬ್ಯಾಂಕುಗಳ 5,351 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ IBPS Recruitment 2024

ನೇಮಕಾತಿ ಬೈಲಾ ತಿದ್ದುಪಡಿ

ಹಾಗೆ ನೋಡಿದರೆ ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆಯೇ ನರ್ಸ್ಗಳನ್ನು ಕೆಇಎ ಮೂಲಕ ನೇಮಕ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಕಳುಹಿಸಿತ್ತು. ಆದರೆ ಸರಿಯಾದ ಸಿ ಅಂಡ್ ಆರ್ ನಿಯಮಗಳು (ಕೇಡರ್ ಅಂಡ್ ರಿಕ್ರೂಮೆಂಟ್ ರೂಲ್ಸ್) ರೋಸ್ಟರ್ ವ್ಯವಸ್ಥೆ ಇಲ್ಲದಿದ್ದಲ್ಲಿ ಪರೀಕ್ಷೆಯನ್ನು ನಡೆಸುವುದು ಕಷ್ಟ ಎಂದು ಕೆಇಎ ಉತ್ತರಿಸಿದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ಸಚಿವರ ಗಮನಕ್ಕೆ ತರಲಾಗಿದೆ.

ಈ ಕಾರಣಕ್ಕಾಗಿ ಇಲಾಖೆಯ ನೇಮಕಾತಿ ಬೈಲಾಗಳನ್ನು ತಿದ್ದುಪಡಿ ಮಾಡಲಾಗುವುದು ಎಂದು ಪಾಟೀಲ್ ಹೇಳಿದ್ದು; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ದಾದಿಯರ ನೇಮಕಾತಿಗೆ ಅನ್ವಯವಾಗುವ ಸಿ ಮತ್ತು ಆರ್ ನಿಯಮಗಳನ್ನು ಅನುಸರಿಸುವಂತೆ ಸಚಿವರು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಜಂಟಿ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

Karnataka Govt Nurse Recruitment 2024

ಇದನ್ನು ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ? Personal Loans Schemes

ನಿಯಮಾನುಸಾರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ

ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿ ರಾಜ್ಯಾದ್ಯಂತ 22 ವೈದ್ಯಕೀಯ ಕಾಲೇಜುಗಳು ಹಾಗೂ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಇಲ್ಲಿನ ಗ್ರೂಪ್ ‘ಎ’ ಹುದ್ದೆಗಳಾದ 650 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇದ್ದು; ಈ ಹುದ್ದೆಗಳನ್ನು ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಖಾಲಿ ಇರುವ ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಲು ಕೆಇಎಗೆ ಅಗತ್ಯ ಸಹಕಾರ ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಇದನ್ನು ಓದಿ: SSLC ಪಾಸಾದವರಿಗೆ ಕೇಂದ್ರ ಸರ್ಕಾರಿ ಹುದ್ದೆಗಳು | ಕೇಂದ್ರ ಸರ್ಕಾರಿ ವಿವಿಧ ಇಲಾಖೆ ಹುದ್ದೆಗಳ ಪಟ್ಟಿ ಇಲ್ಲಿದೆ… Central Govt Jobs for SSLC Passed

ನರ್ಸ್ ಹುದ್ದೆಗೆ ವಿದ್ಯಾರ್ಹತೆ ಮತ್ತು ಸಂಬಳದ ವಿವರ

ಸರ್ಕಾರಿ ನರ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ ನರ್ಸಿಂಗ್ ಅಥವಾ ಡಿಪ್ಲೊಮ ಇನ್ ನರ್ಸಿಂಗ್ ಪಾಸ್ ಮಾಡಿರಬೇಕು. ಇದರ ಜೊತೆಗೆ ಕರ್ನಾಟಕ ಮತ್ತು ಭಾರತದ ಸರ್ಕಾರದ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಪಡೆದಿರಬೇಕು.

ಸರ್ಕಾರಿ ನೇರ ನೇಮಕಾತಿಯ ನರ್ಸ್ ಹುದ್ದೆಗೆ ನಿಯೋಜನೆಗೊಳ್ಳುವವರಿಗೆ 31,100 ದಿಂದ 66,800 ರೂಪಾತಿ ವರೆಗೂ ಮಾಸಿಕ ವೇತನ ಇರುತ್ತದೆ. ನರ್ಸ್ ಹುದ್ದೆಗಳನ್ನು ನಿಗದಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ, ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದಲ್ಲಿ ಅಭ್ಯರ್ಥಿಗಳ ಸೇವಾನುಭವದ ಆಧಾರದ ಮೇಲೆ ಮಾಸಿಕ ವೇತನ ನಿಗದಿಪಡಿಸಲಾಗುತ್ತದೆ.

ಇದನ್ನು ಓದಿ: SSLC ಪಾಸಾದವರಿಗಾಗಿಯೇ ಇವೆ ರಾಜ್ಯ ಸರ್ಕಾರಿ ಈ ಹುದ್ದೆಗಳು : ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ… Karnataka State GOVT Jobs for SSLC Passed


Spread the love
WhatsApp Group Join Now
Telegram Group Join Now

Leave a Comment

error: Content is protected !!