NewsSchemes

ಗ್ಯಾರಂಟಿ ಸ್ಕೀಮ್ ಬಂದ್ ಆಗ್ತಾವಾ? | ಸಿಎಂ ಸಿದ್ದರಾಮಯ್ಯ ನೀಡಿದ ಸುಳಿವೇನು? | ಕಾಂಗ್ರೆಸ್ ಶಾಸಕರ ಪಟ್ಟು ಏನು? Karnataka Guarantee Scheme be Discontinued?

WhatsApp Group Join Now
Telegram Group Join Now

Karnataka Guarantee Scheme be Discontinued? : ಲೋಕಸಭೆ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳ (Guarantee Schemes) ಬಗ್ಗೆ ದಿನಕ್ಕೊಂದು ಊಹಾಪೋಹಗಳು ಹರಿದಾಡುತ್ತಿವೆ. ಗ್ಯಾರಂಟಿ ಯೋಜನೆಗಳ ಬಲದ ಮೇಲೆಯೇ ಅಧಿಕಾರ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಲೋಕಸಭಾ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಲಾಭವಾಗಿಲ್ಲ ಎಂಬ ಅಸಮಾಧಾನ ಕೈ ಶಾಸಕರಲ್ಲಿ ಹೊಗೆಯಾಡುತ್ತಿದೆ.

ರಾಜ್ಯ ಸರಕಾರದ (Government of Karnataka) ಗ್ಯಾರಂಟಿ ಯೋಜನೆಗಳಾದ ಉಚಿತ ವಿದ್ಯುತ್ ‘ಗೃಹಜ್ಯೋತಿ’, ಮಹಿಳೆಯರಿಗೆ ಮಾಸಿಕ 2000 ರೂಪಾಯಿ ಪ್ರೋತ್ಸಾಹಧನದ ‘ಗೃಹಲಕ್ಷ್ಮಿ’ ಯೋಜನೆ, ಪ್ರತಿ ತಿಂಗಳು ಉಚಿತ ಅಕ್ಕಿ ವಿತರಿಸುವ ‘ಅನ್ನಭಾಗ್ಯ’ ಯೋಜನೆ, ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಹಾಗೂ ಪದವೀಧರರಿಗೆ ಮಾಶಾಸನ ನೀಡುವ ‘ಯುವನಿಧಿ’ ಯೋಜನೆಗಳು ಬಂದ್ ಆಗುವ ಲಕ್ಷಣಗಳಿವೆ ಎಂದು ವಿಪಕ್ಷ ನಾಯಕರು ಗುಮಾನಿ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ 45,000 ಅತಿಥಿ ಶಿಕ್ಷಕರ ನೇಮಕಾತಿ : ಜಿಲ್ಲಾ, ತಾಲ್ಲೂಕುವಾರು ಖಾಲಿ ಹುದ್ದೆಗಳ ಲಿಸ್ಟ್ | ಸಂಪೂರ್ಣ ಮಾಹಿತಿ ಇಲ್ಲಿದೆ… Guest Teacher Recruitment 2024 Karnataka

ನಿರೀಕ್ಷೆ ಹುಸಿಯಾಗಿಸಿದ ಗ್ಯಾರಂಟಿ ಯೋಜನೆ

ಹೌದು, ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಕರ್ನಾಟಕದಲ್ಲಿ 15ರಿಂದ 20 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿತ್ತು. ಆದರೆ, ಬಂದದ್ದು ಮಾತ್ರ ಕೇವಲ 9 ಸ್ಥಾನಗಳು. ಆಡಳಿತರೂಢ ಪಕ್ಷ, ಅದರಲ್ಲೂ ಭರಪೂರ ಗ್ಯಾರಂಟಿ ಯೋಜನೆಗಳನ್ನು ನೀಡಿದ ಸರಕಾರಕ್ಕೆ ಇದು ಸಹಜವಾಗಿಯೇ ಮುಖಭಂಗವಾಗಿದೆ.

ಒಟ್ಟಾರೆ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಡ ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಭಾರೀ ಸಮಾಧಾನಕರ ಫಲಿತಾಂಶ ತೆಗೆದಿದೆ. ತತ್ಪರಿಣಾಮ ಆಡಳಿತರೂಢ ಬಿಜೆಪಿ ಬೆಚ್ಚಿ ಬೀಳುವಂತೆ ಮಾಡಿದೆ. ಆದರೆ ರಾಜ್ಯದಲ್ಲಿ ಈ ನೀರಿಕ್ಷೆ ಹುಸಿಯಾಗಿದ್ದು ಶಾಸಕರಲ್ಲಿ ಅಸಮಾಧಾನ ಹುಟ್ಟು ಹಾಕಿದೆ.

Karnataka Guarantee Schemes

ಇದನ್ನೂ ಓದಿ: ಅಂಚೆ ಕಚೇರಿಯಲ್ಲಿ ಕೇವಲ 399ಕ್ಕೆ ಈ ಕಟ್ಟಿದರೆ ಸಿಗಲಿದೆ 10 ಲಕ್ಷ ಆರ್ಥಿಕ ನೆರವು Post Office Accident Insurance Scheme

ಶಾಸಕರ ಅಸಮಾಧಾನಕ್ಕೆ ಕಾರಣವೇನು?

ಲೋಕಸಭೆ ಫಲಿತಾಂಶ ಪ್ರಕಟವಾದ ನಂತರ ಗ್ಯಾರಂಟಿ ಯೋಜನೆಗಳ ಕುರಿತಂತೆ ಕಾಂಗ್ರೆಸ್ ಪಕ್ಷದಲ್ಲಿ ಗಂಭೀರ ಚರ್ಚೆಗಳು ಶುರುವಾಗಿವೆ. ಹಲವು ಹಿರಿಯ ಶಾಶಕರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಿ ಗ್ಯಾರಂಟಿ ಯೋಜನೆಗಳ ಕುರಿತಂತೆ ಪುನರ್ ಪರಿಶೀಲನೆ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಸರ್ಕಾರ ಗ್ಯಾರಂಟಿ ಯೋಜನೆಗಾಗಿ ರಾಜ್ಯದ ಎಲ್ಲ ಆರ್ಥಿಕ ಸಂಪನ್ಮೂಲಗಳನ್ನು ವ್ಯಯಿಸಲಾಗುತ್ತಿದೆ. ಆದರೆ, ಈ ಸ್ಕೀಮುಗಳು ಜನರ ಮನಸ್ಸು ಗೆದ್ದಿಲ್ಲ. ಈ ಯೋಜನೆಗಳ ಅನುಷ್ಟಾನಕ್ಕಾಗಿ ಅಭಿವೃದ್ಧಿ ಹತೋಟಿಯಲ್ಲಿ ಇಡಲಾಗಿದೆ, ಶಾಸಕರ ಅನುದಾನಕ್ಕೆ ಕತ್ತರಿ ಹಾಕಲಾಗಿದೆ. ಹೀಗಾಗಿ ರಾಜ್ಯದಲ್ಲಿ ಜಾರಿ ಮಾಡಲಾಗಿರುವ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ ನಡೆಸಬೇಕು ಅನ್ನೋದು ಬಹುತೇಕ ಶಾಸಕರ ಪಟ್ಟಾಗಿದೆ.

ಇದನ್ನೂ ಓದಿ: ಸಾರಿಗೆ ಇಲಾಖೆ ಮೋಟಾರು ವೆಹಿಕಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : SSLC, ಡಿಪ್ಲೋಮಾ ಅಭ್ಯರ್ಥಿಗಳಿಗೆ ಅವಕಾಶ Karnataka Motor Vehicle Inspector Recruitment 2024

ಸಿಎಂ ಸಿದ್ದರಾಮಯ ನೀಡಿದ ಸುಳಿವೇನು?

ಚುನಾವಣಾ ಫಲಿತಾಂಶದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ. ಕೇವಲ 9 ಸ್ಥಾನಗಳಲ್ಲಿ ಗೆಲುವು ಸಾಧಿಸಲಷ್ಟೇ ನಮಗೆ ಸಾಧ್ಯವಾಗಿದೆ. ಒಂದು ಸ್ಥಾನದಿಂದ 9 ಸ್ಥಾನ ಗೆಲ್ಲುವ ಮೂಲಕ ಪಕ್ಷ ಉತ್ತಮ ಸಾಧನೆಯನ್ನೇ ಮಾಡಿದೆ. ಅಲ್ಲದೆ, 2019ಕ್ಕಿಂತ ಈ ಬಾರಿ ಶೇ.14ರಷ್ಟು ಮತ ಗಳಿಕೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಆದರೆ, ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವ ಬಗ್ಗೆ ಸಿಎಂ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ಶಾಸಕರು ಗ್ಯಾರಂಟಿ ಯೋಜನೆಗಳ ಕುರಿತಂತೆ ಚರ್ಚಿಸಿದಾಗ ಅದನ್ನು ನಿಲ್ಲುಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಇನ್ನೊಂದಷ್ಟು ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ರೀತಿಯ ಕುತ್ತಿಲ್ಲ ಎನ್ನಬಹುದು!

ಇದನ್ನೂ ಓದಿ: ಸರಕಾರಿ ನೌಕರರ ಸಂಬಳ ಹೆಚ್ಚಳಕ್ಕೆ ಸಿದ್ಧತೆ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಸರಕಾರದ ಗ್ರೀನ್ ಸಿಗ್ನಲ್ Increase in salary of government employees

WhatsApp Group Join Now
Telegram Group Join Now

Related Posts

error: Content is protected !!