JobsNews

ಸಾರಿಗೆ ಇಲಾಖೆ ಮೋಟಾರು ವೆಹಿಕಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : SSLC, ಡಿಪ್ಲೋಮಾ ಅಭ್ಯರ್ಥಿಗಳಿಗೆ ಅವಕಾಶ Karnataka Motor Vehicle Inspector Recruitment 2024

WhatsApp Group Join Now
Telegram Group Join Now

Karnataka Motor Vehicle Inspector Recruitment 2024 : ಕೊನೆಗೂ ಕರ್ನಾಟಕ ಸಾರಿಗೆ ಇಲಾಖೆಯ ಗ್ರೂಪ್ ‘ಸಿ’ ವೃಂದದ ಮೋಟಾರು ವಾಹನ ನಿರೀಕ್ಷಕ (Motor Vehicle Inspector) ಹುದ್ದೆಗಳ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಕಳೆದ ಮಾರ್ಚ್ 03, 2024ರಂದು ವೃಂದವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದ ಕರ್ನಾಟಕ ಲೋಕಸೇವಾ ಆಯೋಗವು (KPSC) ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಎರಡು ಬಾರಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.

ಅಧಿಸೂಚನೆಯಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 22-04-2024 ಮತ್ತು ಕೊನೆಯ ದಿನಾಂಕ : 21-05-2024 ಎಂದು ನಿಗದಿಪಡಿಸಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಸದರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ಕ್ರಮವಾಗಿ 22-04-2024 ಹಾಗೂ 17-05-20240 ಮುಂದೂಡಲಾಗಿತ್ತು.

ಇದನ್ನೂ ಓದಿ: 2024ನೇ ಸಾಲಿನ ಮುಂಗಾರು ಬೆಳೆವಿಮೆ ಅರ್ಜಿ | ಜಿಲ್ಲೆ, ಬೆಳೆವಾರು ಕೊನೆಯ ದಿನಾಂಕಗಳ ಪಟ್ಟಿ ಇಲ್ಲಿದೆ… Kharif Crop Insurance 2024-25 PMFBY Scheme

ಅರ್ಜಿ ಸಲ್ಲಿಕೆ ಮೂಂದೂಡಿಕೆ ಕಾರಣವೇನು?

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಾಹನ ಚಾಲನಾ ಪರವಾನಿಗೆಗೆ (ಡಿಎಲ್) ಸಂಬ೦ಧಿಸಿದ೦ತೆ ಅರ್ಜಿಯಲ್ಲಿ ಡಿಎಲ್ ಸಂಖ್ಯೆಯನ್ನು ನಮೂದಿಸಿದಾಗ ಡಿಎಲ್’ನ ಸಂಪೂರ್ಣ ಮಾಹಿತಿಯು Application Programming Interface (API) ತಂತ್ರಾ೦ಶದ ಮೂಲಕ ಅರ್ಜಿಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗುತಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಈ ಕಾರ್ಯವು ವಿಳಂಬವಾದ್ದರಿ೦ದ ಅರ್ಜಿ ಸಲ್ಲಿಸುವ ಕಾಲಮಿತಿಯನ್ನು ಮುಂದೂಡಲಾಗಿತ್ತು.

ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ. ಕೆ. ರಾಕೇಶ್‌ಕುಮಾರ್ ಅವರು ನಿನ್ನೆ ದಿನಾಂಕ 30-05-2024ರಂದು ಪ್ರಕಟಣೆ ಹೊರಡಿಸಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಕಾಲಮಿತಿಯನ್ನು ಈ ಕೆಳಗಿನಂತೆ ಮರು ನಿಗದಿಪಡಿಸಲಾಗಿದೆ.

  • ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 30-05-2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2024
  • ಶುಲ್ಕ ಪಾವತಿ ಕೊನೆಯ ದಿನಾಂಕ: 30-06-2024
ಪತ್ರಿಕಾ ಪ್ರಕಟಣೆ

ಇದನ್ನೂ ಓದಿ: ನಿಮ್ಮ ಜಮೀನು ಒತ್ತುವರಿಯಾದರೆ ತಗಾದೆ ಇಲ್ಲದೇ ಹದ್ದುಬಸ್ತು ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ತಜ್ಞರ ಸರಳ ಸಲಹೆ… Haddubastu land survey

ವಿದ್ಯಾರ್ಹತೆ ಏನು?

ಆರ್‌ಪಿಸಿ 70 ಹುದ್ದೆಗಳು ಹಾಗೂ ಹೈ.ಕ 06 ಹುದ್ದೆಗಳು ಸೇರಿ ಒಟ್ಟು 76 ‘ಸಿ’ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಜೊತೆಗೆ ಆಟೋಮೊಬೈಲ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿ೦ಗ್ ವಿಭಾಗದಲ್ಲಿ ಡಿಪ್ಲೋಮಾ ಪದವಿ ಹೊಂದಿರಬೇಕು.

ಸಂಬಳ ಹಾಗೂ ವಯೋಮಿತಿ ವಿವರ

ಸಾರಿಗೆ ಇಲಾಖೆ ವೆಹಿಕಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿಯನ್ನು ವರ್ಗಗಳಿಗೆ ಅನುಗುಣವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, 2ಎ, 2ಬಿ, 3ಎ, 3ಬಿ ಪ್ರವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪ.ಜಾ / ಪ.ಪಂ / ಪ್ರವರ್ಗ 1 ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.

ವೆಹಿಕಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ 33,450 ರೂಪಾಯಿ ಯಿಂದ 62,600 ರೂಪಾಯಿ ವರೆಗೆ ಮಾಸಿಕ ವೇತನ ಇರಲಿದೆ. ಜೊತೆಗೆ ಎಲ್ಲ ರೀತಿ ಸರಿಕಾರಿ ಸೌಲವತ್ತುಗಳು ಸಿಗಲಿವೆ.

KPSC MVI Recruitment 2024

ಇದನ್ನೂ ಓದಿ: ಬ್ಯಾಂಕುಗಳಿಂದ ಕಡಿಮೆ ಬಡ್ಡಿ ಸಾಲ ಬೇಕೆ? ಇಲ್ಲಿದೆ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ How to Check CIBIL Score?

ಅರ್ಜಿ ಶುಲ್ಕದ ವಿವರ

ಸಾರಿಗೆ ಇಲಾಖೆ ವೆಹಿಕಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವರ್ಗವಾರು ಬೇರೆ ಬೇರೆ ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಈ ಪೈಕಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂಪಾಯಿ, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 300 ರೂಪಾಯಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂಪಾಯಿ ನಿಗದಿಪಡಿಸಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಪ್ರವರ್ಗ 1 ಹಾಗೂ ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಈ ವರ್ಗದ ಅಭ್ಯರ್ಥಿಗಳು ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು

  • ಅರ್ಜಿ ಸಲ್ಲಿಸುವ ಲಿಂಕ್ : Apply Now
  • ಅಧಿಕೃತ ಅಧಿಸೂಚನೆ (RPC) : Download
  • ಅಧಿಕೃತ ಅಧಿಸೂಚನೆ (HK) : Download

ಇದನ್ನೂ ಓದಿ: Drought relief technical issues : ನಿಮಗಿನ್ನೂ ಬರ ಪರಿಹಾರ ಬಂದಿಲ್ಲವೇ? ಹಣ ಪಡೆಯಲು ಈಗಲೇ ಈ ಕೆಲಸ ಮಾಡಿ | ಸರಕಾರದ ಸೂಚನೆ

WhatsApp Group Join Now
Telegram Group Join Now

Related Posts

error: Content is protected !!