AgricultureSchemes

2024ನೇ ಸಾಲಿನ ಮುಂಗಾರು ಬೆಳೆವಿಮೆ ಅರ್ಜಿ | ಜಿಲ್ಲೆ, ಬೆಳೆವಾರು ಕೊನೆಯ ದಿನಾಂಕಗಳ ಪಟ್ಟಿ ಇಲ್ಲಿದೆ… Kharif Crop Insurance 2024-25 PMFBY Scheme

WhatsApp Group Join Now
Telegram Group Join Now

Kharif Crop Insurance 2024-25 PMFBY Scheme : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈ ವರ್ಷದ ಮುಂಗಾರು ಬೆಳೆಗಳ ವಿಮಾ ನೋಂದಣಿಗೆ ಕೊನೆಯ ದಿನಾಂಕಗಳ ಜಿಲ್ಲಾವಾರು ಪಟ್ಟಿ ಬಿಡುಗಡೆಯಾಗಿದೆ. ರೈತರು ಬೆಳೆವಾರು ನಿಗದಿಪಡಿಸಿದ ವಿಮಾ ಮೊತ್ತದ ಶೇ.2ರಷ್ಟು (ತೋಟಗಾರಿಕೆ ಬೆಳೆಗಳಿಗೆ ಶೇ.5ರಷ್ಟು) ಮೊತ್ತವನ್ನು ಪಾವತಿಸಿ ನೊಂದಣಿ ಮಾಡಿಕೊಳ್ಳಬಹುದು.

ಫಸಲ್ ಬೀಮಾ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದರೆ ಪ್ರತಿ ಹೆಕ್ಟೇರ್‌ಗೆ 29,000 ರೂಪಾಯಿ ಯಿಂದ 86,000 ರೂಪಾಯಿ ವರೆಗೂ ಆಯಾ ಬೆಳೆಗೆ ತಕ್ಕಂತೆ ಬೆಳೆನಷ್ಟ ಪರಿಹಾರ ಪಡೆದುಕೊಳ್ಳಬಹುದು. ತೋಟಗಾರಿಕೆ ಬೆಳೆಗಳಿಗೆ ಇನ್ನೂ ಹೆಚ್ಚಿನ ಬೆಳೆಹಾನಿ ವಿಮಾ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: RTC aadhar card link : ಜಮೀನು ಪಹಣಿಗೆ (RTC) ಮೊಬೈಲ್‌ನಲ್ಲೇ ಆಧಾರ್ ಲಿಂಕ್ ಮಾಡಿ | ಇದರಿಂದ ರೈತರಿಗೆ ಸಿಗಲಿದೆ ಹಲವು ಪ್ರಯೋಜನ

ಯಾವೆಲ್ಲ ನಷ್ಟಕ್ಕೆ ಪರಿಹಾರ ಸಿಗಲಿದೆ?

ಫಸಲ್ ಬೀಮಾ ಯೋಜನೆಯಡಿ 2024-25ನೇ ಸಾಲಿನ ಬೆಳೆಗಳಿಗೆ ಬಿತ್ತನೆಯಿಂದ ಕಟಾವಿನ ಹಂತದ ವರೆಗೆ ಈ ವಿಮಾ ರಕ್ಷಣೆ ಇರುತ್ತದೆ. ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ, ಮಳೆ ಅಭಾವದಿಂದ ಬಿತ್ತನೆ, ನಾಟಿ ವಿಫಲಗೊಂಡಲ್ಲಿ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸಲಾಗುತ್ತದೆ.

ಬರ, ಶುಷ್ಕ ಪರಿಸ್ಥಿತಿ, ನೆರೆ, ಪ್ರವಾಹಗಳಿಂದ ಬೆಳೆ ಮುಳಗಡೆ, ಗುಡುಗು ಮಿಂಚುಗಳಿ೦ದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸುವುದು ಹಾಗೂ ಕಟಾವಿನ ನಂತರ ಬೆಳೆಯನ್ನು 14 ದಿನಗಳ ವರೆಗೆ ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೂ ಕೂಡ ನಷ್ಟ ಪರಿಹಾರ ಒದಗಿಸಲಾಗುತ್ತದೆ.

ಇದನ್ನೂ ಓದಿ: ಜಮೀನು ಪಹಣಿ (ಉತಾರ) ಪತ್ರಿಕೆಯನ್ನು ನಿಮ್ಮ ಮೊಬೈಲ್‌ನಲ್ಲೇ ಪಡೆಯಿರಿ Pahani RTC Land Records

ಕೊನೆಯ ದಿನಾಂಕಗಳ ಪಟ್ಟಿ

2024-25ನೇ ಸಾಲಿಗೆ ಮುಂಗಾರು ಹಂಗಾಮಿಗೆ ಬೆಳೆ ವಿಮೆ ದಿನಾಂಕಗಳ ಜಿಲ್ಲಾವಾರು ಪಟ್ಟಿ ಬಿಡುಗಡೆಯಾಗಿದ್ದು; ನೋಂದಣಿಗೆ ಕೆಲವು ಬೆಳೆಗಳಿಗೆ 34 ದಿನ, ಇನ್ನೂ ಕೆಲವು ಬೆಳೆಗಳಿಗೆ 80ಕ್ಕಿಂತಲೂ ಹೆಚ್ಚು ದಿನಗಳು ಬಾಕಿ ಇವೆ. ಈ ದಿನಾಂಕದೊಳಗೆ ರೈತರು ಬೆಳೆ ವಿಮೆ ಮಾಡಿಸಿ ವಿಮಾ ಸೌಲಭ್ಯ ಪಡೆದುಕೊಳ್ಳಲು ಕೋರಲಾಗಿದೆ.

ಜಿಲ್ಲೆ ಹಾಗೂ ಬೆಳೆವಾರು ಕೊನೆಯ ದಿನಾಂಕಗಳ ಪಟ್ಟಿಯನ್ನು ರೈತರು ಸರಕಾರದ ‘ಸಂರಕ್ಷಣೆ’ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ತಮ್ಮ ಮೊಬೈಲ್’ನಲ್ಲಿಯೇ ನೋಡಿಕೊಂಡು ಬೆಳೆ ವಿಮಾ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಜಿಲ್ಲೆ ಮತ್ತು ಬೆಳೆವಾರು ಕೊನೆಯ ದಿನಾಂಕಗಳ ಪಟ್ಟಿಯನ್ನು ನಾವು ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಬಳಸಿ ನೋಡಬಹುದಾಗಿದೆ.

ಇದನ್ನೂ ಓದಿ: ರೈತರು ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿಸಲು 3 ಲಕ್ಷ ರೂಪಾಯಿ ಸಹಾಯಧನ | ಹೀಗೆ ಅರ್ಜಿ ಸಲ್ಲಿಸಿ… Agricultural Mechanization Scheme

ಮೊದಲಿಗೆ Samrakshane (ಸಂರಕ್ಷಣೆ) ಜಾಲತಾಣದ ಮುಖಪುಟ ತೆರೆದುಕೊಳ್ಳುತ್ತದೆ. ಅಲ್ಲಿ ವರ್ಷದ ಆಯ್ಕೆ / Select Insurance Year : 2024-2025 ಅನ್ನು ಆಯ್ಕೆ ಮಾಡಿ, ಋತು ಆಯ್ಕೆ / Select Insurance Season : Kharif ಅನ್ನು ಆಯ್ಕೆ ಮಾಡಿ ಮುಂದೆ /Go ಒತ್ತಬೇಕು.


ಆಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ Farmers ಕಾಲಂನಲ್ಲಿ ಕೆಳಗಡೆ ಇರುವ >>View Cut off Dates ಮೇಲೆ ಒತ್ತಿದರೆ View Cut off Dates ಪುಟ ತೆರೆದುಕೊಳ್ಳುತ್ತದೆ.


ಅದರಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿದರೆ ಬೆಳೆವಾರು ಬೆಳೆ ವಿಮೆ ನೋಂದಣಿ ಆರಂಭಿಕ ದಿನಾಂಕ, ಕೊನೆಯ ದಿನಾಂಕ ಹಾಗೂ ಬಾಕಿ ಉಳಿದಿರುವ ದಿನಗಳ ವಿವರ ಈ ಕೆಳಗಿನಂತೆ ಸಿಗುತ್ತದೆ.


ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಅಧಿಕಾರಿಗಳನ್ನು ಭೇಟಿ ಆಗಬಹುದು. ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಪಡೆದು ಬೆಳೆ ವಿಮಾ ಕುರಿತ ಮಾಹಿತಿ ಪಡೆಯಲು 1800180 1551 ಉಚಿತ ಸಹಾಯವಾಣಿ ನಂಬರಿಗೆ ಕಾಲ್ ಮಾಡಿ ತಿಳಿದುಕೊಳ್ಳಬಹುದಾಗಿದೆ.

ಜಿಲ್ಲೆ ಮತ್ತು ಬೆಳೆವಾರು ಕೊನೆಯ ದಿನಾಂಕಗಳ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: Drought relief technical issues : ನಿಮಗಿನ್ನೂ ಬರ ಪರಿಹಾರ ಬಂದಿಲ್ಲವೇ? ಹಣ ಪಡೆಯಲು ಈಗಲೇ ಈ ಕೆಲಸ ಮಾಡಿ | ಸರಕಾರದ ಸೂಚನೆ

WhatsApp Group Join Now
Telegram Group Join Now

Related Posts

error: Content is protected !!