ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಿತದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರಿಗೂ ಅವಕಾಶ KSSFCL Recruitment 2024

Spread the love

KSSFCL Recruitment 2024 : ಶಾಸನಬದ್ಧ ಸಹಕಾರಿ ಸಂಸ್ಥೆ ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತವು (Karnataka State Souharda Federal Co-operative Ltd.) ಕಚೇರಿ ಸಹಾಯಕರು, ಕಿರಿಯ ಸಹಾಯಕರು, ಉಪಸಿಬ್ಬಂದಿ ಕಮ್ ವಾಹನ ಚಾಲಕ, ಟೈಪಿಸ್ಟ್ ಕಮ್ ಸ್ಟೆನೊ ಸೇರಿ 09 ಪದನಾಮದ ಒಟ್ಟು 39 ವಿವಿಧ ಹುದ್ದೆಗಳ ಭರ್ತಿಗೆ ಪರಿಷ್ಕೃತ ಅಧಿಸೂಚನೆ (Revised Notification) ಬಿಡುಗಡೆ ಮಾಡಿದೆ.

WhatsApp Group Join Now
Telegram Group Join Now

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಅವಕಾಶವಿದ್ದು; ಈ ಹುದ್ದೆಗಳ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಸಲ್ಲಿಕೆಯ ವಿವರಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಹುದ್ದೆಗಳ ವಿವರ
  • ಸನ್ನದು ಲೆಕ್ಕಪರಿಶೋಧಕರು (Charted Accountant)
  • ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ)
  • ಮಾನವ ಸಂಪನ್ಮೂಲ ಅಧಿಕಾರಿ (ಅಧಿಕಾರಿ ಶ್ರೇಣಿ)
  • ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ)
  • ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ)
  • ಸಹಾಯಕರು
  • ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ)
  • ಕಿರಿಯ ಸಹಾಯಕರು
  • ಉಪಸಿಬ್ಬಂದಿ ಕಮ್ ವಾಹನ ಚಾಲಕ

ಇದನ್ನೂ ಓದಿ: 1ನೇ ತರಗತಿಯಿಂದ PUC, ಪದವಿ ವಿದ್ಯಾರ್ಥಿಗಳ ವರೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | 75,000 ವರೆಗೂ ಆರ್ಥಿಕ ನೆರವು HDFC Bank Parivartan ECSS Scholarship 2024

ಸನ್ನದು ಲೆಕ್ಕಪರಿಶೋಧಕರು (Charted Accountant)
ಹುದ್ದೆಗಳ ಸಂಖ್ಯೆ : 01
ವಿದ್ಯಾರ್ಹತೆ : ಸಿಎ, ಸಿಎಸ್
ಗರಿಷ್ಠ ವಯೋಮಿತಿ : 35 ವರ್ಷ
ವೇತನ : 1ನೇ ವರ್ಷ ₹60,000, 2ನೇ ವರ್ಷ ₹70,000

ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ)
ಹುದ್ದೆಗಳ ಸಂಖ್ಯೆ : 02
ವಿದ್ಯಾರ್ಹತೆ : ಕಾನೂನು ಪದವಿ, ಕಂಪ್ಯೂಟರ್ ಪರಿಣಿತಿ
ಗರಿಷ್ಠ ವಯೋಮಿತಿ : 35 ವರ್ಷ
ವೇತನ : 1ನೇ ವರ್ಷ ₹35,000, 2ನೇ ವರ್ಷ ₹38,000

ಇದನ್ನೂ ಓದಿ: ಅಂಗನವಾಡಿ 1,112 ಹುದ್ದೆಗಳಿಗೆ ಮಹಿಳೆಯರಿಂದ ಅರ್ಜಿ ಆಹ್ವಾನ | SSLC, PUC ಪಾಸಾಗಿದ್ದರೆ ಅರ್ಜಿ ಹಾಕಿ Karnataka Anganwadi Recruitment 2024

ಮಾನವ ಸಂಪನ್ಮೂಲ ಅಧಿಕಾರಿ (ಅಧಿಕಾರಿ ಶ್ರೇಣಿ)
ಹುದ್ದೆಗಳ ಸಂಖ್ಯೆ : 01
ವಿದ್ಯಾರ್ಹತೆ : ಎಂಬಿಎ, ಹೆಚ್.ಆರ್ ಪದವಿ
ಗರಿಷ್ಠ ವಯೋಮಿತಿ : 35 ವರ್ಷ
ವೇತನ : 1ನೇ ವರ್ಷ ₹35,000, 2ನೇ ವರ್ಷ ₹38,000

ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ)
ಹುದ್ದೆಗಳ ಸಂಖ್ಯೆ : 01
ವಿದ್ಯಾರ್ಹತೆ : ಎಂಎ ಕನ್ನಡ ಅಥವಾ MSW ಪದವಿ
ಗರಿಷ್ಠ ವಯೋಮಿತಿ : 35 ವರ್ಷ
ವೇತನ : 1ನೇ ವರ್ಷ ₹35,000, 2ನೇ ವರ್ಷ ₹38,000

ಇದನ್ನೂ ಓದಿ: ನರೇಗಾ ಯೋಜನೆ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ | ಜಿಲ್ಲಾ ಪಂಚಾಯತಿ ನೇರ ನೇಮಕಾತಿ MGNREGA Technical Assistant Recruitment 2024

KSSFCL Recruitment 2024

ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ)
ಹುದ್ದೆಗಳ ಸಂಖ್ಯೆ : 11
ವಿದ್ಯಾರ್ಹತೆ : ಯಾವುದೇ ಪದವಿ ಪಾಸ್
ಗರಿಷ್ಠ ವಯೋಮಿತಿ : 30 ವರ್ಷ
ವೇತನ : 1ನೇ ವರ್ಷ ₹28,000, 2ನೇ ವರ್ಷ ₹30,000

ಸಹಾಯಕರು
ಹುದ್ದೆಗಳ ಸಂಖ್ಯೆ : 08
ವಿದ್ಯಾರ್ಹತೆ : ಬಿಕಾಂ, ಬಿಬಿಎ ಪಾಸ್
ಗರಿಷ್ಠ ವಯೋಮಿತಿ : 30 ವರ್ಷ
ವೇತನ : 1ನೇ ವರ್ಷ ₹20,000, 2ನೇ ವರ್ಷ ₹22,000

ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ… Google Pay loan upto 8 lakh

ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ)
ಹುದ್ದೆಗಳ ಸಂಖ್ಯೆ : 02
ವಿದ್ಯಾರ್ಹತೆ : ಯಾವುದೇ ಪದವಿ ಪಾಸ್. ಜೊತೆಗೆ ಬೆಳರಚ್ಚು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರೌಢದರ್ಜೆಯಲ್ಲಿ ಪಾಸಾಗಿರಬೇಕು.
ಗರಿಷ್ಠ ವಯೋಮಿತಿ : 30 ವರ್ಷ
ವೇತನ : 1ನೇ ವರ್ಷ ₹20,000, 2ನೇ ವರ್ಷ ₹22,000

ಕಿರಿಯ ಸಹಾಯಕರು
ಹುದ್ದೆಗಳ ಸಂಖ್ಯೆ : 11
ವಿದ್ಯಾರ್ಹತೆ : ಪಿಯುಸಿ ತೇರ್ಗಡೆ, ಜತೆಗೆ ಕಂಪ್ಯೂಟರ್ ಪರಿಣತಿ
ಗರಿಷ್ಠ ವಯೋಮಿತಿ : 30 ವರ್ಷ
ವೇತನ : 1ನೇ ವರ್ಷ ₹13,000, 2ನೇ ವರ್ಷ ₹15,000

ಇದನ್ನೂ ಓದಿ: ಮಹಿಳೆಯರಿಗೆ ₹3 ಲಕ್ಷ ಬಡ್ಡಿ ಇಲ್ಲದ ಸಾಲಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ kswdc karnataka Schemes 2024

ಉಪಸಿಬ್ಬಂದಿ ಕಮ್ ವಾಹನ ಚಾಲಕ
ಹುದ್ದೆಗಳ ಸಂಖ್ಯೆ : 02
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ ಪಾಸ್, ಜತೆಗೆ ಡಿಎಲ್ ಹೊಂದಿರಬೇಕು
ಗರಿಷ್ಠ ವಯೋಮಿತಿ : 30 ವರ್ಷ
ವೇತನ : 1ನೇ ವರ್ಷ ₹13,000, 2ನೇ ವರ್ಷ ₹15,000

ಅರ್ಜಿ ಶುಲ್ಕ ವಿವರ

1ರಿಂದ 5ರ ವರೆಗಿನ ಹುದ್ದೆಗಳಿಗೆ ಅರ್ಜಿ ಶುಲ್ಕ 500, ನಂತರದ ಹುದ್ದೆಗಳಿಗೆ 300 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ‘ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವAತೆ ಡಿಡಿ ತೆಗೆದು, ಅರ್ಜಿ ಜೊತೆಗೆ ಲಗತ್ತಿಸಿ ಕಳುಹಿಸಬೇಕು.

KSSFCL Recruitment 2024

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಗೆ ಬೆಂಗಳೂರಿನ ಎಚ್‌ಎಎಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ ₹46,764 HAL Non Executive Cadre Recruitment 2024

ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧಿಕೃತ ವೆಬ್‌ಸೈಟ್ https://www.souharda.coop/ನಿಂದ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ, ದಾಖಲಾತಿಗಳನ್ನು ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಕಳಿಸಿ ಕೊಡಬೇಕು:

ವಿಳಾಸ : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಸೌಹಾರ್ಧ ಸಹಕಾರಿ ಸೌಧ, ನಂ 68, 1ನೇ ಮಹಡಿ, 17 ಮತ್ತು 18ನೇ ಅಡ್ಡರಸ್ತೆ ಮಧ್ಯೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055

ಅರ್ಜಿ ಸಲ್ಲಿಸಲು ಕೊನೆ ದಿನಾಂಕ :
09-09-2024ರ ಸಂಜೆ 05-30 ಗಂಟೆ

ಅಧಿಸೂಚನೆ ಮತ್ತು ಅರ್ಜಿ ನಮೂನೆ : Download
ಸಂಪರ್ಕ ಸಂಖ್ಯೆ : 080-23378375 / 76 / 77 / 78 / 79

ಇದನ್ನೂ ಓದಿ: ಲೋಕಲ್ ಬ್ಯಾಂಕ್ ಆಫೀಸರ್ 300 ಹುದ್ದೆಗಳ ನೇಮಕಾತಿ | ಯಾವುದೇ ಪದವಿ ಮುಗಿಸಿದ್ರೆ ಈಗಲೇ ಅರ್ಜಿ ಹಾಕಿ… Local Bank Officers Recruitment 2024


Spread the love
WhatsApp Group Join Now
Telegram Group Join Now

Leave a Comment

error: Content is protected !!