New PAN Card Scam Cyber Police Alert : ಇತ್ತೀಚೆಗಷ್ಟೇ ಕೇಂದ್ರ ಸಚಿವ ಸಂಪುಟವು ಹಾಲಿ ಚಾಲ್ತಿಯಲ್ಲಿರುವ ಪ್ಯಾನ್ ಕಾರ್ಡ್ (PAN Card) ಅನ್ನು ನವೀಕರಣ ಮಾಡುವ ಪ್ಯಾನ್ 2.0 (PAN 2.0) ಯೋಜನೆಗೆ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಸೈಬರ್ ವಂಚಕರ ಜಾಲ ಅಲರ್ಟ್ ಆಗಿದ್ದು, ಹೊಸ ಪ್ಯಾನ್ ಹೆಸರಿನಲ್ಲ್ಲಿ ದೋಖಾ ನಡೆಯುತ್ತಿದೆ.
ಹಳೆಯ ಪ್ಯಾನ್ ಕಾರ್ಡ್ ಅನ್ನು Pಂಓ 2.0ಗೆ ನವೀಕರಿಸುವುದಾಗಿ ಫೇಕ್ ಫೋನ್ ಕಾಲ್, ಮೊಬೈಲ್ ಸಂದೇಶಗಳು ಹರಿದಾಡುತ್ತಿದ್ದು; ಇಂತಹ ಕರೆ ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸಿದ ಹಲವರಿಗೆ ವಂಚನೆಗಳಾದ ವರದಿಯಾಗುತ್ತಿದೆ. ಈ ಸಂಬ೦ಧ ಸೈಬರ್ ಪೊಲೀಸರು ಎಚ್ಚರಿಕೆ ಮಾಹಿತಿ ನೀಡಿದ್ದಾರೆ.
ಏನಿದು PAN 2.0 ಯೋಜನೆ?
ಸದ್ಯ ಇರುವ ಪ್ಯಾನ್ ಕಾರ್ಡಿನ ಸುಧಾರಿತ ಆವೃತ್ತಿಯೇ ಈ ‘ಪ್ಯಾನ್ 2.0’ ಯೋಜನೆ. ಸದರಿ ಹೊಸ ಪ್ಯಾನ್ ಕಾರ್ಡ್’ಗಳು ತೆರಿಗೆದಾರರಿಗೆ ಹೆಚ್ಚು ಅನುಕೂಲವಾಗುವಂತಹ ತಂತ್ರಜ್ಞಾನವನ್ನು ಒಳಗೊಂಡಿದ್ದು; ಹೆಚ್ಚಿನ ಭದ್ರತೆಗಾಗಿ ಎಂಬೆಡೆಡ್ QR ಕೋಡ್ ಒಳಗೊಂಡಿರುತ್ತವೆ.
ಹಾಗ೦ತ ನೀವು ಹೊಸ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕಾಗಿಲ್ಲ. PAN 2.0 ಯೋಜನೆಯಡಿಯಲ್ಲಿ, ನಿಮ್ಮ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ ಮಾನ್ಯವಾಗಿ ಉಳಿಯುತ್ತದೆ. ಇದಕ್ಕಾಗಿ ನೀವು ಏನನ್ನೂ ಮಾಡಬೇಕಾಗಿಲ್ಲ. ಸರ್ಕಾರವೇ ನೇರವಾಗಿ ನಿಮ್ಮ ವಿಳಾಸಕ್ಕೆ ಹೊಸ ಪ್ಯಾನ್ ಕಾರ್ಡ್ ಅನ್ನು ಕಳುಹಿಸುತ್ತದೆ.
ಸೈಬರ್ ಪೊಲೀಸರ ಎಚ್ಚರಿಕೆ ಏನು?
ಹೊಸ ಪ್ಯಾನ್ ಒದಗಿಸುವುದಾಗಿ ಹೇಳಿಕೊಂಡು ಅಲ್ಲಲ್ಲಿ ವಂಚನೆಗಳಾಗುತ್ತಿದ್ದು; ಈ ಸಂಬ೦ಧ ಸೈಬರ್ ಪೊಲೀಸರು ಈ ಕೆಳಕಂಡ ಎಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ:
- PAN Updateಗೆ ಸಂಬ೦ಧಿಸಿದ ಯಾವುದೇ ಫೋನ್, ಸಂದೇಶ ಅಥವಾ ಮೇಲ್ಗೆ ಪ್ರತಿಕ್ರಿಯಿಸಬೇಡಿ. ಯಾವುದೇ ಮಾಹಿತಿ ಅಥವಾ OTP ಅನ್ನು ನೀಡಬೇಡಿ.
- ಅನಧಿಕೃತ ಪೋರ್ಟಲ್, ನಕಲಿ KYC App, ಕಾಲ್ ಸೆಂಟರ್’ಗಳನ್ನು ಬಳಸಬೇಡಿ. PAN Card ಸಂಬ೦ಧಿತ ಮಾಹಿತಿ ಮತ್ತು Updateಗಳಿಗಾಗಿ ಅಧಿಕೃತ ವೆಬ್ಸೈಟ್ ಅನ್ನು ಮಾತ್ರ ಬಳಸಿ.
- ಹಾಗೊಂದು ವೇಳೆ ಇಂತಹ ಕರೆಗಳು ಬಂದರೆ ಅಥವಾ ಸೈಬರ್ ಆರ್ಥಿಕ ವಂಚನೆಗೆ ಒಳಗಾದರೆ ಕೂಡಲೇ ಸಹಾಯಕ್ಕಾಗಿ 1930ಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ.
ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ… Google Pay loan upto 8 lakh