NewsSchemes

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅನುಮತಿಸಿದ ಆಹಾರ ಇಲಾಖೆ | ಇವರಿಗೆ ಮಾತ್ರ ಸಿಗುತ್ತೆ ಹೊಸ ಬಿಪಿಎಲ್ ರೇಷನ್ ಕಾರ್ಡ್ New Ration Card Application Big Update

WhatsApp Group Join Now
Telegram Group Join Now

New Ration Card Application Big Update : ಇನ್ನೇನು ಲೋಕಸಭಾ ಚುನಾವಣೆ ಮುಗಿದು ನೀತಿ ಸಂಹಿತೆ ಮುಕ್ತಾಯವಾಗಿದ್ದು; ಇಷ್ಟರಲ್ಲೇ ನಮಗೆ ಹೊಸ ರೇಷನ್ ಕಾರ್ಡ್ (New Ration Card) ಸಿಗಲಿದೆ ಮತ್ತು ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಹಾಕಲು ಸರಕಾರ ಅವಕಾಶ ಮಾಡಿ ಕೊಡಲಿದೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿರುವವರಿಗೆ ರಾಜ್ಯ ಸರಕಾರ ಬಿಗ್ ಶಾಕ್ ನೀಡಿದೆ.

ರಾಜ್ಯ ಸರಕಾರ ಆಹಾರ ಇಲಾಖೆಯ (Food Department) ವಿನಂತಿಯನ್ನು ಪರೀಶೀಲಿಸಿ ಕೇವಲ ಗಂಭೀರ ಕಾಯಿಲೆಗಳಿಂದ ನರಳುತ್ತಿರುವವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿಲೇವಾರಿ ಮಾಡಲು ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲು ಷರತ್ತುಬದ್ಧ ಅನುಮೋದನೆ ನೀಡಿದೆ.

ಇದನ್ನೂ ಓದಿ: ಗ್ಯಾರಂಟಿ ಸ್ಕೀಮ್ ಬಂದ್ ಆಗ್ತಾವಾ? | ಸಿಎಂ ಸಿದ್ದರಾಮಯ್ಯ ನೀಡಿದ ಸುಳಿವೇನು? | ಕಾಂಗ್ರೆಸ್ ಶಾಸಕರ ಪಟ್ಟು ಏನು? Karnataka Guarantee Scheme be Discontinued?

ವಿಲೇವಾರಿ ಆಗಬೇಕಾದ ಕಾರ್ಡುಗಳೆಷ್ಟು?

ಆಹಾರ ಇಲಾಖೆಯ ಅಂಕಿ-ಅ೦ಶಗಳ ಪ್ರಕಾರ ಹೊಸ ಬಿಪಿಎಲ್ ಕಾರ್ಡ್, ಸೇರ್ಪಡೆ, ತಿದ್ದುಪಡಿ ಕೋರಿ ರಾಜ್ಯಾದ್ಯಂತ 2017ರಿಂದ 2021ರ ವರೆಗೆ ಒಟ್ಟು 39,04,798 ಅರ್ಜಿಗಳು ಆಹಾರ ಇಲಾಖೆಗೆ ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 26,48,171 ಅರ್ಜಿಗಳು ಅನುಮೋದನೆಗೊಂಡಿದ್ದು; 9,60,641 ಅರ್ಜಿಗಳು ತಿರಸ್ಕೃತಗೊಂಡಿವೆ.

ಈ ಪೈಕಿ ಈಗಾಗಲೇ ಅನುಮೋದನೆಗೊಂಡಿರುವ ಒಟ್ಟು ಅರ್ಜಿಗಳ ಪೈಕಿ 2,95,986 ಅರ್ಜಿಗಳು ಬಾಕಿ ಉಳಿದಿವೆ. 2023ರ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ, ಸೇರ್ಪಡೆ, ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆವತ್ತಿನಿಂದ ಇವತ್ತಿನ ವರೆಗೂ ಬಾಕಿ ಅರ್ಜಿಗಳ ವಿಲೇವಾರಿಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ 45,000 ಅತಿಥಿ ಶಿಕ್ಷಕರ ನೇಮಕಾತಿ : ಜಿಲ್ಲಾ, ತಾಲ್ಲೂಕುವಾರು ಖಾಲಿ ಹುದ್ದೆಗಳ ಲಿಸ್ಟ್ | ಸಂಪೂರ್ಣ ಮಾಹಿತಿ ಇಲ್ಲಿದೆ… Guest Teacher Recruitment 2024 Karnataka

ಸದ್ಯಕ್ಕೆ ಇವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಸಿಗಲಿದೆ

ಇದೀಗ ಅನುಮೋದನೆಗೊಂಡಿರುವ ಲಕ್ಷಾಂತರ ಅರ್ಜಿಗಳ ಪೈಕಿ ಕ್ಯಾನ್ಸರ್​, ಕಿಡ್ನಿ, ಹೃದಯ ಸೇರಿದಂತೆ ಇತರ ಗಂಭೀರ ಕಾಯಿಲೆಗಳಿಂದ ನರಳುತ್ತಿರುವವರಿಗೆ ಮಾತ್ರ ಹೊಸ ಬಿಪಿಎಲ್​ ಕಾರ್ಡ್ ನೀಡಲು ಆಹಾರ ಇಲಾಖೆ ಮುಂದಾಗಿದೆ. ಇದರ ಜೊತೆಗೆ ಈ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಸಲ್ಲಿಕೆಯಾದ ಅರ್ಜಿಗಳನ್ನು ವಿಶೇಷ ‘ವೈದ್ಯಕಿಯ ಕೇಸ್​‘ ಎಂದು ಪರಿಗಣಿಸಿ ವಿಲೇ ಮಾಡುವುದಕ್ಕೆ ಸರ್ಕಾರ ಅನುಮೋದನೆ ಕೊಟ್ಟಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್​ ಕಾರ್ಡ್ ಅತ್ಯಗತ್ಯವಾಗಿದ್ದು; ಇಂತಹ ಬಡ ರೋಗಿಗಳು ಅನೇಕ ಬಾರಿ ರೇಷನ್ ಕಾರ್ಡ್ ನೀಡುವಂತೆ ಆಗ್ರಹಿಸುತ್ತ ಬಂದಿದ್ದಾರೆ. ಹೀಗಾಗಿ ಆಹಾರ ಇಲಾಖೆಯು ಇವರಿಗಾದರೂ ಕಾರ್ಡ್​ ನೀಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿತ್ತು. ಇದೀಗ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದಿದ್ದು ಗಂಭೀರ ಕಾಯಿಲೆಯಿಂದ ನರಳುತ್ತಿರುವವರಿಗೆ ಮಾತ್ರ ಕಾರ್ಡ್ ನೀಡಲು ಸರ್ಕಾರ ಅನುಮೋದನೆ ನೀಡಿದೆ.

ಇದನ್ನೂ ಓದಿ: ಅಂಚೆ ಕಚೇರಿಯಲ್ಲಿ ಕೇವಲ 399ಕ್ಕೆ ಈ ಕಟ್ಟಿದರೆ ಸಿಗಲಿದೆ 10 ಲಕ್ಷ ಆರ್ಥಿಕ ನೆರವು Post Office Accident Insurance Scheme

ಇವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ!

ಈ ಹಿಂದೆ ಅನೇಕರು ಇದೇ ರೀತಿ ಆರೋಗ್ಯ ಸಮಸ್ಯೆ ತೋರಿಸಿ ನಿಯಮಬಾಹಿರವಾಗಿ ಅರ್ಜಿ ಸಲ್ಲಿಸಿ ಬಿಪಿಎಲ್​ ಕಾರ್ಡ್​ ಮಾಡಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ಸೈಬರ್​ ಸೆಂಟರ್​ನಲ್ಲಿ ಹೊಸ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಅವಕಾಶವನ್ನು ರದ್ದುಪಡಿಸಲಾಗಿದೆ. ಅಷ್ಟೇ ಅಲ್ಲ, ಹೀಗೆ ಸುಳ್ಳು ಆರೋಗ್ಯ ಸಮಸ್ಯೆ ತೋರಿಸಿ ಪಡೆದ ಸಾವಿರಾರು ಬಿಪಿಎಲ್ ಕಾರ್ಡ್’ಗಳನ್ನು ಪತ್ತೆ ಹಚ್ಚಿ ರದ್ದುಪಡಿಸಲು ಕೂಡ ಇಲಾಖೆ ಮುಂದಾಗಿದೆ.

ಗ೦ಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಈಗಾಗಲೇ ಅರ್ಜಿ ಸಲ್ಲಿದ್ದರೆ ಅಂಥವರಿಗೆ ಶೀಘ್ರದಲ್ಲಿಯೇ ಹೊದ ಬಿಪಿಎಲ್ ಕಾರ್ಡ್ ಸಿಗಲಿದೆ. ಇನ್ನು ಇಂತಹ ಆರೋಗ್ಯ ಸಮಸ್ಯೆಯುಳ್ಳವರು ಹೊಸದಾಗಿ ಅರ್ಜಿ ಸಲ್ಲಿಸಲು ಸರಕಾರ ಕೆಲವು ನಿಯಮಗಳನ್ನು ವಿಧಿಸಿದೆ. ಆ ಪ್ರಕಾರ ಅರ್ಜಿ ಸಲ್ಲಿಸಿ ಅತ್ಯಂತ ಶೀಘ್ರದಲ್ಲಿ ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ನಿಮ್ಮ ಹೆಸರಿನಲ್ಲಿ ಯಾರಾದರೂ ನಕಲಿ ಸಿಮ್ ಖರೀದಿಸಿದ್ದಾರಾ? ಮೋಸ ಹೋಗುವ ಮೊದಲು ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ… How to detect fake sim card?

New Ration Card Application Big Update

ಆರೋಗ್ಯ ಸಮಸ್ಯೆಯುಳ್ಳವರು ಹೇಗೆ ಅರ್ಜಿ ಸಲ್ಲಿಸಬೇಕು?

ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವವರು ತಮ್ಮ ಆಧಾರ್​ ಕಾರ್ಡ್, ಆದಾಯ ಪ್ರಮಾಣ ಪತ್ರ, ಮನೆ ಬಾಡಿಗೆ ದಾಖಲೆ ಹಾಗೂ ವೈದ್ಯರಿಂದ ಆರೋಗ್ಯ ಸಂಬ೦ಧಿಸಿದ ಪ್ರಮಾಣ ಪತ್ರಗಳೊಂದಿಗೆ ಸ್ಥಳಿಯ ಫುಡ್​ ಇನ್ಸ್’ಸ್ಪೆಕ್ಟರ್ ಅವರ ಗಮನಕ್ಕೆ ತರಬೇಕು. ಆಗ ಫುಡ್​ ಇನ್ಸ್’ಸ್ಪೆಕ್ಟರ್​ ರೋಗಿಯ ಮನೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಎಲ್ಲ ದಾಖಲೆಗಳೊಂದಿಗೆ ಆಹಾರ ಇಲಾಖೆಯ ವೆಬ್‌ಸೈಟ್​ನಲ್ಲಿ ಅರ್ಜಿ ಸಲ್ಲಿಸುತ್ತಾರೆ.

ಮುಂದೆ ಅರ್ಜಿದಾರರಿಗೆ ಗಂಭೀರ ಆರೋಗ್ಯ ಸಮಸ್ಯೆ ಇರುವುದು ಖಚಿತವಾದ ಬಳಿಕ ಫುಡ್​ ಇನ್ಸ್’ಸ್ಪೆಕ್ಟರ್ ಆಹಾರ ಇಲಾಖೆ ಉಪನಿರ್ದೇಶಕರಿಗೆ ಅರ್ಜಿ ಅನುಮೋದನೆಗೆ ಕಳುಸುತ್ತಾರೆ. ಅಂತಿಮವಾಗಿ ಉಪನಿರ್ದೇಶಕರು ಆಯುಕ್ತಾಲಯಕ್ಕೆ ಕಳುಹಿಸಿ ಅನುಮತಿ ಪಡೆದ ಬಳಿಕ ಸಂಬ೦ಧಿಸಿದ ಅರ್ಜಿದಾರರಿಗೆ ಕೂಡಲೇ ಹೊಸ ಬಿಪಿಎಲ್ ಕಾರ್ಡ್​ ಸಿಗುತ್ತದೆ.

ಗಮನಿಸುವ ಅಂಶವೇನೆ೦ದರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದು; ತುರ್ತು ಚಿಕಿತ್ಸೆಗೆ ಒಳಗಾಗುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಣ್ಣಪುಟ್ಟ ಜ್ವರ, ತಲೆ ನೋವು, ಹೊಟ್ಟೆ ನೋವಿನಂತಹ ಕಾಯಿಲೆಗಳಿಂದ ನರಳುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಬೆಂಗಳೂರು ಒನ್​, ಕರ್ನಾಟಕ ಒನ್, ಗ್ರಾಮ ಒನ್​ನಲ್ಲಿಯೂ ಅರ್ಜಿ ಸಲ್ಲಿಸಬೇಕು. ಅದನ್ನು ಆನಂತರ ಫುಡ್​ ಇನ್ಸ್’ಸ್ಪೆಕ್ಟರ್ ಪರಿಶೀಲಿಸುತ್ತಾರೆ.

ಇದನ್ನೂ ಓದಿ: ಸಾರಿಗೆ ಇಲಾಖೆ ಮೋಟಾರು ವೆಹಿಕಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : SSLC, ಡಿಪ್ಲೋಮಾ ಅಭ್ಯರ್ಥಿಗಳಿಗೆ ಅವಕಾಶ Karnataka Motor Vehicle Inspector Recruitment 2024

WhatsApp Group Join Now
Telegram Group Join Now

Related Posts

error: Content is protected !!