ಸರಕಾರಿ ಯೋಜನೆ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ | Government employees will get insurance facility till retirement

WhatsApp Group Join Now
Telegram Group Join Now

ಕರ್ನಾಟಕ ಸರಕಾರಿ ವಿಮಾ ಇಲಾಖೆಯು ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ಸರಕಾರಿ ನೌಕರರು ನಿವೃತ್ತಿ ಆಗುವ ತನಕವೂ ಅವರಿಗೆ ವಿಮಾ ಸೌಲಭ್ಯ ಅನ್ವಯವಾಗಲಿದೆ. ಅಂದರೆ ನಿವೃತ್ತಿಯ 60ನೇ ವರ್ಷದ ವರೆಗೂ ಸರಕಾರಿ ನೌಕರರಿಗೆ ವಿಮಾ ಸೌಲಭ್ಯ ಲಭ್ಯವಾಗಲಿದೆ. ಜತೆಗೆ KSRTC ಸಿಬ್ಬಂದಿಗೆ 1 ಕೋಟಿ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ…

ವಿಮಾ ಇಲಾಖೆಯು ಜೀವ ವಿಮೆ ಸೌಲಭ್ಯವನ್ನು ಸಾರ್ವಜನಿಕರಿಗೆ ಮತ್ತು ಸರ್ಕಾರಿ ನೌಕರರಿಗೆ ಜುಲೈ 21, 1891 ರಿಂದಲೂ ಒದಗಿಸುತ್ತಾ ಬಂದಿದೆ.ತದನಂತರ 1959ರಲ್ಲಿ ಸಾರ್ವಜನಿಕರಿಗೆ ನೀಡುತ್ತಿದ್ದ ವಿಮಾ ಸೌಲಭ್ಯವನ್ನು ರದ್ದುಪಡಿಸಿ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ವಿಮಾ ಸೌಲಭ್ಯವನ್ನು ಮಾತ್ರ ಮುಂದುವರಿಸಲಾಯಿತು. ಅಂದಿನಿಂದ ಇಂದಿನ ವರೆಗೆ ಕಳೆದ ಸುಮಾರು 60 ವರ್ಷಗಳಿಂದ ಸರ್ಕಾರಿ ನೌಕರರಿಗೆ ವಿಮಾ ಸೌಲಭ್ಯವನ್ನು 55 ವರ್ಷ ವಯಸ್ಸಿನ ವರೆಗೆ ಮಾತ್ರ ನೀಡಲಾಗುತ್ತಿದೆ.

ಅಂದರೆ ನಿವೃತ್ತಿಗೆ 5 ವರ್ಷ ಮುಂಚೆಯೇ ವಿಮಾ ಸೌಲಭ್ಯ ಕಡಿತವಾಗುತ್ತಿತ್ತು. ಮುಂದಿನ 5 ವರ್ಷಗಳಲ್ಲಿ ಸರಕಾರಿ ನೌಕರರು ಆಕಸ್ಮಾತ್ ಸೇವೆಯಲ್ಲಿರುವಾಗಲೇ ಅಕಾಲಿಕ ಮರಣಕ್ಕೆ ತುತ್ತಾದರೆ, ಅವರ ಅವಲಂಬಿತ ಕುಟುಂಬಕ್ಕೆ ಯಾವುದೇ ರೀತಿಯ ವಿಮಾ ಪರಿಹಾರ ಲಭ್ಯವಾಗುತ್ತಿರಲಿಲ್ಲ. ಕಳೆದ ಆರು ದಶಕಗಳಿಂದ ಈ ಸಂಬಂಧ ಸರಕಾರಿ ನೌಕರರು ಹೋರಾಡುತ್ತ ಬಂದಿದ್ದರು.

2008ರಿಂದೀಚೆಗೆ ಈ ಯಡವಟ್ಟನ್ನು ಸರಿಪಡಿಸುವಂತೆ ಸರಕಾರಿ ನೌಕರರು ತಮ್ಮ ಹಕ್ಕೊತ್ತಾಯವನ್ನು ತೀವ್ರಗೊಳಿಸಿದ್ದರು. ಇದೀಗ ಅವರ ಒತ್ತಡಕ್ಕೆ ಮಣಿದ ಸರಕಾರ ಕರ್ನಾಟಕ ಸರಕಾರಿ ವಿಮಾ ಇಲಾಖೆಯ ಮೂಲಕ ವಿಮಾ ಸೌಲಭ್ಯವನ್ನು 55 ವರ್ಷದಿಂದ 60 ವರ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಸಣ್ಣ ವ್ಯಾಪಾರಕ್ಕೆ 10 ಲಕ್ಷ ರೂಪಾಯಿ ಧನ ಸಹಾಯ : ಇಲ್ಲಿ ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 1984ಕ್ಕೂ ಮುಂಚೆ 55 ವರ್ಷಗಳಿತ್ತು. 1984ರ ನಂತರ ನಿವೃತ್ತಿ ವಯಸ್ಸನ್ನು 58ಕ್ಕೆ ಹೆಚ್ಚಿಸಲಾಯಿತು. ಆಗ ವಿಮಾ ಇಲಾಖೆ ನೌಕರರ ನಿವೃತ್ತಿ ವಯಸ್ಸಿನ ಹೆಚ್ಚಳವನ್ನು ಪರಿಗಣಿಸದೇ 55 ವರ್ಷಗಳ ತನಕ ಮಾತ್ರ ವಿಮಾ ಪಾಲಿಸಿ ಪರಿಗಣಿಸುತ್ತಿತ್ತು. ನಂತರ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಹೆಚ್ಚಳ ಮಾಡಿದರು. ಆಗಲೂ ವಿಮಾ ಇಲಾಖೆ ನಿವೃತ್ತಿ ವಯಸ್ಸು ಹೆಚ್ಚಳವನ್ನು ಪರಿಷ್ಕರಿಸಲಿಲ್ಲ.

ಗಮನಾರ್ಹವೆಂದರೆ ನಿವೃತ್ತಿ ವಯಸ್ಸು 60 ವರ್ಷಕ್ಕೆ ಹೆಚ್ಚಳವಾದ ಬಳಿಕ ವಿಮಾ ಸೌಲಭ್ಯದ ಯಡವಟ್ಟಿನ ವಿರುದ್ಧ ನೌಕರರ ಹೋರಾಟ ತೀವ್ರವಾಗಿತ್ತು. ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿಗನುಗುಣವಾಗಿ ವಿಮಾ ಪಾಲಿಸಿಯ ನಿವೃತ್ತಿ ವಯಸ್ಸನ್ನು ಸಹ 60 ವರ್ಷಕ್ಕೆ ಪರಿಷ್ಕರಣೆ ಮಾಡಬೇಕೆಂದು ಸರ್ಕಾರಿ ನೌಕರರ ಸಂಘಟನೆಗಳು ಹೋರಾಟ ನಡೆಸುತ್ತಲೇ ಬಂದಿದ್ದವು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಲೇ ಇದ್ದವು. ಇದೀಗ ಸರ್ಕಾರದ ವಿಮಾ ಇಲಾಖೆ ನಿವೃತ್ತಿ ವಯಸ್ಸನ್ನು ಈಗಿರುವ 55 ವರ್ಷಗಳಿಂದ 60 ವರ್ಷಗಳ ತನಕ ವಿಮಾ ಸೌಲಭ್ಯಗಳಿಗೆ ಸೀಮಿತಗೊಳಿಸಿ ವಿಸ್ತರಣೆ ಮಾಡಿದ್ದು; ಆಮೂಲಕ ನೌಕರರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಇದನ್ನೂ ಓದಿ: ಖಾಸಗಿ ವಾಹನ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳಿಗೆ ಸಿಗಲಿದೆ ₹5 ಲಕ್ಷ ವಿಮಾ ಪರಿಹಾರ

***

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹1 ಕೋಟಿ ಅಪಘಾತ ವಿಮೆ 

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 1 ಕೋಟಿ ರೂಪಾಯಿ ಮೊತ್ತದ ಅಪಘಾತ ವಿಮೆ ಯೋಜನೆ ಸೌಲಭ್ಯವನ್ನು ನವೆಂಬರ್ 14,2022 ರಿಂದ ಜಾರಿ ಮಾಡಲಾಗಿದೆ. ದೇಶದ ರಸ್ತೆ ಸಾರಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ವಿಮೆ ಮಾಡಿಸಿದ ಹೆಗ್ಗಳಿಕೆಗೆ ಕೆಎಸ್‌ಆರ್‌ಟಿಸಿ ಪಾತ್ರವಾಗಿದೆ.

ನಿಗಮದ ಸಿಬ್ಬಂದಿ ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ / ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವ ಪ್ರೀಮಿಯಂ ರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಎಸ್‌ಬಿಐ ಜತೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಜಾರಿಗೆ ತಂದಿದೆ. ಇದನ್ನೂ ಓದಿ: ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಈ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ಸಾರಿಗೆ ನಿಗಮದ ಸಿಬ್ಬಂದಿಗೆ 50 ಲಕ್ಷ ರೂಪಾಯಿ ಮೊತ್ತದ ವಿಮೆ ಮಾಡಿಸಿದ್ದು, ಈಗ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಜತೆಗೆ 50 ಲಕ್ಷ ರೂಪಾಯಿ ಮೊತ್ತದ ವಿಮೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಲ್ಲಿಗೆ ಒಟ್ಟು 1 ಕೋಟಿ ರೂಪಾಯಿ ಅಪಘಾತ ವಿಮೆ ಮಾಡಲಾಗಿದೆ.

ಪ್ರಸ್ತುತ ಯುನೈಟೆಡ್ ಇಂಡಿಯಾ ಇನ್ಸೂರೆ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ನಿಗಮದ ಕೇಂದ್ರ ಕಚೇರಿಯಲ್ಲಿ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ ಸಮ್ಮುಖದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮತ್ತು ಯುನೈಟೆಡ್ ಇಂಡಿಯಾ ಇನ್ಸೂರೆ ಕಂಪನಿಯ ಪ್ರಧಾನ ವ್ಯವಸ್ಥಾಪಕ ಅಂಗ್ರೂಪ್ ಸೋನಂ ಒಡಂಬಡಿಕೆಗೆ ಸಹಿ ಹಾಕಿದರು.

ಈ ವಿಮಾ ಯೋಜನೆಗೆ ಸಂಸ್ಥೆಯ ಸಿಬ್ಬಂದಿಗಳು ಮಾಹೆಯಾನ 62.50 + GST ಸೇರಿದಂತೆ ವಾರ್ಷಿಕ 885 ರೂಪಾಯಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

———————————————————————

ಇವುಗಳನ್ನು ಮಿಸ್ ಮಾಡದೇ ಓದಿ

ರೈತರು ಸರಿಯಾಗಿ ಜಾಜಿ ಮಲ್ಲಿಗೆ ಕೃಷಿ ಕೈಗೊಂಡರೆ ಒಂದು ಎಕರೆ ಪ್ರದೇಶದಲ್ಲಿ ತಿಂಗಳಿಗೆ ಬರೋಬ್ಬರಿ 60,000 ರೂಪಾಯಿ ಆದಾಯ ಗಳಿಸಬಹುದು. ಅದು ಕೇವಲ ಬೇಲಿ ಸಾಲಿನಲ್ಲಿ ಈ ಆದಾಯ ಗಳಿಸಬಹುದಾಗಿದ್ದು; ಈ ಬಗ್ಗೆ ಸ್ಪೂರ್ತಿದಾಯಕ ಮಾಹಿತಿ ಲಿಂಕ್ ಇಲ್ಲಿದೆ….👇

https://samagrakrushi.com/news/Jasmine-Cultivation-Farmers-get-huge-income-from-jasmine-cultivation

ಹೈನುಗಾರಿಕೆಯಲ್ಲಿ ಅಧಿಕ ಲಾಭ ಗಳಿಕೆಗೆ ಹಸುವಿನ ಮೇವು-ಆಹಾರ ಹೇಗಿರಬೇಕು? ರಾಸುವಿಗೆ ನೀಡುವ ಆಹಾರದಲ್ಲಿ ಏನೇನಿದ್ದರೆ ಹಾಲಿನ ಇಳುವರಿ ಹೆಚ್ಚಾಗುತ್ತದೆ? ನಿಜಕ್ಕೂ ಹಾಲು ಹೆಚ್ಚಳದ ಮೇವಿನ ಸೂತ್ರವೇನು? ಇಲ್ಲಿದೆ ಪಕ್ಕಾ ಮೇವಿನ ಸೂತ್ರ ತಯಾರಿಸುವ ಪರಿಣಿತರ ಸಲಹೆ ಲಿಂಕ್ ಇಲ್ಲಿದೆ….👇  https://raitapijagattu.com/28071/

 

ರಾಜ್ಯದ 32 ಲಕ್ಷ ಜನ ರೈತರಿಗೆ ₹24,000 ಕೋಟಿ ರೂಪಾಯಿ ಬಡ್ಡಿರಹಿತ ಸಾಲ ನೀಡುವ ಗುರಿಯನ್ನು ಸರಕಾರ ಹಾಕಿಕೊಂಡಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಯಾವ ಇಲಾಖೆಯಿಂದ ಸಾಲ ಮಂಜೂರಾಗಲಿದೆ? ಈ ಸಾಲಕ್ಕೆ ಯಾರೆಲ್ಲ ಅರ್ಹರು? ನಿಮಗಳೇನು? ಎಂಬ ಮಾಹಿತಿ ಲಿಂಕ್ ಇಲ್ಲಿದೆ….👇 https://raitapijagattu.com/28066/

ಕೃಷಿ, ತೋಟಗಾರಿಕೆ ಮತ್ತು ಪಶುಪಾಲನೆಯಲ್ಲಿ ಅಧಿಕ ಆದಾಯ ಗಳಿಸಲು ಕೌಶಲ್ಯ ತರಬೇತಿ ನೀಡುವ ಕೇಂದ್ರ ಸರಕಾರದ ಎಸ್‌ಟಿಆರ್‌ವೈ ಯೋಜನೆ ದೇಶದೆಲ್ಲೆಡೆ ಸದ್ದು ಮಾಡುತ್ತಿದ್ದು, ಕರ್ನಾಟಕದ ಯುವ ರೈತರೂ ಇದರ ಲಾಭ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಕೆ ಹೇಗೆ? ತರಬೇತಿ ವಿಷಯಗಳೇನು? ಇದರಿಂದ ರೈತರಿಗೇನು ಅನುಕೂಲ? ಇತ್ಯಾದಿ ಸಮಗ್ರ ಮಾಹಿತಿ ಲಿಂಕ್ ಇಲ್ಲಿದೆ….👇

https://samagrakrushi.com/news/Skill-Training-of-Rural-Youth-STRY-Applications-invited-for-free-skill-training-from-young-farmers-for-higher-income-generation

ನರೇಗಾ ಯೋಜನೆಯಲ್ಲಿ ಸಣ್ಣ, ಅತೀ ಸಣ್ಣ ರೈತರು ಮತ್ತು ಪಶುಪಾಲಕರು ಗರಿಷ್ಟ 2.5 ಲಕ್ಷ ರೂಪಾಯಿ ಸಹಾಯಧನ ಪಡೆಯಲು ಅವಕಾಶವಿದೆ. ಈ ಸಹಾಯ ಧನ ಪಡೆದು ಹೊಲ, ಗದ್ದೆ, ತೋಟ, ಕೊಟ್ಟಿಗೆ ಕೆಲಸ ಮಾಡಿಸಿಕೊಳ್ಳಬಹುದು. ನರೇಗಾ ಯೋಜನೆಯಲ್ಲಿ ರೈತರು ಯಾವ್ಯಾವ ಉದ್ದೇಶಕ್ಕೆ ಎಷ್ಟೆಷ್ಟು ಧನ ಸಹಾಯ ಪಡೆಯಬಹುದು? ಇದನ್ನು ಹೇಗೆ ಪಡೆಯುವುದು? ಎಂಬ ಸಂಪೂರ್ಣ ಮಾಹಿತಿ ಲಿಂಕ್ ಇಲ್ಲಿದೆ….👇 https://raitapijagattu.com/28062/

ಕೇಂದ್ರ ಸರಕಾರದ ಈ ವಿದ್ಯುತ್ ಯೋಜನೆಯಲ್ಲಿ ಪವರ್ ಕಟ್ ಸಮಸ್ಯೆ ಇಲ್ಲ. ತಿಂಗಳು ತಿಂಗಳು ಕರೆಂಟ್ ಬಿಲ್ಲು ಪಾವತಿಸುವ ಗೊಡವೆ ಇಲ್ಲ. ಒಂದೊಮ್ಮೆ ಸಬ್ಸಿಡಿ ಸಹಿತ ಘಟಕ ಸ್ಥಾಪಿಸಿದರೆ 25 ವರ್ಷಗಳ ಕಾಲ ನಿರಂತರ ನಿತ್ಯ ವಿದ್ಯುತ್ ಪಡೆಯಬಹುದು. ಏನಿದು ಯೋಜನೆ? ಅರ್ಜಿ ಸಲ್ಲಿಕೆ ಹೇಗೆ? ಮಾನದಂಡಗಳೇನು? ಸಬ್ಸಿಡಿ ಎಷ್ಟು? ಇತ್ಯಾದಿ ಮಾಹಿತಿ ಲಿಂಕ್ ಇಲ್ಲಿದೆ….👇  https://raitapijagattu.com/28059/

ಭಾರತೀಯ ವಾಯುಪಡೆಯು (IAF) 2023ನೇ ಸಾಲಿನ ಅಗ್ನಿಪಥ ಅಗ್ನಿವೀರರ ಹುದ್ದೆಗಳ ಭರ್ತಿಗೆ 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತಿಂಗಳಿಗೆ ₹30,000 ರಿಂದ ₹40,000 ಸಂಬಳವಿದೆ. ಜೀವವಿಮಾ ಸೌಲಭ್ಯ, ಆಕರ್ಷಕ ಭತ್ಯೆ, ₹1ಕೋಟಿ ಜೀವಹಾನಿ ಪರಿಹಾರ, ನಿವೃತ್ತಿ ಸೇವಾನಿಧಿ ಪ್ಯಾಕೇಜ್, ಅರ್ಜಿ ಸಲ್ಲಿಕೆ ವಿಧಾನ, ವಯೋಮಿತಿ ಇತ್ಯಾದಿ ಮಾಹಿತಿ ಲಿಂಕ್ ಇಲ್ಲಿದೆ….👇

https://samagrakrushi.com/news/Agnipath-Indian-Air-Force-agniveervayu-2023-Agnipath-Agniveer-Notification-PUC-IAF-job

ಕೇಂದ್ರ ಸರಕಾರ ದೇಶದಲ್ಲಿ ಆಧಾರ್ ಕಾರ್ಡ್‌ನ್ನು ಪ್ರತಿ 10 ವರ್ಷಗಳಿಗೊಮ್ಮೆ Update ಮಾಡುವುದನ್ನು ನಿನ್ನೆಯಿಂದ ಕಡ್ಡಾಯವಾಗಿಸಿದೆ. Update ಮಾಡದಿದ್ದರೆ ಯಾವೆಲ್ಲ ಸೌಲಭ್ಯಗಳು ಕಟ್ ಆಗಲಿವೆ? ನಿಮ್ಮ ಆಧಾರ್ ಕಾರ್ಡ್ Update ಮಾಡುವುದು ಹೇಗೆ? ಇತ್ಯಾದಿ ಸಮಗ್ರ ಮಾಹಿತಿ ಲಿಂಕ್ ಇಲ್ಲಿದೆ….👇

https://samagrakrushi.com/news/Update-Your-Anonhaar-Card-Data-Unique-Identification-Authority-of-India-Online-Address-Update-Process

 

2022-23ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರವನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸುವಂತೆ ಕೃಷಿ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ರೈತರಿಗೆ ಬೆಳೆವಿಮೆ ಪರಿಹಾರ ಯಾವಾಗ ಬರಲಿದೆ? ಎಷ್ಟು ಬರಲಿದೆ? ದಾಖಲೆ ಪರಿಶೀಲಿಸುವುದು ಹೇಗೆ? ಸಂಪೂರ್ಣ ಮಾಹಿತಿಲಿಂಕ್ ಇಲ್ಲಿದೆ….👇  https://raitapijagattu.com/28053/

2022-23ನೇ ಸಾಲಿನಲ್ಲಿ D.Ed ಮತ್ತು B.Edನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್‌ನ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರೋತ್ಸಾಹಧನ ಪಡೆಯಲು ಷರತ್ತುಗಳೇನು? ಯಾವ್ಯಾವ ಸಮುದಾಯದ ವಿದ್ಯಾರ್ಥಿಗಳು ಅರ್ಹರು? ಪ್ರೊತ್ಸಾಹ ಧನದ ಮೊತ್ತವೆಷ್ಟು? ಇತ್ಯಾದಿ ಮಾಹಿತಿ ಲಿಂಕ್ ಇಲ್ಲಿದೆ….👇

https://samagrakrushi.com/news/Applications-invited-from-B.Ed-D.Ed-students-for-special-incentives-2022-23

ICICI ಬ್ಯಾಂಕ್‌ನಲ್ಲಿ SSLC, PUC ಪಾಸಾದ ಅಭ್ಯರ್ಥಿಗಳಿಂದ ₹45,000 ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಹತಾ ಮಾನದಂಡ ಹಾಗೂ ಅರ್ಜಿ ಸಲ್ಲಿಕೆ ಲಿಂಕ್ ಇಲ್ಲಿದೆ…👇

https://samagrakrushi.com/news/ICICI-Bank-Recruitment-2022-ICICI-Bank-SSLC-PUC-Jobs-SamagraKrushi

WhatsApp Group Join Now
Telegram Group Join Now

Related Posts

error: Content is protected !!