ಸರಕಾರಿ ಯೋಜನೆ

ರೈತರೇ ನರೇಗಾ ಯೋಜನೆಯ ಈ ಅವಕಾಶ ಬಳಸಿಕೊಳ್ಳಿ | ಪ್ರತಿ ಫಲಾಭವಿಗೆ ಸಿಗಲಿದೆ ₹2.5 ಲಕ್ಷ ನೆರವು

WhatsApp Group Join Now
Telegram Group Join Now

ಸಣ್ಣ, ಅತೀ ಸಣ್ಣ ರೈತರು ನರೇಗಾ ಯೋಜನೆ ಧನ ಸಹಾಯ ಪಡೆದು ತಮ್ಮದೇ ಹೊಲ, ಗದ್ದೆ, ತೋಟ, ಕೊಟ್ಟಿಗೆ ಕೆಲಸ ಮಾಡಿಸಿಕೊಳ್ಳಬಹುದು. ಗರಿಷ್ಟ 2.5 ಲಕ್ಷ ರೂಪಾಯಿ ಸಹಾಯಧನ ಪಡೆಯಲು ಅವಕಾಶವಿದೆ. ನರೇಗಾ ಯೋಜನೆಯಲ್ಲಿ ರೈತರು ಯಾವ್ಯಾವ ಉದ್ದೇಶಕ್ಕೆ ಎಷ್ಟೆಷ್ಟು ಧನ ಸಹಾಯ ಪಡೆಯಬಹುದು? ಇದನ್ನು ಪಡೆಯಲು ಏನು ಮಾಡಬೇಕು? ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…  

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಗ್ರಾಮೀಣ ಪ್ರದೇಶಕ್ಕೆ ದೊಡ್ಡ ವರದಾನವಾಗಿದೆ. ಸದರಿ ಯೋಜನೆಯಲ್ಲಿ ಸಣ್ಣ, ಅತೀ ಸಣ್ಣ ರೈತರು ಮತ್ತು ಪಶುಪಾಲಕರು ಗರಿಷ್ಟ 2.5 ಲಕ್ಷ ರೂಪಾಯಿ ಸಹಾಯಧನ ಪಡೆಯಲು ಅವಕಾಶವಿದೆ. ಈ ಸಹಾಯ ಧನ ಪಡೆದು ಹೊಲ, ಗದ್ದೆ, ತೋಟ, ಕೊಟ್ಟಿಗೆ ಕೆಲಸ ಮಾಡಿಸಿಕೊಳ್ಳಬಹುದು. ಹೀಗೆ ನರೇಗಾ ಕೂಲಿ ಬಳಸಿಕೊಂಡು ರೈತರು ಅಭಿವೃದ್ಧಿ ಹೊಂದಲು ನರೇಗಾ ವೈಯಕ್ತಿಕ ಕಾಮಗಾರಿಗಳ ದೊಡ್ಡ ಪಟ್ಟಿಯೇ ಇದೆ.

ಇದನ್ನೂ ಓದಿ: ಡಿಸೆಂಬರ್ 15ರೊಳಗೆ ಅರ್ಜಿ ಸಲ್ಲಿಸಿ ₹3.50 ಲಕ್ಷ ಬೋರ್‌ವೆಲ್ ಸಹಾಯಧನ ಪಡೆಯಿರಿ

ಪ್ರತಿ ಫಲಾನುಭವಿಗೆ 2.5 ಲಕ್ಷ ನೆರವು 

ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ವರ್ಷಕ್ಕೆ ಕನಿಷ್ಠ ನೂರು ದಿನಗಳ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ (ಬರ ಪೀಡಿತ ಪ್ರದೇಶಗಳಲ್ಲಿ 150 ದಿನಗಳು) ಉದ್ಯೋಗ ಖಾತರಿ ನೀಡಲಾಗುತ್ತಿದೆ. ಮಹಿಳೆ ಮತ್ತು ಪುರುಷರು ಮಾತ್ರವಲ್ಲದೇ ವಿಶೇಷ ಚೇತನರು ಮತ್ತು 65 ವರ್ಷ ಮೇಲ್ಪಟ್ಟ ವೃದ್ಧರಿಗೂ ಇಲ್ಲಿ ವಿನಾಯಿತಿ ಸಹಿತ ಅವಕಾಶಗಳಿವೆ.

ಸಮುದಾಯ ಕಾಮಗಾರಿ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ನಿರ್ಮಿಸಿಕೊಳ್ಳಲು ಸಣ್ಣ-ಅತಿ ಸಣ್ಣ ರೈತರಿಗೆ, ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ನರೇಗಾ ಯೋಜನೆಯಡಿ ಲಕ್ಷಾಂತರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ ಗರಿಷ್ಠ 2.5 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ರೂ. 30,900 ಕೂಲಿ ಹಣ ಪಡೆಯಬಹುದಾಗಿದೆ.

ಇದನ್ನೂ ಓದಿ: ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ಯಾವ್ಯಾವ ಕಾಮಗಾರಿಗೆ ಸಹಾಯಧನ?

ರೈತರು ನರೇಗಾ ಯೋಜನೆಯಡಿ ತಮ್ಮ ಸ್ವಂತ ಜಮೀನುಗಳಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ತೆರೆದ ಬಾವಿ, ಕುರಿ/ಮೇಕೆ ಕೊಟ್ಟಿಗೆ, ಬಚ್ಚಲು ಗುಂಡಿ, ಮೀನು ಕೃಷಿ ಕೊಳ, ಕಂದಕ ಬದು ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ, ತೆರೆದ ಬಾವಿ, ಅಜೋಲಾ ಘಟಕ, ಎರೆಹುಳು ಗೊಬ್ಬರ ತೊಟ್ಟಿ, ಇಂಗು ಗುಂಡಿ ನಿರ್ಮಾಣ, ಕೃಷಿ ಅರಣ್ಯ, ತೋಟಗಾರಿಕೆ ಬೆಳೆಗಳು, ರೇಷ್ಮೆ ಕೃಷಿ, ಕೋಳಿ ಶೆಡ್, ಆಡು/ಕುರಿ ಶೆಡ್, ಹಂದಿ ಶೆಡ್ ನಿರ್ಮಾಣ ಮಾಡಿಕೊಳ್ಳುವ ಮೂಲಕ ಸಹಾಯಧನ ಪಡೆಯಬಹುದಾಗಿದೆ.

ರೈತರು ಕೇವಲ ಒಂದೇ ರೀತಿಯ ಬೆಳೆ ಬೆಳೆದು ನಷ್ಟ ಅನುಭವನಿಸುವ ಬದಲು, ನರೇಗಾದಡಿ ಧನಸಹಾಯ ಪಡೆದು ಮಿಶ್ರ ಬೆಳೆಗಳನ್ನು ಬೆಳೆಯಲು ಕೂಡ ಸಾಕಷ್ಟು ಅವಕಾಶವಿದೆ. ವಿಶೇಷವೆಂದರೆ ಈಚೆಗೆ 2022-23ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಮೇಲಿನ ವೈಕ್ತಿಕ ಕಾಮಗಾರಿಗಳ ಅನುಷ್ಠಾನಕ್ಕೆ ನೀಡುತ್ತಿದ್ದ ಘಟಕ ವೆಚ್ಚವನ್ನು ಕೂಡ ಹೆಚ್ಚಿಸಿದೆ.

ಇದನ್ನೂ ಓದಿ: ಮ್ಯಾಂಡೌಸ್ ಚಂಡಮಾರುತದ ಎಫೆಕ್ಟ್ : ರಾಜ್ಯದ 15 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಯಾವ ಕಾಮಗಾರಿಗೆ ಎಷ್ಟೆಷ್ಟು ಸಹಾಯಧನ?

 • ಕುರಿ/ಮೇಕೆ ಕೊಟ್ಟಿಗೆ: 70 ಸಾವಿರ ರೂಪಾಯಿ
 • ಬಚ್ಚಲು ಗುಂಡಿ: 14 ಸಾವಿರ ರೂಪಾಯಿ
 • ದನದ ಕೊಟ್ಟಿಗೆ (4 ದನಗಳಿಗೆ) 57 ಸಾವಿರ ರೂಪಾಯಿ
 • ಕೋಳಿ ಶೇಡ್: 62 ಸಾವಿರ ರೂಪಾಯಿ
 • ಮೀನು ಕೃಷಿ ಕೊಳ: 1 ಲಕ್ಷ ರೂಪಾಯಿ
 • ಕಂದಕ ಬದು ನಿರ್ಮಾಣ: 35 ಸಾವಿರ ರೂಪಾಯಿ
 • ಹಂದಿ ಕೊಟ್ಟಿಗೆ ನಿರ್ಮಾಣ: 87 ಸಾವಿರ ರೂಪಾಯಿ
 • ಕೊಳವೆ ಬಾವಿ ಮರುಪೂರಣ ಘಟಕ: 27 ಸಾವಿರ ರೂಪಾಯಿ
 • ಎರೆಹುಳು ಘಟಕ: 27 ಸಾವಿರ ರೂಪಾಯಿ
 • ತೆರೆದ ಬಾವಿ: 1.50 ಲಕ್ಷ ರೂಪಾಯಿ
 • ಅಜೋಲಾ ಘಟಕ: 17 ಸಾವಿರ ರೂಪಾಯಿ
 • ಕೃಷಿ ಹೊಂಡ: 77 ಸಾವಿರ ರೂಪಾಯಿ
 • ಪೌಷ್ಟಿಕಾಂಶ ಕೈತೋಟ: ಸೀಬೆ, ಕರಿಬೇವು, ನೆಲ್ಲಿ, ನುಗ್ಗೆ, ಸಪೋಟ, ತೆಂಗು ಮತ್ತು ನಿಂಬೆ ಗಿಡಗಳನ್ನು ನಿಮ್ಮ ಕೈತೋಟದಲ್ಲಿ ನೆಟ್ಟರೆ ರೂ. 2,397/- ಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಇದನ್ನೂ ಓದಿ: ಡಿಸೆಂಬರ್ 15ರಿಂದ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ ಖರೀದಿ ನೋಂದಣಿ ಆರಂಭ

ಜಾಬ್‌ಕಾರ್ಡ್ ಪಡೆಯುವುದು ಹೇಗೆ?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಈ ಎಲ್ಲ ಸಹಾಯಧನ ಸದ್ಭಳಕೆ ಮಾಡಿಕೊಳ್ಳಲು ಮುಖ್ಯವಾಗಿ ರೈತರು ಜಾಬ್ ಕಾರ್ಡ್ ಹೊಂದಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ 1ನ್ನು ಭರ್ತಿ ಮಾಡಿ ಕುಟುಂಬದ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಇತ್ತೀಚಿನ ಭಾವಚಿತ್ರ, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಇವುಗಳ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಜಾಬ್‌ಕಾರ್ಡ್ ಪಡೆಯಬಹುದು.

ಉದ್ಯೋಗ ಚೀಟಿ ಪಡೆಯಲು ಕುಟುಂಬದ ಪ್ರತಿಯೊಬ್ಬ ವಯಸ್ಕ ಸದಸ್ಯರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಅಗತ್ಯ. ಉದ್ಯೋಗಕ್ಕಾಗಿ ನಮೂನೆ-6ರಲ್ಲಿ ಗ್ರಾಮ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡೆಯಿರಿ ಅಥವಾ ಮನೆಯಲ್ಲಿಯೇ ಕುಳಿತು ಕಾಯಕ ಮಿತ್ರಮೊಬೈಲ್ ಅಪ್ ಮೂಲಕವೂ ಅರ್ಜಿ ಸಲ್ಲಿಸಬಹುದು.

========================

ಇವುಗಳನ್ನೂ ಓದಿ:

ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ

ಮಣ್ಣಿನ ಆರೋಗ್ಯ ತಪಾಸಣೆ: ರೈತರಿಗೆ ಸಿಗಲಿದೆ ಅಧಿಕ ಆದಾಯ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!