ಉದ್ಯೋಗ

Home Guards Karnataka : 247 ಸ್ವಯಂ ಸೇವಕ ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ ಪಾಸಾಗಿದ್ದರೆ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

ಒಟ್ಟು 247 ಸ್ವಯಂ ಸೇವಕ ಹೋಂ ಗಾರ್ಡ್ (Home Guard) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Home Guard ನೇಮಕಾತಿ ಕುರಿತ ಸಂಕ್ಷಿಪ್ತ ವಿವರ

  • ನೇಮಕಾತಿ ಸಂಸ್ಥೆ : ಗೃಹರಕ್ಷಕ ದಳ, ಚಿಕ್ಕಮಗಳೂರು
  • ಹುದ್ದೆಗಳ ಹೆಸರು : ಗೃಹರಕ್ಷಕ/ ಗೃಹರಕ್ಷಕಿ
  • ಒಟ್ಟು ಖಾಲಿ ಹುದ್ದೆಗಳು : 247 ಹುದ್ದೆಗಳು
  • ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಚಿಕ್ಕಮಗಳೂರು ಜಿಲ್ಲೆ

ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ₹50 ಸಾವಿರಕ್ಕೂ ಹೆಚ್ಚು ಸಂಬಳದ ಸರ್ಕಾರಿ ನೌಕರಿ | ಈಗಲೇ ಅರ್ಜಿ ಸಲ್ಲಿಸಿ | Yadgiri district court recruitment 2024

ಬೇಕಾಗುವ ದಾಖಲೆಗಳು

  • ಅರ್ಜಿಯೊಂದಿಗೆ ವಿದ್ಯಾರ್ಹತೆಯ ಪ್ರಮಾಣ ಪತ್ರ
  • ಜನ್ಮ ದಿನಾಂಕದ ದೃಢೀಕರಣ ಪತ್ರ
  • ವೈದ್ಯಕೀಯ ಪ್ರಮಾಣ ಪತ್ರ
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು

ವಿದ್ಯಾರ್ಹತೆ ಮತ್ತು ಇತರೆ ಅರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ಕನಿಷ್ಠ 19 ರಿಂದ ಗರಿಷ್ಠ 50 ವರ್ಷದ ಒಳಗಿರಬೇಕು. ತಮ್ಮ ವಾಸ ಸ್ಥಳದಿಂದ ತಾವು ಸೇರ ಬಯಸುವ ಘಟಕಕ್ಕೆ 6 ಕಿ.ಮೀ ವ್ಯಾಪ್ತಿಯ ಒಳಗಿರಬೇಕು

ಬಹುಮುಖ್ಯವಾಗಿ ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರಬಾರದು. ಧೃಢಕಾಯರಾಗಿದ್ದು ಆರೋಗ್ಯವಂತರಾಗಿರಬೇಕು. ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು.

ಇದನ್ನೂ ಓದಿ: 2,000+ ಕಾನ್’ಸ್ಟೇಬಲ್ ಮತ್ತು ಸಬ್’ಇನ್‌ಸ್ಪೆಕ್ಟರ್ ಹುದ್ದೆಗಳ ಬೃಹತ್ ನೇಮಕಾತಿ | ಪಿಯುಸಿ, ಪದವೀಧರರಿಗೆ ಸುವರ್ಣಾವಕಾಶ | RPF Constable & SI recruitment 2024

ಆಯ್ಕೆ ವಿಧಾನ ಹೇಗೆ?

ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಉದ್ಯೋಗ ಸ್ಥಳದ ಮಾಹಿತಿ

ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕ ದಳದ ವ್ಯಾಪ್ತಿಯ ಚಿಕ್ಕಮಗಳೂರು, ಬೆಳವಾಡಿ, ಕಡೂರು, ಸಖರಾಯಪಟ್ಟಣ, ಕಾಟಗನೆರೆ, ಬೀರೂರು, ತರೀಕೆರೆ, ಶಿವನಿ, ಅಜ್ಜಂಪುರ, ಬಾಳೆಹೊನ್ನೂರು, ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಕಳಸಾಪುರ, ಲಿಂಗದಹಳ್ಳಿ, ಹರಿಹರಪುರ, ಜಯಪುರ, ಹೋಚಿಹಳ್ಳಿ, ಮೂಡಿಗೆರೆ ಹಾಗೂ ಜಾವೂರು ಭಾಗಗಳಲ್ಲಿ ಉದ್ಯೋಗ ನಿರ್ವಹಿಸಬೇಕಾಗುತ್ತದೆ.

ಇದನ್ನೂ ಓದಿ: Indian airforce agniveer recruitment 2024 : PUC ಪಾಸಾದವರಿಗೆ ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಆಹ್ವಾನ | 40,000 ರೂಪಾಯಿ ಸಂಬಳ | 3,500ಕ್ಕೂ ಹೆಚ್ಚು ಹುದ್ದೆಗಳು

ನೇಮಕಾತಿ ಕುರಿತ ಪತ್ರಿಕಾ ಪ್ರಕಟಣೆ

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿಗಳನ್ನು ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಿಂದ ಹಾಗೂ ಘಟಕಾಧಿಕಾರಿ ಕಛೇರಿ ಗೃಹರಕ್ಷಕ ದಳ ಇವರಿಂದ ಉಚಿತವಾಗಿ ಪಡೆದು, ಇದೇ ಜನವರಿ 31, 2024ರ ಒಳಗೆ ಸಂಬ೦ಧಿಸಿದ ಗೃಹರಕ್ಷಕ ಘಟಕಾಧಿಕಾರಿಯವರಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕ ದಳದ ಕಛೇರಿ, ಅಗ್ನಿಶಾಮಕ ಇಲಾಖೆ ಪಕ್ಕ, ಕೆ.ಎಂ.ರಸ್ತೆ, ಚಿಕ್ಕಮಗಳೂರು ಇಲ್ಲಿನ ಸಹಾಯಕ ಬೋಧಕರಾದ ಕರಿಬಸಪ್ಪ ಎಂ., ಇವರ ಮೊಬೈಲ್ ಸಂಖ್ಯೆ: 8151914734 ಹಾಗೂ ಕಚೇರಿ ಮೊಬೈಲ್ ಸಂಖ್ಯೆ 9164283743 ಸಂಪರ್ಕಿಸಲು ಕೋರಲಾಗಿದೆ.

ಇದನ್ನೂ ಓದಿ: 12ನೇ ತರಗತಿ ಪಾಸಾದವರಿಗೆ ಗ್ರಾಮ ಪಂಚಾಯಿತಿ ಹುದ್ದೆಗಳ ಹೊಸ ನೇಮಕಾತಿಗೆ ಅರ್ಜಿ ಅಹ್ವಾನ | Gram Panchayat Recruitment 2024

WhatsApp Group Join Now
Telegram Group Join Now

Related Posts

error: Content is protected !!