ಸಾಲ ಯೋಜನೆ

Adani Capital loan : ಟ್ರ‍್ಯಾಕ್ಟರ್ ಮತ್ತು ಕೃಷಿ ಉಪಕರಣಗಳ ಖರೀದಿಗೆ ಇಲ್ಲಿ ಸಿಗುತ್ತೆ ತಕ್ಷಣ ಸಾಲ | ಕೇವಲ 5 ನಿಮಿಷಗಳಲ್ಲಿ ಸಾಲ ಅನುಮೋದನೆ

WhatsApp Group Join Now
Telegram Group Join Now

Adani Capital Tractor and farm equipment loan : ಉದ್ಯಮಶೀಲತೆ ಮತ್ತು ಗ್ರಾಮೀಣ ಅಭಿವೃದ್ಧಿ ಕೇಂದ್ರೀಕರಿಸುವ ಗುರಿಯನ್ನು ಹೊಂದಿರುವ ದೇಶದ ಪ್ರತಿಷ್ಠಿತ ಬ್ಯಾಂಕಿ೦ಗ್ ಅಲ್ಲದ ಹಣಕಾಸು ಕಂಪನಿಯಾದ ‘ಅದಾನಿ ಕ್ಯಾಪಿಟಲ್’ (Adani Capital) ಕೃಷಿಕರಿಗೆ ಟ್ರ‍್ಯಾಕ್ಟರ್ ಮತ್ತು ಕೃಷಿ ಉಪಕರಣಗಳಿಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಈ ಸಾಲ ಸೌಲಭ್ಯವನ್ನು ಪಡೆಯಲು ಬೇಕಾಗಿರುವ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಇದನ್ನೂ ಓದಿ: farmers Loan waiver : ಸಾಲ ಮನ್ನಾ ಬದಲು ರೈತರಿಗೆ ನೇರ ಪರಿಹಾರ | ಸರಕಾರದ ಹೊಸ ಯೋಜನೆ

Adani capital loan advantages

‘ಅದಾನಿ ಕ್ಯಾಪಿಟಲ್’ ಕಂಪನಿಯಿ೦ದ ಟ್ರ‍್ಯಾಕ್ಟರ್ ಹಾಗೂ ಕೃಷಿ ಉಪಕರಣಗಳ ಖರೀದಿಗೆ ಸಾಲ ಪಡೆಯಲು ಅರ್ಹರಿರುವ ರೈತರಿಗೆ ತ್ವರಿತ ಸಾಲ ಸೌಲಭ್ಯ ಒದಗಿಸುತ್ತದೆ. ಎಷ್ಟು ತ್ವರಿತವೆಂದರೆ, ಕೇವಲ ಐದು ನಿಮಿಷಗಳಲ್ಲಿ ಸಾಲ ಅನುಮೋದನೆಯಾಗಿ, ಮುಂದಿನ ನಾಲ್ಕು ತಾಸುಗಳಲ್ಲಿ ಸಾಲ ಪಡೆಯುವ ಅವಕಾಶವಿದೆ. ನೀವು ಖರೀದಿಸಲು ಇಚ್ಛಿಸುವ ಟ್ರ‍್ಯಾಕ್ಟರ್ ಹಾಗೂ ಕೃಷಿ ಉಪಕರಣಗಳ ಬೆಲೆಗೆ ಅನುಗುಣವಾಗಿ ಶೇಕಡ 90ರಷ್ಟು ಹಣಕಾಸು ಸಹಾಯ ಸಿಗಲಿದೆ.

ಅದಾನಿ ಕ್ಯಾಪಿಟಲ್ ಕಂಪನಿಯ ಸಾಲ ಸೌಲಭ್ಯದ ಮತ್ತೊಂದು ವಿಶೇಷತೆ ಎಂದರೆ, ಇದು 15 ವರ್ಷಗಳಷ್ಟು ಹಳೇ ಟ್ಯಾಕ್ಟರ್ ಮೇಲೂ ಕೂಡ ಸಾಲ ಒದಗಿಸುತ್ತದೆ ಹಾಗೂ ಸಾಲ ಮರುಪಾವತಿಗೆ ಆರು ವರ್ಷಗಳ ವರೆಗಿನ ಅವಧಿ ಸಿಗಲಿದೆ. ಅದಾನಿ ಕ್ಯಾಪಿಟಲ್ ಸಂಸ್ಥೆಯು ಈ ಕೆಳಗಿನ ಉತ್ಪನ್ನಗಳಿಗೆ ಸಾಲ ಸೌಲಭ್ಯವನ್ನು ನೀಡುತ್ತದೆ:

  • ಹೊಸ ಟ್ರಾಕ್ಟರ್ ಖರೀದಿಗೆ ಸಾಲ
  • ಹಳೆಯ ಟ್ಯಾಕ್ಟರ್’ಗಳಿಗೆ ಸಾಲ
  • ಕೃಷಿ ಉಪಕರಣಗಳಿಗೆ ಸಾಲ
  • ಹಾರ್ವೆಸ್ಟರ್ ಸಾಲ

ಇದನ್ನೂ ಓದಿ: Google Pay loan upto 1 lakh : ₹1 ಲಕ್ಷದ ವರೆಗೆ ಗೂಗಲ್ ಪೇ ಲೋನ್ | ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ, ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

ಲೋನ್ ಪಡೆಯಲು ಅರ್ಹತೆಗಳೇನು?

Adani Capital Loanಗೆ ಅರ್ಜಿ ಸಲ್ಲಿಸಲು ನೀವು ಕನಿಷ್ಠ 18 ವರ್ಷದವರಾಗಿರಬೇಕು. ಅದೇ ರೀತಿ ಸಾಲದ ಮರುಪಾವತಿಯನ್ನು ಬೆಂಬಲಿಸಲು ಆದಾಯದ ಪುರಾವೆಗಳು, ಕೃಷಿ ಮಾಡಿದ ಬೆಳೆಗಳ ಆಧಾರದ ಮೇಲೆ ಕನಿಷ್ಠ ಎರಡು ಎಕರೆ ಭೂಮಿ ಹಿಡುವಳಿ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು

  • ಗುರುತಿನ ದಾಖಲೆ
  • ವಿಳಾಸದ ದಾಖಲೆ
  • ಭೂಮಿ / ಆಸ್ತಿಯ ದಾಖಲೆಗಳು
  • ಬ್ಯಾಂಕ್ ಸ್ಟೇಟ್’ಮೆಂಟ್
  • ಆಧಾರ್ ಕಾರ್ಡ್

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ಸಾಲ ಮರುಪಾವತಿ ವಿಧಾನಗಳು

ನೀವು ಹೊಸ ಟ್ರ‍್ಯಾಕ್ಟರ್ ಮೇಲೆ ಸಾಲವನ್ನು ಪಡೆದಿದ್ದರೆ ಸಾಲ ಮರುಪಾವತಿಗಾಗಿ ಆರು ವರ್ಷಗಳ ವರೆಗೆ ಅವಧಿ ಇರುತ್ತದೆ. ಒಂದು ವೇಳೆ ನೀವು ಹಳೆಯ ಟ್ರ‍್ಯಾಕ್ಟರ್ ಮೇಲೆ ಸಾಲವನ್ನು ಪಡೆದಿದ್ದರೆ ನಾಲ್ಕು ವರ್ಷಗಳ ವರೆಗೆ ಮರುಪಾವತಿಗೆ ಅವಧಿ ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈ ಸಾಲವನ್ನು ಪಡೆಯಲು ನಾವು ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು ಅಥವಾ ಕೆಳಗೆ ನೀಡಿರುವ ಸಹಾಯವಾಣಿಗೆ ಕರೆ ಮಾಡಿದರೆ ಲೋನ್ ಪಡೆಯುವ ಸಂಪೂರ್ಣ ಮಾಹಿತಿ ಸಿಗುತ್ತದೆ.

ಇದನ್ನೂ ಓದಿ: ರೈತರಿಗೆ ಸಾಲ ನೀಡಲು ಬ್ಯಾಂಕುಗಳ ಹಿಂದೇಟು : ಸರಕಾರಿ ಸಬ್ಸಿಡಿ ಯೋಜನೆಗಳು ಮಣ್ಣುಪಾಲು | farmers Bank loan

Adani Capital Tractor and farm equipment loan

WhatsApp Group Join Now
Telegram Group Join Now

Related Posts

error: Content is protected !!