ಉದ್ಯೋಗ

Indian airforce agniveer recruitment 2024 : PUC ಪಾಸಾದವರಿಗೆ ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಆಹ್ವಾನ | 40,000 ರೂಪಾಯಿ ಸಂಬಳ | 3,500ಕ್ಕೂ ಹೆಚ್ಚು ಹುದ್ದೆಗಳು

WhatsApp Group Join Now
Telegram Group Join Now

Indian airforce agniveer recruitment 2024

ಭಾರತೀಯ ವಾಯುಪಡೆ ಸೇನೆಯು ಪ್ರತಿ ವರ್ಷ ಅಗ್ನಿಪಥ ಯೋಜನೆಯ ಅಡಿಯಲ್ಲಿ ನಾಲ್ಕು ವರ್ಷದ ಅವಧಿಗೆ ಅಗ್ನಿವೀರರ ನೇಮಕಾತಿ ಮಾಡಿಕೊಳ್ಳುತ್ತಿದ್ದು ಈ ವರ್ಷದ ಮೊದಲ ಅಧಿಸೂಚನೆ ಪ್ರಕಟಣೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್, ಪ್ರಮುಖ ದಿನಾಂಕಗಳು, ಅರ್ಜಿ ಶುಲ್ಕಗಳ ವಿವರ ಮತ್ತು ಅಧಿಕೃತ ಅಧಿಸೂಚನೆಯ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಇದನ್ನೂ ಓದಿ: Pension Schemes New Rules : ಇನ್ಮುಂದೆ ಇವರಿಗೆ ವೃದ್ದಾಪ್ಯ ವೇತನ ಸೇರಿ ಎಲ್ಲ ಪಿಂಚಣಿ ಬಂದ್ | ಹೊಸ ರೂಲ್ಸ್

Indian airforce agniveer recruitment 2024 ಹುದ್ದೆಗಳ ಸಂಕ್ಷಿಪ್ತ ವಿವರ

 • ನೇಮಕಾತಿ ಸಂಸ್ಥೆ : ಭಾರತೀಯ ವಾಯು ಸೇನಾ
 • ಖಾಲಿ ಹುದ್ದೆಗಳು : 3,500ಕ್ಕೂ ಹೆಚ್ಚು ಹುದ್ದೆಗಳು
 • ಹುದ್ದೆಗಳ ಹೆಸರು : ಅಗ್ನಿವೀರ ವಾಯು
 • ಅರ್ಜಿ ಸಲ್ಲಿಕೆ : ಆನ್ ಲೈನ್ ಮುಖಾಂತರ
 • ಉದ್ಯೋಗ ಸ್ಥಳ : ಭಾರತದಾದ್ಯಂತ

ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ.50 ಅಂಕಗಳೊ೦ದಿಗೆ ಪಾಸಾಗಿರಬೇಕು. ಅದೇ ರೀತಿ ಮೂರು ವರ್ಷ ಡಿಪ್ಲೋಮಾ ಇನ್ ಇಂಜಿನಿಯರಿ೦ಗ್ ಶಿಕ್ಷಣ ಮುಗಿಸಿದವರು ಅಥವಾ ಎರಡು ವರ್ಷಗಳ ವೊಕೇಶನಲ್ ಮತ್ತು ನಾನ್ ಒಕೇಶನಲ್ ಕೋರ್ಸ್ ಮುಗಿಸಿದವರು ಕೂಡ ಕೂಡ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ ನೋಡುವುದಾದರೆ 2004ರ ಜನವರಿ 2 ಮತ್ತು 2007ರ ಜುಲೈ 2ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅದೇ ರೀತಿ ಗರಿಷ್ಠ ವಯಸ್ಸು ಮತ್ತು ಅಭ್ಯರ್ಥಿಗಳ ಎತ್ತರ ನೋಡುವುದಾದರೆ, ಗರಿಷ್ಟ ವಯಸ್ಸು ಯಾವುದೇ ಕಾರಣಕ್ಕೂ 21 ವರ್ಷ ಮೀರಿರಬಾರದು ಮತ್ತು ಕನಿಷ್ಠ ಎತ್ತರ 152.5 ಸೆಂ. ಇರಬೇಕು.

ಇದನ್ನೂ ಓದಿ: Indian post office Staff Car Drivers Recruitment 2023 | ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಅಂಚೆ ಇಲಾಖೆ ಸ್ಟಾಫ್‌ಕಾರ್ ಡ್ರೈವರ್ ಹುದ್ದೆಗಳು

ಮಾಸಿಕ ಸಂಬಳ ಮತ್ತು ಆಯ್ಕೆ ವಿಧಾನ ಹೇಗೆ?

ಅಗ್ನಿಪಥ ಯೋಜನೆಗೆ ಸಂಬAಧಿಸಿದ ಈ ನೇಮಕಾತಿಯ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ವರ್ಷದ ಅವಧಿಗೆ ಪ್ರತಿ ವರ್ಷದ ಮಾಸಿಕ ಸಂಬಳ ಈ ಕೆಳಗಿನಂತಿರುತ್ತದೆ.

 • 1 ನೇ ವರ್ಷ: 30,000 ರೂಪಾಯಿ
 • 2 ನೇ ವರ್ಷ: 33,000 ರೂಪಾಯಿ
 • 3 ನೇ ವರ್ಷ : 36,500 ರೂಪಾಯಿ
 • 4 ನೇ ವರ್ಷ : 40,000 ರೂಪಾಯಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುತ್ತಾರೆ. ಈ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಪಾಸಾದ ಅರ್ಹ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ನಂತರದಲ್ಲಿ ದಾಖಲಾತಿ ಪರಿಶೀಲನೆ ಮುಖಾಂತರ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.

ಇದನ್ನೂ ಓದಿ: Adani Capital loan : ಟ್ರ‍್ಯಾಕ್ಟರ್ ಮತ್ತು ಕೃಷಿ ಉಪಕರಣಗಳ ಖರೀದಿಗೆ ಇಲ್ಲಿ ಸಿಗುತ್ತೆ ತಕ್ಷಣ ಸಾಲ | ಕೇವಲ 5 ನಿಮಿಷಗಳಲ್ಲಿ ಸಾಲ ಅನುಮೋದನೆ

ಅರ್ಜಿ ಶುಲ್ಕಗಳ ವಿವರ

ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ 550 ರೂಪಾಯಿ ನಿಗದಿಪಡಿಸಲಾಗಿದ್ದು, ಈ ಅರ್ಜಿ ಶುಲ್ಕವನ್ನು ಆನ್‌ಲೈನ್ ಮುಖಾಂತರ ಪಾವತಿಸಬೇಕು. ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಮತ್ತೆ ಹಿಂಪಡೆಯಲು ಸಾಧ್ಯವಿಲ್ಲ.

ನೇಮಕಾತಿಯ ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 17-01-2024
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-02-2024

ಇದನ್ನೂ ಓದಿ: District court recruitment 2023 : SSLC ಮುಗಿಸಿದವರಿಗೆ ಸರ್ಕಾರಿ ನೌಕರಿ | ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವಕಾಶ | ಸಂಬಳ ₹37,900

ನೇಮಕಾತಿಗೆ ಸಂಬ೦ಧಿಸಿದ ಪ್ರಮುಖ ಲಿಂಕುಗಳು

ಅಧಿಸೂಚನೆ : Download
ಅಧಿಕೃತ ಜಾಲತಾಣ : Click here
ಸಹಾಯವಾಣಿ : (011) 25699606

ಇದನ್ನೂ ಓದಿ: Village Accountant Recruitment : 1,839 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ | ಅಧಿಕೃತ ಜಿಲ್ಲಾವಾರು ಹುದ್ದೆಗಳ ಪಟ್ಟಿ ಬಿಡುಗಡೆ | PUC ಪಾಸಾದವರಿಗೆ ಭರ್ಜರಿ ಅವಕಾಶ

Forest land allotted to farmers : 7,000 ರೈತರಿಗೆ ಅರಣ್ಯ ಭೂಮಿ ಮಂಜೂರು | ಯಾರಿಗೆಲ್ಲ ಸಿಗಲಿದೆ ಹಕ್ಕುಪತ್ರ?

WhatsApp Group Join Now
Telegram Group Join Now

Related Posts

error: Content is protected !!