ಉದ್ಯೋಗ

2023ನೇ ಸಾಲಿನ ವಾಯುಪಡೆ ಅಗ್ನಿವೀರರ ನೇಮಕಕ್ಕೆ PUC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ: ₹40,000 ಸಂಬಳ | IAF Agniveervayu Recruitment 2023

WhatsApp Group Join Now
Telegram Group Join Now

ಭಾರತೀಯ ವಾಯುಪಡೆಯು (IAF) 2023ನೇ ಸಾಲಿನ ಅಗ್ನಿಪಥ ಅಗ್ನಿವೀರರ ಹುದ್ದೆಗಳ ಭರ್ತಿಗೆ 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತಿಂಗಳಿಗೆ 30,000 ರಿಂದ ₹40,000 ಸಂಬಳವಿದೆ. ಜೀವವಿಮಾ ಸೌಲಭ್ಯ, ಆಕರ್ಷಕ ಭತ್ಯೆ, ಜೀವಹಾನಿ ಪರಿಹಾರ, ನಿವೃತ್ತಿ ಸೇವಾನಿಧಿ ಪ್ಯಾಕೇಜ್, ಅರ್ಜಿ ಸಲ್ಲಿಕೆ ವಿಧಾನ, ವಯೋಮಿತಿ ಇತ್ಯಾದಿ ಮಾಹಿತಿ ಇಲ್ಲಿದೆ…

ಭಾರತೀಯ ವಾಯುಪಡೆಯು (IAF) 2023ನೇ ಸಾಲಿನ ಅಗ್ನಿಪಥ ಅಗ್ನಿವೀರರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಅಗ್ನಿವೀರರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇದೊಂದು ಫುಲ್‌ಟೈಮ್ ಉದ್ಯೋಗವಾಗಿದ್ದು; 30,000 ರಿಂದ ₹40,000 ವೇತನವಿದೆ.

ಉಚಿತ ರೇಷನ್, ಡ್ರೆಸ್, ಪ್ರಯಾಣ ಭತ್ಯೆ, ಜತೆಗೆ 48 ಲಕ್ಷ ರೂಪಾಯಿ ಮೊತ್ತದ ಜೀವ ವಿಮೆ ಹಾಗೂ ಒಂದು ಕೋಟಿ ರೂಪಾಯಿಗಳ ಜೀವಹಾನಿ ಪರಿಹಾರ, 10.04 ಲಕ್ಷ ರೂಪಾಯಿ ನಿವೃತ್ತಿ ಸೇವಾನಿಧಿ ಪ್ಯಾಕೇಜ್ ಲಭ್ಯವಿರುವ ದೇಶಸೇವಾ ಕಂಕೈರ್ಯದ ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದನ್ನೂ ಓದಿ: ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ಯಾವಾಗ ಸಿಗುತ್ತದೆ? ಇಲ್ಲಿದೆ ಮಹತ್ವದ ಮಾಹಿತಿ

ಈ ಹುದ್ದೆಗಳಿಗೆ ನವೆಂಬರ್ 07,2022ರಿಂದ ಅರ್ಜಿ ಸ್ವೀಕಾರ ಆರಂಭವಾಗಿದ್ದು; ಆಸಕ್ತ ಅಭ್ಯರ್ಥಿಗಳು ನವೆಂಬರ್ 23, 2022ರ ಸಂಜೆ 05 ಗಂಟೆಯೊಳಗೆ ವಾಯುಪಡೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ: ಅಭ್ಯರ್ಥಿ 12ನೇ ತರಗತಿಯಲ್ಲಿ ಕಡ್ಡಾಯವಾಗಿ ಗಣಿತ, ಭೌತಶಾಸ್ತ್ರ, ಇಂಗ್ಲಿಷ್ ಓದಿರಬೇಕು. ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಆಗಿರಬೇಕು. ಇಂಗ್ಲಿಷ್‌ನಲ್ಲಿ ಶೇ.50 ಅಂಕ ಗಳಿಸಿರಬೇಕು. ಅಥವಾ ಮೂರು ವರ್ಷದ ಡಿಪ್ಲೊಮ ಇಂಜಿನಿಯರಿಂಗ್ ಅನ್ನು ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಇಂಗ್ಲಿಷ್‌ನಲ್ಲಿ ಶೇ.50 ಅಂಕ ಗಳಿಸಿರಬೇಕು. ಇದನ್ನೂ ಓದಿ: ಖಾಸಗಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಗುಡ್‌ನ್ಯೂಸ್: ಶೀಘ್ರದಲ್ಲಿಯೇ 60,000 ಕುಟುಂಬಗಳಿಗೆ ಸಿಗಲಿದೆ ಹಕ್ಕುಪತ್ರ

ಅರ್ಜಿ ಸಲ್ಲಿಕೆ ಬೇಕಾಗುವ ದಾಖಲೆಗಳು: 10ನೇ ತರಗತಿ ಅಂಕಪಟ್ಟಿ, 12ನೇ ತರಗತಿ ವಿಜ್ಞಾನ ವಿಭಾಗ / ತತ್ಸಮಾನ ವಿದ್ಯಾರ್ಹತೆ ದಾಖಲೆ ಅಥವಾ ಮೂರು ವರ್ಷ ಡಿಪ್ಲೊಮ ಪದವಿ ಅಂತಿಮ ವರ್ಷದ ಅಂಕಪಟ್ಟಿ, ಎರಡು ವರ್ಷದ ವೊಕೇಷನಲ್ ಕೋರ್ಸ್ ಸರ್ಟಿಫಿಕೇಟ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಅಭ್ಯರ್ಥಿ ಸಹಿ ಸ್ಕ್ಯಾನ್ ಕಾಪಿ, ಅಭ್ಯರ್ಥಿ ಎಡಗೈ ಹೆಬ್ಬೆರಳು ಥಂಬ್ ಇಂಪ್ರೆಷನ್ ಸ್ಕ್ಯಾನ್ ಕಾಪಿ ಹಾಗೂ ಪೋಷಕರ ಸಹಿ

ವಯೋಮಿತಿ: 2023ನೇ ಸಾಲಿನ ಅಗ್ನಿವೀರ್‌ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 27 ಜೂನ್ 2002 ಮತ್ತು 27 ಡಿಸೆಂಬರ್ 2005ರ ನಡುವೆ ಜನಿಸಿರಬೇಕು.

ಅರ್ಜಿ ಶುಲ್ಕ: ಅರ್ಜಿ ಶುಲ್ಕವು 250 ರೂಪಾಗಳಾಗಿದ್ದು; ಇದನ್ನು ಆನ್‌ಲೈನ್, ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡಬಹುದು. ಇದನ್ನೂ ಓದಿ: SSLC, PUC ಪಾಸಾದವರಿಗೆ ಐಸಿಐಸಿಐ ಬ್ಯಾಂಕ್‌ನಲ್ಲಿ 4,000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಐಎಎಫ್ ಅಗ್ನಿವೀರ್ ಹುದ್ದೆಗಳನ್ನು ದೇಶದ ಯಾವುದೇ ಮೂಲೆಯ ಐಎಎಫ್ ರಕ್ಷಣಾ ಘಟಕಗಳಲ್ಲಿ ನೇಮಕ ಮಾಡಲಾಗುತ್ತದೆ.

ವೇತನಶ್ರೇಣಿ: ಮೊದಲನೇ ವರ್ಷ 30,000 ರೂಪಾಯಿ, ಎರಡನೇ ವರ್ಷ 33,000 ರೂಪಾಯಿ, ಮೂರನೇ ವರ್ಷ 36,500 ರೂಪಾಯಿ, ನಾಲ್ಕನೇ ವರ್ಷ 40,000 ಜತೆಗೆ ಇತರೆ ಭತ್ಯೆಗಳು. ಇತರೆ ಭತ್ಯೆಗಳು ಪ್ರತಿ ವರ್ಷವೂ ಅನ್ವಯವಾಗುತ್ತವೆ. ಇದನ್ನೂ ಓದಿ: ₹50,000 ವಿಶೇಷ ಪ್ರೊತ್ಸಾಹಧನಕ್ಕೆ D.Ed, B.Ed ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ರಜೆಗಳ ವಿವರ: ವಾಯುಪಡೆಯ ಅಗ್ನಿವೀರ್ ಹುದ್ದೆಗೆ ಸೇರಿದ ಅಭ್ಯರ್ಥಿಗಳಿಗೆ ವಾರ್ಷಿಕ 30 ರಜೆಗಳು ಸಿಗುವ ಅವಕಾಶವಿದೆ. ವೈದ್ಯರ ಸಲಹೆ ಮೇರೆಗೆ ಮೆಡಿಕಲ್ ರಜೆಗಳು ನಿರ್ಧರಿತವಾಗುತ್ತವೆ.

ಅಗ್ನಿವೀರರಿಗೆ ಸಿಗುವ ಸೌಲಭ್ಯಗಳು

  • ರಿಸ್ಕ್ ಅಂಡ್ ಹಾರ್ಡ್‌ಶಿಪ್, ರೇಷನ್, ಡ್ರೆಸ್, ಪ್ರಯಾಣ ಭತ್ಯೆಗಳನ್ನು ನೀಡಲಾಗುತ್ತದೆ.
  • ಅಗ್ನಿವೀರರಿಂದ 9 ಸಾವಿರ ರೂಪಾಯಿ ಮತ್ತು ಸರ್ಕಾರದ 9 ಸಾವಿರ ರೂಪಾಯಿಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂಪಾಯಿಗಳ ಪಿಎಫ್ ಸೌಲಭ್ಯ ಇರಲಿದೆ.
  • ಒಟ್ಟಾರೆ ವಾರ್ಷಿಕ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಇದೆ.
  • 48 ಲಕ್ಷ ರೂಪಾಯಿ ವರೆಗಿನ ವಿಮಾ ಸೌಲಭ್ಯ ಇರಲಿದ್ದು, ಇದಕ್ಕೆ ಸೈನಿಕರು ವಂತಿಕೆ ಕಟ್ಟಬೇಕಿಲ್ಲ.
  • ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಜತೆಗೆ ಉಳಿದ ಸೇವಾ ಅವಧಿಯ ಸಂಬಳ ಪ್ರಾಪ್ತವಾಗಲಿದೆ.
  • ಒಂದು ವೇಳೆ ಸೇವೆ ಸಮಯದಲ್ಲಿ ಅಂಗವೈಕಲ್ಯವಾದರೆ ಅದರ ಗಂಭೀರತೆ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿ ವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ.
  • ಅಗ್ನಿವೀರ್ ಹುದ್ದೆಯಿಂದ ನಿವೃತ್ತಿ ಪಡೆದ ಸಂದರ್ಭದಲ್ಲಿ ಸೇವಾನಿಧಿ ಪ್ಯಾಕೇಜ್ 10.04 ಲಕ್ಷ ರೂಪಾಯಿಯನ್ನು ಅಭ್ಯರ್ಥಿಗೆ ನೀಡಲಾಗುತ್ತದೆ. ಇದನ್ನೂ ಓದಿ: ಇನ್ಮುಂದೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡದಿದ್ದರೆ ಸೌಲಭ್ಯಗಳು ಕಟ್: ಮೊಬೈಲ್‌ನಲ್ಲೇ ಮಾಡಿ ಆಧಾರ್ ಅಪ್‌ಡೇಟ್ 

ವಾಯುಪಡೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ  ಅಗ್ನಿವೀರರ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಗ್ನಿವೀರ್ ಹುದ್ದೆಗಳ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಉದ್ಯೋಗ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ…

WhatsApp Group Join Now
Telegram Group Join Now

Related Posts

error: Content is protected !!