ಕೃಷಿಸರಕಾರಿ ಯೋಜನೆ

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಆವಾಂತರ : ರೈತರ ಗೊಂದಲಕ್ಕಿಲ್ಲ ಪರಿಹಾರ Agriculture Pumpset Aadhaar Linking

WhatsApp Group Join Now
Telegram Group Join Now

ಕೃಷಿ ಪಂಪ್‌ಸೆಟ್‌ಗೆ ಆಧಾರ್ ಜೋಡಣೆ ಮಾಡದಿದ್ದರೆ ಸರಕಾರ ನೀಡುತ್ತಿರುವ ಸಹಾಯಧನ ನಿಲ್ಲುತ್ತದೆ ಎಂಬ ಗೊಂದಲ ರೈತರಲ್ಲಿ ತೀವ್ರವಾಗುತ್ತಿದೆ…

Agriculture Pumpset Aadhaar Linking : ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಯ ಗೊಂದಲ ದಿನೇ ದಿನೆ ತೀವ್ರವಾಗುತ್ತಿದೆ. ಹೆಚ್ಚೂಕಮಿ ಕಳೆದ ಎಂಟ್ಹತ್ತು ತಿಂಗಳುಗಳಿ೦ದ ಈ ಗೊಂದಲ ಮುಂದುವರೆದಿದ್ದು; ರಾಜ್ಯದ ಅಲ್ಲಲ್ಲಿ ರೈತರು ಪ್ರತಿಭಟನೆ ಕೂಡ ಮಾಡಿದ್ದಾರೆ. ಬರಗಾಲದಲ್ಲಿ ಇದೆಂತಹ ಉದ್ಧಟತನ ಎಂಬ ಆಕ್ರೋಶವೂ ವ್ಯಕ್ತವಾಗಿದೆ.

ಇದನ್ನೂ ಓದಿ: BPNL Recruitment 2024 : ಪಶುಪಾಲನಾ ನಿಗಮದಲ್ಲಿ SSLC, PUC ಪಾಸಾದವರಿಗೆ 1884 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ…

ಏನಿದು ಆಧಾರ್ ಲಿಂಕ್ ಗೊಂದಲ?

ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗವು (Karnataka Electricity Regulatory Commission – KERC) ಕಳೆದ 2023ರ ಮಾರ್ಚ್ ತಿಂಗಳಿನಲ್ಲಿ ಆರು ತಿಂಗಳೊಳಗಾಗಿ ರೈತರ ಆಧಾರ್ ಕಾರ್ಡ್ನೊಂದಿಗೆ ಕೃಷಿ ಪಂಪ್‌ಸೆಟ್‌ಗಳ ಆರ್.ಆರ್ ನಂಬರ್ ಅನ್ನು ಜೋಡಣೆ ಮಾಡುವಂತೆ ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳಿಗೆ ಸೂಚನೆ ನೀಡಿತ್ತು. ಈ ಬಗ್ಗೆ ರೈತರಲ್ಲಿ ನಾನಾ ನಮೂನೆ ಊಹಾಪೋಹಗಳು ಹರಿದಾಡುತ್ತ ಬಂದಿವೆ.

  • ಕೃಷಿ ಪಂಪ್‌ಸೆಟ್‌ಗೆ ಆಧಾರ್ ಜೋಡಣೆ ಮಾಡದಿದ್ದರೆ ಸರಕಾರ ನೀಡುತ್ತಿರುವ ಸಬ್ಸಿಡಿ ನಿಲ್ಲುತ್ತದಂತೆ.
  • ಸರ್ಕಾರ ರಾಜ್ಯದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡುವ ಹುನ್ನಾರ ನಡೆಸಿದೆ.
  • ಕೃಷಿಗೆ ನೀಡುವ ಉಚಿತ ವಿದ್ಯುತ್‌ಗೆ ಕತ್ತರ ಹಾಕುವ ಪ್ರಯತ್ನ ನಡೆದಿದೆ.

… ಹೀಗೆ ಬಗೆಬಗೆ ಮಾತುಗಳು ರೈತ ವಲಯದಲ್ಲಿ ಹರಿದಾಡುತ್ತ ಬರುತ್ತಿವೆ. ಇದಕ್ಕೆ ಪೂರಕವೆಂಬ೦ತೆ ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳು ಆಧಾರ್ ಜೋಡಣೆಯ ಎಚ್ಚರಿಕೆಯನ್ನು ರೈತರಿಗೆ ಪದೇ ಪದೇ ನೀಡುತ್ತಿವೆ. ಮಾತ್ರವಲ್ಲ ಕೆಲವು ಎಸ್ಕಾಂಗಳು ಆಧಾರ್ ಕಾರ್ಡ್ ಜೋಡಣೆ ಕೆಲಸದಲ್ಲಿ ತಲ್ಲೀನವಾಗಿರುವುದು ರೈತ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಹುದ್ದೆಗಳಿಗೆ 10ನೇ ತರಗತಿ, PUC ಪಾಸಾದವರಿಂದ ಅರ್ಜಿ | Mandya DCC Bank recruitment 2024

ಕೃಷಿಗೆ ಬಳಕೆಯಾಗುತ್ತಿರುವ ವಿದ್ಯುತ್ ಎಷ್ಟು?

ಸರಕಾರದ ಅಂಕಿಅ೦ಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ 50.34 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವಿದ್ದು; ಇದರಲ್ಲಿ 42.35 ಲಕ್ಷ ಹೆಕ್ಟೇರ್ ನಿವ್ವಳ ನೀರಾವರಿ ಪ್ರದೇಶವಿದೆ. ಆದರೆ ಯಾವುದೇ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಇಲ್ಲ. ಕರಾವಳಿ ಭಾಗದಲ್ಲಿ ಮೀಟರ್ ಅಳವಡಿಕೆ ಮಾಡಿದ್ದರೂ ಕೂಡ ರೀಡಿಂಗ್ ಮಾಡುತ್ತಿಲ್ಲ.

ಇದರಿಂದಾಗಿ ಕೃಷಿಗಾಗಿ ಎಷ್ಟು ಪ್ರಮಾಣದ ವಿದ್ಯುತ್ ಪೂರೈಕೆ ಆಗುತ್ತಿದೆ ಎಂಬ ನಿಖರ ಲೆಕ್ಕವಿಲ್ಲ. ದಶಕಗಳಿಂದ ಒಟ್ಟಾರೆ ಬಳಕೆಯ ಶೇ.34ರಷ್ಟು ವಿದ್ಯುತ್ ಪಂಪ್‌ಸೆಟ್‌ಗಳಿಗೆ ಹೋಗುತ್ತಿದೆ ಎನ್ನಲಾಗುತ್ತಿದೆ. ಈಗ ಅದರ ನಿಖರ ಲೆಕ್ಕಾಚಾರಕ್ಕಾಗಿ ಆಧಾರ್ ಜೋಡಣೆಯ ಸಂದೇಶ ರವಾನೆಯಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹೈನುಗಾರಿಕೆ, ಮೀನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಣೆಗೆ ಗರಿಷ್ಠ ₹3 ಲಕ್ಷ ಸಾಲ | Pashu Kisan Credit Card Yojana (PKCC)

ಉಚಿತ ವಿದ್ಯುತ್‌ಗೆ ಕತ್ತರಿ ಬೀಳುತ್ತಾ?

ರಾಜ್ಯದಲ್ಲಿ ಕೃಷಿಗಾಗಿ ಬಳಕೆಯಾಗುವ ನಿಖರ ವಿದ್ಯುತ್ ಲೆಕ್ಕಾಚಾರ ಇಲ್ಲವಾದರೂ ಸರ್ಕಾರ ರೈತರ ಹಿತದೃಷ್ಟಿಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದೆ. ಕೃಷಿ ಚಟುವಟಿಕೆಗೆ 10 ಹೆಚ್‌ಪಿ ತನಕ ವಿದ್ಯುತ್ ಉಚಿತವಾಗಿ ಪೂರೈಕೆ ಆಗುತ್ತಿದೆ. 10 ಹೆಚ್‌ಪಿಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಮಾತ್ರ ಹಣವನ್ನು ಕಟ್ಟಬೇಕು.

ಬಹಳಷ್ಟು ರೈತರು ಬಹು ಸಂಪರ್ಕಗಳನ್ನು ಹೊಂದಿರುವುದರಿ೦ದ ಯಥೇಚ್ಛವಾಗಿ ವಿದ್ಯುತ್ ಬಳಕೆಯಾಗುತ್ತಿರುವ ಅನುಮಾನವಿದೆ. ಬಹುತೇಕ ರೈತರು ಒಂದಕ್ಕಿAತ ಹೆಚ್ಚು ಆರ್.ಆರ್ ನಂಬರ್ ಹೊಂದಿದ್ದು; ಅದನ್ನು ಬಳಸುತ್ತಿರುವ ಗ್ರಾಹಕರ ಆಧಾರ್ ಸಂಖ್ಯೆ ಒಂದೇ ಆಗಿದೆ. ಈಗ ಆಧಾರ್ ಲಿಂಕ್ ಮಾಡುವ ನೆಪದಲ್ಲಿ ಆ ಬಹು ಸಂಪರ್ಕಗಳಿಗೆ ಕತ್ತರಿ ಹಾಕುವ ಉದ್ದೇಶ ಇದರ ಹಿಂದಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ರಾಜ್ಯ ಸರಕಾರ ಎಲ್ಲ ಎಸ್ಕಾಂಗಳಿಗೆ ಸ್ಪಷ್ಟ ನಿರ್ದೇಶನ ನೀಡದ ಹೊರತು ಆಧಾರ್ ಜೋಡಣೆಯ ಗೊಂದಲಕ್ಕೆ ಕೊನೆ ಇಲ್ಲ. ಈಗಾಗಲೇ ರೈತ ಸಂಘಟನೆಗಳು ಬಹಳಷ್ಟು ಪ್ರತಿಭಟನೆ ಮಾಡಿವೆ. ಗೃಹಜ್ಯೋತಿಯಂತಹ ಉಚಿತ ವಿದ್ಯುತ್ ಯೋಜನೆ ಅನುಷ್ಠಾನಗೊಳಿಸಿರುವ ರಾಜ್ಯ ಸರಕಾರ ರೈತರ ಹಿತದೃಷ್ಟಿಯಿಂದ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ ಎಂಬುವುದು ರೈತರ ಆಗ್ರಹವಾಗಿದೆ.

Agriculture Pumpset Aadhaar Linking

ಇದನ್ನೂ ಓದಿ: Government Business Loan Schemes : ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು | 10 ಲಕ್ಷದಿಂದ 1 ಕೋಟಿ ತನಕ ಸಾಲ


Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

Google Pay loan up to 8 lakh : ಆನ್‌ಲೈನ್ ಹಣ ವರ್ಗಾವಣೆ ಇಂದು ಸರ್ವೇ ಸಾಮಾನ್ಯವಾಗಿದೆ. ಕೇವಲ ಹಣ ವರ್ಗಾವಣೆಗೆ ಮಾತ್ರವಲ್ಲದೆ ಇದೀಗ ಸಾಲ ಸೌಲಭ್ಯವನ್ನು ಕೂಡ ಆನ್‌ಲೈನ್ ಮುಖಾಂತರ ಕೇವಲ ಎರಡು ನಿಮಿಷದಲ್ಲಿ ಪಡೆಯಬಹುದಾಗಿದೆ. ಡಿಜಿಟಲ್ ಪೇಮೆಂಟ್’ಗೆ ಹೆಸರುವಾಸಿಯಾದ ‘ಗೂಗಲ್ ಪೇ’ ಕಂಪನಿಯವರು ಅರ್ಹ ಗ್ರಾಹಕರಿಗೆ 10,000 ದಿಂದ 8 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದಾರೆ. ಗೂಗಲ್ ಪೇ ಮುಖಾಂತರ ಈ ಸಾಲವನ್ನು ಪಡೆಯಲು ಬೇಕಾಗಿರುವ ಅರ್ಹತೆ, ಸಾಲ ಸೌಲಭ್ಯದ ಇತರ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಇದನ್ನೂ ಓದಿ: ಬ್ಯಾಂಕುಗಳಿ೦ದ ಕಡಿಮೆ ಬಡ್ಡಿ ಸಾಲ ಬೇಕೆ? ಇಲ್ಲಿದೆ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ How to Check CIBIL Score?

ಸಾಲದ ವಿವರ

ಗೂಗಲ್ ಪೇ ಕಂಪನಿಯವರು ಈ ಸಾಲ ಸೌಲಭ್ಯವನ್ನು DMI FINANCE ಕಂಪನಿಯವರ ಸಹಭಾಗಿತ್ವದಲ್ಲಿ, ಅರ್ಹ ಗ್ರಾಹಕರಿಗೆ 10,000 ದಿಂದ 8 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯವನ್ನು ಕಲ್ಪಿಸುತ್ತಿದ್ದಾರೆ. ಯಾವುದೇ ರೀತಿಯ ಪೇಪರ್ ವರ್ಕ್ ಇಲ್ಲದೆ ಕೇವಲ ಎರಡು ನಿಮಿಷದಲ್ಲಿ ಈ ಸಾಲಕ್ಕೆ (Loan) ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯು ಸಂಪೂರ್ಣ ಡಿಜಿಟಲ್. ಅಂದರೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಬಹುದಾದ ವ್ಯವಸ್ಥೆಯಾಗಿದೆ.

ಅರ್ಜಿ ಯಾರು ಸಲ್ಲಿಸಬಹುದು?

ಗೂಗಲ್ ಪೇ ಸಾಲ ಸೌಲಭ್ಯ ಪಡೆಯಲು, ಆನ್‌ಲೈನ್ ನಗದು ವರ್ಗಾವಣೆಗಾಗಿ (Online transaction) ಗೂಗಲ್ ಪೇ ಅಪ್ಲಿಕೇಶನ್ ಉಪಯೋಗಿಸುತ್ತಿರುವ ಎಲ್ಲಾ ಗ್ರಾಹಕರ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Government Business Loan Schemes : ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು | 10 ಲಕ್ಷದಿಂದ 1 ಕೋಟಿ ತನಕ ಸಾಲ

ಸಾಲದ ಅವಧಿ ಮತ್ತು ಸಾಲ ಮರುಪಾವತಿ ವಿವರ (Loan period and repayment details)

ಗೂಗಲ್ ಪೇ ಸಾಲ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಕಂಪನಿಯವರು ನಿಮ್ಮ ಅರ್ಹತೆಗಳನ್ನು ಪರಿಶೀಲಿಸಿ ಅರ್ಹತೆಗಳಿಗೆ ಅನುಗುಣವಾಗಿ ಸಾಲವನ್ನು ನೀಡುತ್ತಾರೆ. ಸಾಲದ ಅವಧಿಯು 6 ತಿಂಗಳಿನಿ೦ದ ನಾಲ್ಕು ವರ್ಷದ ವರೆಗೆ ಇರುತ್ತದೆ. ಅಂದರೆ ನೀವು ಸಾಲ ಪಡೆದ ನಂತರ, ನೀವು ಪಡೆದ ಸಾಲದ ಮೊತ್ತ ಮತ್ತು ಬಡ್ಡಿ ಹಣವನ್ನು ಸೇರಿ ಒಟ್ಟು ಮೊತ್ತವನ್ನು ಆರು ತಿಂಗಳಿನಿAದ ನಾಲ್ಕು ವರ್ಷಗಳ ವರೆಗೆ ಮರುಪಾವತಿ ಮಾಡಬಹುದಾಗಿದೆ. ಮರುಪಾವತಿ ಹಣವು ತಿಂಗಳಿಗೆ 1,000 ರೂಪಾಯಿಯಿಂದ ಆರಂಭವಾಗುತ್ತದೆ. Monthly EMI ಮೊತ್ತವು ನೀವು ಪಡೆದುಕೊಂಡ ಸಾಲ ಮತ್ತು ಸಾಲದ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ.

ಸಾಲದ ಮೇಲಿನ ಬಡ್ಡಿ ಎಷ್ಟು? (Interests rate on loan)

ಗೂಗಲ್ ಪೇಯಿಂದ ನೀವು ಪಡೆಯುವ ಸಾಲಕ್ಕೆ ಬಡ್ಡಿದರವು ವಾರ್ಷಿಕ 13.99% ನಿಂದ ಆರಂಭವಾಗುತ್ತದೆ. ಇದರ ಅರ್ಥ ನೀವು 1 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಂಡರೆ, ವರ್ಷಕ್ಕೆ 13,900 ರೂಪಾಯಿ ಬಡ್ಡಿ ಆಗುತ್ತದೆ. ಈ ಬಡ್ಡಿ ದರವನ್ನು ಗ್ರಾಹಕರ ಸಿಬಿಲ್ ಸ್ಕೋರ್ (CIBIL SCORE or CREDIT SCORE) ಮೇಲೆ ನಿರ್ಧರಿಸಲಾಗುತ್ತದೆ. ಸಿಬಿಲ್ ಸ್ಕೋರ್ ಕುರಿತ ಮಾಹಿತಿ ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಶ್ರೇಣಿ ತಿಳಿಯಲು 👉 ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ಅರ್ಜಿ ಸಲ್ಲಿಸುವುದು ಹೇಗೆ?

ಗೂಗಲ್ ಪೇ ಸಾಲ ಪಡೆಯಲು ಮುಖ್ಯವಾಗಿ ನೀವು ಗೂಗಲ್ ಪೇ ಬಳಕೆದಾರರಾಗಿರಬೇಕು. ಒಂದು ವೇಳೆ ನೀವು ಗೂಗಲ್ ಪೇ ಉಪಯೋಗಿಸದೆ ಇದ್ದರೆ ಈಗಲೇ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೊಸ ಖಾತೆಯನ್ನು ತೆರೆಯಿರಿ. ನಂತರ ನಿಮ್ಮ ಮೊಬೈಲ್’ನಲ್ಲಿರುವ ಗೂಗಲ್ ಪೇ ಅಪ್ಲಿಕೇಶನ್’ಗೆ ಭೇಟಿ ನೀಡಿ. ಹೋಂ ಪೇಜ್’ನಲ್ಲಿ ಕೆಳಗೆ  ಕಾಣುವ Manage your money ಎಂಬ ವಿಭಾಗದಲ್ಲಿ ಎರಡನೇ ಆಯ್ಕೆಯಾದ LOANS ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

ಬಳಿಕ APPLY NOWಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ತೋರಿಸುತ್ತದೆ. ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಸರಿಯಾಗಿದ್ದರೆ CONTINUE ಎಂಬ ಆಯ್ಕೆಯ ಮೇಲೆ ಒತ್ತಿ ಮುಂದುವರೆಯಿರಿ. ನಂತರದಲ್ಲಿ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಿಖರವಾದ ಮಾಹಿತಿಯನ್ನು ಭರ್ತಿ ಮಾಡಿ ಸಾಲ ಸೌಲಭ್ಯ ಪಡೆಯಿರಿ. ಅರ್ಜಿ ಸಲ್ಲಿಸಿದ ನಂತರ ನೀವು ಅರ್ಹರಿದ್ದರೆ ನೀವು ಅರ್ಜಿ ಸಲ್ಲಿಸಿದ ಸಾಲದ ಮೊತ್ತವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.

Google pay for business app ಡೈರೆಕ್ಟ್ ಲಿಂಕ್: ಡೌನ್‌ಲೋಡ್

Google Pay loan up to 8 lakh

ಇದನ್ನೂ ಓದಿ: Home loan low interest Banks : ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ

WhatsApp Group Join Now
Telegram Group Join Now

Related Posts

error: Content is protected !!