ಶಿಕ್ಷಣ ಸುದ್ದಿ

ವಸತಿ, ಊಟೋಪಚಾರ ಸಹಿತ ಉಚಿತ ಶಿಕ್ಷಣಕ್ಕಾಗಿ ಆಳ್ವಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ | Alvas free education scheme admission application 2023

WhatsApp Group Join Now
Telegram Group Join Now

ರಾಜ್ಯದಲ್ಲಿಯೇ ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

Alvas free education scheme admission application 2023 : ಕರ್ನಾಟಕ ರಾಜ್ಯದಲ್ಲಿಯೇ ಉತ್ತಮ ಶಿಕ್ಷಣಕ್ಕಾಗಿ ಹೆಸರುವಾಸಿಯಾಗಿರುವಂತಹ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ಸೌಲಭ್ಯದ ಅಡಿಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡಲು ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಯಾರು ಅರ್ಹರು, ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಕೆಗೆ ಸಂಬAಧಿಸಿದ ಇತರೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಇದನ್ನೂ ಓದಿ: GramaOne franchise application : 15 ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ | ಯಾವ್ಯಾವ ಜಿಲ್ಲೆ? ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಉಚಿತ ಶಿಕ್ಷಣ ಸೌಲಭ್ಯ ಪಡೆಯಲು ಅರ್ಹತೆ (Alvas free education scheme eligibility)
ಆಳ್ವಾಸ್ ಶಿಕ್ಷಣ ಸಂಸ್ಥೆಯು ‘ಉಚಿತ ಶಿಕ್ಷಣ ಸೌಲಭ್ಯ’ದ ಅಡಿಯಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪ್ರಸ್ತುತ 5ನೇ, 6ನೇ, 7ನೇ ಮತ್ತು 8ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿರಬೇಕು. ಅಂದರೆ 2024-25ನೇ ಶೈಕ್ಷಣಿಕ ವರ್ಷದ 6ನೇ, 7ನೇ, 8ನೇ ಮತ್ತು 9ನೇ ತರಗತಿಯಲ್ಲಿ ಶಿಕ್ಷಣ ಪಡೆಯಲು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು

 • ಶಾಲಾ ಮುಖ್ಯಸ್ಥರಿಂದ ಖಚಿತಪಡಿಸಿಕೊಂಡ SATS – ID
 • ಆಧಾರ್ ಕಾರ್ಡ್
 • ಇತ್ತೀಚಿನ ಭಾವಚಿತ್ರ
 • ಮೊಬೈಲ್ ನಂಬರ್
 • ಇಮೇಲ್
 • ಇತರೆ ಅಗತ್ಯ ದಾಖಲೆಗಳು

ಇದನ್ನೂ ಓದಿ: Karnataka Mangalya Bhagya Vivah Yojana : ಮಾಂಗಲ್ಯ ಭಾಗ್ಯ ಯೋಜನೆ | ಮದುವೆಗೆ 60,000 ರೂಪಾಯಿ ಸಹಾಯಧನ | ಈಗಲೇ ಹೆಸರು ನೋಂದಾಯಿಸಿ

ಆಯ್ಕೆ ಪ್ರಕ್ರಿಯೆ ಹೇಗೆ? (Selection procedure) 
Alvas free education scheme ಆಳ್ವಾಸ್ ಉಚಿತ ಶಿಕ್ಷಣ ಸೌಲಭ್ಯದ ಪಡೆಯಲು ಅರ್ಜಿ ಸಲ್ಲಿಸಿದ ಅರ್ಹ ವಿದ್ಯಾರ್ಥಿಗಳಿಗೆ ಮೂರು ಹಂತದಲ್ಲಿ ಪರೀಕ್ಷೆ ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಮೊದಲನೇ ಹಂತದಲ್ಲಿ ಓ.ಎಂ.ಆರ್ ಮಾದರಿಯಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು. ಇದರಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎರಡನೆಯ ಹಂತದಲ್ಲಿ ಬರವಣಿಗೆ ಆಧಾರಿತ ಚಟುವಟಿಕೆಗಳನ್ನು ನಡೆಸಲಾಗುವುದು.

ಎರಡನೇ ಹಂತದಲ್ಲಿ 6 ಮತ್ತು 7ನೇ ತರಗತಿ ಪ್ರವೇಶಾತಿಗೆ 120 ಅಂಕ ಹಾಗೂ 8 ಮತ್ತು 9ನೇ ತರಗತಿ ಪ್ರವೇಶಾತಿಗೆ 150 ಅಂಕಗಳ ಆಧಾರದಲ್ಲಿ ಚಟುವಟಿಕೆಗಳನ್ನು ನಡೆಸಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ಮರುದಿನವೇ ನೇರ ಸಂದರ್ಶನ ನಡೆಸಿ ದಾಖಲಾತಿ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ಆಯ್ಕೆ ಪರೀಕ್ಷೆಯ ನಡೆಸುವ ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಆವರಣದಲ್ಲಿ ಆಯ್ಕೆ ಪರೀಕ್ಷೆ ನಡೆಸಲಾಗುತ್ತದೆ.

ಪ್ರವೇಶಾತಿ ಪರೀಕ್ಷೆಯ ಉಪಯುಕ್ತ ಮಾಹಿತಿ: ಸದ್ಯಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಯಾವ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, ಅದರ ಮುಂದಿನ ತರಗತಿಗೆ ಆಯ್ಕೆ ಬಯಸುವುದರಿಂದ ಪ್ರಸ್ತುತ ಓದುತ್ತಿರುವ ಎಲ್ಲಾ ವಿಷಯಗಳು ಹಾಗೂ ಮಾನಸಿಕ ಸಾಮರ್ಥ್ಯ ವಿಷಯಗಳನ್ನು ಅಧ್ಯಯನ ನಡೆಸಿ ಪರೀಕ್ಷೆಗೆ ತಯಾರಾಗಬೇಕು.

ಹೇಗೆ ಅರ್ಜಿ ಸಲ್ಲಿಸಬೇಕು?
ಅರ್ಹ ವಿದ್ಯಾರ್ಥಿಗಳು ನಾವು ಕೆಳಗೆ ನೀಡಿರುವ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ನಿಖರ ಮಾಹಿತಿಗಳನ್ನು ಭರ್ತಿ ಮಾಡಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಫಾರ್ಮ್’ನ (Application form) ಎರಡು ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು. ಒಂದು ಪ್ರತಿಯನ್ನು ನಿಮ್ಮ ಹತ್ತಿರ ಇಟ್ಟುಕೊಂಡು ಇನ್ನೊಂದು ಪ್ರತಿಯನ್ನು ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಕಳುಹಿಸಿಕೊಡಬೇಕು.

ಇದನ್ನೂ ಓದಿ: ಜನವರಿಯಿಂದ ಪದವೀಧರರಿಗೆ ಸಿಗಲಿದೆ ಪ್ರತಿ ತಿಂಗಳು ₹3000 ಸಹಾಯಧನ | ಅರ್ಜಿ ಸಲ್ಲಿಕೆ ಹೇಗೆ? | Karnataka Yuva Nidhi Scheme

ವಿಳಾಸ : ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ), ಮೂಡುಬಿದಿರೆ, ದಕ್ಷಿಣ ಕನ್ನಡ -574227

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ :
  15-02-2024
 • ಪ್ರವೇಶಾತಿ ಪರೀಕ್ಷೆ ನಡೆಸುವ ದಿನಾಂಕ :
  03-03-2024
 • ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ :
  15-02-2024

ಇದನ್ನೂ ಓದಿ: Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಸಹಾಯವಾಣಿ : 7026530137 / 7026530263

Alvas free education scheme admission application 2023

ಇದನ್ನೂ ಓದಿ: ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

GramaOne franchise application : 15 ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ | ಯಾವ್ಯಾವ ಜಿಲ್ಲೆ? ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

Related Posts

error: Content is protected !!