ಸರಕಾರಿ ಯೋಜನೆ

ಉಚಿತ ವಿದ್ಯುತ್ ಯೋಜನೆ ನೋಂದಣಿ ಆರಂಭ | ಅಮೃತ ಜ್ಯೋತಿ ವಿದ್ಯುತ್‌ಗೆ ಇಂದೇ ಅರ್ಜಿ ಸಲ್ಲಿಸಿ | amrita jyoti Free electricity scheme

WhatsApp Group Join Now
Telegram Group Join Now

ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಿಪಿಎಲ್ ಕಾರ್ಡ್‌ದಾರರಿಗೆ 75 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಅಮೃತ ಜ್ಯೋತಿ ಯೋಜನೆ ನೋಂದಣಿಗಾಗಿ ಅಕ್ಟೋಬರ್ 15 ರಿಂದ 30ರ ವರೆಗೆ ಬೃಹತ್ ಅಭಿಯಾನ ನಡೆಸುವಂತೆ ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.

ಏನಿದು ಅಮೃತ ಜ್ಯೋತಿ?

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಭಾಷಣದಲ್ಲಿ ಎಸ್ಸಿ-ಎಸ್ಟಿ ವರ್ಗದ ಬಿಪಿಎಲ್ ಕುಟುಂಬಗಳ ಗೃಹ ಬಳಕೆಗೆ ಪ್ರತಿ ತಿಂಗಳು 75 ಯುನಿಟ್ ಉಚಿತ ವಿದ್ಯುತ್ ನೀಡುವ ವಿಚಾರ ಪ್ರಕಟಿಸಿದ್ದರು. ಮುಖ್ಯಮಂತ್ರಿಗಳ ಸ್ವಾತಂತ್ರ್ಯೋತ್ಸವ ಭಾಷಣದ ಬಳಿಕ ಇಂಧನ ಇಲಾಖೆ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿತ್ತು.

ಆನಂತರ ಉಚಿತ ವಿದ್ಯುತ್ ನೀಡುವ ಸಂಬಂಧ ಹೊರಡಿಸಿದ್ದ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆಯುವ ಮೂಲಕ ಸಾಕಷ್ಟು ಚರ್ಚೆ ಗ್ರಾಸವಾಗಿತ್ತು. ಬಳಿಕ ಈ ಗೊಂದಲ ಪರಿಹರಿಸಿದ ಸರಕಾರ ಸದರಿ ಯೋಜನೆಯನ್ನು ಇನ್ನಷ್ಟು ಸರಳಗೊಳಿಸಿದ ಅಮೃತ ಜ್ಯೋತಿ ಎಂದು ನಾಮಕರಣ ಮಾಡಿದ್ದು; ಇದೀಗ ನೊಂದಣಿ ಅಭಿಯಾನವನ್ನು ಹಮ್ಮಿಕೊಂಡಿದೆ.

ಇದನ್ನೂ ಓದಿ: ಹಾಕಿಸಿದರೆ ಜಾನುವಾರುಗೆ ಲಸಿಕೆ ಅಧಿಕವಾಗುವುದು ರೈತರ ಗಳಿಕೆ

ನಿಯಮ ಸರಳೀಕರಣ

ಆಗಸ್ಟ್ 28ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಹಲವಾರು ಕಠಿಣ ಮಾರ್ಗಸೂಚಿಗಳನ್ನು ವಿಧಿಸಲಾಗಿದ್ದು; ಅನೇಕರಿಗೆ ಈ ಎಲ್ಲ ದಾಖಲೆ ಒದಗಿಸಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸುತ್ತೋಲೆಯಲ್ಲಿ ಅರ್ಹ ಫಲಾನುಭವಿಗಳು ತಾವು ವಾಸವಿರುವುದಕ್ಕೆ ಅಗತ್ಯ ದಾಖಲೆ, ಗ್ರಾಹಕರ ಐಡಿ ಸಂಖ್ಯೆ, ಬಾಡಿಗೆ ಅಥವಾ ಲೀಸಿನ ಕರಾರು ಪತ್ರದ ಜತೆಗೆ 250 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ವ್ಯಯಿಸಿರಬಾರದು ಎಂದು ಹೇಳಲಾಗಿತ್ತು. ಇದರೊಂದಿಗೆ ಇನ್ನಷ್ಟು ದಾಖಲೆಗಳನ್ನು ನೀಡಬೇಕಾಗಿದ್ದರಿಂದ ಹಲವರಿಗೆ ಸಮಸ್ಯೆಯಾಗಿತ್ತು.

ಇದನ್ನು ಗಮನಿಸಿದ ಇಂಧನ ಇಲಾಖೆ, ಸುತ್ತೋಲೆಯನ್ನು ಹಿಂಪಡೆದು ಇಡೀ ವ್ಯವಸ್ಥೆಯನ್ನು ಸರಳೀಕೃತಗೊಳಿಸಿದ್ದು; ನೇರವಾಗಿ ಫಲಾನುಭವಿಗಳಿಗೆ ಸಹಾಯವಾಗುವಂತೆ ಮಾರ್ಗಸೂಚಿ ರೂಪಿಸಿದೆ.

ಇದನ್ನೂ ಓದಿ: ಎತ್ತಿನ ಸುಳಿಗಳೂ… ರೈತರ ನಂಬಿಕೆಗಳೂ…

10 ಲಕ್ಷ ಫಲಾನುಭವಿಗಳ ನೋಂದಣಿ ಗುರಿ 

ಈ ಸಂಬಂಧ ಕಳೆದ ಅಕ್ಟೋಬರ್ ೧೩ರಂದು ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಇಂಧನ ಸಚಿವ ವಿ.ಸುನೀಲ್ ಕುಮಾರ್  ಫಲಾನುಭವಿಗಳ ನೋಂದಣಿಗೆ ಹದಿನೈದು ದಿನಗಳ ಅಭಿಯಾನ ನಡೆಸುವಂತೆ ಸೂಚನೆ ನೀಡಿದರು. ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ 2.50 ಲಕ್ಷ ಅರ್ಜಿಗಳು ಸ್ವೀಕಾರವಾಗಿದೆ. ಅಭಿಯಾನ ಮುಕ್ತಾಯಗೊಳ್ಳುವವರೆಗೆ 10 ಲಕ್ಷ ಫಲಾನುಭವಿಗಳ ನೋಂದಣಿಯಾಗಬೇಕು ಎಂದು ಹೇಳಿದರು.

ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳ ಬೃಹತ್ ಸಮಾವೇಶ ನಡೆಸುವುದಕ್ಕೆ ಇಂದಿನಿಂದಲೇ ಸಿದ್ದತೆ ನಡೆಸಬೇಕು. ಚಿತ್ರದುರ್ಗ, ಚಾಮರಾಜನಗರ, ಬೀದರ್, ಬಾಗಲಕೋಟೆಯಲ್ಲಿ ಸಮಾವೇಶ ನಡೆಸಲಾಗುವುದು. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಇದೇ ವೇಳೆ ಬೆಳಕು ಯೋಜನೆ ಅಡಿ ವಿದ್ಯುತ್ ಸಂಪರ್ಕ ನೀಡುವ ಪ್ರಕ್ರಿಯೆಯನ್ನು ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು.

ನವೆಂಬರ್ ಹದಿನೈದರೊಳಗೆ ಎಲ್ಲ ಜಿಲ್ಲೆಗಳಲ್ಲಿ ಇದುವರೆಗೆ ಬಂದ ಅರ್ಜಿಗಳಿಗೆ ಸಂಪರ್ಕ ನೀಡಬೇಕು. ಹೊಸ ಅರ್ಜಿಗಳಿಗೂ ಸಂಪರ್ಕ ಕೊಡುವಂತೆ ನಿರ್ದೇಶನ ನೀಡಿದರು. ಟಿಸಿ ಹಾಗೂ ಫೀಡರ್ ನಿರ್ವಹಣೆಗಾಗಿ ಮತ್ತೆ ಅಭಿಯಾನ ನಡೆಸಬೇಕು. ಇದರಿಂದ ತಾಂತ್ರಿಕ ವೆಚ್ಚ ಕಡಿಮೆ ಮಾಡುವುದಕ್ಕೆ ಸಾಧ್ಯವಿದೆ. ಹೀಗಾಗಿ ನವೆಂಬರ್ 1 ರಿಂದ 15ರ ವರೆಗೆ ಹಾಗೂ ಡಿಸೆಂಬರ್ 1ರಿಂದ 15ರ ವರೆಗೆ ಟಿಸಿ ಹಾಗೂ ಫೀಡರ್ ನಿರ್ವಹಣಾ ಅಭಿಯಾನ ನಡೆಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ: ಅಧಿಕ ಇಳುವರಿಗೆ ತಪ್ಪದೇ ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸಿ… 

WhatsApp Group Join Now
Telegram Group Join Now

Related Posts

error: Content is protected !!