ಉದ್ಯೋಗ

Anganwadi Jobs : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಮಹಿಳೆಯರಿಂದ ಅರ್ಜಿ ಆಹ್ವಾನ | 152 ಹುದ್ದೆಗಳು

WhatsApp Group Join Now
Telegram Group Join Now

Anganwadi Jobs

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮಹಿಳೆಯರು ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ…

 • ನೇಮಕಾತಿ ಸಂಸ್ಥೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
 • ಖಾಲಿ ಹುದ್ದೆಗಳು : 113+39 ಹುದ್ದೆಗಳು
 • ಹುದ್ದೆಗಳ ಹೆಸರು : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು
 • ವಿದ್ಯಾರ್ಹತೆ : 10ನೇ ತರಗತಿ ಮತ್ತು ಪಿಯುಸಿ
 • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
 • ಉದ್ಯೋಗ ಸ್ಥಳ : ಹಾವೇರಿ ಜಿಲ್ಲೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹಾವೇರಿ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಅರ್ಹ ಮತ್ತು ಆಸಕ್ತ ಮಹಿಳೆಯರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೈಕ್ಷಣಿಕ ಅರ್ಹತೆ

 • ಅಂಗನವಾಡಿ ಕಾರ್ಯಕರ್ತೆ ಹುದ್ದೆ : ಪಿಯುಸಿ ಪಾಸ್
 • ಅಂಗನವಾಡಿ ಸಹಾಯಕಿ ಹುದ್ದೆ : 10ನೇ ತರಗತಿ ಪಾಸ್

ವಯಸ್ಸಿನ ಮಿತಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಲು 19-35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಇದನ್ನೂ ಓದಿ: BMTC Conductor recruitment 2024 : SSLC ಪಾಸಾದವರಿಗೆ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ನೇಮಕಾತಿ | 2,500 ಹುದ್ದೆಗಳು

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು

 • ಅರ್ಜಿ ನಿಗದಿತ ನಮೂನೆ (ಆನ್‌ಲೈನ್)
 • ಜನನ ಪ್ರಮಾಣ ಪತ್ರ
 • ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
 • ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ
 • ವಾಸಸ್ಥಳ ದೃಢೀಕರಣ ಪತ್ರ
 • ಜಾತಿ ಪ್ರಮಾಣ ಪತ್ರ
 • ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ/ರೇಷನ್ ಕಾರ್ಡ್
 • ವಿಕಲಚೇತನರು, ವಿಧವೆಯರು, ವಿಚ್ಛೇದಿತೆಯರು, ಯೋಜನಾ ನಿರಾಶ್ರಿತರು, ಲಿಂಗತ್ವ ಅಲ್ಪಸಂಖ್ಯಾತರು ಸಂಬ೦ಧಿಸಿದ ಪ್ರಮಾಣ ಪತ್ರ

ಇದನ್ನೂ ಓದಿ: Janamitra recruitment 2024 : ಗ್ರಾಮ ಪಂಚಾಯತಿಗಳಲ್ಲಿ 25,000 ಜನಮಿತ್ರ ಹುದ್ದೆಗಳ ನೇಮಕಾತಿ | 10ನೇ ತರಗತಿ ಪಾಸಾದವರಿಗೆ ಅವಕಾಶ

ಅರ್ಜಿ ಸಲ್ಲಿಕೆ ಹೇಗೆ?

ಅಂಗನವಾಡಿ ಹುದ್ದೆಗಳಿಗೆ ಅರ್ಹ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 👉 ಇಲ್ಲಿ ಕ್ಲಿಕ್ ಮಾಡಿ…

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಹುದ್ದೆಗಳ ಅರ್ಜಿ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಜಿಲ್ಲೆ, ತಾಲ್ಲೂಕು, ಅಧಿಸೂಚನೆ ಸಂಖ್ಯೆ, ಹುದ್ದೆಗಳ ಆಯ್ಕೆ, ಜಾತಿ ಕಾಲಂ ಗಳನ್ನು ಆಯ್ಕೆ ಮಾಡಿ Submit ಕ್ಲಿಕ್ ಮಾಡಿದರೆ ಅಪ್ಲಿಕೇಶನ್ ಫಾರ್ಮ್ ತೆರೆಯುತ್ತದೆ. ಅಲ್ಲಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಅಗತ್ಯ ಪ್ರಮಾಣ ಪತ್ರಗಳನ್ನು ಅಪ್‌ಲೋಡ್ ಮಾಡಬೇಕು.

ಅರ್ಜಿ ಸಲಿಕೆ ದಿನಾಂಕಗಳು

 • ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 10-01-2024
 • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 15-02-2024

ಇದನ್ನೂ ಓದಿ: Karnataka Village Accountant Recruitment 2024 : 1820 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಚಾಲನೆ | ಪ್ರತಿ ವರ್ಷ 500 ಹುದ್ದೆಗಳ ನೇಮಕಾತಿಗೆ ಸಹಮತಿ

ಇದೇ ರೀತಿ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಬೆಳಗಾವಿ, ತುಮಕೂರು ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯಾ ಜಿಲ್ಲೆಗಳ ಮಹಿಳೆಯರು ಸ್ಥಳೀಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಹುದ್ದೆಗಳ ನೇಮಕ ಪ್ರಕ್ರಿಯೆ ಗೈಡ್‌ಲೈನ್ ಓದಲು ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

PM Vishwakarma Scheme free tool kit : ಕೇಂದ್ರ ಸರ್ಕಾರದಿಂದ 15 ಸಾವಿರ ಮೌಲ್ಯದ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ

WhatsApp Group Join Now
Telegram Group Join Now

Related Posts

error: Content is protected !!