ಪಶುಪಾಲನೆ

ವಿದ್ಯಾವಂತರ ಕೈ ಹಿಡಿಯುತ್ತಿರುವ ಆಡು-ಕುರಿ ಸಾಕಣೆ | Educated in goat and sheep farming

WhatsApp Group Join Now
Telegram Group Join Now

ಇಂದು ದನ, ಆಡು-ಕುರಿ ಪಾಲನೆ ಅತ್ಯಂತ ಸುಶಿಕ್ಷಿತರ ಕಸುಬಾಗುತ್ತಿದೆ. ಅನೇಕ ವಿದ್ಯಾವಂತ ಯುವಜನ ಆಡು-ಕುರಿ ಸಾಕಾಣಿಕೆಯಲ್ಲಿ ಆಸಕ್ತಿ ತೋರಿಸತೊಡಗಿದ್ದಾರೆ. 

ಸಾಮಾನ್ಯವಾಗಿ ಕುರಿ-ಆಡು ಮತ್ತು ದನ ಮೇಯಿಸುವವರು ಅವಿದ್ಯಾವಂತರು, ಹಳ್ಳಿಗರು, ಅನ್ಯ ಕಸುಬು ಗೊತ್ತಿಲ್ಲದವರು ಎಂದು ಜರಿಯುವ ಪರಿಪಾಠ ಯಾವಾಗಿನಿಂದಲೂ ಇದೆ. ಹಸು ಮೇಯಿಸುವ ಭಗವಾನ್ ಶ್ರೀಕೃಷ್ಣ, ಆಡು ಕುರಿ ಮೇಯಿಸುವ ಜೀಸಸ್ ಯೇಸು, ಪ್ರವಾದಿ ಪೈಗಂಬರರAತಹ ಮಹಾತ್ಮರು ಜಗತ್ತಿಗೇ ಬೆಳಕು ನೀಡಿದ್ದರೂ ಕೂಡ ಈ ವಲಯದ ಜನರನ್ನು ಕ್ಷÄಲ್ಲಕವಾಗಿ ನೋಡುವ ಪರಿಪಾಠ ನಡೆದು ಬಂದಿದೆ.

ಇದನ್ನೂ ಓದಿ: ಈ ಕಾರ್ಡ್ ಇದ್ದರೆ ಸಿಗಲಿದೆ ಹೈನುಗಾರಿಕೆ, ಮೀನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಣೆಗೆ 3 ಲಕ್ಷ ಸಾಲ | ಈ ಕಾರ್ಡ್ ಪಡೆಯುವುದು ಹೇಗೆ?

ಆದರೆ ಈಗೀಗ ಈ ಭಾವನೆಗೆ ವಿರುದ್ಧವಾಗಿ ದನ, ಆಡು-ಕುರಿ ಪಾಲನೆ ಅತ್ಯಂತ ಸುಶಿಕ್ಷಿತರ ಕಸುಬಾಗುತ್ತಿದೆ. ದೊಡ್ಡ ಸಂಬಳದ ನೌಕರಿ ತೊರೆದವರು, ವಿದೇಶಿ ಒಡನಾಟಕ್ಕೆ ಗುಡ್‌ಬೈ ಹೇಳಿದವರು, ಪ್ರತಿಷ್ಠಿತ ಕಂಪನಿಗಳ ಸಕಲ ಸವಲತ್ತುಗಳನ್ನೂ ಕಡೆಗಣ್ಣಿನಿಂದ ನೋಡಿ ಎದ್ದು ಬಂದವರ ದೊಡ್ಡದೊಂದು ಗುಂಪು ಪಶುಪಾಲನೆಯಲ್ಲಿ ತೊಡಗಿಸಿಕೊಳ್ಳತೊಡಗಿದೆ. ಅದರಲ್ಲೂ ಆಡು-ಕುರಿ ಸಾಕಾಣಿಕೆಯಲ್ಲಿ ಅನೇಕರು ಆಸಕ್ತಿ ತೋರಿಸತೊಡಗಿದ್ದಾರೆ.

ಇದಕ್ಕೆ ಕಾರಣ ಹಲವು… 

ಮೊದಲನೆಯದಾಗಿ ಆಡು-ಕುರಿ ವಲಯದಲ್ಲಿ ನಷ್ಟವೆಂಬುವುದೇ ವಿರಳ. ಸಾಕಾಣಿಕೆ ವೆಚ್ಚವೂ ಕಮ್ಮಿ. ಒಂದು ಒಳ್ಳೆಯ ಹಸು ಸಾಕಾಣಿಕೆ ವೆಚ್ಚದಲ್ಲಿ ನಾಲ್ಕು ಆಡು ಅಥವಾ ಕುರಿಗಳನ್ನು ಸಾಕಬಹುದು. ಈ ಪ್ರಾಣಿಗಳು ಮನುಷ್ಯನೊಂದಿಗೆ ಬಹುಬೇಗ ಒಗ್ಗುವ ಗುಣ ಹೊಂದಿರುವುದರಿAದ ಹೆಚ್ಚು ಶ್ರಮಪಡಬೇಕಿಲ್ಲ. ದೊಡ್ಡ ಬಂಡವಾಳವೂ ಬೇಕಿಲ್ಲ, ತೊಡಗಿಸಿದ ಹಣ ಕೆಲವೇ ತಿಂಗಳಲ್ಲಿ ಎರಡರಷ್ಟಾಗುತ್ತದೆ. ಆಕಳು-ಎಮ್ಮೆಗಳಿಗೆ ಹೋಲಿಸಿದರೆ ಆಡು-ಕುರಿಗಳ ಉತ್ಪನ್ನಗಳು ಹೆಚ್ಚು. ಇವುಗಳ ಮಾಂಸ, ಹಾಲು, ಚರ್ಮ, ಉಣ್ಣೆ, ಗೊಬ್ಬರ, ಗಂಜಲ ಹೀಗೆ ಪ್ರತಿಯೊಂದನ್ನೂ ಮಾರಿ ಲಾಭ ಗಳಿಸಬಹುದು.

ಇದನ್ನೂ ಓದಿ: ರೈತರೇ ಕೀಟ ಹತೋಟಿಗೆ ನೀವೇ ತಯಾರಿಸಿ ನಾಟಿ ಕೀಟನಾಶಕ : ಇದು ಖರ್ಚಿಲ್ಲದ, ಹೆಚ್ಚು ಪರಿಣಾಮಕಾರಿ ಔಷಧಿ

ಮಾರುಕಟ್ಟೆ ವಿಚಾರಕ್ಕೆ ಬಂದರೆ ಯಾವ ಬೀದಿಯಲ್ಲಿ ನಿಂತು ಮಾರಿದರೂ ಕೊಳ್ಳುವವರು ಸಿಗುತ್ತಾರೆ. ಪ್ರತಿಯೊಂದು ಪ್ರಾಣಿಯ ಮೇಲೆ ಸಾವಿರಾರು ರೂಪಾಯಿ ಲಾಭ ನಿಶ್ಚಿತ. ಅದರಲ್ಲೂ ಬಕ್ರಿದ್, ಆಯುಧ ಪೂಜೆ, ವರ್ಷ ತೊಡಕಿನಂತಹ ವಿಶೇಷ ದಿನಗಳಲ್ಲಿ ಆಡು ಕುರಿಗಳಿಂದ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಎಲ್ಲಕ್ಕಿಂತಲೂ ಮುಖ್ಯವಾಗಿ ಆಡು ಕುರಿ ಪಾಲನೆಯಲ್ಲಿ ನೆಮ್ಮದಿ ಇದೆ. ಪ್ರಕೃತಿಯನ್ನು ತೀರಾ ಹತ್ತಿರದಿಂದ ಅರಿಯಬಹುದು, ಅನುಭವಿಸಬಹುದು. ಈ ಪ್ರಾಣಿಗಳ ಜೊತೆಗೆ ಬೆರೆಯುವುದರಿಂದ ಆರೋಗ್ಯವೂ ವೃದ್ಧಿಸುತ್ತದೆ.

…ಹೀಗೆ ಹಲವು ಕಾರಣಗಳಿಂದಾಗಿ ಆಡು-ಕುರಿ ಸಾಕಾಣಿಕೆ ವಲಯ ವಿದ್ಯಾವಂತರನ್ನು ಭರದಿಂದ ಸೆಳೆಯುತ್ತಿದೆ. ಪ್ರತಿಷ್ಠಿತ ನೌಕರಿ, ಲಕ್ಷ ಲಕ್ಷ ಸಂಬಳ, ಕೈಗೆ ಮಣ್ಣೇ ತಾಗದಂತೆ ಬದುಕುವ ವೈಭೋಗಗಳನ್ನು ನಿರ್ದಾಕ್ಷಿಣ್ಯವಾಗಿ ತೊರೆದು ಜೀವಿಸಬೇಕೆನ್ನುವವರ ಸಂಖ್ಯೆ ಉಲ್ಭಣವಾಗುತ್ತಿದೆ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವವರ’ ಸಂತತಿ ದಿನೇ ದಿನೆ ದೊಡ್ಡದಾಗುತ್ತಿದೆ.

ಇದನ್ನೂ ಓದಿ: ಜೇನು ಸಾಕಣೆಗೆ ಸರ್ಕಾರದ ಸವಲತ್ತುಗಳು: ಸಣ್ಣ ರೈತರಿಗೆ ಶೇ.90ರಷ್ಟು ಸಹಾಯಧನ

ಯಾಕೆಂದರೆ ಇಡೀ ಕರ್ನಾಟಕದ ನೀರಿನ ಮಟ್ಟ ಕುಸಿಯುತ್ತಿದೆ. ಬರ-ನೆರೆ ಸರ್ವೇ ಸಾಮಾನ್ಯವಾಗಿವೆ. ಇದರಿಂದ ಅನೇಕರಿಗೆ ಆಡು-ಕುರಿ ಪಾಲನೆ ಬೆಳ್ಳಿರೇಖೆಯಾಗಿ ಹೊಳೆಯುತ್ತಿದೆ. ಈ ನಡುವೆ ಕೊರೋನಾ ಪೀಡೆ ಒಕ್ಕರಿಸಿ ಅನೇಕರ ನೌಕರಿಗಳು ಕೈ ತಪ್ಪಿವೆ. ಉದ್ಯಮಗಳು ಮಗಚಿಕೊಂಡಿವೆ. ಹೀಗೆ ದಿವಾಳಿ ಎದ್ದವರಿಗೆ ಆಡು ಕುರಿ ಸಾಕಾಣಿಕೆ ವಲಯ ಭರವಸೆಯ ಬೆಳಕಾಗುತ್ತಿದೆ.

ವಿಶೇಷವಾಗಿ ಸ್ಟಾಲ್ ಫೀಡಿಂಗ್ ಅಥವಾ ಫಾರಂ ಪದ್ಧತಿಯ ಆಡು-ಕುರಿ ಸಾಕಾಣಿಕೆಯು ಯುವ ಸಮುದಾಯವನ್ನು ಇನ್ನಿಲ್ಲದಂತೆ ಆಕರ್ಷಿಸುತ್ತಿದೆ. ಆದರೆ ಸೂಕ್ತ ಅನುಭವ, ಮಾಹಿತಿ ಇಲ್ಲದೇ ನಷ್ಟ ಅನುಭವಿಸದಂತೆ ಎಚ್ಚರಿಕೆ ಮುಖ್ಯ. ದೊಡ್ಡ ದೊಡ್ಡ ಪ್ರಾಜೆಕ್ಟು, ಬೃಹತ್ ಶೆಡ್ಡು, ವಿದೇಶಿ ತಳಿಗಳ ಆಕರ್ಷಣೆಗೆ ಒಳಗಾಗದೇ, ಸಣ್ಣಪುಟ್ಟ ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಂಡು ಸರಳ ಪದ್ಧತಿ ಅಳವಡಿಸಿಕೊಂಡರೆ ಆಡು-ಕುರಿ ವಲಯದಲ್ಲಿ ನಷ್ಟವೆಂಬುವುದೇ ಇಲ್ಲ. ಆದರೆ ದೊಡ್ಡ ದೊಡ್ಡ ಪ್ರಾಜೆಕ್ಟು, ವಿದೇಶಿ ತಳಿಗಳ ಹಿಂದೆ ಹೋದರೆ ಲಾಭಕ್ಕೆ ಗ್ಯಾರಂಟಿ ಇಲ್ಲ. ಹಾಗದಿರಲಿ, ಇಲ್ಲಿ ಬದುಕು ಕಟ್ಟಿಕೊಳ್ಳಲು ಬಂದವರ ಕಣ್ಣುಗಳಲ್ಲಿ ಹೊಸ ಕನಸು ಚಿಗುರೊಡೆಯಲಿ…

ಇದನ್ನೂ ಓದಿ:

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

WhatsApp Group Join Now
Telegram Group Join Now

Related Posts

error: Content is protected !!