ಸರಕಾರಿ ಯೋಜನೆ

ಅನ್ನಭಾಗ್ಯ ಉಚಿತ ಅಕ್ಕಿ ಪಡೆಯಲು ಮೊಬೈಲ್‌ನಲ್ಲೇ ರೇಷನ್ ಕಾರ್ಡ್ ಗೆ ಆಧಾರ್ ನಂಬರ್ ಲಿಂಕ್ ಮಾಡಿ… | Aadhaar and Ration Card Linking

WhatsApp Group Join Now
Telegram Group Join Now

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ್ಲೊಂದಾದ ‘ಅನ್ನ ಭಾಗ್ಯ’ ಯೋಜನೆಗೆ ಇದೇ ಜುಲೈ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ…

ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಕೇಂದ್ರ ಸರ್ಕಾರದಿಂದ ಅಕ್ಕಿ ದೊರೆಯದ ಕಾರಣ ಈಗಾಗಲೇ ವಿತರಿಸುತ್ತಿರುವ 5 ಕೆಜಿ ಜೊತೆಗೆ ತಾತ್ಕಾಲಿಕವಾಗಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿಗಳಂತೆ ಪ್ರತಿ ವ್ಯಕ್ತಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ವರ್ಗಾಯಿಸುವುದಾಗಿ ಸರ್ಕಾರ ಪ್ರಕಟಿಸಿದೆ.

ಆಧಾರ್ ನಂಬರ್​ಗೆ ಲಿಂಕ್ ಆಗದ ಪಡಿತರ ಚೀಟಿದಾರರಿಗೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಈ ಯೋಜನೆಯನ್ನು ಬಡವರು ಮತ್ತು ನಿರ್ಗತಿಕರಿಗೆಂದು ರೂಪಿಸಲಾಗಿದ್ದು, ಸ್ಥಿತಿವಂತರೂ ಕೂಡ ಯೋಜನೆಯ ದುರ್ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದರಿಂದಾಗಿ ಅನರ್ಹ ರೇಷನ್ ಕಾರ್ಡ್ ರದ್ದುಗೊಳಿಸುವ ಹಿನ್ನಲೆಯಲ್ಲಿ ಆಧಾರ್​ಗೆ ಲಿಂಕ್ ಮಾಡಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ Fake App ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಗ್ಯಾರಂಟೀ!… 

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ

ಈ ಹಣ ನೇರವಾಗಿ ಕುಟುಂಬದ ಯಜಮಾನನ ಖಾತೆಗೆ ಜಮೆಯಾಗುತ್ತದೆ. ಹಣಕ್ಕೆ ಆಧಾರ್ ಲಿಂಕ್ ಕಡ್ಡಾಯವಾಗಿರುತ್ತದೆ. ಅನ್ನಭಾಗ್ಯದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಬೇಕಾದರೆ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು.

ಮನೆಯ ಮುಖ್ಯಸ್ಥರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಾರೆ. ಮನೆ ಯಜಮಾನಿಯ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಖಾತೆ ಇರಬೇಕು. ಅಲ್ಲದೆ ಒಂದು ವೇಳೆ ಮನೆಯ ಮುಖ್ಯಸ್ಥರು ಇಲ್ಲದೇ ಹೋದಲ್ಲಿ, ಪಡಿತರ ಚೀಟಿಯಲ್ಲಿರುವ ಯಾರಾದರೂ ಒಬ್ಬರ ಹೆಸರಿನಲ್ಲಿ ಖಾತೆ ಆಧಾರ್ ಲಿಂಕ್ ಆಗಿರಬೇಕು ಎಂದು ಸರ್ಕಾರ ಹೇಳಿದೆ.

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ

ಗಡುವು ವಿಸ್ತರಣೆ

ಈಗಾಗಲೇ ಆಧಾರ್ ಕಾರ್ಡ್ ಅನ್ನು ನಮ್ಮ ಬಳಿ ಇರುವ ಪಾನ್ ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ಅನೇಕ ಕಡೆ ಕಡ್ಡಾಯವಾಗಿ ಲಿಂಕ್ ಮಾಡಲು ಸರ್ಕಾರ ಸೂಚಿಸಿದೆ. ಅದರಂತೆ ಪಡಿತರ ಚೀಟಿಗೂ ಸಹ ಈ ನಿಯಮ ಕಡ್ಡಾಯವಾಗಿದೆ.

ಈ ನಡುವೆ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್‌ಗೆ ನೀಡಲಾಗಿದ್ದ ಗಡುವನ್ನು ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಈ ಕಾರ್ಯಕ್ಕೆ ಜೂನ್ 30 ಕೊನೆಯ ದಿನವಾಗಿತ್ತು. ಇದೀಗ ಭಾರತ ಸರ್ಕಾರವು ಸೆಪ್ಟೆಂಬರ್ 30, 2023ರ ವರೆಗೆ ಗಡುವನ್ನು ವಿಸ್ತರಣೆ ಮಾಡಿದೆ.

ಉಚಿತ ಕರೆಂಟ್ ಪಡೆಯಲು ಯಾವುದೇ ಡೆಡ್‌ಲೈನ್ ಇಲ್ಲ | ಈ ಹೊಸ ಲಿಂಕ್ ಬಳಸಿ ಮನೆಯಲ್ಲೇ ಅರ್ಜಿ ಸಲ್ಲಿಸಿ…

ಆಧಾರ್-ರೇಷನ್ ಕಾರ್ಡ್ ಜೋಡಿಸುವುದು ಹೇಗೆ?

ಸಮೀಪದ ಪಡಿತರ ಕಚೇರಿಗೆ ಹೋಗಿ ಉಚಿತವಾಗಿ ನೀವು ಆಧಾರ್ ನಂಬರ್ ಲಿಂಕ್ ಮಾಡಬಹುದು. ಅಥವಾ ಆನ್​ಲೈನ್​ನಲ್ಲೂ ಸುಲಭವಾಗಿ ಈ ಕಾರ್ಯ ಮಾಡಬಹುದು.

ಸಮೀಪದ ರೇಷನ್ ಅಂಗಡಿಯಲ್ಲಿ ಮಾಡಿಸುವುದಾದರೆ ನಿಮ್ಮ ರೇಷನ್ ಕಾರ್ಡ್​ನಲ್ಲಿರುವ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್​ನ ಫೋಟೋ ಕಾಪಿ ತೆಗೆದುಕೊಂಡು ಹೋಗಬೇಕು. ರೇಷನ್ ಕಾರ್ಡ್ ಯಾರ ಹೆಸರಲ್ಲಿದೆಯೋ ಅವರ ಪಾಸ್​ಪೋರ್ಟ್ ಗಾತ್ರದ ಫೋಟೋ ತೆಗೆದುಕೊಂಡು ಹೋಗಬೇಕು.

ಈ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್​ ಲಿಂಕ್ ಆಗಿಲ್ಲದಿದ್ದರೆ ಬ್ಯಾಂಕ್ ಪಾಸ್​ಬುಕ್​ನ ಒಂದು ಝರಾಕ್ಸ್ ಪ್ರತಿ ತೆಗೆದುಕೊಂಡು ಪಡಿತರ ಅಂಗಡಿಯಲ್ಲಿ ಸಲ್ಲಿಸಬೇಕು. ಅಲ್ಲಿ ನಿಮ್ಮ ಆಧಾರ್ ಬಯೋಮೆಟ್ರಿಕ್ ಮಾಹಿತಿ ದೃಢಪಡಿಸಲು ಫಿಂಗರ್ ಪ್ರಿಂಟ್ ಪಡೆಯಲಾಗುತ್ತದೆ.

ಎಲ್ಲಾ ದಾಖಲೆಗಳ ಸಲ್ಲಿಕೆಯಾದ ಬಳಿಕ ಆಧಾರ್ ಜೊತೆ ನೊಂದಾಯಿತವಾದ ನಿಮ್ಮ ಮೊಬೈಲ್ ನಂಬರ್​ಗೆ ಎಸ್ಸೆಮ್ಮೆಸ್ ಬರುತ್ತದೆ.

6 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ಅಕ್ಕಿ ರೊಕ್ಕ 170 ರೂಪಾಯಿ ಸಿಗಲ್ಲ | ಈ ಪಟ್ಟಿಯಲ್ಲಿ ನೀವಿದ್ದೀರಾ ಈಗಲೇ ಚೆಕ್ ಮಾಡಿಕೊಳ್ಳಿ…

ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ?

ಮೊದಲು ನೀವು ನಿಮ್ಮ ಲ್ಯಾಪ್‌ಟಾಪ್ ಅಥವಾ ಇತರೆ ಸ್ಮಾರ್ಟ್ ಡಿವೈಸ್ ಮೂಲಕ ಸರ್ಕಾರದ ಅಧಿಕೃತ ವೆಬ್‌ಸೈಟ್  https://ahara.kar.nic.in/Home/EServices ಗೆ ಭೇಟಿ ನೀಡಬೇಕು. ಅಥವಾ ಇಲ್ಲಿ ಕ್ಲಿಕ್ https://ahara.kar.nic.in/lpg/ ಮಾಡುವ ಮೂಲಕ ನೇರವಾಗಿ ಆಧಾರ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡಬಹುದು.

ಇಲ್ಲಿ ಕ್ಲಿಕ್ ಮಾಡಿದರೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ವಯಹಾರಗಳ ಇಲಾಖೆಯ ವೆಬ್ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಕಂದಾಯ ವಲಯವಾರು ಮೂರು ವಿಭಾಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಯಾವ ವಿಭಾಗದಲ್ಲಿದೆ ಎಂಬುವುದನ್ನು ಗುರುತಿಸಿ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿ.

150 ಪಿಡಿಒ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ ಇಲ್ಲಿದೆ…

ಆನಂತರ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ UID Linking for RC Members ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ Aadhaar Number ಮತ್ತು Virtul Id ಎಂದು ಎರಡು ಆಪ್ಷನ್‌ಗಳಿದ್ದು; ಆ ಪೈಕಿ Aadhaar Number ಮೇಲೆ ಟಿಕ್ ಮಾಡಿ. ಆಧಾರ್ ನಂಬರ್ ಹಾಕಿ GO ಮೇಲೆ ಕ್ಲಿಕ್ ಮಾಡಿ.

ನಂತರ OTP ಆಪ್ಷನ್ ಬರುತ್ತದೆ. ನಿಮ್ಮ ಮೊಬೈಲ್‌ಗೆ ಬರುವ OTP ನಮೂದಿಸಿ ಯಥಾಪ್ರಕಾರ GO ಮೇಲೆ ಕ್ಲಿಕ್ ಮಾಡಿದರೆ aadhar card number linked successfully ಎಂಬ ಮೆಸೇಜ್ ಬರುವ ಮೂಲಕ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ಗಳು ಒಂದಕ್ಕೊ೦ದು ಲಿಂಕ್ ಆದ ಮಾಹಿತಿ ಸಿಗುತ್ತದೆ.

ಇಲ್ಲಿ ತಾಂತ್ರಿಕರ ಸಮಸ್ಯೆ ಎದುರಾದರೆ ಸಮೀಪದ ಪಡಿತರ ಕಚೇರಿಗೆ ಹೋಗಿ ಉಚಿತವಾಗಿ ನೀವು ಆಧಾರ್ ನಂಬರ್ ಲಿಂಕ್ ಮಾಡಬಹುದು. ನಿಮ್ಮ ಹತ್ತಿರದ ಪಡಿತರ ಅಂಗಡಿ ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ

ಆಗಸ್ಟ್ 18ರೊಳಗೆ ಮಹಿಳೆಯರ ಖಾತೆಗೆ 2,000 ರೂಪಾಯಿ ಜಮಾ

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಟೊಮೆಟೊ ಬೆಳೆ ಹೆಕ್ಟೇರಿಗೆ 1,41,500 ವಿಮಾ ಪರಿಹಾರ | ವಿಮಾ ನೋಂದಣಿಗೆ ಜೂನ್ 30 ಕೊನೆ ದಿನ

ರೈತರಿಗಾಗಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಸಿದ್ಧವಾದ ರಾಣಿಬೆನ್ನೂರು ಶಾಸಕ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!