ಸರಕಾರಿ ಯೋಜನೆ

Annabhagya Money: ಅನ್ನಭಾಗ್ಯ 2ನೇ ಕಂತಿನ ಹಣ ಖಾತೆಗೆ ಬಂತು | ನಿಮ್ಮ ಹಣ ಜಮಾ ಚೆಕ್ ಮಾಡಿ…

WhatsApp Group Join Now
Telegram Group Join Now

ಅನ್ನಭಾಗ್ಯ ಯೋಜನೆಯ ಆಗಸ್ಟ್ ತಿಂಗಳಿನ 2ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಸಂದಾಯವಾಗಿದೆ. ನಿಮ್ಮ ಜಮಾ ವಿವರ ಇಲ್ಲಿ ಚೆಕ್ ಮಾಡಿ…

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್’ದಾರರ ಖಾತೆಗೆ ಆಗಸ್ಟ್ ತಿಂಗಳಿನ 2ನೇ ಕಂತಿನ ಹಣ ಸಂದಾಯವಾಗಿದೆ. ಕೋಲಾರ ಹೊರತುಪಡಿಸಿ ಎಲ್ಲ ಜಿಲ್ಲೆಗಳಿಗೂ ಡಿಬಿಟಿ ಮುಖೇನ ಹಣ ಪಾವತಿಸಲಾಗಿದೆ. ಕೋಲಾರ ಜಿಲ್ಲೆಯ ಫಲಾನುಭವಿಗಳಿಗೂ ಕೂಡ ಮುಂದಿನ ನಾಲ್ಕು ದಿನಗಳಲ್ಲಿ ಹಣ ಪಾವತಿಸಲಾಗುವುದು ಎಂದು ಆಹಾರ ಇಲಾಖೆ ಹೇಳಿದೆ.

ಇದನ್ನೂ ಓದಿ: 10ನೇ ತರಗತಿ ಪಾಸ್: ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಆಹ್ವಾನ

565 ಕೋಟಿ ರೂಪಾಯಿ ಪಾವತಿ 

ಆಹಾರ ಇಲಾಖೆ ವತಿಯಿಂದ ಡಿಬಿಟಿ ಮುಖೇನ ಕಾರ್ಡ್​’ದಾರರಿಗೆ 2ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಈ ತಿಂಗಳು ರಾಜ್ಯಾದ್ಯಂತ 9,716,414 ಪಡಿತರ ಕಾರ್ಡ್​ಗಳ 34,252,600 ಫಲಾನುಭವಿಗಳಿಗೆ 565.96 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ.

ಜುಲೈ ತಿಂಗಳಲ್ಲಿ 97,27,160 ಕಾರ್ಡ್​ಗಳ 3.45 ಕೋಟಿ ಫಲಾನುಭವಿಗಳಿಗೆ 566 ಕೋಟಿ ರೂಪಾಯಿ ಮೊದಲ ಕಂತಿನ ಹಣ ವರ್ಗಾವಣೆ ಮಾಡಲಾಗಿದೆ. ಆಗಸ್ಟ್​ನಲ್ಲಿ ಹೆಚ್ಚುವರಿ 25 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಣ ಜಮೆ ಮಾಡಲಾಗಿದೆ.

ಇದನ್ನೂ ಓದಿ: ಕೇಂದ್ರ ಸರಕಾರದ ಈ ಹೊಸ ಯೋಜನೆಯಡಿ ಅತಿ ಕಡಿಮೆ ಬಡ್ಡಿದರದಲ್ಲಿ 2 ಲಕ್ಷ ರೂಪಾಯಿ ವರೆಗೆ ಸಾಲ

ಯಾರಿಗೆ ಎಷ್ಟು ಹಣ ಸಂದಾಯ?

ರಾಷ್ಟ್ರೀಯ ಮಾಹಿತಿ ಕೇಂದ್ರದಿ೦ದ (ಎನ್‌ಐಸಿ) ಫಲಾನುಭವಿಗಳ ಮಾಹಿತಿಯನ್ನು ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಡಿಬಿಟಿ ಪೋರ್ಟಲ್ ಹಾಗೂ ಖಜಾನೆ ಇಲಾಖೆಯ ಕೆ2 ಪೋರ್ಟಲ್ ಮೂಲಕ ಬಿಪಿಎಲ್ ಕಾರ್ಡ್ನಲ್ಲಿರುವ ಪ್ರತಿ ಸದಸ್ಯರನಿಗೆ ಕೆಜಿಗೆ 34 ರೂಪಾಯಿಯಂತೆ, 5 ಕೆಜಿ ಅಕ್ಕಿಗೆ 170 ರೂಪಾಯಿ ಡಿಬಿಟಿ ಮೂಖೇನ ಕಾರ್ಡ್ ಮುಖ್ಯಸ್ತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.

ಅದೇ ರೀತಿ, ಅಂತ್ಯೋದಯ ಕಾರ್ಡ್ನಲ್ಲಿ ನಾಲ್ಕು ಸದಸ್ಯರಿದ್ದರೆ 170 ರೂಪಾಯಂತೆ ಐದು ಸದಸ್ಯರಿದ್ದರೆ 510 ರೂಪಾಯಿ, ಆರು ಸದಸ್ಯರಿದ್ದರೆ 850 ರೂಪಾಯಿ ಹಣ ಹಾಕಲಾಗಿದೆ.

ಇದನ್ನೂ ಓದಿ: ಯಾವೆಲ್ಲ ಕಾರಣಕ್ಕೆ ಬೆಳೆಹಾನಿಯಾದರೆ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಹಣ ಜಮೆ ವಿವರ ಚೆಕ್ ಮಾಡಿ….

ಹಣ ವರ್ಗಾವಣೆಯಾದ ತಕ್ಷಣ ಫಲಾನುಭವಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರಲಿದೆ. ಆದರೆ, ಕೆಲವೊಮ್ಮೆ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಸಕಾಲಕ್ಕೆ ಮೆಸೇಜ್ ಬಾರದೇ ಇರಬಹುದು. ಆಗ ಬ್ಯಾಂಕ್‌ಗೆ ಹೋಗಿ ಹಣ ಜಮಾ ಮಾಹಿತಿ ಪಡೆಯುವ ಬದಲು ಮೊಬೈಲ್‌ನಲ್ಲಿಯೇ ಚೆಕ್ ಮಾಡಬಹುದು.

ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ….

https://ahara.kar.nic.in/lpg/

ಆಗ ನಿಮ್ಮ ಮೊಬೈಲ್‌ನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ ಯಾವ ಕಾಲಂನಲ್ಲಿದೆಯೋ ಆ ಕಾಲಂ ಕ್ಲಿಕ್ ಮಾಡಿ. ಆಗ ಮತ್ತೊಂದು ಪುಟ ತೆರೆಕೊಳ್ಳುತ್ತದೆ. ಅದರಲ್ಲಿ ಕೊನೆಯಲ್ಲಿರುವ ನೇರ ನಗದು ವರ್ಗಾವಣೆ ಸ್ಥಿತಿ Status of DBT ಮೇಲೆ ಕ್ಲಿಕ್ ಮಾಡಿ. ಆಗ  Status of DBT  ಪುಟ ತೆರೆದುಕೊಳ್ಳುತ್ತದೆ.

ಅಲ್ಲಿ Select Year:/ ವರ್ಷ: 2023

Select Month / ತಿಂಗಳು: August ಸೆಲೆಕ್ಟ್ ಮಾಡಿ

Enter RC Number / RC : ಮುಂದೆ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ, ಕ್ಯಾಪ್ಚಾ ಟೈಪ್ ಮಾಡಿ GO ಕ್ಲಿಕ್ ಮಾಡಿದರೆ, ನಿಮ್ಮ ಕುಟುಂಬದ ಒಟ್ಟು ಸದಸ್ಯರ ಸಂಖ್ಯೆ ಹಾಗೂ ವರ್ಗಾವಣೆಯಾದ ಮೊತ್ತದ ವಿವರ ಸಿಗುತ್ತದೆ. ಖಾತೆಗೆ ಹಣ ವರ್ಗಾವಣೆಯಾದ ನಂತರ ಫಲಾನುಭವಿಗಳಿಗೆ ಎಸ್‌ಎಂಎಸ್ ಸಂದೇಶ ಕೂಡ  ದೊರೆಯಲಿದೆ.

ಇದನ್ನೂ ಓದಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮೇವು ಕತ್ತರಿಸುವ ಯಂತ್ರಗಳ ವಿತರಣೆಗೆ ರೈತರಿಂದ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Related Posts

error: Content is protected !!