ಸರಕಾರಿ ಯೋಜನೆ

Tarpaulin: ಟಾರ್ಪಲಿನ್ (ತಾಡಪತ್ರಿ) ವಿತರಣೆಗೆ ರೈತರಿಂದ ಅರ್ಜಿ ಆಹ್ವಾನ

WhatsApp Group Join Now
Telegram Group Join Now

ಸರ್ಕಾರದಿಂದ ಸಹಾಯಧನದಲ್ಲಿ ರೈತರಿಗೆ ತಾಡಪತ್ರಿಗಳನ್ನು ವಿತರಿಸಲಾಗುತ್ತಿದ್ದು ಅರ್ಜಿಗಳನ್ನು ಆಹ್ವಾನಿಸಲಾಗಿದೆ… 

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಕೃಷಿ ಇಲಾಖೆಯು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಡಿಯಲ್ಲಿ ಟಾರ್ಪಾಲಿನ್‌ಗಳನ್ನು ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಿಸುತ್ತಿದೆ.

ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ ಹಾಗೂ ಇನ್ನಿತರ ಹವಾಮಾನ ವೈಪರಿತ್ಯಗಳಿಂದ ಸಂರಕ್ಷಿಸಿ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲಿ ಎಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಇದನ್ನೂ ಓದಿ: Crop Insurance: ಬಿತ್ತನೆ ಮಾಡದಿದ್ದರೂ ಬೆಳೆವಿಮೆ ಪರಿಹಾರ ಪಡೆಯಬಹುದು | ಕೃಷಿ ಇಲಾಖೆ ಜಂಟಿ ನಿರ್ದೇಶಕರ ಅಭಯ

ಸರ್ಕಾರದಿಂದ ಸಹಾಯಧನದಲ್ಲಿ ರೈತರಿಗೆ ತಾಡಪತ್ರಿಗಳನ್ನು ವಿತರಿಸಲಾಗುತ್ತಿದ್ದು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜುಲೈ 24ರಿಂದ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗಿದೆ.

ರೈತರು ತಮ್ಮ ವ್ಯಾಪ್ತಿಯಲ್ಲಿನ ರೈತ ಸಂಪರ್ಕ ಕೇಂದ್ರಗಳಿಗೆ ಆಧಾರ್ ಕಾರ್ಡ್, ಪಹಣಿ, ಒಂದು ಭಾವಚಿತ್ರದೊಂದಿಗೆ ತೆರಳಿ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ, ಜುಲೈ 31ರ ಸಲ್ಲಿಸಬೇಕು.

ಗಮನಾರ್ಹವೆಂದರೆ ಕಳೆದ ಮೂರು ವರ್ಷಗಳ ಹಿಂದೆ ತಾಡಪತ್ರಿ ಪಡೆದ ರೈತರು ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ರೈತರು ಮತ್ತೆ ತಾಡಪತ್ರಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.

ಇದನ್ನೂ ಓದಿ: Horticulture Crops Insurance: ತೋಟಗಾರಿಕೆ ಬೆಳೆಗಳ ಹವಾಮಾನ ಆಧಾರಿದ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Related Posts

error: Content is protected !!