ವಿದ್ಯಾರ್ಥಿವೇತನ

₹50,000 ವಿಶೇಷ ಪ್ರೊತ್ಸಾಹಧನಕ್ಕೆ D.Ed, B.Ed ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ | Applications invited from D.Ed, B.Ed students

WhatsApp Group Join Now
Telegram Group Join Now

2022-23ನೇ ಸಾಲಿನಲ್ಲಿ D.Ed ಮತ್ತು B.Edನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರೋತ್ಸಾಹಧನ ಪಡೆಯಲು ಷರತ್ತುಗಳೇನು? ಯಾವ್ಯಾವ ಸಮುದಾಯದ ವಿದ್ಯಾರ್ಥಿಗಳು ಅರ್ಹರು? ಪ್ರೊತ್ಸಾಹ ಧನದ ಮೊತ್ತವೆಷ್ಟು? ಇತ್ಯಾದಿ ಮಾಹಿತಿ ಇಲ್ಲಿದೆ…

2022-23ನೇ ಸಾಲಿನಲ್ಲಿ D.Ed ಮತ್ತು B.Edನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹25,000 ರಂತೆ ಗರಿಷ್ಠ ಎರಡು ವರ್ಷಕ್ಕೆ ₹50,000 ವಿಶೇಷ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಸದರಿ ನಿರ್ದೇಶನಾಲಯದ ಉಲ್ಲೇಖಿತ ಆದೇಶದಲ್ಲಿ 2022-23ನೇ ಸಾಲಿನಲ್ಲಿ ಬಿ.ಎಡ್ ಹಾಗೂ ಡಿ.ಎಡ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡವ ಕಾರ್ಯಕ್ರಮವನ್ನು ಜಾರಿಗೊಳಿಸಲು ಆದೇಶಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 10,2022 ಕೊನೆಯ ದಿನಾಂಕವಾಗಿದೆ. ಇದನ್ನೂ ಓದಿ: 20 ಕುರಿ, 1 ಮೇಕೆ ಗಿಫ್ಟ್: ಮುಖ್ಯಮಂತ್ರಿ ಘೋಷಣೆ | ಈ ಗಿಫ್ಟ್ ಪಡೆಯಲು ಯಾರೆಲ್ಲ ಅರ್ಹರು?

ಷರತ್ತುಗಳೇನು?

ಗ್ರಾಮೀಣ ಮತ್ತು ನಗರ ವಿಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಿ ಕಲಿಕಾ ಮತ್ತು ಭೋಧನಾ ಸಾಮಾಗ್ರಿಗಳನ್ನು ಖರೀದಿಸಲು ಆರ್ಥಿಕ ಸಹಾಯ ಮಾಡುವ ಹಿತ ದೃಷ್ಟಿಯಿಂದ ಈ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ. ಅಭ್ಯರ್ಥಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು ಹಾಗೂ ವಿದ್ಯಾರ್ಥಿಯು ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದವರಾಗಿರಬೇಕು.

ವಿದ್ಯಾರ್ಥಿಗಳು National Council for Teacher Education ನಿಂದ ಮಾನ್ಯತೆ ಪಡೆದಿರುವ ಬಿ.ಎಡ್ ಹಾಗೂ Department of state Educational Research and Trainingನಿಂದ ಮಾನ್ಯತೆ ಪಡೆದಿರುವ ಡಿ.ಎಡ್ ಕೋರ್ಸ್‌ಗಳ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್ ಮತ್ತು ಡಿ.ಎಡ್ ಕೋರ್ಸ್‌ಗಳಲ್ಲಿ ದಾಖಲಾತಿ ಹೊಂದಿ ವ್ಯಾಸಂಗ ಮಾಡುತ್ತಿರಬೇಕು. ಇದನ್ನೂ ಓದಿ: ಕೆಎಂಎಫ್ 487 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸದರಿ ಕೋರ್ಸ್‌ಗಳ ಅವಧಿಗೆ ತಕ್ಕಂತ ಪ್ರತಿ ವರ್ಷ ರೂ.25 ಸಾವಿರದಂತೆ ಗರಿಷ್ಠ ಎರಡು ವರ್ಷಕ್ಕೆ 50 ಸಾವಿರ ಅನುದಾನವನ್ನು ನೀಡಲಾಗುವುದು.ಅಭ್ಯರ್ಥಿಗಳ ಪೋಷಕರ ವಾರ್ಷಿಕ ಗರಿಷ್ಠ ವರಮಾನ ರೂ. 6.00 ಲಕ್ಷಕ್ಕೆ ಮೀರಿರಬಾರದು. ಅಭ್ಯರ್ಥಿಗಳನ್ನು ಅರ್ಹತೆ ಪರೀಕ್ಷೆ ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಆಯಾ ವರ್ಷದಲ್ಲಿ ಲಭ್ಯವಿರುವ ಅನುದಾನಕ್ಕೆ ಸೀಮಿತಗೊಳಿಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದು; ಈ ಪ್ರೋತ್ಸಾಹಧನ ಪಡೆಯುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಶಿಷ್ಯವೇತನ ಪಡೆಯಲು ಅರ್ಹರಿರುತ್ತಾರೆ. ಜತೆಗೆ ಸರ್ಕಾರಿ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ನಿಯಮಾನುಸಾರ ಪ್ರವೇಶ ಪಡೆಯಲು ಅರ್ಹರಿರುತ್ತಾರೆ.

ವಿದ್ಯಾರ್ಥಿಗಳು ಡಿ.ಎಡ್ ಮತ್ತು ಬಿ.ಎಡ್ ಕೋರ್ಸ್‌ಗಳಲ್ಲಿ ದಾಖಲಾಗಿರುವ ಹಾಗೂ ಶುಲ್ಕವನ್ನು ಭರಿಸಿರುವ ಬಗ್ಗೆ ಎಲ್ಲಾ ಅಧಿಕೃತ ದಾಖಲಾತಿಗಳನ್ನು ಸಲ್ಲಿಸಬೇಕು. ಸದರಿ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಹತೆ ಪರೀಕ್ಷೆ, ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಕನಿಷ್ಠ 50% ರಷ್ಟು ಅಂಕಗಳನ್ನು ಪಡೆದಿರತಕ್ಕದ್ದು. ಉತ್ತೀರ್ಣರಾಗದ ಅಭ್ಯರ್ಥಿಗಳು ಪ್ರೋತ್ಸಾಹಧನ ಪಡೆಯಲು ಅರ್ಹರಾಗಿರುವುದಿಲ್ಲ. ಇದನ್ನೂ ಓದಿ: ₹21,000-₹69,000 ಸಂಬಳದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಮೊದಲನೇ ವರ್ಷದಲ್ಲಿ ಪ್ರೋತ್ಸಾಹಧನ ಪಡೆದಿರುವ ಅಭ್ಯರ್ಥಿಗಳು ಎರಡನೇ ವರ್ಷಕ್ಕೆ ಪ್ರೋತ್ಸಾಹಧನ ಪಡೆಯಲು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಪ್ರತಿ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಕನಿಷ್ಠ ಶೇಕಡ 50% ರಷ್ಟು ಬಾಲಕಿಯರಿಗೆ ಮೀಸಲಿರುತ್ತದೆ. ಡಿ.ಎಡ್ ಕೋರ್ಸಿಗೆ ಶೇಕಡ 25 ರಷ್ಟು ಮತ್ತು ಬಿ.ಎಡ್ ಕೋರ್ಸಿನ ಅಭ್ಯರ್ಥಿಗಳಿಗೆ ಶೇಕಡ 25 ರಷ್ಟು ಅನುಪಾತದಲ್ಲಿ ಉಪಯೋಗಿಸುವುದು.

ವಿಶೇಷವಾಗಿ ಗಮನಿಸಿ

ಸುಳ್ಳು ಮಾಹಿತಿ, ದಾಖಲಾತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಧನ ಪಡೆದಿದ್ದರೆ, ಅಂತಹ ಅಭ್ಯರ್ಥಿಗಳಿಗೆ ನೀಡಲಾದ ಪ್ರೋತ್ಸಾಹನಧನ ಮೊತ್ತವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಹಿಂದೆ ಪಡೆಯಲಾಗುದು. ಮಾತ್ರವಲ್ಲ ಅಂಥವರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುವುದು.

ಈ ಯೋನೆಯಡಿ ಪ್ರೋತ್ಸಾಹಧನ ಪಡೆದ ವಿದ್ಯಾರ್ಥಿಗಳು ಡಿ.ಎಡ್ ಮತ್ತು ಬಿ.ಎಡ್ ಕೋರ್ಸ್ ಪೂರ್ಣಗೊಳಿಸದೇ ಮಧ್ಯದಲ್ಲಿ ಬಿಟ್ಟು ಹೋದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ವಿಚಾರಣೆ ನಡೆಸಿ ಇಲಾಖೆಯ ಮುಖ್ಯಸ್ಥರಿಗೆ ವರದಿ ಸಲ್ಲಸಬೇಕು. ಅಂತಹ ಪ್ರಕರಣಗಳನ್ನು ಪರೀಶಿಲಸಿ ಇಲಾಖಾ ಮುಖ್ಯಸ್ಥರು ಅಂತಿಮ ನಿರ್ಣಯ ತೆಗೆದುಕೊಳ್ಳುತ್ತಾರೆ. ಇದನ್ನೂ ಓದಿ: ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ಯಾವಾಗ ಸಿಗುತ್ತದೆ? ಇಲ್ಲಿದೆ ಮಹತ್ವದ ಮಾಹಿತಿ

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ನ  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.

 ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಆಯಾ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ನಿಗಮವನ್ನು ಸಂಪರ್ಕಿಸಬಹುದಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ ವಿಳಾಸ, ಮೊಬೈಲ್ ಸಂಪರ್ಕ ಸಂಖ್ಯೆಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಇದನ್ನೂ ಓದಿ: SSLC, PUC ಪಾಸಾದವರಿಗೆ ಐಸಿಐಸಿಐ ಬ್ಯಾಂಕ್‌ನಲ್ಲಿ 4,000 ಹುದ್ದೆಗಳಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Related Posts

error: Content is protected !!