ಕೃಷಿ

Arecanut Mites control : ಅಡಿಕೆ ತೋಟಗಳಲ್ಲಿ ನುಸಿ ಬಾಧೆ ನಿಯಂತ್ರಣಕ್ಕೆ ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

WhatsApp Group Join Now
Telegram Group Join Now

ಈ ಬಾರಿ ಪ್ರಖರ ಬಿಸಿಲಿನಿಂದಾಗಿ ಅಡಿಕೆ ತೋಟಗಳಲ್ಲಿ ನುಸಿ ಕೀಟ ಬಾಧೆ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಇದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದು; ನುಸಿಬಾಧೆ ಹತೋಟಿ ಕುರಿತ ತಜ್ಞರ ಸಲಹೆ ಇಲ್ಲಿದೆ…

ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವುದನ್ನೇ ನಾಡಿನ ರೈತರು ಎದುರು ನೋಡುತ್ತಿದ್ದಾರೆ. ಅದರಲ್ಲೂ ಪ್ರಖರ ಬಿಸಿಲಿನ ತಾಪಕ್ಕೆ ಕಂಗೆಟ್ಟಿರುವ ಅಡಿಕೆ ಬೆಳೆಗಾರರು ಮಳೆಗಾಗಿ ಕಾತರಿಸುತ್ತಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ತಂಪು ವಾತಾವರಣ ಬಯಸುವ ಅಡಿಕೆ ತೋಟಗಳು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದು; ತೋಟ ಉಳಿಸಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಅಡಿಕೆ ಬೆಳೆಯಲ್ಲಿ ಕಂಡುಬರುವ ನುಸಿ ಕೀಟಗಳು ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಬಾಧಿಸಿವೆ.

Poultry Farming : ನಾಟಿಕೋಳಿ ಸಾಕಣೆಯಲ್ಲಿ ಈ ಸೂತ್ರ ಪಾಲಿಸಿದರೆ ಗೆಲುವು ಗ್ಯಾರಂಟಿ … 

ಮೇರೆ ಮೀರಿದ ನುಸಿಬಾಧೆ

ಅಡಿಕೆ ಬೆಳೆಯಲ್ಲಿ ಎರಡು ರೀತಿಯ ನುಸಿ ಕಂಡು ಬರುತ್ತದೆ. ಅವುಗಳೆಂದರೆ ಬಿಳಿ ನುಸಿ ಮತ್ತು ಕೆಂಪು ನುಸಿ. ಸಂತಾನೋತ್ಪತ್ತಿ ಮತ್ತು ಇನ್ನಿತರ ಚಟುವಟಿಕೆಗಳಿಗಾಗಿ ಉಷ್ಣತೆ ಅನಿವಾರ್ಯ ಆಗಿರುವುದರಿಂದ ಬೇಸಿಗೆಯಲ್ಲಿ ಅಡಿಕೆಗೆ ನುಸಿಬಾಧೆ ಹೆಚ್ಚು. ಈ ನುಸಿಗಳು ಕೇವಲ 15-25 ದಿನಗಳಲ್ಲಿ ತಮ್ಮ ಜೀವನಚಕ್ರವನ್ನು ಪೂರ್ಣಗೊಳಿಸುತ್ತವೆ.

ಈ ನುಸಿಗಳು ಸೂರ್ಯನ ನೇರ ಕಿರಣಗಳನ್ನು ತಪ್ಪಿಸಿಕೊಳ್ಳಲು ಎಲೆಯ ಕೆಳ ಭಾಗದಲ್ಲಿ ದಾಳಿ ಮಾಡಿ ಎಲೆಯ ಪತ್ರ ಹರಿತ್ತನ್ನು ತಿನ್ನುತ್ತವೆ. ಕ್ರಮೇಣವಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ತೀವ್ರತೆ ಹೆಚ್ಚಾದಂತೆ ಎಲೆಗಳು ಒಣಗುತ್ತವೆ. ಇದರ ಪರಿಣಾಮದಿಂದ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅಡ್ಡಿಯಾಗಿ ಇಳುವರಿ ಕುಂಠಿತಗೊಳ್ಳುತ್ತದೆ ಸಮಸ್ಯೆ ಇನ್ನೂ ತೀವ್ರವಾದರೆ ಸುಳಿ ಕೊಳೆ ರೋಗ ಬಾಧೆ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

Monsoon Season: ಜೂನ್ ಮೊದಲ ವಾರ ಮುಂಗಾರು ಶುರು: ಹೇಗಿದೆ ಈ ವರ್ಷದ ಮುಂಗಾರು ಮಳೆ? | ಇಲ್ಲಿದೆ ಹವಾಮಾನ ಇಲಾಖೆ ರಿಪೋರ್ಟ್

ಹೊಸ ಗಿಡಗಳಲ್ಲಿ ಹೆಚ್ಚು

ಕಳೆದ ಒಂದು ತಿಂಗಳಿ೦ದ ತಾಪಮಾನ 37 ಡಿಗ್ರಿ ದಾಟಿ ಹೋಗಿದ್ದರಿಂದ ಈ ಸಮಸ್ಯೆ ಕಾಡುತ್ತಿದೆ. ಕಳೆದ ವರ್ಷ ಮೇ 15ರ ಹೊತ್ತಿಗೆ ಉತ್ತಮ ಮಳೆಯಾಗಿತ್ತು. ಆದರೆ ಈ ಬಾರಿ ಅದರ ಶೇ. 25ರಷ್ಟೂ ಮಳೆಯಾಗಿಲ್ಲ. ಕಳೆದ ಎರಡು ತಿಂಗಳ ಸರಾಸರಿ ಉಷ್ಣಾಂಶ 38-39 ಡಿಗ್ರಿ ಇತ್ತು. ಇದರಿಂದ ತಾಪಮಾನ ಹೆಚ್ಚಾಗಿ ಸಮಸ್ಯೆ ಕಾಣಿಸಿಕೊಂಡಿದೆ.

ದಾವಣಗೆರೆ ಜಿಲ್ಲೆಯಲ್ಲಿ ಪ್ರಸ್ತುತ 86 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಈ ಪೈಕಿ ಶೇ. 30 ರಿಂದ 40ರಷ್ಟು ಪ್ರದೇಶದಲ್ಲಿರುವ ಹೊಸ ಗಿಡಗಳಲ್ಲಿ ಈ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಅದರಲ್ಲೂ ನೀರಾವರಿ ಪ್ರದೇಶಗಳಾದ ಚನ್ನಗಿರಿ, ದಾವಣಗೆರೆ, ಹೊನ್ನಾಳಿ ತಾಲ್ಲೂಕುಗಳಲ್ಲಿ ಕಂಡುಬ೦ದಿದೆ.

Free Horticulture Training: ರೈತ ಮಕ್ಕಳಿಂದ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ಪ್ರತಿ ತಿಂಗಳು 1,750 ಶಿಷ್ಯ ವೇತನ ಸಿಗಲಿದೆ … 

ಹತೋಟಿ ಹೇಗೆ?

ಅತ್ಯಂತ ಸಣ್ಣ ಗಾತ್ರದ ಈ ನುಸಿ ಅಥವಾ ಮೈಟ್‌ಗಳನ್ನು ಬರಿಗಣ್ಣಿನಲ್ಲಿ ಸುಲಭವಾಗಿ ಗುರುತಿಸುವುದು ಕಷ್ಟ. ಬಿಳಿ ನುಸಿಯು ಬಿಳಿ ಬಣ್ಣದ ಬಲೆಯೊಳಗೆ ಅವಿತುಕೊಂಡು ರಸ ಹೀರುತ್ತವೆ. ಬೆರಳ ತುದಿಯಿಂದ ಅಡಿಕೆ ಎಲೆಯ ಕೆಳ ಭಾಗವನ್ನು ಉಜ್ಜಿದಾಗ ಬಿಳಿ ಬಣ್ಣದ ಬಲೆ ಅಥವಾ ಕೆಂಪು ಬಣ್ಣ ಬೆರಳ ತುದಿಗೆ ಅಂಟಿಕೊ೦ಡರೆ ಮೈಟ್ ಕೀಟವೆಂದು ಗುರುತಿಸಬಹುದು. ಏಪ್ರಿಲ್-ಮೇ ತಿಂಗಳಲ್ಲಿ ಈ ಕೀಟದ ಬಾಧೆ ಹೆಚ್ಚಿದ್ದು, ಮಳೆಗಾಲದಲ್ಲಿ ಕಡಿಮೆ ಆಗುತ್ತದೆ.

ಪೊಟ್ಯಾಸಿಯಂ ಸೇರಿದಂತೆ ಇತರ ಪೋಷಕಾಂಶಗಳ ಸಮತೋಲಿತ ನಿರ್ವಹಣೆ, ನಿಯಮಿತ ನೀರುಣಿಸುವುದು ಹಾಗೂ ಸಸಿಗಳಿಗೆ ನೆರಳು ಒದಗಿಸುವುದು ಮೈಟ್ ಬಾಧೆಯನ್ನು ಕಡಿಮೆ ಮಾಡಲು ಸಹಕಾರಿ. ಅಡಿಕೆ ಜತೆಗೆ ಬಾಳೆ, ನುಗ್ಗೆ, ಸಣಬು ಮುಂತಾದ ಅಂತರ ಬೆಳೆಗಳನ್ನು ಬೆಳೆದಾಗ ಕೀಟ ಬಾಧೆ ಸಮಸ್ಯೆ ಇರುವುದಿಲ್ಲ. ವಾತಾವರಣ ಬದಲಾಗಿ ಉತ್ತಮ ಮಳೆಯಾದರೆ ಸರಿ ಹೋಗುತ್ತದೆ. ನುಸಿ ಕೀಟ ಬಾಧೆ ತಡೆಯಲು ತಜ್ಞರ ಸಲಹೆ ಮೇರೆಗೆ ಎಲೆಗಳ ಕೆಳಗೆ ರಾಸಾಯನಿಕ ಸಿಂಪರಣೆ ಮಾಡಬೇಕು. ಪ್ರತಿ ಲೀಟರ್ ನೀರಿಗೆ 1.5 ಮಿ.ಲೀ. ಹೆಕ್ಸಿ ತಯೋಜಾಕ್ಸರ್ ಅಥವಾ 1 ಮಿ.ಲೀ. ಸ್ಪೈರೋ ಮೆಫೆಸನ್ ಬೆರೆಸಿ ಸಿಂಪರಣೆ ಮಾಡಬೇಕು.

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ:

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

WhatsApp Group Join Now
Telegram Group Join Now

Related Posts

error: Content is protected !!