ಸರಕಾರಿ ಯೋಜನೆ

Ayushman health card application : ಆಯುಷ್ಮಾನ್ ಆರೋಗ್ಯ ಕಾರ್ಡ್ 5 ಲಕ್ಷ ರೂಪಾಯಿ ವರೆಗೂ ಉಚಿತ ಚಿಕಿತ್ಸೆ | ಮೊಬೈಲ್’ನಲ್ಲೇ ಸಲ್ಲಿಸಿ ಅರ್ಜಿ

WhatsApp Group Join Now
Telegram Group Join Now

Ayushman health Card application

BPL ಮತ್ತು APL ಫಲಾನುಭವಿಗಳಿಗೆ 5 ಲಕ್ಷ ರೂಪಾಯಿ ವರೆಗೆ ಉಚಿತ ಆರೋಗ್ಯ ಚಿಕಿತ್ಸೆ ದೊರೆಯಲಿದ್ದು, ಈ ಲಾಭವನ್ನು ಪಡೆಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…

ಜನರಿಗೆ ದೊಡ್ಡ ಮೊತ್ತದ ಚಿಕಿತ್ಸೆ ಮತ್ತು ಉತ್ತಮ ಆರೋಗ್ಯ ಸೇವೆಗಾಗಿ ಆರ್ಥಿಕ ಸಹಾಯ ಮಾಡಲು, ಸರ್ಕಾರವು ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ’ಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಅರ್ಹ ಪಲಾನುಭವಿಗಳಿಗೆ ಐದು ಲಕ್ಷದ ವರೆಗೆ ಉಚಿತವಾಗಿ ಚಿಕಿತ್ಸೆ (Free medical treatment) ದೊರೆಯಲಿದ್ದು, ಈ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಏನಿದು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ?

ರಾಜ್ಯದ ಎಲ್ಲ ನಿವಾಸಿಗಳಿಗೆ ‘ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ ಎಂಬ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು ರಾಜ್ಯ ಸರ್ಕಾರವು ಕಳೆದ ಮಾರ್ಚ್ 2, 2018ರಂದು ಅನುಷ್ಠಾನಗೊಳಿಸಿತ್ತು. ನಂತರ ಕೇಂದ್ರ ಸರ್ಕಾರವು ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ’ಯನ್ನು ಜಾರಿಗೊಳಿಸಿತು.

ಒಂದಕ್ಕೊ೦ದು ಹೋಲಿಕೆ ಇರುವುದರಿಂದ ಈ ಎರಡೂ ಯೋಜನೆಗಳನ್ನು ಒಟ್ಟುಗೂಡಿಸಿ ‘ಪ್ರಧಾನಮಂತ್ರಿ ಜನಾರೋಗ್ಯ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು.

ಆಯುಷ್ಮಾನ್ ಕಾರ್ಡ್’ನಿಂದ ಏನೆಲ್ಲ ಸೌಲಭ್ಯಗಳು ಸಿಗಲಿವೆ? (Benefits of Ayushman yojane)

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ (BPL & APL Card holders) ಹೊಂದಿರುವ ಕುಟುಂಬದ ಸದಸ್ಯರಿಗೆ ನೋಂದಾಯಿತ ಆಸ್ಪತ್ರೆಗಳಲ್ಲಿ ಒಂದು ವರ್ಷಕ್ಕೆ 5 ಲಕ್ಷ ರೂಪಾಯಿ ವರೆಗೆ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ.

ಎಪಿಎಲ್ ಕಾರ್ಡ್ ಹೊಂದಿರುವ ಪಲಾನುಭವಿಗಳ ಕುಟುಂಬಕ್ಕೆ ವಾರ್ಷಿಕ 1.5 ಲಕ್ಷ ರೂಪಾಯಿ ವರೆಗಿನ ಚಿಕಿತ್ಸೆ ದೊರೆಯಲಿದೆ. ಈ ಯೋಜನೆಯ ಅಡಿಯಲ್ಲಿ ಒಟ್ಟು 1,650 ವಿವಿಧ ಬಗೆಯ ಚಿಕಿತ್ಸೆ ದೊರೆಯಲಿದೆ.

ತುರ್ತು ಸಂದರ್ಭಗಳಲ್ಲಿ (Emergency) 171 ವಿವಿಧ ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ನೋಂದಾಯಿತ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬಹುದಾಗಿದೆ.

ಆಸ್ಪತ್ರೆಗೆ ತೆರಳುವ ಪೂರ್ವದಲ್ಲಿ ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಮತ್ತು ಸಮಾಲೋಚನೆ, ಔಷಧ ಮತ್ತು ವೈದ್ಯಕೀಯ ಉಪಭೋಗ್ಯ, ತೀವ್ರವಲ್ಲದ ಮತ್ತು ತೀವ್ರ ನಿಗಾ ಸೇವೆಗಳು, ರೋಗ ನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಪ್ರಯೋಜನ ಸಿಗಲಿವೆ.

ಅಗತ್ಯವಿರುವಲ್ಲಿ ವೈದ್ಯಕೀಯ ಅಳವಡಿಕೆ ಸೇವೆಗಳು ಚಿಕಿತ್ಸಾ ಸಮಯದಲ್ಲಿ ವಸತಿ ಪ್ರಯೋಜನಗಳು ಮತ್ತು ಆಹಾರ ಸೇವೆಗಳು, ಆಸ್ಪತ್ರೆಗೆ ದಾಖಲಾದ ನಂತರದ 15 ದಿನಗಳ ವರೆಗೆ ಆರೈಕೆಯ ವ್ಯವಸ್ಥೆ ಕೂಡ ಲಭ್ಯವಿರುತ್ತದೆ.

ದೇಶಾದ್ಯಂತ ವಿವಿಧ ರೀತಿಯ ಹಲವು ಶೀಘ್ರ ಚಿಕಿತ್ಸೆ ಮತ್ತು ಎಲ್ಲಾ ಸೌಲಭ್ಯಗಳು ಉಚಿತವಾಗಿ ದೊರೆಯಲಿದ್ದು, ಪಿವಿಸಿ ಮಾದರಿಯ ಆಯುಷ್ಮಾನ್ ಹೆಲ್ತ್ ಕಾರ್ಡ್ (Ayushman health card) ಇದ್ದರೆ ಇವುಗಳ ಪ್ರಯೋಜನವನ್ನು ಪಡೆಯಬಹುದಾಗಿದೆ. ಹಾಗಾದರೆ ಈ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ? ಮಾಹಿತಿ ಇಲ್ಲಿದೆ.

ಆಯುಷ್ಮಾನ್ ಕಾರ್ಡ್ ನೋಂದಣಿ ಹೇಗೆ? (How to register for Ayushman card?)

ಆಯುಷ್ಮಾನ್ ಯೋಜನೆಗೆ ನೋಂದಾಯಿಸಿಕೊಳ್ಳಲು ಮತ್ತು ಆಯುಷ್ಮಾನ್ ಕಾರ್ಡ್ ಪಡೆಯಲು ಅಗತ್ಯ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಸಿಎಸ್’ಸಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಾಗುವ ದಾಖಲಾತಿಗಳು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ನಿಮ್ಮ ಮೊಬೈಲ್’ನಲ್ಲಿಯು ಅರ್ಜಿ ಹೀಗೆ ಸಲ್ಲಿಸಬಹುದು

ಆಯುಷ್ಮಾನ್ ಕಾರ್ಡ್ ಪಡೆಯಲು ನಿಮ್ಮ ಮೊಬೈಲ್’ನಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಜಾಲತಾಣಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಇದನ್ನೂ ಹೊರತುಪಡಿಸಿ ನೀವು ಸರ್ಕಾರದ ಆ್ಯಪ್ ಮುಖಾಂತರವೂ ಅರ್ಜಿ ಸಲ್ಲಿಸಬಹುದು.

  • ಅರ್ಜಿ ಸಲ್ಲಿಸುವ ಜಾಲತಾಣದ ಲಿಂಕ್ : Click here
  • ಅರ್ಜಿ ಸಲ್ಲಿಸುವ ಆ್ಯಪ್ ಲಿಂಕ್ : Download
  • ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ : 14555 ಅಥವಾ 18004258330
WhatsApp Group Join Now
Telegram Group Join Now

Related Posts

error: Content is protected !!