ಸರಕಾರಿ ಯೋಜನೆ

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಡಿಜಿಟಲ್ ಕಾರ್ಡ್ ಪಡೆಯುವುದು ಹೇಗೆ?

WhatsApp Group Join Now
Telegram Group Join Now

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಫಲಾನುಭವಿಗಳಿಗೆ ಈಗ ವಿತರಿಸಿರುವ ಕಾರ್ಡ್ ಬದಲಾಗಿ ಅವರ ಸಮಗ್ರ ಆರೋಗ್ಯ ಮಾಹಿತಿ ಇರುವ ಡಿಜಿಟಲ್ ಕಾರ್ಡ್ ವಿತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಡಿಜಿಟಲ್ ಐಡಿ ಕಾರ್ಡ್ ಪಡೆಯುವುದು ಹೇಗೆ? ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಮಹತ್ವದ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿ-ಎಆರ್‌ಕೆ) ಫಲಾನುಭವಿಗಳಿಗೆ ಈಗ ವಿತರಿಸಿರುವ ಕಾರ್ಡ್ ಬದಲಾಗಿ ಅವರ ಸಮಗ್ರ ಆರೋಗ್ಯ ಮಾಹಿತಿ ಇರುವ ಡಿಜಿಟಲ್ ಕಾರ್ಡ್ ವಿತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಎಬಿಎಚ್‌ಎ) ಡಿಜಿಟಲ್ ಗುರುತಿನ ಚೀಟಿಗಳು ಶೀಘ್ರದಲ್ಲೇ ಸಾರ್ವತ್ರಿಕವಾಗಲಿದ್ದು, ಮುಂದಿನ ದಿನಗಳಲ್ಲಿ ರೋಗದ ಕಣ್ಗಾವಲು ನೀತಿಯಡಿ ಪ್ರಮುಖ ಆರೋಗ್ಯ ಕ್ಷೇತ್ರದ ಬದಲಾವಣೆಗಳಿಗೆ ಕಾರಣವಾಗಬಹುದು ಎಂಬ ವಿಶ್ವಾಸವನ್ನು ಇಲಾಖೆ ಹೊಂದಿದೆ. ಅದಕ್ಕೆ ಪೂರಕವಾಗಿ ಡಿಜಿಟಲ್ ಆರೋಗ್ಯ ಕಾರ್ಡ್ ನೀಡಲು ನಿರ್ಧರಿಸಿದೆ.

ಪ್ರಸ್ತುತ 89.4 ಲಕ್ಷ ನಾಗರಿಕರಿಗೆ ವಿತರಿಸಲು ಎಬಿಎಚ್‌ಎ ಡಿಜಿಟಲ್ ಗುರುತಿನ ಚೀಟಿ ಸಿದ್ಧಪಡಿಸಿದೆ. ಈ ಐಡಿಗಳನ್ನು ಹೊಂದಿರುವವರು ತಮ್ಮ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು (ಪಿಎಚ್‌ಆರ್) ಆನ್‌ಲೈನ್‌ನಲ್ಲಿ ರಚಿಸಬಹುದಾಗಿದೆ. ಅಂದರೆ, ಈ ಕಾರ್ಡ್ ಸಂಖ್ಯೆಯನ್ನು ಕಂಪ್ಯೂಟರ್‌ನಲ್ಲಿ ನಮೂದಿಸುತ್ತಿದ್ದಂತೆ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗುತ್ತದೆ. ಈವರೆಗೆ ಎಬಿಎಚ್‌ಎ ಐಡಿ ಹೊಂದಿರುವವರ ಪೈಕಿ ಶೇ.2 ರಷ್ಟು ಅಂದರೆ 1.96 ಲಕ್ಷ ಜನರ ಪಿಎಚ್‌ಆರ್‌ಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಇದನ್ನೂ ಓದಿ: ಉಚಿತ ವಿದ್ಯುತ್ ಯೋಜನೆ ನೋಂದಣಿ ಆರಂಭ | ಅಮೃತ ಜ್ಯೋತಿ ವಿದ್ಯುತ್‌ಗೆ ಇಂದೇ ಅರ್ಜಿ ಸಲ್ಲಿಸಿ | amrita jyoti Free electricity scheme… 

ಏನಿದು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ?

ರಾಜ್ಯದ ಎಲ್ಲ ನಿವಾಸಿಗಳಿಗೆ ಆರೋಗ್ಯ ಕರ್ನಾಟಕ ಎಂಬ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು ಕರ್ನಾಟಕ ಸರ್ಕಾರವು ಕಳೆದ ಮಾರ್ಚ್ 2, 2018ರಂದು  ಅನುಷ್ಠಾನಗೊಳಿಸಿತ್ತು. ನಂತರ ಭಾರತ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿತು. ಈ ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಹೋಲಿಕೆ ಇರುವುದರಿಂದ ಎರಡೂ ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಬಿಪಿಎಲ್ ಪಡಿತರ ಕಾರ್ಡು ಹೊಂದಿರುವವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ಐದು ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ಲಭ್ಯ. ಎಪಿಎಲ್ ಕಾರ್ಡುದಾರರು ಅಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ 30% ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರುತ್ತದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಅಧಿಕ ಇಳುವರಿಗೆ ತಪ್ಪದೇ ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸಿ… 

ಆರೋಗ್ಯ ಕಾರ್ಡ್ ಪಡೆಯುವುದು ಹೇಗೆ?

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ರಾಜ್ಯದ 115 ಲಕ್ಷ (ಬಿಪಿಎಲ್) ಕುಟುಂಬಗಳ ಪೈಕಿ 62 ಲಕ್ಷ ಕುಟುಂಬಗಳಿಗೆ (ಆರ್.ಎಸ್.ಬಿ.ವೈ ನೋಂದಾಯಿತ) ಮಾತ್ರ ಕೇಂದ್ರ ಸರ್ಕಾರವು ಶೇ.60 ರಷ್ಟು ಅನುದಾನ ಭರಿಸುತ್ತದೆ. ರಾಜ್ಯ ಸರ್ಕಾರವು ಶೇ.40 ರಷ್ಟು ಅನುದಾನ ಭರಿಸುತ್ತದೆ. ಇನ್ನುಳಿದ 53 ಲಕ್ಷ ಕುಟುಂಬಗಳಿಗೆ ರಾಜ್ಯ ಸರ್ಕಾರವೇ ಶೇ.100 ರಷ್ಟು ವೆಚ್ಚ ಭರಿಸುತ್ತದೆ. ಸಾಮಾನ್ಯ ವರ್ಗದ 19 ಲಕ್ಷ ಕುಟುಂಬಗಳಿಗೂ ಸಹ ರಾಜ್ಯ ಸರ್ಕಾರವೇ ಶೇ.100 ರಷ್ಟು ಅನುದಾನ ಭರಿಸುತ್ತದೆ.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಬಿ-ಎಆರ್‌ಕೆ ಕಾರ್ಡ್‌ನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10/- ಶುಲ್ಕದೊಂದಿಗೆ ನೀಡಲಾಗುತ್ತದೆ. ಬೆಂಗಳೂರು ಒನ್ ಕರ್ನಾಟಕ ಒನ್ ಮತ್ತು ಸೇವ ಸಿಂಧು ಕೇಂದ್ರಗಳಲ್ಲಿ ರೂ. 35/- ಶುಲ್ಕದೊಂದಿಗೆ ಎಬಿ-ಎಆರ್‌ಕೆ ಕಾರ್ಡ್ ನೀಡಲಾಗುತ್ತದೆ. ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್‌ಗಳನ್ನು ಹಾಜರುಪಡಿಸಿ ಆರೋಗ್ಯ ಕಾರ್ಡ್ ಪಡೆಯಬಹುದು. ಗಮನಾರ್ಹವೆಂದರೆ ಈಗ ಯೋಜನೆಯ ಫಲಾನುಭವಿಗಳಿಗೆ ಈ ಆರೋಗ್ಯ ಕಾರ್ಡ್ ಬದಲಾಗಿ ಅವರ ಸಮಗ್ರ ಆರೋಗ್ಯ ಮಾಹಿತಿ ಇರುವ ಡಿಜಿಟಲ್ ಕಾರ್ಡ್ ವಿತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಎತ್ತಿನ ಸುಳಿಗಳೂ… ರೈತರ ನಂಬಿಕೆಗಳೂ….

ಡಿಜಿಟಲ್ ಐಡಿ ಕಾರ್ಡ್ ಪಡೆಯುವುದು ಹೇಗೆ?

ಡಿಜಿಟಲ್ ಐಡಿ ಕಾರ್ಡ್ ಸಂಖ್ಯೆಯನ್ನು ಕಂಪ್ಯೂಟರ್‌ನಲ್ಲಿ ನಮೂದಿಸುತ್ತಿದ್ದಂತೆ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗವ ಡಿಜಿಟಲ್ ಐಡಿ ಕಾರ್ಡ್‌ಗಳ ರಚನೆಯು ಮೂರು ಕಾರ್ಯ ವಿಧಾನವನ್ನು ಹೊಂದಿದೆ. ವ್ಯಕ್ತಿ ಆನ್‌ಲೈನ್ ಮೂಲಕ ವೈಯಕ್ತಿಕವಾಗಿ ಐಡಿಗಳನ್ನು ಪಡೆದುಕೊಳ್ಳಬಹುದು. ಇಲ್ಲವೇ, ಆರೋಗ್ಯ ಇಲಾಖೆ ತನ್ನ ವಿಮಾ ಕಾರ್ಡ್ ವಿತರಣಾ ಅಭಿಯಾನದ ಸಮಯದಲ್ಲಿ ಐಡಿ ನೀಡಬಹುದು. ಅದಲ್ಲದೆ, ಸರಕಾರಿ ಆಸ್ಪತ್ರೆಗಳು ತಮ್ಮ ಕೆಲವು ರೋಗಿಗಳಿಗೆ ಅಗತ್ಯಕ್ಕನುಗುಣವಾಗಿ ಈ ಐಡಿಗಳನ್ನು ರಚಿಸಬಹುದು. ಕೇವಲ ಆಧಾರ ಸಂಖ್ಯೆಯಿಂದ ಈ ಐಡಿಗಳನ್ನು ರಚಿಸಬಹುದಾಗಿದೆ. ವ್ಯಕ್ತಿಗಳ ಆರೋಗ್ಯ ಡೇಟಾ ಅನ್ನು ಆರೋಗ್ಯ ವೃತ್ತಿಪರರು, ವೈದ್ಯರು ನೋಡಲು ಇಲ್ಲವೇ ಪರಿಶೀಲಿಸಲು ಈ ನೋಂದಣಿ ಕಡ್ಡಾಯಗೊಳಿಸಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಸೌಲಭ್ಯಕ್ಕಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಆಸ್ಪತ್ರೆಗಳಲ್ಲಿನ ಆರೋಗ್ಯ ಮಿತ್ರರನ್ನು ಸಂಪರ್ಕಿಸಬಹುದು. ಆರೋಗ್ಯ ಸಹಾಯವಾಣಿ 104, ಟೋಲ್ ಫ್ರೀ ಸಂಖ್ಯೆ: 1800 425 8330ಗೆ ಕಾಲ್ ಮಾಡುವ ಮೂಲಕವೂ ಈ ಬಗ್ಗೆ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: ಹಾಕಿಸಿದರೆ ಜಾನುವಾರುಗಳಿಗೆ ಲಸಿಕೆ, ಅಧಿಕವಾಗುವುದು ರೈತರ ಗಳಿಕೆ | Cattle vaccination… 

WhatsApp Group Join Now
Telegram Group Join Now

Related Posts

error: Content is protected !!